ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ
ಭಾಗ 4: ನಮ್ಮ ಶುಶ್ರೂಷೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ಸಂಸ್ಥಾಪಿಸಲ್ಪಡುವುದು
1 ಒಂದು ಪೂರ್ಣಾತ್ಮದ ಬಹಿರಂಗ ಸೇವೆಗೆ ಒಳ್ಳೆಯ ವೈಯಕ್ತಿಕ ಸಂಸ್ಥಾಪನೆ ಅತ್ಯಾವಶ್ಯಕ. ನಮ್ಮ ಇಂದಿನ ಶುಶ್ರೂಷಾ ಚಟುವಟಿಕೆಗಾಗಿ ಯೇಸುವು ಒಂದು ಮಹತ್ತಾದ ಮಾದರಿಯನ್ನು ಇಟ್ಟಿದ್ದಾನೆ. (ಲೂಕ 10:1, 2; ಅಪೊ. 1:8) ಒಂದನೇ ಶತಕದ ಆತನ ಶಿಷ್ಯರು ತಮ್ಮ ಶುಶ್ರೂಷೆಯನ್ನು ಪೂರೈಸಿದ ರೀತಿಯಿಂದಲೂ ನಾವು ಕಲಿಯ ಸಾಧ್ಯವಿದೆ. (ಅಪೊ. 5:42; 2 ತಿಮೊ. 4:5) ಆದರೆ ನೀವು ಒಳ್ಳೇ ರೀತಿಯಲ್ಲಿ ಸಂಸ್ಥಾಪಿಸಲ್ಪಡುವದೂ ಮತ್ತು ತದ್ರೀತಿಯ ಒಳ್ಳೇ ಫಲಿತಾಂಶವನ್ನು ಇಂದು ಪಡೆಯುವದೂ ಹೇಗೆ ಸಾಧ್ಯ?
2 ಕ್ಷೇತ್ರ ಸೇವೆಗಾಗಿ ಕಾಲತಖ್ತೆ ಮಾಡಿರಿ: ನಮ್ಮ ಶುಶ್ರೂಷೆಯು ಒಂದು ಗೊತ್ತುಗುರಿಯಿಲ್ಲದ ಅಥವಾ ಅಕಸ್ಮಾತ್ತಾಗಿ ಮಾಡುವ ಸಂಗತಿಯಲ್ಲ. ನಮ್ಮ ಶುಶ್ರೂಷೆಯನ್ನು ಪೂರೈಸಲು ನಾವು ಮೀಸಲಾಗಿಡುವ ಸಮಯದ ಮೊತ್ತವನ್ನು ಸಂದರ್ಭಾವಕಾಶಕ್ಕೆ ಬಿಡಸಾಧ್ಯವಿಲ್ಲ. ನಮ್ಮ ಶುಶ್ರೂಷೆಯನ್ನು ಪರಿಣಾಮಕಾರಿಯಾಗಿ ಸಂಸ್ಥಾಪಿಸ ಬೇಕಾದರೆ, ಅದರ ವಿವಿಧ ಮುಖಗಳಿಗಾಗಿ ನಾವು ಸಮಯವನ್ನು ಬದಿಗಿಡಬೇಕು. (ಎಫೆ. 5:15, 16) ಪ್ರತಿ ತಿಂಗಳು ತಾವು ಸೇವೆಗಾಗಿ ಎಷ್ಟು ತಾಸುಗಳನ್ನು ಮೀಸಲಾಗಿಡುವೆವು ಎಂಬ ವಿಷಯದಲ್ಲಿ ಒಂದು ಗುರಿಯನ್ನು ಇಡುವದು ಅನೇಕ ಪ್ರಚಾರಕರಿಗೆ ಸಹಾಯಕಾರಿಯಾಗಿ ಕಂಡಿದೆ. ಇದಕ್ಕೆ ಸಾಮಾನ್ಯವಾಗಿ ಪ್ರತೀವಾರ ಸೇವೆಯಲ್ಲಿ ಭಾಗವಹಿಸುವಂತೆ ನಿಮ್ಮ ಕಾರ್ಯಗಳನ್ನು ಏರ್ಪಡಿಸಬೇಕಾದೀತು. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಕ್ಷೇತ್ರ ಸೇವೆಯ ಹಲವಾರು ಮುಖಗಳಲ್ಲಿ ಕ್ರಮದ ಭಾಗವಹಿಸುವಿಕೆಗಾಗಿ ಕಾಲತಖ್ತೆ ಮಾಡುವಂತೆ ಸಹಾಯ ಕೊಡಬೇಕು.—ಧರ್ಮೋ. 6:7; ಜ್ಞಾನೋ. 22:6.
3 ಉದ್ದೇಶಸಾಧಕ ಗುರಿಗಳನ್ನಿಡಿರಿ: ವಾಸ್ತವವಾದ ಗುರಿಗಳು, ಗುರಿಮುಟ್ಟುವಂತೆ ಏನನ್ನಾದರೂ ನಡಿಸುವಂತೆ ನಿಮ್ಮನ್ನು ಪ್ರೇರಿಸುವುದು. ಮತ್ತು ಆ ಗುರಿಯು ಮುಟ್ಟಲ್ಪಟ್ಟಾಗ, ಕೆಲಸ ಕೈಗೂಡಿದ ಆನಂದವು ನಿಮಗೆ ಸಿಗುವದು. (ಜ್ಞಾನೋ. 13:12) ಅಪೊಸ್ತಲ ಪೌಲನು ಪ್ರಬೋಧಿಸಿದ್ದು: “ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಪ್ರಗತಿ ಮಾಡಿದ್ದೇವೋ ಅದನ್ನೇ ಅನುಸರಿಸಿ ಕ್ರಮವಾಗಿ ನಡೆಯುತ್ತಾ ಹೋಗೋಣ.” (ಫಿಲಿ. 3:16) ನಿಮ್ಮ ಆತ್ಮಿಕ ಪ್ರಗತಿಯ ಎಲ್ಲಾ ವಿಷಯಗಳಲ್ಲಿ ಹೇಗೋ ಹಾಗೆ ನಿಮ್ಮ ಕ್ಷೇತ್ರ ಸೇವಾ ಚಟುವಟಿಕೆಯೂ ಆ ಕ್ರಮವಾದ ಸೂತ್ರಕ್ಕೆ ರುಜುವಾತನ್ನು ಕೊಡಬೇಕು.
4 ಉದಾಹರಣೆಗೆ, ಟ್ರೇಕ್ಟ್ಗಳ ಮತ್ತು ಕರಪತ್ರಗಳ ವಿಪುಲ ಸಂಗ್ರಹವು ನಿಮ್ಮಲ್ಲಿದೆಯೇ? ಪ್ರಚಲಿತ ಪತ್ರಿಕೆಗಳ ಸಾಕಷ್ಟು ಸಂಗ್ರಹವನ್ನು ನಿಮ್ಮೊಂದಿಗೆ ಇಡುತ್ತೀರೋ, ಮತ್ತು ಅವು ಒಳ್ಳೇ ಸ್ಥಿತಿಯಲ್ಲಿವೆಯೋ? ಮನೆ-ಮನೆಯ ರೆಕಾರ್ಡ್ಗಳನ್ನು, ಆಸಕ್ತ ಜನರಿಗಾಗಿ ಒಂದು ಮತ್ತು ಮನೆಯಲ್ಲಿ ಇಲ್ಲದವರಿಗಾಗಿ ಇನ್ನೊಂದನ್ನು ಬಳಸಿ, ಹೀಗೆ ಅದರ ಸದುಪಯೋಗವನ್ನು ಮಾಡುತ್ತೀರೋ?
5 ಸೇವೆಯಲ್ಲಿ ಭಾಗವಹಿಸುವ ಮುಂಚೆ, ಪ್ರಚಲಿತ ಸಂಭಾಷಣೆಗಾಗಿ ವಿಷಯವನ್ನು ಪುನರಾವರ್ತಿಸಲು ಸಮಯ ತಕ್ಕೊಳ್ಳಿರಿ. ನೀಡುವ ಪುಸ್ತಕದಲ್ಲಿರುವ ಮಾತಾಡತಕ್ಕ ವಿಷಯಗಳನ್ನು ಬೇರ್ಪಡಿಸಿರಿ, ಮತ್ತು ಆಸಕ್ತಿಯನ್ನು ಚೇತರಿಸಲು ಇವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಸಿದ್ಧರಿರ್ರಿ. ಹಾಗೂ, ಕ್ಷೇತ್ರ ಸೇವೆಯ ಕೈಪಿಡಿಯಾದ ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಉಪಯೋಗಿಸಲು ತಯಾರಾಗಿರ್ರಿ. ಅದರಲ್ಲಿರುವ ಅನೇಕ ಸಲಹೆಗಳ ಕಡೆಗೆ ಸಂದರ್ಶನೆಗಳ ನಡುವಣ ಸಮಯದಲ್ಲೂ ಕ್ಷಿಪ್ರಗಮನವನ್ನು ಕೊಡಬಹುದು. ಈ ವ್ಯಾವಹಾರ್ಯ ಸಲಹೆಗಳನ್ನು ಅನ್ವಯಿಸುವುದರಿಂದ ನಿಮ್ಮ ಶುಶ್ರೂಷೆಯ ಕಾರ್ಯಸಾಧಕತೆಯು ಪ್ರಗತಿಗೊಳ್ಳುವುದು.
6 ಈ ಕಡೇ ದಿನಗಳಲ್ಲಿ “ಸುವಾರ್ತೆಯ ಪವಿತ್ರ ಸೇವೆಯಲ್ಲಿ” ಪೂರ್ಣವಾಗಿ ಭಾಗವಹಿಸುವುದು ಒಂದು ಸೌಭಾಗ್ಯದ ಸುಯೋಗವು. (ರೋಮಾ. 15:16) ಶಕ್ಯವಾದ ಅತ್ಯುತ್ತಮ ಸಾಕ್ಷಿಯನ್ನು, “ತುಟೀ ಫಲವನ್ನು” ಅರ್ಪಿಸುವ ಮೂಲಕ ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸಲು ನಾವು ಪ್ರಯಾಸಪಡಬೇಕು. (ಇಬ್ರಿ. 13:15; ಹೋಶೇಯ 14:2ನ್ನು ಹೋಲಿಸಿ.) ಇದನ್ನು ಮಾಡುವಂತೆ, ನಾವು ಕ್ಷೇತ್ರ ಸೇವೆಯಲ್ಲಿ ಕ್ರಮದ ಭಾಗವಹಿಸುವಿಕೆಗಾಗಿ ಕಾಲತಖ್ತೆಯನ್ನು ಮಾಡೋಣ ಮತ್ತು ಯೆಹೋವನ ಸ್ತುತಿಗಾಗಿ ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ಪೂರೈಸಲು ಶಕ್ಯಮಾಡುವ ನ್ಯಾಯಸಮ್ಮತ ಗುರಿಗಳನ್ನು ಇಡೋಣ.