ಸಭಾ ಪುಸ್ತಕಭ್ಯಾಸದ ಏರ್ಪಾಡು
ಭಾಗ 4: ಒಬ್ಬರನ್ನೊಬ್ಬರು ಎತ್ತಿಕಟ್ಟುತ್ತಾ ಇರ್ರಿ
1 ಸಭಾ ಪುಸ್ತಕಭ್ಯಾಸದ ಗುಂಪಿನ ಪ್ರತಿಯೊಬ್ಬನು ಗುಂಪಿನಲ್ಲಿರುವ ಇತರರ ಆತ್ಮಿಕ ವಿಕಾಸದಲ್ಲಿ ಒಂದು ಅರ್ಥಭರಿತ ಪಾತ್ರವನ್ನು ವಹಿಸಬಲ್ಲನು. ‘ವಿಶೇಷವಾಗಿ ಅಂತ್ಯವು ಸಮೀಪಿಸುತ್ತಿರುವಾಗ, ಇತರರನ್ನು ಪ್ರೀತಿ ಮತ್ತು ಸತ್ಕಾರ್ಯಕ್ಕೆ ಪ್ರೇರೇಪಿಸುತ್ತಾ ಇರ್ರಿ’ ಎಂಬ ಶಾಸ್ತ್ರೀಯ ಆಜ್ಞೆಯನ್ನು ನಾವೆಲ್ಲರೂ ಪಾಲಿಸ ಬಯಸುತ್ತೇವೆ.—ಇಬ್ರಿ. 10:24, 25.
2 ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವದು: ಪುಸ್ತಕಭ್ಯಾಸದಲ್ಲಿ ಒಂದು ಬೆಚ್ಚಗೆನ, ಸ್ನೇಹಪರ ಪರಿಸರವನ್ನು ನಿರ್ಮಿಸಲು ನಾವೆಲ್ಲರೂ ನೆರವಾಗ ಸಾಧ್ಯವಿದೆ. ನಾವು ಪ್ರತಿಯೊಬ್ಬರು ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವಾಗ, ಅದು ಗುಂಪಿನ ಆಪ್ತ ಸಂಬಂಧಕ್ಕೆ ನೆರವಾಗುತ್ತದೆ. ಗಲಾತ್ಯ 6:10ರಲ್ಲಿ, “ಎಲ್ಲರಿಗೆ ಒಳ್ಳೇದ್ದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯಲ್ಲಿರುವವರಿಗೆ ಮಾಡೋಣ” ಎಂದು ನಾವು ಮಾರ್ಗದರ್ಶಿಸಲ್ಪಟ್ಟಿದ್ದೇವೆ. ಉದಾಹರಣೆಗೆ, ಪುಸ್ತಕಭ್ಯಾಸದ ಯಾರಾದರೂ ಅಸ್ವಸ್ಥರಿದ್ದು ಕೂಟಕ್ಕೆ ಬಾರದೆ ಇರುವದನ್ನು ನೀವು ಗಮನಿಸಿದ್ದೀರೋ? ಪ್ರಾಯಶಃ ನೀವು ಅವರನ್ನು ಫೋನಿನ ಮೂಲಕ ಸಂಪರ್ಕಿಸಬಹುದು ಇಲ್ಲವೇ ವೈಯಕ್ತಿಕವಾಗಿ ಸಂದರ್ಶಿಸಬಹುದು. ಪುಸ್ತಕಭ್ಯಾಸ ಗುಂಪಿನಲ್ಲಿ ಅಂಥ ಆತ್ಮವು ಸಹೋದರರನ್ನು ಒಕ್ಕಟ್ಟಿನ ಆಪ್ತ ಸಂಬಂಧಕ್ಕೆ ಎಳೆಯುವದು.
3 ಕೆಲವರಿಗೆ ನಿತ್ಯದ ಒತ್ತಡಗಳ, ಕುಟುಂಬ ಜವಾಬ್ದಾರಿಕೆಗಳ ಮತ್ತು ಇತರ ಸಮಸ್ಯೆಗಳ ಕಾರಣದಿಂದಾಗಿ ಉತ್ತೇಜನದ ಅಗತ್ಯವಿದೆಯೇ? ಸಹಾಯ ಕೊಡಲು ನೀವೇನು ಮಾಡಬಹುದು? ಕೂಟಗಳಲ್ಲಿ ಇತರರನ್ನು ಕೇವಲ ವಂದಿಸುವುದು ಮಾತ್ರವಲ್ಲ, ಅವರನ್ನು ಸಂಭಾಷಣೆಗೆ ಎಳೆಯಲು ಸಹಾ ವಿಶೇಷ ಪ್ರಯತ್ನ ಮಾಡಿರಿ. ಕೆಲವರು ಸಂಕೋಚ ಸ್ವಭಾವದವರಾದರೂ ಯಾರಾದರೊಂದಿಗಾದರೂ ಮಾತಾಡಲು ಬಯಸುತ್ತಾರೆ, ಮತ್ತು ಅಂಥವರನ್ನು ಗೋಚರಿಸಿದ್ದಲ್ಲಿ ಅವರು ಪ್ರತಿಕ್ರಿಯೆ ತೋರಿಸುವರು. (uw ಪುಟ 137-8) “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನು ಒಬ್ಬರು ವೃದ್ಧಿಪಡಿಸುತ್ತಾ” ಇರುವಂತೆ ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. (1 ಥೆಸ. 5:14) ಯಾರಾದರೂ ಅಸ್ವಸ್ಥನಿದ್ದರೆ ಯಾ ನಿರಾಶೆಗೊಂಡಿದ್ದರೆ, ಮಿತ್ರರು ಬಂದು ಅವನನ್ನು ಸಂದರ್ಶಿಸಿದಲ್ಲಿ ಯಾ ಸಹಾಯವನ್ನಿತ್ತಲ್ಲಿ ಅದೆಷ್ಟು ಸಾಂತ್ವನಕರವು! ಕೆಲವುಸಾರಿ ಯಾರಾದರೂ ತನ್ನ ಕಡೆಗೆ ಪರಿಗಣನೆ ತೋರಿಸುತ್ತಾರೆಂಬ ತಿಳುವಳಿಕೆಯೇ ಅವರಿಗೆ ಸಾಕು.
4 ಕ್ಷೇತ್ರ ಸೇವಾ ಏರ್ಪಾಡುಗಳೊಂದಿಗೂ ನಾವು ಸಹಕರಿಸ ಬಯಸಬೇಕು. ಗುಂಪಿನ ಬೇರೆ ಬೇರೆ ಸದಸ್ಯರೊಂದಿಗೆ ನಾವು ಸೇವೆ ಮಾಡಲು ಪ್ರಯತ್ನಿಸಬೇಕು. (2 ಕೊರಿ. 6:11-13. 12:15) ಯಾರಿಗಾದರೂ ನಾವು ಸಹಾಯ ಕೊಡುವಂತೆ ಕೆಲವೊಮ್ಮೆ ಪುಸ್ತಕಭ್ಯಾಸ ನಿರ್ವಾಹಕನು ನಮಗೆ ಹೇಳಾನು. ಆಗ ನಾವು ಹೇಗೆ ಪ್ರತಿಕ್ರಿಯೆ ತೋರಿಸುವೆವು? ಪ್ರಚಾರಕರು ಮತ್ತು ಪಯನೀಯರರು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ವಿವಿಧ ಮುಖಗಳಲ್ಲಿ ಒಬ್ಬರೊಂದಿಗೊಬ್ಬರು ಸೇವೆ ಮಾಡುವಾಗ ಪುಸ್ತಕಭ್ಯಾಸ ಗುಂಪು ಬಹಳಷ್ಟು ಬಲವನ್ನು ಪಡೆಯುವದು.
5 ವೈಯಕ್ತಿಕ ಮಾದರಿ: ಪುಸ್ತಕಭ್ಯಾಸದ ಏರ್ಪಾಡಿಗೆ ನೀವು ನೆರವಾಗಬಹುದಾದ ಇತರ ಮಾರ್ಗಗಳೂ ಅಲ್ಲಿವೆ. ನಿಮ್ಮ ಒಳ್ಳೆಯ ಮಾದರಿಯು ಸಹಾ ಪ್ರಾಮುಖ್ಯವು. ಉದಾಹರಣೆಗೆ, ರಾಜ್ಯ ಸಭಾಗೃಹದ ಕೂಟಕ್ಕೆ ಹಾಜರಾಗುವಾಗ ಹೇಗೋ ಹಾಗೆ ನೀವು ಉಡುಪು ಧರಿಸಿದ್ದಲ್ಲಿ, ನೀವು ಗೌರವವನ್ನು ತೋರಿಸುತ್ತೀರಿ. ಹೀಗೆ, ಅನೌಪಚಾರಿಕ ಉಡುಪು ಧರಿಸಿ ಪುಸ್ತಕಭ್ಯಾಸಕ್ಕೆ ಬರುವ ಹವ್ಯಾಸವನ್ನು ಮಾಡಿರುವವರಿಗೆ ಒಂದು ನಿಶ್ಚಿತ ಮಾದರಿಯನ್ನು ನೀವಿಡುತ್ತೀರಿ. ಕೂಟವನ್ನು ಭಂಗಗೊಳಿಸದ ಹಾಗೆ ಸಮಯಕ್ಕೆ ಮುಂಚಿತವಾಗಿ ಬರುವದನ್ನೂ ನೀವು ಹವ್ಯಾಸವಾಗಿ ಮಾಡಿರುತ್ತೀರೋ?
6 ಸಭಾ ಪುಸ್ತಕಭ್ಯಾಸದ ಏರ್ಪಾಡು ಯೆಹೋವನ ಪ್ರೀತಿಯ ಒದಗಿಸುವಿಕೆಯಾಗಿದ್ದು, ನಮ್ಮ ಪೂರ್ಣ ಬೆಂಬಲವು ಅದಕ್ಕೆ ಅಗತ್ಯವಿದೆ. (ಯೆಶಾ. 40:11) ವೈಯಕ್ತಿಕ ಸಹಾಯವನ್ನು ನಾವು ಪಡೆಯಬಹುದಾದ ಮತ್ತು ಇತರರ ಆತ್ಮಿಕ ಚೈತನ್ಯಕ್ಕೂ ನೆರವಾಗಬಹುದಾದ ಸ್ಥಳವು ಅದಾಗಿದೆ. ನಾವೆಲ್ಲರೂ ಈ ಏರ್ಪಾಡಿಗೆ ಪೂರ್ಣವಾಗಿ ಬೆಂಬಲ ಕೊಡುವ ಮೂಲಕ, “ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ” ಇರೋಣ.—1 ಥೆಸ. 5:11.