ನಮ್ಮ ಸಮಸ್ಯೆಗಳು ಬ್ರೊಷರ್ನಿಂದ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು
1 ಕೊಂಚ ಸಮಯ ಗತಿಸಿರುತ್ತದೆ—ಒಂದೆರಡು ದಿನಗಳು, ಪ್ರಾಯಶಃ ಒಂದು ವಾರ—ರಾಜ್ಯದ ಸಂದೇಶಕ್ಕೆ ಆಸಕ್ತಿಯನ್ನು ತೋರಿಸಿದಂತಹ ಒಬ್ಬ ವ್ಯಕ್ತಿಯೊಡನೆ ನೀವು ಮಾತಾಡಿದಂದಿನಿಂದ. ಅವನು ಬೈಬಲ್ ಸಾಹಿತ್ಯಗಳನ್ನು ತಕ್ಕೊಂಡಿದ್ದಾನೋ ಇಲ್ಲವೋ, ಆದರೂ ಸಾಧ್ಯವಾದಷ್ಟು ಬೇಗನೆ ಯಾವುದೇ ಆಸಕ್ತಿಯನ್ನು ಬೆಳಸುವುದು ಬಹಳ ಪ್ರಾಮುಖ್ಯವಾಗಿರುತ್ತದೆ.
2 ಆರಂಭಿಕ ಕರೆಯ ನಂತರ ನೀವು ಮಾಡಿದ ಟಿಪಣ್ಟಿಗಳನ್ನು ಜಾಗ್ರತೆಯಿಂದ ಪರಾಮರ್ಶಿಸಿರಿ. ಅನಂತರ, ನೀವು ನಿಮ್ಮ ಸಾಕ್ಷಿ-ಬ್ಯಾಗ್ನ್ನು ತುಂಬಿಸುವಾಗ, ಪುನಃ ಭೇಟಿಯ ಸಮಯದಲ್ಲಿ ನೀವು ತೋರಿಸಲು ಸಾಧ್ಯವಾಗುವಂತೆ, ನೀಡಲ್ಪಟ್ಟ ಸಾಹಿತ್ಯದ ಒಂದು ಪ್ರತಿಯು ಇರುವಂತೆ ಖಚಿತಮಾಡಿರಿ.
ನೀವು “ನಮ್ಮ ಸಮಸ್ಯೆಗಳು” ಬ್ರೊಷರ್ನ್ನು ನೀಡಿರುವುದಾದರೆ, ನೀವು ಹೀಗನ್ನಬಹುದು:
▪ “ನಿಮ್ಮನ್ನು ಪುನಃ ನೋಡುವುದರಲ್ಲಿ ನಾನು ಸಂತೋಷಿಸುತ್ತೇನೆ. ಕಳೆದ ಸಾರಿ ನಾವು ಮಾತಾಡಿದಾಗ, ನಾನು ನಿಮಗೆ ಈ ಬ್ರೊಷರ್ನ್ನು ತೋರಿಸಿದ್ದೆ ಮತ್ತು ಅವನ ರಾಜ್ಯದ ಮೂಲಕ ದೇವರು ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವೊಂದನ್ನು ಒದಗಿಸಲಿರುವನು ಎಂದು ರುಜುಪಡಿಸಲು ಬೈಬಲಿನಿಂದ ಒಂದು ವಚನವನ್ನು ನಾವು ಓದಿದ್ದೆವು. ಇದರಲ್ಲಿ ರೋಗ ಮತ್ತು ದೌರ್ಬಲ್ಯತೆಗಳ ಕಾರಣದಿಂದುಂಟಾಗುವ ಸಮಸ್ಯೆಗಳು ಕೂಡ ಸೇರಿರುತ್ತವೆ. ಇದನ್ನು ನಂಬುವದು ಕಷ್ಟವೆಂದು ನಿಮಗೆ ಕಾಣುತ್ತದೋ? [ಮನೆಯವನು ಪ್ರತ್ಯುತ್ತರ ಕೊಡಲು ಅನುಮತಿಸಿರಿ.] ನಾನು ನಿಮ್ಮೊಂದಿಗೆ ಬಿಟ್ಟುಹೋದ ಬ್ರೊಷರ್ನ ಪುಟ 19 ರ ಪ್ಯಾರಗ್ರಾಫ್ 1 ನ್ನು ಸ್ವಲ್ಪ ಗಮನಿಸಿರಿ.” ಪ್ಯಾರಗ್ರಾಫ್ನ್ನು ಓದಿರಿ ಮತ್ತು ತದನಂತರದ ಪ್ಯಾರಗ್ರಾಫ್ನಲ್ಲಿರುವ ಒಂದೆರಡು ಶಾಸ್ತ್ರವಚನಗಳನ್ನು ಪರಿಗಣಿಸಿರಿ. ಒಂದು ಬೈಬಲ್ ಅಭ್ಯಾಸವು ಆರಂಭವಾಯಿತು!
3 ಮುಂದಿನ ಒಂದು ಭೇಟಿಗಾಗಿ ದಾರಿಯನ್ನು ಸಿದ್ಧಗೊಳಿಸಲು, ಹೀಗನ್ನುವುದರ ಮೂಲಕ ನೀವು ಸಂಭಾಷಣೆಯನ್ನು ಸಮಾಪ್ತಿಗೆ ತರಬಹುದು:
▪ “ನಾವು ಏನನ್ನು ಪರಿಗಣಿಸಿದ್ದೇವೊ ಅದೆಲ್ಲಾವು ಬೈಬಲಿನಲ್ಲಿ ಇದೆ ಎಂಬುದೇನೊ ಸತ್ಯ, ಆದರೆ ಬೈಬಲು ಹೇಳುವುದನ್ನು ಅವರು ನಿಜವಾಗಿ ನಂಬಸಾಧ್ಯವಿದೆಯೋ ಎಂದು ಅನೇಕ ಜನರು ವಿಚಾರಿಸುತ್ತಾರೆ. ಮುಂದಿನ ಬಾರಿ ನಾನು ಬಂದಾಗ, ಈ ವಿಷಯವನ್ನು ನಿಮ್ಮೊಂದಿಗೆ ಪರಿಗಣಿಸಲು ಕೆಲವೊಂದು ನಿಮಿಷಗಳನ್ನು ಮಾತ್ರ ತಕ್ಕೊಳ್ಳಲು ಬಯಸುತ್ತೇನೆ.” ಆಸಕ್ತಿಯನ್ನು ಬೆಳಸಲು ನೀವು ಪುನಃ ಬಂದಾಗ, ಪುಟ 24 ರ ಪ್ಯಾರಗ್ರಾಫ್ 1 ರಿಂದ (ಇಂಗ್ಲಿಷಿನಲ್ಲಿ ಪ್ಯಾರಗ್ರಾಫ್ 2) ಆರಂಭವಾಗುವ “ಮಾಹಿತಿಯ ಗ್ರಂಥ” ಎಂಬ ಉಪಶಿರೋನಾಮದಿಂದ ಚರ್ಚೆಯನ್ನು ತೆಗೆದುಕೊಳ್ಳಿರಿ.
4 ಕೊಂಚವೇ ಸಾಹಿತ್ಯಗಳನ್ನು ನೀಡಿರುವ ಕಾರ್ಯಕ್ಷೇತ್ರಗಳಲ್ಲಿ: ಸಾಹಿತ್ಯವನ್ನು ಸ್ವೀಕರಿಸದೇ ಇರುವ, ಆದರೂ ಕೊಂಚ ಆಸಕ್ತಿಯನ್ನು ತೋರಿಸಿದ್ದ ವ್ಯಕ್ತಿಗಳನ್ನು ಸಂದರ್ಶಿಸುವಾಗಲೂ ಅದೇ ಸಾಮಾನ್ಯ ನಿರೂಪಣೆಯನ್ನು ಉಪಯೋಗಿಸಬಹುದು. ಮೊದಲ ಸಂಭಾಷಣೆಯಲ್ಲಿ ನೀವು ತೋರಿಸಿದ ಬ್ರೊಷರ್ಗೆ ನೀವು ನಿರ್ದೇಶಿಸಸಾಧ್ಯವಿದೆ. ಮನೆಯವನು ಒಂದು ಬ್ರೊಷರ್ನ್ನು ತಕ್ಕೊಳ್ಳುವ ಮೊದಲು, ಬೈಬಲನ್ನು ಮತ್ತು ಬ್ರೊಷರ್ನ ನಿಮ್ಮ ವೈಯಕ್ತಿಕ ಪ್ರತಿಯನ್ನು ಬಳಸಿ, ಹಲವಾರು ಬಾರಿ ಪುನಃ ಪುನಃ ಭೇಟಿ ಮಾಡುವ ಅಗತ್ಯತೆ ಇರಬಹುದು. ಒಂದು ವೇಳೆ ಪತ್ರಿಕೆಯೊಂದನ್ನು ನೀವು ಕೊಟ್ಟಿರುವುದಾದರೆ, ಆಸಕ್ತಿಯನ್ನು ಬೆಳಸಲು ಪುನಃ ಹೋದಾಗ, ಸಂಬಂಧಿತ ವಿಷಯವನ್ನು ನಮ್ಮ ಸಮಸ್ಯೆಗಳು ಬ್ರೊಷರ್ನಿಂದ ತೋರಿಸಿರಿ.
5 ನಮ್ಮ ಸಮಸ್ಯೆಗಳು ಬ್ರೊಷರ್ನಲ್ಲಿ ಬೈಬಲ್ ಅಭ್ಯಾಸಕ್ಕೆ ನಡಿಸುವ ಉತ್ತಮ ಪುನಃ ಭೇಟಿಗಳನ್ನು ಮಾಡಲು, ರೀಸನಿಂಗ್ ಪುಸ್ತಕದ 154-6 ನೆಯ ಪುಟದಲ್ಲಿರುವ ಸಮಾಚಾರದಿಂದ ತಯಾರಿಸಬಹುದು. ಈ ಪ್ರಶ್ನೆ ಕೇಳಬಹುದಾಗಿದೆ: “ಬೈಬಲ್ ಪ್ರವಾದನೆಗಳು ಎಂದೂ ತಪ್ಪಾಗದ ರೀತಿಯಲ್ಲಿ ನೆರವೇರಿವೆಯೆಂದು ನೀವು ಬಲ್ಲಿರೋ? ಇಂದು ನೆರವೇರುತ್ತಾ ಇರುವ ಪ್ರವಾದನೆಗಳಲ್ಲೊಂದನ್ನು ಈ ಬ್ರೊಷರ್ ಚರ್ಚಿಸುತ್ತದೆ ಮತ್ತು ಅದೇ ಪ್ರವಾದನೆಯು ನಮ್ಮ ಭವಿಷ್ಯದ ಕುರಿತು ಕೂಡ ತೋರಿಸುತ್ತದೆ.” ಅನಂತರ, ಪುಟ 12 ಕ್ಕೆ ತಿರುಗಿಸಿರಿ ಮತ್ತು “ಸೂಚನೆ” ಎಂಬ ಉಪಶಿರೋನಾಮದ ಕೆಳಗಿರುವ ಸಮಾಚಾರವನ್ನು ಚರ್ಚಿಸಿರಿ.
6 ನೀವು ನಮ್ಮ ಸಮಸ್ಯೆಗಳು, ಎರಡು ಪತ್ರಿಕೆಗಳು ಯಾ ಒಂದು ದೊಡ್ಡ ಪುಸ್ತಕ ನೀಡಿರುವುದಾದರೆ ಯಾ ಕೇವಲ ಯಾರೊಂದಿಗಾದರೂ ಆಸಕ್ತಿಯ ಒಂದು ಬೈಬಲ್ ಚರ್ಚೆಯನ್ನು ನಡಿಸಿರುವಲ್ಲಿ, ಆಸಕ್ತಿಯನ್ನು ಬೆಳಸುವ ಜವಾಬ್ದಾರಿಕೆಯು ನಿಮಗಿರುತ್ತದೆ. ಈ ಜೀವರಕ್ಷಕ ಕಾರ್ಯಕ್ಕಾಗಿ, ಆಗಸ್ಟ್ನಲ್ಲಿ ನೀವೆಲ್ಲರೂ ಸ್ವಲ್ಪ ಸಮಯವನ್ನು ಬದಿಗಿರಿಸುವಂತೆ ನಾವು ಉತ್ತೇಜಿಸುತ್ತೇವೆ.—1 ತಿಮೊ. 4:16.