ನಮ್ಮ ಸಭಾ ಪುಸ್ತಕ ಅಧ್ಯಯನ ನಿರ್ವಾಹಕರೊಂದಿಗೆ ಸಹಕರಿಸುವುದು
1 ಸುವಾರ್ತೆಯ ಶುಶ್ರೂಷಕರೋಪಾದಿ ನಮ್ಮ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ಸಭಾ ಪುಸ್ತಕ ಅಭ್ಯಾಸವು ಒಂದು ಅತ್ಯಾವಶ್ಯಕ ಪಾತ್ರವನ್ನು ಆಡುತ್ತದೆ. ಬೈಬಲಿನ ಮತ್ತು ಸೊಸೈಟಿಯ ಪ್ರಕಾಶನಗಳಲ್ಲೊಂದರ ಅಧ್ಯಯನಕ್ಕಾಗಿ ಉತ್ಸಾಹದ, ಕೌಟುಂಬಿಕ ವಾತಾವರಣವನ್ನು ಪ್ರೋತ್ಸಾಹಿಸಲಿಕ್ಕೋಸ್ಕರ, ಉದ್ದೇಶಪೂರ್ವಕವಾಗಿಯೇ ಗುಂಪುಗಳನ್ನು ಚಿಕ್ಕದ್ದಾಗಿ ಇಡಲಾಗಿವೆ. ಈ ಚಿಕ್ಕ ಘಟಕಾಂಶಗಳು ಕ್ಷೇತ್ರ ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಲು ನಮ್ಮನ್ನು ತರಬೇತಿಗೊಳಿಸಲಿಕ್ಕಾಗಿಯೂ ಒಂದು ಆದರ್ಶಪ್ರಾಯದ ಪರಿಸ್ಥಿತಿಗಳನ್ನು ಕೂಡ ಒದಗಿಸುತ್ತವೆ. ವೈಯಕ್ತಿಕ ಪ್ರೋತ್ಸಾಹ ಮತ್ತು ಗಮನವು ವ್ಯಕ್ತಿಗಳಿಗೆ ಈ ಪುಸ್ತಕ ಅಧ್ಯಯನ ಏರ್ಪಾಡಿನಿಂದ ಸುಲಭವಾಗಿ ದೊರಕುತ್ತದೆ. ನಾವು ನಿರ್ವಾಹಕನೊಂದಿಗೆ ಪೂರ್ಣವಾಗಿ ಹೇಗೆ ಸಹಕಾರ ನೀಡಬಲ್ಲೆವು ಮತ್ತು ಈ ಉತ್ತಮ ಒದಗಿಸುವಿಕೆಯಿಂದ ಪ್ರಯೋಜನ ಪಡೆಯಬಲ್ಲೆವು?
2 ಕ್ಷೇತ್ರ ಶುಶ್ರೂಷೆಯಲ್ಲಿ ಹುರುಪಿನ ಒಂದು ಪಾಲು: ಶುಶ್ರೂಷೆಯಲ್ಲಿ ಹುರುಪಿನ ಒಂದು ಪಾಲು ಇರುವಂತೆ ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ ಸಹಾಯ ಮಾಡುವುದು ಪುಸ್ತಕ ಅಧ್ಯಯನ ನಿರ್ವಾಹಕನ ಅತಿ ಪ್ರಾಮುಖ್ಯ ಜವಾಬ್ದಾರಿಕೆಗಳಲ್ಲಿ ಒಂದಾಗಿರುತ್ತದೆ. ಈ ವಿಷಯದಲ್ಲಿ ನಮ್ಮ ಶುಶ್ರೂಷೆ ಪುಸ್ತಕದ 44 ನೆಯ ಪುಟದಲ್ಲಿ ನಮಗೆ ನೆನಪಿಸುವುದೇನಂದರೆ “ಅವನು ಕ್ಷೇತ್ರ ಸೇವೆಗೆ ತೋರಿಸುವ ಕ್ರಮ, ಆಸಕ್ತಿ ಮತ್ತು ಉತ್ಸಾಹವು ಪ್ರಚಾರಕರಲ್ಲಿ ಪ್ರತಿಬಿಂಬಿಸುವುದು.” ಕೆಲವೊಮ್ಮೆ ನಿರ್ವಾಹಕನು ಸೇವೆಯಲ್ಲಿ ತನ್ನ ಸ್ವಂತ ಕುಟುಂಬದ ಸದಸ್ಯರೊಟ್ಟಿಗೆ ಕೆಲಸಮಾಡುವನು, ಆದರೆ ಅವನ ಪರಿಸ್ಥಿತಿಗಳು ಅನುಮತಿಸುವ ಪ್ರಕಾರ, ಶುಶ್ರೂಷೆಯ ವಿವಿಧ ಭಾಗಗಳಲ್ಲಿ ಇತರರೊಂದಿಗೆ ಜತೆಯಾಗಿ ಹೋಗಲು ಕೂಡ ಅವನು ಸಂತೋಷಿಸುವನು. ಕ್ಷೇತ್ರ ಸೇವಾ ಕೂಟಗಳಿಗೆ ನೀವು ಕ್ರಮವಾಗಿ ಬೆಂಬಲಿಸಶಕ್ತರೋ? ನೀವು ಹಾಗೆ ಮಾಡುವುದು ನಿಮ್ಮ ಪುಸ್ತಕ ಅಧ್ಯಯನ ನಿರ್ವಾಹಕನಿಂದ ಮತ್ತು ಇತರ ಪ್ರಚಾರಕರಿಂದ ಬಹಳವಾಗಿ ಗಣ್ಯಮಾಡಲ್ಪಡುವುದು.
3 ಸಾರುವ ಕಾರ್ಯದಲ್ಲಿ ಎಲ್ಲರಿಗೂ ಹುರುಪಿನ ಪಾಲು ಇರುವಂತೆ, ಕ್ಷೇತ್ರ ಸೇವೆಗಾಗಿ ಕೂಟಗಳು ಅನುಕೂಲಕರ ಸ್ಥಳಗಳಲ್ಲಿ ಏರ್ಪಡಿಸಲ್ಪಡುತ್ತವೆ. ಸ್ಥಳೀಕ ಪರಿಸ್ಥಿತಿಗಳಿಗೆ ಗಮನ ಹರಿಸುತ್ತಾ, ಪ್ರತಿಯೊಂದು ಗುಂಪು ಶುಶ್ರೂಷೆಯಲ್ಲಿ ಬೇಗನೆ ಆರಂಭಿಸಲು ಬಯಸುತ್ತದೆ. ವಾರಾಂತ್ಯದಲ್ಲಿ ಅನೇಕ ಪ್ರಚಾರಕರು ಮತ್ತು ಪಯನೀಯರರು ಮಧ್ಯಾಹ್ನ ಹೊತ್ತಿನ ನಂತರವೂ ಶುಶ್ರೂಷೆಯಲ್ಲಿ ಮುಂದರಿದಾಗ, ಅವರು ಉತ್ತಮ ಯಶಸ್ಸನ್ನು ಪಡೆದಿರುತ್ತಾರೆ.
4 ಶುಶ್ರೂಷೆಯ ಕೆಲವು ವೈಶಿಷ್ಟ್ಯಗಳಲ್ಲಿ ನೆರವು ಬೇಕೆಂದು ನೀವು ಬಯಸುವಿರೋ? ಪ್ರಾಯಶಃ ನಿಮ್ಮ ಗುಂಪಿನಲ್ಲಿರುವ ಒಬ್ಬ ಸಾಮರ್ಥ್ಯಯುಳ್ಳ ಪ್ರಚಾರಕನು ನಿಮ್ಮೊಂದಿಗೆ ಕೆಲಸ ಮಾಡಲು ನಿಮ್ಮ ಪುಸ್ತಕ ಅಧ್ಯಯನ ನಿರ್ವಾಹಕನು ಏರ್ಪಡಿಸಶಕ್ತನು. ತಿಂಗಳ ಅಂತ್ಯದಲ್ಲಿ, ನಿಮ್ಮ ಕ್ಷೇತ್ರ ಸೇವಾ ವರದಿಯನ್ನು ತಡಮಾಡದೆ ಹಾಕುವುದನ್ನು ಖಚಿತಮಾಡಿರಿ. ಈ ಪ್ರಾಮುಖ್ಯ ವಿಭಾಗದಲ್ಲೂ ಕೂಡ ನಿಮ್ಮ ಸಹಕಾರವನ್ನು ಪುಸ್ತಕ ಅಧ್ಯಯನ ನಿರ್ವಾಹಕ ಮತ್ತು ಸೆಕ್ರಿಟರಿ ಗಣ್ಯ ಮಾಡುವರು.—ಹೋಲಿಸಿರಿ ಲೂಕ 16:10.
5 ಗುಂಪನ್ನು ಸೇವಾ ಮೇಲ್ವಿಚಾರಕನು ಸಂದರ್ಶಿಸುವಾಗ: ಕ್ಷೇತ್ರ ಶುಶ್ರೂಷೆಯಲ್ಲಿ ಮಹತ್ತರವಾದ ಮತ್ತು ಅಧಿಕ ಅರ್ಥಭರಿತ ಚಟುವಟಿಕೆಯನ್ನು ಪ್ರೋತ್ಸಾಹಿಸಲಿಕ್ಕೋಸ್ಕರ, ಸಾಮಾನ್ಯವಾಗಿ ಸೇವಾ ಮೇಲ್ವಿಚಾರಕನು ಪ್ರತಿ ತಿಂಗಳು ಒಂದು ಪುಸ್ತಕ ಅಧ್ಯಯನ ಗುಂಪನ್ನು ಸಂದರ್ಶಿಸುವನು. ಸಾರುವ ಕಾರ್ಯದ ವಿವಿಧ ವೈಶಿಷ್ಟ್ಯಗಳಲ್ಲಿ ಪ್ರಗತಿಯನ್ನು ಮಾಡಲು ಗುಂಪಿಗೆ ಸಹಾಯವಾಗುವ ನಿರ್ದಿಷ್ಟ ಸಲಹೆಯನ್ನು ಅದು ಒದಗಿಸುವುದರಿಂದ, ಪುಸ್ತಕ ಅಧ್ಯಯನದ ಸಮಾಪ್ತಿಯಲ್ಲಿ ಅವನು ನೀಡುವ 15-ನಿಮಿಷಗಳ ಭಾಷಣಕ್ಕೆ ನಿಕಟವಾಗಿ ಗಮನಕೊಡಿರಿ. ವಾರಾಂತ್ಯದಲ್ಲಿ ಪುಸ್ತಕ ಅಧ್ಯಯನದ ಬೇರೆ ಬೇರೆ ಸದಸ್ಯರೊಂದಿಗೆ ಸೇವೆ ಮಾಡಲು ಕೂಡ ಸೇವಾ ಮೇಲ್ವಿಚಾರಕನು ಆತುರದಿಂದಿರುವನು. ಕ್ಷೇತ್ರದಲ್ಲಿನ ಅವನ ಅನುಭವ ಮತ್ತು ಸಾಮರ್ಥ್ಯದಿಂದ ನೀವು ಪ್ರಯೋಜನ ಪಡೆಯಲಾಗುವಂತೆ, ಈ ವಿಶೇಷ ಒದಗಿಸುವಿಕೆಯ ಸದುಪಯೋಗವನ್ನು ಮಾಡಲು ಖಚಿತಮಾಡಿಕೊಳ್ಳಿರಿ.
6 ಸಹಕಾರದ ನಮ್ಮ ವೈಯಕ್ತಿಕ ಉದಾಹರಣೆ ಮತ್ತು ಕಡಿಮೆ ಅನುಭವಿಗಳಿಗೆ ನೆರವಾಗಲು ನಮ್ಮ ಇಚ್ಛೆಯು ಸಭಾ ಪುಸ್ತಕ ಅಧ್ಯಯನವು ಒಂದು ಬೆಚ್ಚಗೆನ, ಸ್ನೇಹತನದ ವಾತಾವರಣವನ್ನು ಉಂಟುಮಾಡಲು ಸಹಾಯ ಮಾಡುತ್ತದೆ, ಹೀಗೆ ನಾವು “ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.”—ಗಲಾತ್ಯ 6:10.