ಸೃಷ್ಟಿಯ ದೇವರನ್ನು ಸ್ತುತಿಸಿರಿ
1 ಸುಂದರವಾದ ಭೂದೃಶ್ಯಗಳು, ವರ್ಣಭರಿತ ಸೂರ್ಯಾಸ್ತಮಾನಗಳು, ರಾತ್ರಿಯ ತಾರಾರಂಜಿತ ಗಗನಗಳು, ಪಕ್ಷಿಗಳ ಸುಮಧುರ ಗಾಯನಗಳು—ಈ ಆಹ್ಲಾದಕರವಾದ ಸಂಗತಿಗಳಿಗಾಗಿ ನೀವು ಯಾರಿಗೆ ಗೌರವವನ್ನು ಸಲ್ಲಿಸುವಿರಿ? ಹೌದು, ಸೃಷ್ಟಿಯ ದೇವರನ್ನು ಸ್ತುತಿಸಲು ನಾವು ನಡಿಸಲ್ಪಡುತ್ತೇವೆ. ಪ್ರಕಟನೆ 4:11 ರ ಘೋಷಣೆಯನ್ನು ನಾವು ಪೂರ್ಣ ಹೃದಯದಿಂದ ಸಮ್ಮತಿಸುತ್ತೇವೆ. ಎಲ್ಲಾ ವಸ್ತುಗಳನ್ನು ಅವನು ನಿರ್ಮಿಸಿರುವ ಕಾರಣದಿಂದ, ಯೆಹೋವ ದೇವರು ನಮ್ಮ ಸ್ತುತಿಗೆ ಅರ್ಹನಾಗಿದ್ದಾನೆ.
2 ದೇವರ ಸೃಷ್ಟಿಕಾರಕ ಕಾರ್ಯಗಳ ರುಜುವಾತು ಇದ್ದಾಗ್ಯೂ, ಜೀವವು ಅಕಸ್ಮಾತ್ತಾಗಿ ಯಾ ಅಂಧ ವಿಕಾಸದಿಂದ ಬಂದಿದೆ ಎಂಬ ಕಲ್ಪನೆಯನ್ನು ಮಾನವರು ಪ್ರವರ್ಧಿಸಿದ್ದಾರೆ. ಈ ಗುರುತರವಾದ ಸುಳ್ಳು ಮಾನವರನ್ನು ಅಧೋಪತನಕ್ಕಿಳಿಸಿದೆ ಮತ್ತು ನೀತಿಗೆಡಿಸಿದೆ, ಮತ್ತು ನಮ್ಮ ಮಹಾ ಸೃಷ್ಟಿಕರ್ತನ ಮೇಲೆ ಇದೊಂದು ದೇವದೂಷಕ ನಿಂದೆಯಾಗಿದೆ.—ಪ್ರಸಂ. 12:1; ರೋಮಾ. 1:20, 25.
3 ಅಕ್ಟೋಬರಿನಲ್ಲಿ ಯೆಹೋವನ ನಿಷ್ಠಾವಂತ ಸೇವಕರೋಪಾದಿ, ನಮ್ಮ ಸೃಷ್ಟಿಕರ್ತನ ಮತ್ತು ಅವನ ಅದ್ಭುತಕರವಾದ ಕಾರ್ಯಗಳ ಸತ್ಯವನ್ನು ಪ್ರಸ್ತುತಪಡಿಸಲು ನಮಗೆ ಸಂದರ್ಭವಿದೆ. ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವಲ್ಯೂಶನ್ ಆರ್ ಬೈ ಕ್ರಿಯೇಶನ್? ಎಂಬ ಪುಸ್ತಕವು, ಜೀವದ ಮೂಲ ಮತ್ತು ಉದ್ದೇಶದ ಕುರಿತ ವಾಸ್ತವಾಂಶಗಳನ್ನು ಕಲಿಯಲು ಸಾಚ ಆಸಕ್ತಿಯನ್ನು ತೋರಿಸುವವರೆಲ್ಲರಿಗೆ ನೀಡಲ್ಪಡುತ್ತದೆ. ಜೀವದ ಮೂಲದ ಕುರಿತಾದ ಸತ್ಯದ ಪರವಾಗಿ ಧೈರ್ಯದಿಂದ ಪ್ರತಿಪಾದಿಸಲು ಈ ಪ್ರಕಾಶನವು ನಮ್ಮನ್ನು ಸನ್ನದ್ಧಗೊಳಿಸುತ್ತದೆ.
4 ವಿಶೇಷ ಟೆರಿಟೊರಿಗಳು: ಮನೆಯಿಂದ ಮನೆಯ ಸಾಕ್ಷಿಯ ಹೊರತಾಗಿ, ವಿಕಾಸ ಯಾ ಸೃಷ್ಟಿಯ ವಿಷಯದಲ್ಲಿ ಒಂದು ನಿರ್ದಿಷ್ಟ ಅಭಿರುಚಿಯಿರುವ ವ್ಯಕ್ತಿಗಳೊಡನೆ ಮಾತಾಡಲು ವಿಶೇಷ ಪ್ರಯತ್ನಗಳನ್ನು ನಾವು ತಕ್ಕೊಳ್ಳತಕ್ಕದ್ದು, ಅವರನ್ನು ಅವರ ಕೆಲಸದ ಸ್ಥಳದಲ್ಲಿ ಯಾ ಶಾಲೆಯಲ್ಲಿ ಸಂಪರ್ಕಿಸಬಹುದು. ಉದಾಹರಣೆಗೆ, ತಮ್ಮ ಶಾಲಾಶಿಕ್ಷಕರಿಗೆ ಕ್ರಿಯೇಶನ್ ಪುಸ್ತಕವನ್ನು ಅವರು ತೋರಿಸಿದರ್ದ ಮೂಲಕ, ಎಳೆಯ ಸಾಕ್ಷಿಗಳಿಗೆ ಈ ಪುಸ್ತಕವನ್ನು ನೀಡುವದರಲ್ಲಿ ಉತ್ತಮ ಯಶಸ್ಸು ದೊರಕಿದೆ. ಒಬ್ಬ ಎಳೆಯ ಸಾಕ್ಷಿಯು ಒಂದು ಕ್ರಿಯೇಶನ್ ಪುಸ್ತಕವನ್ನು ಅವಳ ಶಿಕ್ಷಕಿಗೆ ಕೊಟ್ಟಳು ಮತ್ತು ಅವಳು ಅದನ್ನು ಸಮಗ್ರವಾಗಿ ಅಭ್ಯಾಸಿಸಿದ್ದು ಮಾತ್ರವಲ್ಲದೆ, ಕ್ಲಾಸಿನಲ್ಲಿ ಕಲಿಸಲು ಅದನ್ನು ಆಧಾರವಾಗಿ ಬಳಸಲು ಆರಂಭಿಸಿದ್ದನ್ನು ಕಾಣುವದರಲ್ಲಿ ಅಚ್ಚರಿಗೊಂಡಳು. (w90 9⁄1 ಪು.32; w86 10⁄1 ಪು.32) ಈ ಉತ್ತಮ ಪ್ರಕಾಶನವನ್ನು ಓದುವದರಲ್ಲಿ ಆನಂದಿಸಬಹುದೆಂದು ನೀವು ಎಣಿಸುವ ನಿಮ್ಮ ಶಿಕ್ಷಕರಲ್ಲಿ ಮತ್ತು ಕ್ಲಾಸಿನ ಸಂಗಾತಿಗಳಲ್ಲಿ ಪ್ರತಿಯೊಬ್ಬನನ್ನು ಯಾಕೆ ಸಮೀಪಿಸಬಾರದು?
5 ನಿಮ್ಮ ಕ್ಷೇತ್ರದಲ್ಲಿ ವಾಸಿಸುವ ಯಾ ಕೆಲಸ ಮಾಡುವ ಕಾಲೆಜ್ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರುಗಳನ್ನು ತಲುಪುವಂತೆ ವಿಶೇಷ ಪ್ರಯತ್ನವೊಂದನ್ನು ಮಾಡಸಾಧ್ಯವಿದೆ. ವಕೀಲರು ಮತ್ತು ವೈದ್ಯರಂಥ ವೃತ್ತಿನಿರತ ಜನರು ಕ್ರಿಯೇಶನ್ ಪುಸ್ತಕದಲ್ಲಿರುವ ಸಂಶೋಧನೆಯ ಗಾಢತೆ ಮತ್ತು ಸಾಕ್ಷ್ಯಗಳ ಸಂಕಲನವನ್ನು ಗಣ್ಯಮಾಡಿರುತ್ತಾರೆ. (yb87 ಪು.54) ನೀವು ಯಾರನ್ನು ಸಮೀಪಿಸುತ್ತೀರೋ ಅವರು, ಸುಂದರವಾಗಿ ಸಚಿತ್ರದಿಂದ ವರ್ಣಿಸಲ್ಪಟ್ಟಿರುವ ಈ ಪ್ರಕಾಶನವನ್ನು ಒಂದು ಪರಾಮರ್ಶೆಯ ಕೃತಿಯಾಗಿ ಇಟ್ಟುಕೊಳ್ಳಲು ಬಯಸಬಹುದು.
6 ವಿವೇಕಯುಕ್ತವಾಗಿಯೇ, ಕ್ರಿಯೇಶನ್ ಪುಸ್ತಕವನ್ನು ನಾವು ಭೇಟಿಯಾಗುವ ಎಲ್ಲರಿಗೂ ನೀಡುವದಿಲ್ಲ, ಯಾಕಂದರೆ ಅನೇಕ ಜನರಿಗೆ ಸರಳವಾಗಿಯೇ ಈ ವಿಷಯದ ಮೇಲೆ ಆಸಕ್ತಿಯಿರುವದಿಲ್ಲ. ಅವರಿಗೆ ಪತ್ರಿಕೆಗಳನ್ನು ಯಾ ಅವರಿಗೆ ಆಕರ್ಷಿಸಬಹುದೆಂದು ನೀವೆಣಿಸುವ ಇನ್ನಿತರ ಯಾವುದೇ ಒಂದು ಸಾಹಿತ್ಯವನ್ನು ನೀಡಬಹುದು. ಆದರೆ ಶೈಕ್ಷಣಿಕವಾದ ಮತ್ತು ಸೃಷ್ಟಿಕರ್ತನೊಬ್ಬನಲ್ಲಿ ನಂಬಿಕೆಯನ್ನು ಕಟ್ಟುವ ಒಂದು ಯಾ ಹೆಚ್ಚು ನಿರ್ದಿಷ್ಟ ವಿಚಾರಗಳನ್ನು ನೀವು ಚರ್ಚಿಸುವಾಗ, ಹೆಚ್ಚನ್ನು ಕಲಿಯಲು ಬಯಸುವ ಯೋಗ್ಯವಾದ ಮನೋಪ್ರವೃತ್ತಿಯಿರುವ ವ್ಯಕ್ತಿಗಳನ್ನು ನೀವು ಕಂಡುಕೊಳ್ಳುವಿರಿ. ಅಂಥವರಿಗೆ ಕ್ರಿಯೇಶನ್ ಪುಸ್ತಕವನ್ನು ನೀಡಲು ನಾವು ಬಯಸುತ್ತೇವೆ.
7 ವಿಕಾಸ ವಾದವು ಎಷ್ಟೊಂದು ಅಸಂಗತವೆಂದು ಕಾಣಲು ಅನೇಕರಿಗೆ ಈ ಉತ್ತಮ ಸಾಧನವು ಸಹಾಯ ಮಾಡುವದು ಮಾತ್ರವಲ್ಲದೆ, ಜೀವದ ವರದಾನಕ್ಕೆ ಗಣ್ಯತೆಯನ್ನು ಕಟ್ಟಲು ಅವರಿಗೆ ಸಹಾಯ ಮಾಡಲಿ. ಜೀವದಾತನ ಮತ್ತು “ಭೂಮಿ, ಆಕಾಶ, . . . ನಿರ್ಮಿಸಿದವನ” ಮಹಿಮೆಗೋಸ್ಕರ ಸದಾ ಕಾಲ ಜೀವಿಸುವ ಆಶೆಯನ್ನು ಅವರಲ್ಲಿ ಈ ಪುಸ್ತಕವು ಪ್ರಚೋದಿಸಲಿರುವದು.—ಕೀರ್ತ. 146:6.