ಸಭಾ ಪುಸ್ತಕಭ್ಯಾಸದ ಏರ್ಪಾಡು
ಭಾಗ 3: ಕ್ಷೇತ್ರಸೇವೆಗಾಗಿ ಒಂದು ಕೇಂದ್ರ
1 ಸಭಾ ಪುಸ್ತಕಭ್ಯಾಸದ ಸ್ಥಳವು, ಗುಂಪು ಅಭ್ಯಾಸಕ್ಕಾಗಿ ಒಂದು ಸ್ಥಳವನ್ನು ಒದಗಿಸುವದಲ್ಲದೆ ಕ್ಷೇತ್ರಸೇವೆಗಾಗಿ ಕೂಡುವ ಸ್ಥಳವಾಗಿಯೂ ಕಾರ್ಯನಡಿಸಬಹುದು. ಇಂಥ ಕೂಟಗಳಿಗಾಗಿ ಕೂಡುವ ಸಮಯವು ಅಧಿಕಾಂಶ ಪ್ರಚಾರಕರಿಗೆ ಅನುಕೂಲವಾಗಿರತಕ್ಕದ್ದು ಮತ್ತು ಅವುಗಳು ಪ್ರಚಾರಕರನ್ನು ಕ್ಷೇತ್ರಸೇವೆಗಾಗಿ ನಡಿಸಲು ವ್ಯಾವಹಾರ್ಯ ಸಹಾಯವನ್ನು ನೀಡತಕ್ಕದ್ದು.
2 ಅಭ್ಯಾಸಕ್ಕಾಗಿ ಮತ್ತು ಸೇವೆಗಾಗಿ ಯೋಗ್ಯವಾಗಿ ಸಂಸ್ಥಾಪಿಸಲ್ಪಡುವ ಗುಂಪುಗಳು ಆತ್ಮಿಕತೆಯನ್ನು ಎತ್ತಿ ಕಟ್ಟುತ್ತವೆ. ಅಡಿಗ್ಡಳನ್ನು ನಿರ್ವಹಿಸುವುದು ಹೇಗೆ, ಸಂಭಾಷಣೆಯನ್ನು ಪ್ರಾರಂಭಿಸುವುದು ಹೇಗೆ, ಮನೆ ಬೈಬಲಭ್ಯಾಸವನ್ನು ನೀಡುವುದು ಹೇಗೆ, ಅಥವಾ ಪುನರ್ಭೇಟಿಯಲ್ಲಿ ಏನನ್ನಬೇಕು ಎಂಬ ಸಲಹೆಗಳಿಂದ ಮತ್ತು ಉತ್ತೇಜನದಿಂದ ಯಾರು ಪ್ರಯೋಜನ ಹೊಂದಿಲ್ಲ? ಪುಸ್ತಕಭ್ಯಾಸದ ಸ್ಥಳದಲ್ಲಿ ಕೂಡಿಬರುವ ಜತೆ ಪ್ರಚಾರಕರು ಮತ್ತು ಪಯನೀಯರರು ಅಂಥಾ ಸಹಾಯವನ್ನೇ ಒದಗಿಸುವರು.—ಗಲಾ. 6:10.
3 ನಿರ್ವಾಹಕರ ಪಾತ್ರ: ಸಭಾ ಪುಸ್ತಕಭ್ಯಾಸ ನಿರ್ವಾಹಕನು ನಾಯಕತ್ವವನ್ನು ವಹಿಸುತ್ತಾನೆ ಮತ್ತು ಗುಂಪಿನ ಚಟುವಟಿಕೆಯನ್ನು ಸಂಸ್ಥಾಪಿಸುವದಕ್ಕೆ ಅವನು ಜವಾಬ್ದಾರನು. ಪ್ರಚಾರಕರೊಂದಿಗೆ ಅವನು ಕ್ರಮವಾಗಿ ಕ್ಷೇತ್ರಸೇವೆಯನ್ನೂ ಮಾಡುತ್ತಾನೆ. (1 ಪೇತ್ರ 5:2, 3) ಚೆನ್ನಾಗಿ ತಯಾರಿಸಿದ ಸೇವೆಗಾಗಿ ಕೂಟಗಳು, ಗುಂಪನ್ನು ಸೇವೆಗಾಗಿ ಸನ್ನದ್ಧಗೊಳಿಸಲು ಶಾಸ್ತ್ರೀಯ ಮತ್ತು ವ್ಯಾವಹಾರ್ಯ ಸೂಚನೆಯನ್ನು ಒದಗಿಸುತ್ತವೆ. ಕ್ಷೇತ್ರ ಸೇವೆಗಾಗಿ ಎಲ್ಲಾ ಗುಂಪುಗಳು ಒಂದೇ ಸ್ಥಳದಲ್ಲಿ ಕೂಡಿಬರುವ ಬದಲಾಗಿ ಪ್ರತಿ ಪುಸ್ತಕಭ್ಯಾಸಕ್ಕೆ ಅದರ ಸ್ವಂತ ಸೇವೆಗಾಗಿ ಕೂಡುವಿಕೆಗಳು ಇರುವದು ಸಾಮಾನ್ಯವಾಗಿ ಒಳ್ಳೆಯದು. ಆದರೂ, ಅಗತ್ಯಬಿದ್ದಲ್ಲಿ ಎರಡು ಚಿಕ್ಕ ಗುಂಪುಗಳನ್ನು ಒಟ್ಟುಗೂಡಿಸಬಹುದು. ಕ್ಷೇತ್ರ ಸೇವೆಯು ಕಾವಲಿನಬುರುಜು ಅಭ್ಯಾಸವನ್ನು ಹಿಂಬಾಲಿಸಿ ಬರುವುದಾದರೆ, ಸೇವೆಗಾಗಿ ಕೂಟವು ಸಂಕ್ಷಿಪ್ತವಾಗಿರಬೇಕು. ಅನಂತರ, ಪ್ರತಿಯೊಬ್ಬ ಪುಸ್ತಕಭ್ಯಾಸ ನಿರ್ವಾಹಕನು ತನ್ನ ಸ್ವಂತ ಗುಂಪನ್ನು ನೋಡಿಕೊಳ್ಳುವನು.
4 ಹೊಂದಿಕೆಯುಳ್ಳ ಕ್ಷೇತ್ರ ಸೇವಾ ಏರ್ಪಾಡುಗಳು ಶುಶ್ರೂಷೆಯಲ್ಲಿ ಕ್ರಮದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತವೆ. ಸೇವೆಗಾಗಿ ಕೂಟವು ನೇಮಿತ ಸಮಯದಲ್ಲಿ ಮತ್ತು ಸ್ಥಳದಲ್ಲಿ ನಡಿಸಲ್ಪಟ್ಟಲ್ಲಿ, ಪ್ರಚಾರಕರು ಅದಕ್ಕನುಸಾರ ಯೋಜನೆಯನ್ನು ಮಾಡಶಕ್ತರು, ಅಲ್ಲಿ ಸಾಕಷ್ಟು ಟೆರಿಟೆರಿ ಇರುವದು ಮತ್ತು ಕಾರ್ಯನಡಿಸಲು ಬೇರೆಯವರು ಇರುವರು ಎಂಬ ಅರಿವಿನಿಂದ ಅವರು ಉತ್ತೇಜಿತರಾಗುತ್ತಾರೆ. (ಲೂಕ 10:1 ಹೋಲಿಸಿರಿ.) ಅಭ್ಯಾಸ ನಿರ್ವಾಹಕನು ಅಲ್ಲಿ ಇರದ್ದಾಗಲೂ, ಅವನು ಗುಂಪಿಗೆ ಟೆರಿಟೆರಿಯನ್ನು ಒದಗಿಸುವನು ಮತ್ತು ಗುಂಪಿಗಾಗಿ ಏರ್ಪಾಡುಗಳನ್ನು ಮಾಡುವನು. (om ಪುಟ 44-5) ಸೇವೆಗಾಗಿ ಕೂಟವನ್ನು ನಡಿಸುವದಕ್ಕೆ ಯೋಗ್ಯತೆಯುಳ್ಳ ಸಹೋದರನು ಇಲ್ಲವಾದರೆ, ನಿರ್ವಾಹಕನು ಒಬ್ಬ ಸಹೋದರಿಯನ್ನು ಇದಕ್ಕೆ ನೇಮಿಸಬಹುದು. (om ಪುಟ 77-8; km 4⁄88 ಪುಟ 3) ಗುಂಪು ತನ್ನ ನಿಯಮಿತ ಸಮಯದಲ್ಲಿ ಮತ್ತು ಸ್ಥಳದಲ್ಲಿ ಕ್ರಮವಾಗಿ ಕೂಡಿಬರುವದಾದರೆ, ಗಲಿಬಿಲಿ ಉಂಟಾಗದು. ಇದರಲ್ಲಿ ಯಾವದೇ ತಾತ್ಕಾಲಿಕ ಬದಲಾವಣೆಗಳಿದ್ದರೆ, ಸಾಧ್ಯವಾದರೆ ಒಂದುವಾರಕ್ಕೆ ಮುಂಚೆ ಅದನ್ನು ಪ್ರಕಟಿಸಬೇಕು.
5 ಸಹಕಾರವು ಬೇಕಾಗಿದೆ: ಕ್ಷೇತ್ರ ಶುಶ್ರೂಷೆಯ ಹಲವಾರು ವಿಭಾಗಗಳಲ್ಲಿ ಅರ್ಥಭರಿತವಾಗಿ ಭಾಗವಹಿಸುವಂತೆ ಎಲ್ಲರೂ ಪ್ರಯಾಸಪಡಬೇಕು. ಸ್ಥಳಿಕ ಕ್ಷೇತ್ರದಲ್ಲಿ ಎದುರಾಗುವ ವಾಸ್ತವಿಕ ಪರಿಸ್ಥಿತಿ ಮತ್ತು ಅಡಿಗ್ಡಳನ್ನು ಉಪಯೋಗಿಸಿ, ಪ್ರ್ಯಾಕ್ಟಿಸ್ ಸೆಶ್ಶನ್ಗಳನ್ನು ಮಾಡುವ ಮೂಲಕ ಪ್ರಚಾರಕರು ಒಟ್ಟುಗೂಡಿ ಸೇವೆಗಾಗಿ ತಯಾರಿಸಬಹುದು.—ಜ್ಞಾನೋ. 27:17
6 ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಹೆಚ್ಚು ನಿಪುಣತೆಯನ್ನು ಗಳಿಸಲು ಒಬ್ಬ ಅನುಭವಸ್ಥ ಪ್ರಚಾರಕನ ಸಹಾಯ ನಿಮಗೆ ಬೇಕೋ? ಬೇಕಿದ್ದರೆ, ಸಭಾ ಪುಸ್ತಕಭ್ಯಾಸ ನಿರ್ವಾಹಕನೊಂದಿಗೆ ಮಾತಾಡಿರಿ. ಒಬ್ಬ ಯೋಗ್ಯತೆಯುಳ್ಳ ಪ್ರಚಾರಕನನ್ನು ನಿಮಗಾಗಿ ಏರ್ಪಡಿಸಲು ಅವನು ಶಕ್ತನಾಗಬಹುದು. ಪ್ರಯೋಜನ ಹೊಂದಲಿಕ್ಕಾಗಿ, ಕೊಡಲ್ಪಟ್ಟ ಸಲಹೆಗಳನ್ನು ದಕ್ಷತೆಯಿಂದ ಅನ್ವಯಿಸಿರಿ ಮತ್ತು ಮಾಡಲ್ಪಟ್ಟ ಕಾಲನಿಶ್ಚಯವನ್ನು ತಪ್ಪದೆ ಪಾಲಿಸಿರಿ.
7 ಪುಸ್ತಕಭ್ಯಾಸ ನಿರ್ವಾಹಕನಿಂದ ಸಹಾಯಕೊಡಲು ನೇಮಿಸಲ್ಪಡುವವರು ತಮ್ಮ ನಿರೀಕ್ಷಣೆಗಳಲ್ಲಿ ಸಹಾಯಕಾರಿಗಳೂ ನ್ಯಾಯೋಚಿತರೂ ಆಗಿರಬೇಕು. ಕ್ಷೇತ್ರಸೇವೆಯ ಕಡೆಗೆ ಸಕಾರಾತ್ಮಕ ಮತ್ತು ಸಮತೂಕದ ಭಾವವಿರುವವರು ಮತ್ತು ವ್ಯಾವಹಾರ್ಯ ಜ್ಞಾನವಿರುವವರು ಇತರರನ್ನು ಉತ್ತಮವಾಗಿ ತರಬೇತಿ ಮಾಡಶಕ್ತರು ಎಂದು ಅನುಭವಗಳು ತೋರಿಸಿವೆ. (km 8⁄79 ಪುಟ 3-4; km 9⁄79 ಪುಟ 3-4) ಪ್ರಗತಿಯು ಮಾಡಲ್ಪಟ್ಟ ಹಾಗೆ ಪ್ರಶಂಸೆಯು ಯಾವಾಗಲೂ ಕೊಡಲ್ಪಡಬೇಕು. ಅನಂತರ ಬೇರೆ ಗುರಿಗಳನ್ನು ಇಡಸಾಧ್ಯವಿದೆ.—ಲೂಕ 19:17-19.
8 ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ ಪರಿಣಾಮಕಾರಿಗಳಾಗುವಂತೆ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬಯಸಬೇಕು. ಈ ಕಾರ್ಯದ ಜರೂರಿಗೆ ಕೆಡುತ್ತಿರುವ ಲೋಕ ಪರಿಸ್ಥಿತಿಗಳು ಸಾಕ್ಷ್ಯ ನೀಡುತ್ತವೆ. ಜೀವಗಳು ಒಳಗೂಡಿರುತ್ತವೆ, ಮತ್ತು ಯೆಹೋವನು ಒಟ್ಟುಗೂಡಿಸುವಿಕೆಯನ್ನು ತರ್ವೆಗೊಳಿಸುತ್ತಿದ್ದಾನೆ. (ಯೆಶಾ. 60:22) ನಮಗೆ ಕೊಡಲ್ಪಟ್ಟ ಶುಶ್ರೂಷೆಯನ್ನು ಮನಸ್ಸಿನಲ್ಲಿಡುವದಾದರೆ, ನಾವು ನಮ್ಮ ಸಭಾ ಪುಸ್ತಕಭ್ಯಾಸ ಗುಂಪಿನೊಂದಿಗೆ ನಿಕಟವಾಗಿ ಕಾರ್ಯನಡಿಸಿ, ಒಬ್ಬರನ್ನೊಬ್ಬರು ಉತ್ತೇಜಿಸುತ್ತಾ ಪ್ರಬೋಧಿಸುತ್ತಾ ನಮ್ಮ ನೇಮಕವನ್ನು ಪೂರ್ಣವಾಗಿ ಪೂರೈಸುವೆವು.—ರೋಮಾ. 12:6-8; 2 ತಿಮೊ. 4:1, 2, 5.