ಇತರರಿಗೆ ಒಳ್ಳೇದನ್ನು ಮಾಡುವ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸುವುದು
1 ಅಪೊಸ್ತಲ ಪೌಲನು ಮೊದಲನೆಯ ಶತಕದ ಕ್ರೈಸ್ತರಿಗೆ ಉಪದೇಶಿಸಿದ್ದು: “ಇದಲ್ಲದೆ ಪರೋಪಕಾರ ಮಾಡುವುದನ್ನೂ ಧರ್ಮಮಾಡುವುದನ್ನೂ ಮರೆಯಬೇಡಿರಿ.” (ಇಬ್ರಿ. 13:16) ಪ್ರತಿಕೂಲ ಪರಿಸ್ಥಿತಿಗಳಲ್ಲೂ ತಮ್ಮ ಸಹೋದರರಿಗೆ ಸಹಾಯ ಮಾಡುವ ಅವರ ಪ್ರಯತ್ನಗಳು, ದೇವರ ಕಡೆಗಿನ ಮತ್ತು ಒಬ್ಬರೊಬ್ಬರೊಳಗಿನ ಅವರ ಪ್ರೀತಿಯನ್ನು ಬಲಪಡಿಸಿತ್ತು. (ಯೋಹಾ. 13:35) ಪರರಿಗೆ ಒಳ್ಳೇದನ್ನು ಮಾಡುವಂತೆ ಮತ್ತು ಅವರೊಂದಿಗೆ ಪಾಲಿಗರಾಗುವಂತೆ ನಾವು ಸಹಾ ಪ್ರೋತ್ಸಾಹಿಸಲ್ಪಟ್ಟಿದ್ದೇವೆ.
2 ಇದಕ್ಕಾಗಿ ಯೆಹೋವನು ನಮಗೆ ಭರ್ಜರಿ ಆತ್ಮಿಕ ಭೋಜನವನ್ನು ಮತ್ತು ಒಳ್ಳೇ ಸೌಕರ್ಯವನ್ನು ಒದಗಿಸಿದ್ದಾನೆ. ನಮಗೆ ಕಾವಲಿನಬುರುಜು ಮತ್ತು ಎಚ್ಚರ!ದಲ್ಲಿ ಎಷ್ಟು ಸಮೃದ್ಧವಾದ ಸಮಾಚಾರವು ದೊರೆಯುತ್ತದೆ! ನಮಗದು ದೊರೆತ ಕೂಡಲೇ ಆದಷ್ಟು ಬೇಗ ಅದನ್ನೋದುವುದರಲ್ಲಿ ನಾವೆಷ್ಟು ಆನಂದವನ್ನು ಕಾಣುತ್ತೇವೆ! ಆ ಶಾಸ್ತ್ರೀಯ ಸಮಾಚಾರವನ್ನು ಮನನ ಮಾಡುವ ಮೂಲಕ, ಕ್ಷೇತ್ರ ಶುಶ್ರೂಷೆಯಲ್ಲಿ ಮತ್ತು ಇತರರೊಂದಿಗಿನ ನಮ್ಮ ಸಂಭಾಷಣೆಯಲ್ಲಿ ಬಳಸಬಹುದಾದ ವಿಷಯಗಳನ್ನು ನಾವು ಟಿಪ್ಪಣಿ ಮಾಡಿಕೊಳ್ಳಬಹುದು. ಅದೇ ರೀತಿಯಲ್ಲಿ, ಪ್ರತಿಯೊಂದು ಕೂಟಕ್ಕೆ ಮತ್ತು ವಿಶೇಷವಾಗಿ ವಾರದ ಕಾವಲಿನಬುರುಜು ಅಭ್ಯಾಸಕ್ಕೆ ತಯಾರಿಸಲು ನಾವು ಸಮಯವನ್ನು ಖರೀದಿಸಬೇಕಾಗಿದೆ. ದೇವರ ವಾಕ್ಯದ ವೈಯಕ್ತಿಕ ಅಭ್ಯಾಸವು ನಮಗೆ “ಕ್ರಿಸ್ತನ ಮನಸ್ಸನ್ನು” ವಿಕಾಸಿಸುವಂತೆ ಸಹಾಯ ಮಾಡುತ್ತದೆ ಮತ್ತು ನಾವು ಭೇಟಿಯಾಗುವ ಇತರರಿಗೆ ಯಾವುದು ಹಿತಕರವೂ ಅದನ್ನು ತಿಳಿಸಲು ಶಕ್ತರನ್ನಾಗಿ ಮಾಡುತ್ತದೆ.—1 ಕೊರಿ. 2:14-16; ಕೀರ್ತ. 19:14.
3 ಸ್ವೀಕರಿಸಲರ್ಹವಾದ ಜವಾಬ್ದಾರಿಕೆಗಳು: ಯಾರು ಯೆಹೋವನನ್ನು ಪ್ರೀತಿಸುತ್ತಾರೋ ಅವರು ತಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿಕೊಳ್ಳುತ್ತಾರೆ. ಸಮರ್ಪಣೆಯೊಂದಿಗೆ ಜತೆಗೂಡಿದ ಜವಾಬ್ದಾರಿಕೆಗಳನ್ನು ಸ್ವೀಕರಿಸುವ ಮೂಲಕ, ನಾವು ಯೆಹೋವನವರು ಮತ್ತು ಸೈತಾನನ ಲೋಕದಿಂದಲೂ ಅದರ ದುಷ್ಟ ಮಾರ್ಗದಿಂದಲೂ ನಮ್ಮನ್ನು ಪ್ರತ್ಯೇಕಿಸಿಕೊಂಡವರು ಎಂದು ತೋರಿಸಿಕೊಡುತ್ತೇವೆ. ಯೇಸು ಕ್ರಿಸ್ತನಿಂದ ಇಡಲ್ಪಟ್ಟ ನಮೂನೆಯನ್ನು ಅನುಸರಿಸುವ ಮೂಲಕ, ನಾವು ಇತರರಿಗೆ ಒಳ್ಳೇ ಮಾದರಿಯನ್ನು ಇಡುತ್ತೇವೆ. (1 ಪೇತ್ರ 2:21) ಸರ್ಕಿಟ್ ಸಮ್ಮೇಳನ ಕಾರ್ಯಕ್ರಮಗಳು, ವಿಶೇಷವಾಗಿ 1992ರ ಸೇವಾ ವರ್ಷಕ್ಕಾಗಿ ತಯಾರಿಸಲ್ಪಟ್ಟಂಥಾದ್ದು, “ನಮ್ಮ ಸ್ವಂತ ಜವಾಬ್ದಾರಿಕೆಯ ಹೊರೆಯನ್ನು ಹೊರುವುದು” ಎಂಬ ಮುಖ್ಯ ವಿಷಯದಿಂದ ಕೂಡಿದ್ದು ನಮ್ಮ ಸಮರ್ಪಣೆಗನುಸಾರ ಜೀವಿಸುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತವೆ.
4 ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವಿಕೆಯು ಒಬ್ಬರೊಂದಿಗೊಬ್ಬರು ಭಕ್ತಿವೃದ್ಧಿಯ ವಿಚಾರಗಳನ್ನು ಹಂಚುವಂತೆ ನಮಗೆ ಅವಕಾಶವನ್ನು ಕೊಡುತ್ತದೆ. ನಮ್ಮ ವೈಯಕ್ತಿಕ ಅಭ್ಯಾಸ ಮತ್ತು ಕೂಟಗಳಿಗೆ ತಯಾರಿಸುವಿಕೆಯು, ನಾವು ಪಾಲಿಗರಾಗಬಲ್ಲ ಅನೇಕ ಒಳ್ಳೇ ಸಮಾಚಾರವನ್ನು ನಮಗೆ ಕೊಡುತ್ತದೆ. ಅಂಥ ವೈಯಕ್ತಿಕ ಆಸಕ್ತಿಯನ್ನು ಇತರರಲ್ಲಿ ತೋರಿಸುವಿಕೆಯು ಒಂದು ಬೆಚ್ಚಗೆನ, ಸ್ನೇಹದ ಕುಟುಂಬ ವಾತಾವರಣದ ಆತ್ಮವನ್ನು ಪ್ರವರ್ಧಿಸುತ್ತದೆ. ಕೂಟಗಳಲ್ಲಿ ಉತ್ತರ ಹೇಳುವ ಮೂಲಕ, ಇಬ್ರಿಯ 10:24, 25ರಲ್ಲಿ ಪೌಲನಂದ ಮಾತುಗಳನ್ನು ನಾವು ನಿಜವಾಗಿ ಒಪ್ಪುತ್ತೇವೆಂದು ಮತ್ತು ಇತರರನ್ನು ಪ್ರೋತ್ಸಾಹಿಸುವ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸುತ್ತೇವೆಂದು ತೋರಿಸುವೆವು.
5 ಅಧಿಕ ಜವಾಬ್ದಾರಿಕೆಗಳಿಗಾಗಿ ಎಟಕಿಸಿಕೊಳ್ಳಿರಿ: 1992ನೇ ಸೇವಾ ವರ್ಷದಲ್ಲಿ, ಅಧಿಕ ಜವಾಬ್ದಾರಿಗಳಾದ ಸಹಾಯಕ ಅಥವಾ ಕ್ರಮದ ಪಯನೀಯರ ಸೇವೆಯನ್ನು ನಾವು ಪ್ರಯತ್ನಿಸ ಸಾಧ್ಯವಿದೆಯೇ? ತಾಸನ್ನು ಮುಟ್ಟುವ ಅವಶ್ಯಕತೆಗಾಗಿ ವಿಪರೀತ ಒತ್ತನ್ನು ಹಾಕುವ ಬದಲಿಗೆ, ಒಟ್ಟುಗೂಡಿಸುವ ಕೆಲಸದಲ್ಲಿ ಭಾಗವಹಿಸಲು ಇರುವ ಅಧಿಕ ಸಂದರ್ಭದ ಮೇಲೆ ಗಮನವನ್ನು ಏಕೆ ಕೆಂದ್ರೀಕರಿಸಬಾರದು? (ಯೋಹಾ. 4:35, 36) ಇತರ ನುರಿತ ಪ್ರಚಾರಕರು ಮತ್ತು ಪಯನೀಯರರೊಂದಿಗೆ ಕ್ರಮವಾಗಿ ಸೇವೆ ಮಾಡುವಿಕೆಯು ಶುಶ್ರೂಷೆಯಲ್ಲಿ ನಮ್ಮ ನಿಪುಣತೆಗಳನ್ನು ಹೆಚ್ಚಿಸಲು ಸಹಾಯಕಾರಿ. ಸಹಾಯಕ ಪಯನೀಯರರು ಅಧಿಕ ಸಂಖ್ಯೆಯಲ್ಲಿ ಇರುವಂಥಾದ್ದು ಸಭೆಗೆ ಆರೋಗ್ಯಕರ ಉತ್ತೇಜಕವಾಗಿಯೂ ಕಾರ್ಯನಡಿಸುವದು. ಸಾಧ್ಯವಿದ್ದರೆ, ಕ್ರಮದ ಪಯನೀಯರ ಸೇವೆಗೆ ಅಥವಾ ಕ್ರಮವಾಗಿ ಇಲ್ಲವೇ ಈ ವರ್ಷ ಆದಷ್ಟು ಬಾರಿ ಸಹಾಯಕ ಪಯನೀಯರ ಸೇವೆಗಾಗಿ ಯಾಕೆ ಅರ್ಜಿ ಹಾಕಬಾರದು?
6 ಸಭೆಯಲ್ಲಿ ಯೋಗ್ಯತೆಯುಳ್ಳ ಸಮರ್ಪಿತ ಮತ್ತು ಸ್ನಾನಿತ ಪುರುಷ ಸದಸ್ಯರಿಗೆ ಜವಾಬ್ದಾರಿಗಳು ಸದಾ ಸಿದ್ಧವಾಗಿವೆ. (1 ತಿಮೊ. 3:1-10, 12, 13) ಎಲ್ಲರೂ ಸೇವೆ ಮಾಡುವ ತಮ್ಮ ಸಿದ್ಧ ಮನಸ್ಸನ್ನು, ಕೂಟಗಳಲ್ಲಿ ಚೆನ್ನಾಗಿ-ಯೋಚಿಸಿ ತಯಾರಿಸಿದ ಉತ್ತರಗಳನ್ನು ಕೊಡುವ ಮೂಲಕ, ದೇವಪ್ರಭುತ್ವ ಶಾಲೆಯಲ್ಲಿ ಭಾಗವಹಿಸುವ ಮೂಲಕ, ಸೇವಾ ಕೂಟದಲ್ಲಿ ದೃಶ್ಯಗಳನ್ನು ಪ್ರದರ್ಶಿಸುವ ನೇಮಕಗಳನ್ನು ಸ್ವೀಕರಿಸುವ ಅಥವಾ ಇತರ ಭಾಗಗಳನ್ನು ನಿರ್ವಹಿಸುವ ಮೂಲಕ ತೋರಿಸಬಹುದು. ಮಕ್ಕಳು ಸಹಾ ಈ ವಿಷಯಗಳಲ್ಲಿ, ಮತ್ತು ರಾಜ್ಯಗೃಹದಲ್ಲಿ ತಮ್ಮ ನಡವಳಿಕೆಯಲ್ಲಿ ಆದರ್ಶ ಮಾದರಿಗಳಾಗ ಸಾಧ್ಯವಿದೆ. ರಾಜ್ಯಗೃಹವನ್ನು ಶುಚಿಮಾಡಲು ಅಥವಾ ಅಂಥ ಬೇರೆ ಕೆಲಸಕ್ಕಾಗಿ ತಮ್ಮ ಪುಸ್ತಕಭ್ಯಾಸ ಗುಂಪು ನೇಮಿಸಲ್ಪಟ್ಟಾಗ ಅದರೊಂದಿಗೆ ಕೆಲಸ ಮಾಡುವದರಲ್ಲಿ ಅವರು ಸಹಾಯ ಮಾಡಬಹುದು.—km 4⁄76 ಪುಟ 1, 8.
7 ಇತರರಿಗೆ ಒಳ್ಳೇದನ್ನು ಮಾಡುವ ತನ್ನ ಜವಾಬ್ದಾರಿಕೆಯನ್ನು ಸ್ವೀಕರಿಸಲು ತನ್ನ ಸಿದ್ಧಮನಸ್ಸನ್ನು ಯೇಸು, “ನನಗೆ ಮನಸ್ಸುಂಟು” ಎಂದು ಹೇಳಿದ ಮೂಲಕ ವ್ಯಕ್ತಪಡಿಸಿದನು. (ಲೂಕ 5:12, 13) ಆತನ ಮಾದರಿಯನ್ನು ಅನುಸರಿಸುವವರಾಗಿ, ನಾವು ಸಹಾ ನಮ್ಮ ಸಹೋದರರಿಗೆ, ಆಸಕ್ತ ಜನರಿಗೆ ಮತ್ತು ಕ್ಷೇತ್ರಸೇವೆಯಲ್ಲಿ ನಾವು ಭೇಟಿಯಾಗುವ ಪ್ರಾಮಾಣಿಕ ಜನರಿಗೆ ಯೆಹೋವನ ಸಂಸ್ಥೆಯೊಂದಿಗೆ ಕ್ರಮವಾಗಿ ಸಹವಸಿಸುವಂತೆ ಸಹಾಯ ಮತ್ತು ಉತ್ತೇಜನ ಕೊಡಬಹುದು. “ಎಲ್ಲರಿಗೆ ಒಳ್ಳೇದನ್ನು ಮಾಡುವ” ಜವಾಬ್ದಾರಿಕೆಯನ್ನು ಸ್ವೀಕರಿಸುವಿಕೆಗೆ ಒಂದು ನಿರ್ಧಾರಿತ ಪ್ರಯತ್ನ ಮತ್ತು ಪ್ರಾಯಶಃ ವೈಯಕ್ತಿಕ ತ್ಯಾಗದ ಅವಶ್ಯಕತೆ ಇದ್ದೀತು. (ಗಲಾ. 6:10) ಆದರೆ ಅದು ಪೂರೈಸುವ ಒಳ್ಳಿತನ್ನು ನಾವು ನೋಡುವಾಗ, “ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು” ಎಂಬ ಪೌಲನ ಮಾತುಗಳೊಂದಿಗೆ ನಾವು ಸಹಮತವನ್ನು ತೋರಿಸಬಲ್ಲೆವು.—ಇಬ್ರಿಯ. 13:16.