ಪುರುಷರು ಎಟಕುವಂತೆ ಮತ್ತು ಅರ್ಹರಾಗುವಂತೆ ಸಹಾಯ ಮಾಡುವದು
(There is no corresponding article in English)
1 ಈ ವರ್ಷದ ಜೂಲೈ 9 ಮತ್ತು 10 ರಂದು ಲೊನಾವ್ಲದಲ್ಲಿ ಭಾರತದ ಸಂಚರಣೆ ಮೇಲ್ವಿಚಾರಕರೆಲ್ಲರೊಂದಿಗೆ ಒಂದು ಕೂಟವು ಜರುಗಿತು. ಇದಕ್ಕೆ ಈ 26 ಸಹೋದರರು, ಬೆತೆಲಿನ ಸರ್ವೀಸ್ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುವ 4 ಸಹೋದರರೊಂದಿಗೆ ಹಾಜರಾದರು. ಭಾರತದ ಬ್ರಾಂಚ್ ಕಮಿಟಿಯಲ್ಲಿರುವ ಎಲ್ಲಾ ಮೂವರು ಸಹೋದರರು ಮತ್ತು ಈ ವರ್ಷದ ಮೇಯಿಂದ ಜೂಲೈ ತನಕ ಹಂಗಾಮಿ ಬ್ರಾಂಚ್ ಕಮಿಟಿ ಕೊಆರ್ಡಿನೆಟರ್ ಆಗಿ ಇಲ್ಲಿ ಕೆಲಸಮಾಡಿದ, ಆಸ್ಟ್ರೇಲಿಯನ್ ಬ್ರಾಂಚ್ನ ಕೊಆರ್ಡಿನೆಟರ್ರಾಗಿರುವ ಸಹೋದರ ವಿ. ಮೊರಿಟ್ಸ್, ಉಪದೇಶಕರಾಗಿದ್ದರು.
2 ಚರ್ಚಿಸಿದ ಅನೇಕ ವಿಷಯಗಳಲ್ಲಿ, ಸಭೆಗಳಲ್ಲಿ ಜವಾಬ್ದಾರಿಕೆಗಳಿಗೆ ಎಟಕುವಂತೆ ಮತ್ತು ಅರ್ಹರಾಗುವಂತೆ ಸಹೋದರರಿಗೆ ಸಹಾಯ ಮಾಡುವ ಅಗತ್ಯವು ಒಂದು ವಿಷಯವಾಗಿತ್ತು. ಮಾನವರು ಬಿತ್ತಿದ ಮತ್ತು ನೀರು ಹೊಯ್ಯುವ ಬೀಜಗಳನ್ನು ದೇವರು ಬೆಳೆಯುವಂತೆ ಮಾಡುತ್ತಾನೆ ಎಂದು ಪೌಲನು 1 ಕೊರಿಂಥ 3:6 ರಲ್ಲಿ ಮಾತಾಡುತ್ತಾನೆ. ಈ ಶಾಸ್ತ್ರವಚನವು ಪ್ರಾಥಮಿಕವಾಗಿ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಅನ್ವಯಿಸುತ್ತದಾದರೂ, ಸಭೆಯಲ್ಲಿಯೂ ಅದೇ ಸೂತ್ರವು ಅನ್ವಯವಾಗುತ್ತದೆ. ಕುರಿಗಳಂಥ ವ್ಯಕ್ತಿಗಳಿಗೆ ಯೆಹೋವನೊಂದಿಗೆ ಒಪ್ಪಿಗೆಯ ಸಂಬಂಧಕ್ಕೆ ಬರಲು ಮಾನವ ನೆರವು ಮತ್ತು ಯೆಹೋವನ ಐಹಿಕ ಸಂಸ್ಥಾಪನೆಯ ಸಹಾಯ ಬೇಕಾಗಿದೆ. ಅದೇ ವಿಧಾನದಲ್ಲಿ, ಸೇವಾ ಸುಯೋಗಗಳಿಗೆ ಅರ್ಹರಾಗಲು ಸಭೆಯಲ್ಲಿರುವ ಸಹೋದರರಿಗೆ ಸಹಾಯವು ಆವಶ್ಯ.
3 ನೀವು ಸಹಾಯ ಮಾಡಸಾಧ್ಯವಿರುವ ವಿಧಾನಗಳಿಗೆ ಎಚ್ಚರದಿಂದಿರ್ರಿ: ಮೇಲ್ವಿಚಾರಕನ ಹುದ್ದೆಗೆ ಒಬ್ಬ ಪುರುಷನು ಎಟಕುವದಾದರೆ, ಇದು “ಶ್ಲಾಘ್ಯವಾದ ಮಹಾ ಕಾಂಕ್ಷೆ” ಆಗಿದೆ. (1 ತಿಮೊ. 3:1, ಫಿಲಿಪ್ಸ್) ಈಗಾಗಲೇ ಹಿರಿಯರಾಗಿ ಸೇವಿಸುತ್ತಿರುವವರು ಸಭೆಯಲ್ಲಿರುವ ಎಳೆಯ ಮತ್ತು ಹೊಸ ಸಹೋದರರಲ್ಲಿರುವ ಸಂಭಾವ್ಯತೆಯ ಕುರಿತು ತಿಳಿವಳಿಕೆಯುಳ್ಳವರಾಗಿರಬೇಕು ಮತ್ತು ಅರ್ಹರಾಗುವಂತೆ ಅವರಿಗೆ ಸಹಾಯ ಮತ್ತು ಉತ್ತೇಜನ ಕೊಡತಕ್ಕದ್ದು. ಯಾವುದೇ ನೆರವು ಇಲ್ಲದೆ ಎಳೆಯ ಸಹೋದರರು ಪ್ರಗತಿ ಮಾಡುವರು ಎಂದು ಕಾದು ನಿಲ್ಲಲು ಮತ್ತು ನಿರೀಕ್ಷಿಸ ಸಾಧ್ಯವಿಲ್ಲ. ಅಂಥ ಸಹೋದರರು ಎಟಕುವಂತೆ ಸಹಾಯಮಾಡಲು ನಿಮ್ಮ ಸಭೆಯಲ್ಲಿ ಹೆಚ್ಚಿನದ್ದನ್ನು ಮಾಡಸಾಧ್ಯವಿದೆಯೇ?
4 ಹಿರಿಯರ ಮತ್ತು ಶುಶ್ರೂಷಾ ಸೇವಕರ ಯೋಗ್ಯತೆಗಳನ್ನು ಪಟ್ಟಿಮಾಡಿದ ನಂತರ, 1 ತಿಮೊಥಿ ಅಧ್ಯಾಯ 3 ರ ವಚನ 10 ರಲ್ಲಿ “ಮೊದಲು ಪರೀಕ್ಷಿಸಲ್ಪಟ್ಟ ನಂತರ” ಅಂಥ ಪುರುಷರನ್ನು ಆರಿಸಬೇಕು ಎಂದು ಮಾತಾಡುತ್ತದೆ. ಇದರ ಅರ್ಥ ಹಿರಿಯರು ಸುಮ್ಮನೆ “ನಿರಾಸಕ್ತರಾಗಿದ್ದುಕೊಂಡು”, ಅನಂತರ ಬೇರೆ ಸಹೋದರರ ನಡತೆಯನ್ನು ವಿಮರ್ಶಿಸುವದು ಎಂದಲ್ಲ. ಒಳ್ಳೆಯ ನಿಲುವುಳ್ಳ ಎಲ್ಲಾ ಸಹೋದರರಿಗೆ ಕೆಲಸವನ್ನು ನಿರ್ವಹಿಸಿಕೊಟ್ಟು, ಅವರು ಪ್ರಜ್ಞಾಪೂರ್ವಕವಾಗಿ ಅದನ್ನು ಮಾಡುತ್ತಾರೊ ಎಂದು ನೋಡಸಾಧ್ಯವಿದೆ. ಅವರು ಸ್ವತಃ ವೈಯಕ್ತಿಕ ಗುರಿಗಳನ್ನು ಇಡುವಂತೆ ಸಹಾಯ ನೀಡಸಾಧ್ಯವಿದೆ: ಒಂದು ಬೈಬಲ್ ಅಭ್ಯಾಸವನ್ನು ನಡಿಸುವದು, ಸಹಾಯಕ ಯಾ ಕ್ರಮದ ಪಯನೀಯರಿಂಗ್ ಮಾಡುವದು, ಸಂಪೂರ್ಣ ಬೈಬಲನ್ನು ಓದುವದು, ಮತ್ತು ಇತ್ಯಾದಿ., ಅನಂತರ, ಅವರ ಪ್ರಗತಿಯನ್ನು ಮತ್ತು “ಯೋಗ್ಯತೆ”ಯನ್ನು ಅವರು ಪರಾಮರ್ಶಿಸಬಹುದು. ಸರ್ಕೀಟ್ ಮೇಲ್ವಿಚಾರಕರೊಂದಿಗಿನ ಅವರ ಕೂಟದಲ್ಲಿ, ಸಭೆಯಲ್ಲಿರುವ ಪ್ರತಿಯೊಬ್ಬ ಪುರುಷನು, ಸುಯೋಗಕ್ಕೆ ಅರ್ಹನಾಗುತ್ತಾನೋ ಇಲ್ಲವೋ ಎಂದು ಹಿರಿಯರು ಪರಿಗಣಿಸತಕ್ಕದ್ದು, ಮತ್ತು ಅರ್ಹನಾಗದಿದ್ದರೆ, ಹಾಗೆ ಆಗಲು ಹೇಗೆ ಸಹಾಯ ನೀಡಸಾಧ್ಯವಿದೆ ಎಂದು ನೋಡತಕ್ಕದ್ದು.
5 ಸಹೋದರರು ಪ್ರಗತಿ ಮಾಡುತ್ತಿರುವಂತೆಯೇ, ಅವರು ಒಬ್ಬ ಬಹಿರಂಗ ಭಾಷಣಗಾರನಾಗುವಂಥ, ಶುಶ್ರೂಷಾ ಸೇವಕನಾಗುವಂಥ, ಯಾ ಹಿರಿಯನಾಗುವಂಥ ಸುಯೋಗಗಳಿಂದ ಅನಾವಶ್ಯಕವಾಗಿ ತಡೆಹಿಡಿಯಬಾರದು. ಅವರ ಯೋಗ್ಯತೆಗಳನ್ನು ಹಿರಿಯರು ಪರಿಗಣಿಸುವಾಗ, ಅವರು ಪರಿಪೂರ್ಣತೆಗಾಗಿ ಮುನ್ನೋಡುವದಿಲ್ಲ, ಯಾಕಂದರೆ ನಮ್ಮಲ್ಲಿ ಯಾರೂ ಖಂಡಿತವಾಗಿಯೂ ಪರಿಪೂರ್ಣರಲ್ಲ. (ಕೀರ್ತ. 130:3) ಶಾಸ್ತ್ರವಚನಗಳ ಹೊಂದಿಕೆಯೊಂದಿಗೆ ಸಹೋದರನ ಇಡೀ ಜೀವನ ನಮೂನೆಯು ಇದೆಯೋ ಎಂದು ಮತ್ತು ಯಾವುದಕ್ಕಾಗಿ ಅವನನ್ನು ಪರಿಗಣಿಸಲಾಗುತ್ತದೊ ಆ ಸುಯೋಗಕ್ಕೆ ಆವಶ್ಯಕವಾದ ಸಾಕಷ್ಟು ಮಟ್ಟದ ಸಾಮರ್ಥ್ಯಗಳು ಮತ್ತು ಯೋಗ್ಯತೆಗಳು ಮತ್ತು ಅನುಭವ ಇದೆಯೋ ಎಂದು ಅವರು ನೋಡಲು ಬಯಸುವರು. ನಿಶ್ಚಯವಾಗಿಯೂ, ಇದರ ಅರ್ಥ ಯಾವುದೇ ರೀತಿಯಲ್ಲಿ ಶಾಸ್ತ್ರೀಯ ಅರ್ಹತೆಗಳನ್ನು ಅಲಕ್ಷ್ಯಿಸಬೇಕು ಎಂದಲ್ಲ.
6 ಇಪ್ತತರುಗಳ ಕೊನೆಭಾಗದಲ್ಲಿರುವ ವಯಸ್ಸಿನ ಸಹೋದರರನ್ನು ಮತ್ತು ಕೆಲವು ವರ್ಷಗಳಿಂದ ಶುಶ್ರೂಷಾ ಸೇವಕರುಗಳಾಗಿ ಸೇವೆ ಸಲ್ಲಿಸಿದವರನ್ನು, ಹಿರಿಯರುಗಳಾಗಿ ಶಿಫಾರಸು ಮಾಡುವ ವಿಷಯದಲ್ಲಿ ಅನಾವಶ್ಯಕವಾಗಿ ಹಿಡಿದಿಡುವ ಅವಶ್ಯವಿಲ್ಲ. ಸಹೋದರನೊಬ್ಬನು ಹಲವಾರು ವರ್ಷಗಳಿಂದ ಶುಶ್ರೂಷಾ ಸೇವಕನಾಗಿ ಮತ್ತು ಬದಲಿ ಹಿರಿಯನಾಗಿ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸಿರುವದನ್ನು ಮತ್ತು ಯಾವುದೇ ಗಂಭೀರವಾದ ಅನರ್ಹತೆ ಇಲ್ಲದಿರುವದನ್ನು ನಾವು ಕಾಣುತ್ತೇವೆ. ಆದರೂ ಅವನನ್ನು ಎಂದೂ ಹಿರಿಯನಾಗಿ ಶಿಫಾರಸು ಮಾಡಿರುವುದಿಲ್ಲ. ಅಂಥ ವ್ಯಕ್ತಿಗಳು ಬೆಳೆಯುವದನ್ನು ನೋಡಲು ನಾವು ಬಯಸುತ್ತೇವೆ. ಅವರು ಬೆಳೆಯುವಂತೆ ಸಹಾಯ ಮಾಡಿರಿ. ಅವರಿಗೆ ಹೆಚ್ಚಿನ ಜವಾಬ್ದಾರಿಕೆಗಳನ್ನು ಕೊಡಿರಿ ಮತ್ತು ಅವರು ಸಮಂಜಸವಾಗಿ ಒಳ್ಳೇದಾಗಿ ಪೂರೈಸುವದಾದರೆ, ಅವರನ್ನು ಇನ್ನಷ್ಟು ಹೆಚ್ಚಿನ ಸುಯೋಗಗಳಿಗಾಗಿ ಶಿಫಾರಸು ಮಾಡಬಹುದು. ಅಧಿಕ ಯೋಗ್ಯತೆ ಪಡೆದ ಸಹೋದರರು ಸಭೆಯಲ್ಲಿ ಸೇವೆ ಸಲ್ಲಿಸುವದು ಪ್ರಯೋಜನಗಳನ್ನು ಮತ್ತು ಅಭಿವೃದ್ಧಿಯನ್ನು ತಾನೇ ತರಬಲ್ಲದು, ತತ್ಪರಿಣಾಮವಾಗಿ ಯೆಹೋವನ ಹೆಸರಿಗೆ ಮಹಿಮೆಯನ್ನು ತರುವದು.—ಕೀರ್ತ. 107:32.