ದೇವಪ್ರಭುತ್ವ ವಾರ್ತೆಗಳು
◆ ಆಸ್ಟ್ರೇಲಿಯ ಮಾರ್ಚಲ್ಲಿ 54,306 ಪ್ರಚಾರಕರ ಉನ್ನತ ಸಂಖ್ಯೆಯನ್ನು ವರದಿ ಮಾಡಿದೆ, ಇದು ಅವರ ಮೂರನೇ ಅನುಕ್ರಮ ಉಚ್ಛಾಂಕ.
◆ ಬೊಲೀವಿಯ ಈ ಸೇವಾ ವರ್ಷದ ಮೊದಲ ಏಳು ತಿಂಗಳಲ್ಲಿ ಪ್ರಚಾರಕರಲ್ಲಿ ಐದು ಉಚ್ಛಾಂಕಗಳನ್ನು ಪಡೆಯಿತು. ಮಾರ್ಚ್‌ನಲ್ಲಿ 8,031 ಪ್ರಚಾರಕರ ಒಂದು ಹೊಸ ಉನ್ನತ ಸಂಖ್ಯೆ ಸಿಕ್ಕಿದೆ. ಸಭಾ ಪ್ರಚಾರಕರು ಶುಶ್ರೂಷೆಯಲ್ಲಿ ಸರಾಸರಿ 14.4 ತಾಸುಗಳನ್ನು ಹಾಕಿದ್ದಾರೆ. ಜ್ಞಾಪಕ ಹಾಜರಿಯು 33,377; ಜುಮ್ಲಾ ಪ್ರಚಾರಕರ ನಾಲ್ಮಡಿಗಿಂತಲೂ ಹೆಚ್ಚು.
◆ ನಿಕಾರಗ್ವ ಒಂಭತ್ತು ವರ್ಷಗಳ ನಿರ್ಬಂಧಗಳ ನಂತರ ಈಗ ಪುನೊಮ್ಮೆ ಮೇ 1, 1991ರಿಂದ ಬ್ರಾಂಚ್ ಅಫೀಸಾಗಿ ಕಾರ್ಯ ನಡಿಸಲಾರಂಭಿಸಿದೆ. ಹಿಂದೆ ನಿಕಾರಗ್ವಕ್ಕೆ ನೇಮಕವಾಗಿದ್ದ ಐದು ಮಿಶನೆರಿಗಳು ಅಲ್ಲಿ ಮಿಶನೆರಿ ಸೇವೆಯನ್ನು ಮುಂದುವರಿಸಲು ಪುನಃ ಹಿಂದಿರುಗ ಶಕ್ತರಾದರು.