ಸತ್ಯವಾಕ್ಯವನ್ನು ನಿಪುಣತೆಯಿಂದ ನಿರ್ವಹಿಸುವದು
1 ನಾವು ದೇವರ ವಾಕ್ಯವನ್ನು ಉಪಯೋಗಿಸುವ ನಮ್ಮ ನಿಪುಣತೆಯು, ಸುವಾರ್ತೆಗೆ ಜನರು ಪ್ರತಿವರ್ತಿಸುವ ವಿಧದ ಮೇಲೆ ಪರಿಣಾಮ ಬೀರಬಹುದು. ಆದಕಾರಣ, ಶುಶ್ರೂಷೆಯಲ್ಲಿ ಪ್ರವೀಣತೆಯನ್ನು ಬೆಳೆಸಲು ಪೌಲನು ಹೀಗನ್ನುತ್ತಾ, ಪ್ರೋತ್ಸಾಹಿಸಿದನು: “ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ (ನಿಪುಣತೆಯಿಂದ ನಿರ್ವಹಿಸುವವನೂ, NW) ಆಗಿರು.”—2 ತಿಮೊ. 2:15.
2 ಬೈಬಲನ್ನು ಉಪಯೋಗಿಸುವದರಲ್ಲಿ ನಿಪುಣತೆಯನ್ನು ಬೆಳೆಸತಕ್ಕದ್ದು. ವೈಯಕಿಕ್ತ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಸಮಯವನ್ನು ಬದಿಗಿಡುವದು ಅತ್ಯಾವಶ್ಯಕ. ಆದಾಗ್ಯೂ, ಶುಶ್ರೂಷೆಯಲ್ಲಿ ಬೈಬಲನ್ನು ಕ್ರಮವಾಗಿ ಉಪಯೋಗಿಸಿ, ನಾವು ಕಲಿಯುವ ಸಂಗತಿಗಳನ್ನು ನಾವು ಅಭ್ಯಾಸದಲ್ಲಿ ಹಾಕಲೇಬೇಕಾಗಿದೆ. ನಾವು ದೇವರ ಸಹಾಯ ಮತ್ತು ಮಾರ್ಗದರ್ಶನೆಗಾಗಿ ಕೋರುತ್ತಾ ಇರುವಾಗ, ಇದು ಸತತ ಪ್ರಯತ್ನವನ್ನು ಅಪೇಕ್ಷಿಸುತ್ತದೆ.—1 ಯೋಹಾನ 3:22.
3 ದೇವರ ವಾಕ್ಯದ ಮೇಲೆ ಕೇಂದ್ರೀಕರಿಸಿರಿ: ನಮ್ಮ ಸಂದೇಶವು ನಮ್ಮ ಮೂಲದಿಂದಲೇ ಬಂದದ್ದಲ್ಲ, ಬದಲು ದೇವರ ಲಿಖಿತ ವಾಕ್ಯದಿಂದ ಬಂದದ್ದು ಎಂದು ತಿಳಿದುಕೊಳ್ಳುವದು ಜನರಿಗೆ ಪ್ರಾಮುಖ್ಯವಾಗಿರುತ್ತದೆ. (ಯೋಹಾನ 7:18) ದೇವರು ಒಂದು ವಿಷಯದ ಮೇಲೆ ಬೈಬಲಿನಲ್ಲಿ ಏನು ಹೇಳುತ್ತಾನೆ ಎಂದು ವ್ಯಕ್ತಿಯೊಬ್ಬನಿಗೆ ತೋರಿಸುವದರಿಂದ ಒಂದು ಬಲವಾದ ಪ್ರಭಾವಬೀರಬಲ್ಲದು. ನೀತಿಯ ಹೃದಯದ ಜನರು ಬೈಬಲಿನ ಬಲವಾದ ಸಂದೇಶದ ಕಡೆಗೆ ಸೆಳೆಯಲ್ಪಡುತ್ತಾರೆ. ಶಾಸ್ತ್ರಗ್ರಂಥದ ಬಳಕೆಯನ್ನು ನಾವು ಹೆಚ್ಚು ಮಾಡಿದಷ್ಟಕ್ಕೇ, ನಾವು ಪ್ರವೀಣರಾಗುತ್ತೇವೆ ಮತ್ತು ದೇವರ ವಾಕ್ಯದ ಮುಂದೆ ಇತರರು ಹೆಚ್ಚು ಬಹಿರಂಗವಾಗಿ ತೋರ್ಪಡಿಸಿಕೊಳ್ಳಲು ನಾವು ಸಾಧ್ಯಮಾಡುತ್ತೇವೆ, ಇದು ಅವರಿಗೆ ಪ್ರಯೋಜನಕರದ್ದಾಗಿದೆ.
4 ಹೆಚ್ಚಿನ ಜನರು ಬೈಬಲಿನ ಕುರಿತು ಅಪರಿಚಯಸ್ಥರಾಗಿದ್ದಾರೆ. ಅದನ್ನು ಬಳಸುವಾಗ, ಅದನ್ನು ಕೇವಲ ಓದುವದಕ್ಕಿಂತಲೂ ಹೆಚ್ಚಿನದ್ದನ್ನು ಮಾಡತಕ್ಕದ್ದು. ಶಾಸ್ತ್ರವಚನವೊಂದನ್ನು ಹೇಗೆ ಪ್ರಸ್ತಾಪಿಸುವದು ಎಂದು ನಿರ್ಧರಿಸಲು ವಿಚಾರಭರಿತ ತಯಾರಿಯು ಆವಶ್ಯಕವಾಗಿದೆ. ಆಸಕ್ತಿಯನ್ನು ಕೆರಳಿಸಲು ಒಂದು ಪ್ರಶ್ನೆ ಯಾ ನಮೂದಿಸಲ್ಪಟ್ಟ ಸಮಸ್ಯೆಯೊಂದನ್ನು ಬಳಸಬಹುದಾಗಿದೆ. ಶಾಸ್ತ್ರವಚನವೊಂದನ್ನು ಓದಿಯಾದ ಮೇಲೆಯೂ ಕೂಡ, ನಾವೇನು ಹೇಳುತ್ತೇವೆ ಅದಕ್ಕೂ ಗಮನಕೊಡಬೇಕು. ಕೇವಲ ಒಂದು ಓದುವಿಕೆಯಿಂದ ವ್ಯಕ್ತಿಯು ವಿಷಯವನ್ನು ಹೀರಿಕೊಳ್ಳಲು ಶಕ್ತನಾಗದೇ ಇರಬಹುದು. ಮುಖ್ಯ ಶಬ್ದಗಳನ್ನು ಪುನಃ ಒತ್ತಿಹೇಳುವದರಿಂದ ಮತ್ತು ಅನ್ವಯಮಾಡುವದರಿಂದ ಯೋಚನೆಗಳು ಆಳಕ್ಕಿಳಿಯಲು ಅವಕಾಶವನ್ನೀಯುತ್ತವೆ.—ನೋಡಿರಿ ಸ್ಕೂಲ್ ಗೈಡ್ಬುಕ್, ಅಭ್ಯಾಸಗಳು 24 ಮತ್ತು 25.
5 ನೀಡುವಿಕೆ: ಯಥಾರ್ಥವಾಗಿ ಆಸಕ್ತಿಯಿರುವ ಜನರನ್ನು ನಾವು ದಶಂಬರದಲ್ಲಿ ಕಂಡುಕೊಳ್ಳುವಾಗ, ಅವರಿಗೆ ನಾವು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಒಟ್ಟಿಗೆ ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಕೊಡುತ್ತೇವೆ. ಈ ನೀಡುವಿಕೆಯೊಂದಿಗೆ ಜನರನ್ನು ನಾವು ಹೇಗೆ ಸಮೀಪಿಸಬಹುದು? ನಮ್ಮನ್ನು ಪರಿಚಯಿಸಿದ ನಂತರ, ನಾವು ಹೀಗನ್ನಬಹುದು: “ಇಂದು ಅನೇಕರು ಮಾರ್ಗದರ್ಶನೆಗಾಗಿ ವ್ಯಕ್ತಿಗಳ ಯಾ ಪ್ರಕಾಶನಗಳ ಕಡೆಗೆ ನೋಡುತ್ತಾರೆ. ವ್ಯಾವಹಾರಿಕ ಮಾರ್ಗದರ್ಶನೆಯ ಅತ್ಯುತ್ತಮ ಮೂಲವು ಯಾವುದಾಗಿರಬಲ್ಲದು ಎಂದು ನೀವು ಭಾವಿಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶ ನೀಡಿರಿ.] ವಿವೇಕದ ನಿಜ ಮೂಲದ ಕುರಿತು ಬೈಬಲು ಏನನ್ನುತ್ತದೆ ಎಂದು ಗಮನಿಸಿರಿ. (ಓದಿರಿ ಜ್ಞಾನೋಕ್ತಿ 2:6, 7) ಮಾನವ ವಿವೇಕವು ದೌರ್ಭಾಗ್ಯಕ್ಕೆ ಮತ್ತು ಹತಾಶೆಗೆ ನಡಿಸುತ್ತಾ, ದುಃಖಕರವಾಗಿ ಕೊರತೆಯುಳ್ಳದ್ದೆಂದು ರುಜುವಾಗಿದೆ. ಆದಾಗ್ಯೂ, ದೇವರ ವಿವೇಕವು ಯಾವಾಗಲೂ ನಂಬಲರ್ಹ ಮತ್ತು ಪ್ರಯೋಜನದಾಯಕವೆಂದು ರುಜುವಾಗಿದೆ. [ಓದಿರಿ ಯೆಶಾಯ 48:17, 18] ಆದಕಾರಣ, ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಆವಶ್ಯಕವಾದ ಮಾರ್ಗದರ್ಶನೆಗಾಗಿ ದೇವರ ಕಡೆಗೆ ನೋಡತಕ್ಕದ್ದು.” ತದನಂತರ ಗಾಡ್ಸ್ ವರ್ಡ್ ಪುಸ್ತಕದ 12ನೆಯ ಅಧ್ಯಾಯವನ್ನು ತೆರೆದು, 2ನೆಯ ಪಾರಗ್ರಾಫಿಗೆ ಗಮನವನ್ನು ಮಾರ್ಗದರ್ಶಿಸಸಾಧ್ಯವಿದೆ. ಆದಾದನಂತರ, ಅಧ್ಯಾಯದಿಂದ ಅನ್ವಯಿಸಬಹುದಾದ ವಿಷಯವೊಂದನ್ನು ಜೋಡಿಸಸಾಧ್ಯವಿದೆ.
6 ದೇವರ ವಿವೇಕದ ಶ್ರೇಷ್ಠತೆಯನ್ನು ಎತ್ತಿತೋರಿಸಲು, ಜ್ಞಾನೋಕ್ತಿ 2:6, 7ನ್ನು ಉಪಯೋಗಿಸಿದ ನಂತರ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ್ನು ಪ್ರಸ್ತಾಪಿಸಿರಿ ಮತ್ತು ನೀವು ಬೈಬಲನ್ನು ಗೌರವಿಸಲು ಮತ್ತು ಒಂದು ನಿಧಿಯೋಪಾದಿ ನೋಡಲು ಕಾರಣವೇನೆಂದು ಮನೆಯವನಿಗೆ ವಿವರಿಸಿರಿ. ಅದರ ಕಲಿಸುವಿಕೆಗಳು ಅವನಿಗೆ ಪ್ರಯೋಜನ ತರುತ್ತವೆ ಮತ್ತು ಭವಿಷ್ಯಕ್ಕಾಗಿ ಒಂದು ದೃಢ ನಿರೀಕ್ಷೆಯನ್ನು ನೀಡುತ್ತವೆ ಎಂದು ಅವನು ತಿಳಿಯಲಿ. ಅಂಥಹ ಚರ್ಚೆಯು ದೈನಂದಿನ ಸಮಸ್ಯೆಗಳಿಗೆ ಬೈಬಲಿನ ಕೆಲವು ವಿವೇಕಭರಿತ ಸಲಹೆಗಳನ್ನು ತೋರಿಸಲು ಅವಕಾಶಗಳನ್ನು ಒದಗಿಸಬಹುದು ಮತ್ತು ಬೈಬಲ್ ಅಧ್ಯಯನವೊಂದಕ್ಕೆ ನಡಿಸಲೂ ಬಹುದು.
7 ಪ್ರಾಮಾಣಿಕ ಹೃದಯದವರಿಗೆ ಸಹಾಯ ನೀಡಲು ಮತ್ತು ಅವನ ವಿರೋಧಿಗಳನ್ನು ಖಂಡಿಸಲು, ಯೇಸುವು ಯಾವಾಗಲೂ ಶಾಸ್ತ್ರಗ್ರಂಥಗಳ ಕಡೆಗೆ ನಿರ್ದೇಶಿಸಿದನು. ಅವನು ಕಲಿಸಿದ ಸಂಗತಿಗಳನ್ನು ‘ವಿವರಿಸಿ ಮತ್ತು ಶಾಸ್ತ್ರಾಧಾರದಿಂದ ಸ್ಥಾಪಿಸುವದು’ ಪೌಲನ ಪದ್ಧತಿಯಾಗಿತ್ತು. (ಅ.ಕೃ. 17:2, 3) ಸತ್ಯದ ವಾಕ್ಯವನ್ನು ಇನ್ನಷ್ಟು ನಿಪುಣತೆಯಿಂದ ನಿರ್ವಹಿಸುವದಕ್ಕಾಗಿ ಶ್ರಮ ಪಟ್ಟ ಹಾಗೆಯೇ, ಶುಶ್ರೂಷೆಯಲ್ಲಿ ನಮ್ಮ ಭರವಸೆಯು ಮತ್ತು ಆನಂದವು ಹೆಚ್ಚುತ್ತದೆ.