ಕ್ಷೇತ್ರ ಶುಶ್ರೂಷೆಯಲ್ಲಿ ಪೂರ್ಣಾತ್ಮದಿಂದಿರ್ರಿ
ಭಾಗ 5: ಪೂರ್ಣಾತ್ಮದ ಸೇವೆಯ ಸಮೃದ್ಧ ಪ್ರಯೋಜನಗಳು
1 ಯೆಹೋವನು ಅವನ ಪೂರ್ಣಾತ್ಮದ ಸೇವಕರಿಗೆ ಮೇರೆಯಿಲ್ಲದ ಸಮೃದ್ಧ ಪ್ರಯೋಜನಗಳು ದೊರಕುವಂತೆ ಮಾಡುತ್ತಾನೆ. (ಕೀರ್ತ. 116:12) ನಮ್ಮ ಶುಶ್ರೂಷೆಯಲ್ಲಿ ಯೆಹೋವನಿಂದ ಬರುವ ಆಶೀರ್ವಾದಗಳ ಪೂರ್ಣ ಪ್ರಮಾಣವನ್ನು ನಾವು ಹೇಗೆ ಆನಂದಿಸಬಲ್ಲೆವು? ನಮಗಾಗಿ ಯಾವ ಪ್ರಯೋಜನಗಳನ್ನು ಶೇಖರಿಸಿಟ್ಟಿರುತ್ತಾನೆ? ಅವನ ಮೆಚ್ಚಿಕೆ ಮತ್ತು ಅನುಗ್ರಹವನ್ನು ನಮ್ಮದಾಗಿರಿಸಿಕೊಳ್ಳಬೇಕಾದರೆ, ನಾವೇನು ಮಾಡತಕ್ಕದ್ದು?
2 ವೈಯಕಿಕ್ತ ಪ್ರಯತ್ನ ಬೇಕಾಗಿದೆ: ದೇವರ ಚಿತ್ತವನ್ನು ಮಾಡಲು ನಿಮ್ಮ ವೈಯಕಿಕ್ತ ಪ್ರಯತ್ನಗಳ ಮೇಲೆ ನೀವು ಅಧಿಕ ಪ್ರಮಾಣದಲ್ಲಿ ದೇವ-ದತ್ತ ಪ್ರಯೋಜನಗಳಲ್ಲಿ ಆನಂದಿಸುವದು ಆತುಕೊಂಡಿದೆ. ಶುಶ್ರೂಷೆಯ ವಿಷಯದಲ್ಲಿ, ಪೌಲನು ಬರೆದದ್ದು: “ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಬಹುಮಾನ ದೊರೆಯುವದು.” (1 ಕೊರಿಂ. 3:8, NW) ಆದಕಾರಣ, ಶುಶ್ರೂಷೆಯಲ್ಲಿ ನಮಗೆ ಸಾಧ್ಯವಿರುವಷ್ಟು ಪೂರ್ಣ ಪಾಲು ಇರಲಿ. ದೇವರನ್ನು ತಿಳಿದುಕೊಳ್ಳುವಂತೆ, ಅನೇಕ ಜನರಿಗೆ, ಇಡೀ ಸಭೆಗಳಿಗೆ ಕೂಡ ಸಹಾಯ ಮಾಡುವ ವೈಯಕಿಕ್ತ ಬಹುಮಾನವು ಅಪೊಸ್ತಲ ಪೌಲನಿಗೆ ಇತ್ತು. ನಂಬಿಕೆಯಲ್ಲಿ ಅವರ ಸ್ಥಿರತೆಯನ್ನು ಅವನು ಅವಲೋಕಿಸುವಾಗ ಎಂಥಹ ಆನಂದವನ್ನು ಅವನು ಹೊಂದಿರಬೇಕು! (1 ಥೆಸ. 2:19, 20) ಪೌಲನು ಎಷ್ಟೊಂದು ಒಳಗೂಡಿದ್ದನೋ, ಅಷ್ಟು ಪೂರ್ಣವಾಗಿ ಶುಶ್ರೂಷೆಯಲ್ಲಿ ಸೇರಲು ನಿಮ್ಮ ಪರಿಸ್ಥಿತಿಯು ಪ್ರಾಯಶಃ ಬಿಡದಿರಬಹುದು. ಆದರೂ, ಒಬ್ಬ ವ್ಯಕ್ತಿಯನ್ನು ಯಾ ಕುರಿಗಳಂಥಹವರ ಒಂದು ಕುಟುಂಬವನ್ನು ಜೀವದ ದಾರಿಯಲ್ಲಿ ಸ್ಥಿರವಾಗಿ ನೆಲೆನಿಲ್ಲಲು ಸಹಾಯ ಮಾಡುವದು ಒಂದು ಸಮೃದ್ಧ ಆಶೀರ್ವಾದವಲ್ಲವೇ? ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಕಷ್ಟಪಟ್ಟು ದುಡಿಯಲು ಮತ್ತು ಅದನ್ನು ಪುನಃ ಸಂದರ್ಶನಗಳ ಮತ್ತು ಬೈಬಲ್ ಅಧ್ಯಯನಗಳ ಮೂಲಕ ಮುಂದರಿಸುವದು ಎಂಥಹ ಒಂದು ಪ್ರೋತ್ಸಾಹಕವಾಗಿರುತ್ತದೆ!
3 ಇನ್ನಷ್ಟು ಪ್ರಯೋಜನಗಳು: ಪೂರ್ಣಾತ್ಮದ ಸೇವೆಯ ಒಂದು ಅತ್ಯಮೂಲ್ಯ ಪ್ರಯೋಜನವೆಂದರೆ ಒಬ್ಬ ಜೊತೆ ಕೆಲಸಗಾರನೋಪಾದಿ, ಒಬ್ಬನು ಯೆಹೋವನ ಮತ್ತು ಯೇಸು ಕ್ರಿಸ್ತನ ಸಾಮೀಪ್ಯತೆಗೆ ಸೆಳೆಯಲ್ಪಡುತ್ತಾನೆ. (ಮತ್ತಾ. 11:29, 30; 1 ಕೊರಿಂ. 3:9) ಶುಶ್ರೂಷೆಯಲ್ಲಿ ದೇವರ ಆತ್ಮವು ನಿಮಗೆ ಸಹಾಯ ಕೊಡುತ್ತದೆ ಎಂಬ ಭಾವವು ತಾನೇ ಎಂಥಹ ಸಂತೋಷವನ್ನು ನೀಡುತ್ತದೆ! (ಮತ್ತಾ. 10:20; ಯೋಹಾನ 14:26) ಇನ್ನು ಹೆಚ್ಚಾಗಿ, ಸಭೆಯ ಇತರರೊಂದಿಗೆ ಜೊತೆಜೊತೆಯಾಗಿ ಶ್ರಮವಹಿಸಿ ಕೆಲಸ ಮಾಡುವದು ಪ್ರೀತಿಯ ಮತ್ತು ಐಕ್ಯತೆಯ ನಮ್ಮ ಬಂಧವನ್ನು ಬಲಗೊಳಿಸುತ್ತದೆ.
4 ಈ ಕಡೇ ದಿವಸಗಳಲ್ಲಿ ಅವನ ಚಿತ್ತವನ್ನು ಪೂರೈಸಲು ಅವನು ಉಪಯೋಗಿಸುವ ಸಂಸ್ಥಾಪನೆಗೆ ನಾವು ಪೂರ್ಣವಾಗಿ ಬೆಂಬಲ ಕೊಡದಿದ್ದರೆ, ಯೆಹೋವನಿಂದಾಗುವ ಪೂರ್ಣ ಪ್ರಯೋಜನಗಳಲ್ಲಿ ನಾವು ಆನಂದಿಸಲಾರೆವು. (ಹೋಲಿಸಿರಿ 2 ಅರ. 10:15.) ದೇವರ ಸಂಪರ್ಕ ಸಾಧನದ ಮೂಲಕ ನಾವು ಪಡೆಯುವ ಮಾರ್ಗದರ್ಶನೆಯನ್ನು ನಿಕಟವಾಗಿ ಮತ್ತು ಪೂರ್ಣ ಹೃದಯದಿಂದ ಹಿಂಬಾಲಿಸುವಾಗ ಮತ್ತು ಸಭೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲಿಗರಾಗಿರುವಾಗ, ಆಗ ಸೈತಾನನ ಮೋಸಕರವಾದ ಕುತಂತ್ರಗಳಿಂದ ಆತ್ಮಿಕವಾಗಿ ನಾವು ಸಂರಕ್ಷಿಸಲ್ಪಡುವೆವು. ಶುಶ್ರೂಷೆಯಲ್ಲಿ ಒಂದು ಅಧಿಕ ಉತ್ಪಾದಕ ಪಾಲು ಉಳ್ಳವರಾಗುವಂತೆ ನಮ್ಮನ್ನು ಸಾಧ್ಯಮಾಡುತ್ತದೆ.
5 ಕ್ಷೇತ್ರ ಶುಶ್ರೂಷೆಯಲ್ಲಿ ಪೂರ್ಣಾತ್ಮದಿಂದಿರುವದರ ಮೇಲೆ ಕೊಡಲ್ಪಟ್ಟ ಐದು ಭಾಗಗಳ ಸರಣಿಯು, ಒಳಗೂಡಿರುವ ಅನೇಕ ವಾಸ್ತವಾಂಶಗಳನ್ನು ಎತ್ತಿ ತೋರಿಸಿದೆ. ಪೂರ್ಣಾತ್ಮದಿಂದಿರುವಂತೆ ವ್ಯಕ್ತಿಯೊಬ್ಬನನ್ನು ಪ್ರಚೋದಿಸುವ, ಯೆಹೋವನ ಕಡೆಗಿನ ಗಣ್ಯತೆಯನ್ನು ಕಟ್ಟಲು, ಕೀಲಿಕೈಗಳು ಯಾವುವು ಎಂದು ನೀವು ನೆನಪಿಸಬಲ್ಲಿರೋ? (ಆಗಸ್ಟ್) ಕ್ಷೇತ್ರ ಶುಶ್ರೂಷೆಯಲ್ಲಿ ಹುರುಪನ್ನು ಕಟ್ಟಲು ತಯಾರಿಯು ಯಾಕೆ ಅವಶ್ಯಕವಾಗಿದೆ? ನಾವು ಹೇಗೆ ತಯಾರಿಸಬಹುದು? (ಸಪ್ಟಂಬರ) ಪೂರ್ಣಾತ್ಮದಿಂದಿರುವಂತೆ ಅನುಭವೀ ಪ್ರಚಾರಕರು ಇತರರಿಗೆ ಹೇಗೆ ಸಹಾಯನೀಡಬಹುದು? (ಆಕ್ಟೋಬರ) ಶುಶ್ರೂಷೆಯಲ್ಲಿ ಪೂರ್ಣಾತ್ಮದಿಂದಿರುವಂತೆ ಒಂದು ಒಳ್ಳೆಯ ವೈಯಕಿಕ್ತ ಸಂಸ್ಥಾಪನೆಯು ಹೇಗೆ ನಮಗೆ ಸಹಾಯಮಾಡಬಲ್ಲದು? (ನವಂಬರ) ನೀವು ಈ ಸಲಹೆಗಳನ್ನು ಅನ್ವಯಿಸುತ್ತೀರೋ?
6 ಅವನಿಗೆ ವಿಧೇಯರಾಗುವದರ ಮೂಲಕ ನಮಗೆ ಪ್ರಯೋಜನವಾಗಬೇಕೆಂದು ಯೆಹೋವನ ಬಯಸುತ್ತಾನೆ. (ಯೆಶಾ. 48:17) ಇನ್ನು ಹೆಚ್ಚಾಗಿ, ಪೂರ್ಣಾತ್ಮದ ಸೇವೆಯ ಪ್ರಯೋಜನಗಳು ನಿಮ್ಮನ್ನು ಕೇಳುವವರಿಗೆ ವಿಸ್ತರಿಸಲ್ಪಡುತ್ತವೆ. (1 ತಿಮೊ. 4:15, 16) ಮಾಡಲಿಕ್ಕೆ ಇರುವ ಕೆಲಸಕ್ಕೆ ಶ್ರಮಪಟ್ಟು ನಿಮ್ಮನ್ನು ಅನ್ವಯಿಸಿಕೊಳ್ಳುವಾಗ, ಯೆಹೋವನು ಇದನ್ನು ಅವಲೋಕಿಸುತ್ತಾನೆ ಮತ್ತು “ಬಾಧ್ಯತೆಯೆಂಬ ಪ್ರತಿಫಲವನ್ನು”, ನಿತ್ಯಜೀವವನ್ನು “ನೀವು ಹೊಂದುವಿರಿ” ಎಂಬ ವಿಷಯದಲ್ಲಿ ದೃಢತೆಯಿಂದಿರಸಾಧ್ಯವಿದೆ.—ಕೊಲೊ. 3:23, 24.