ನೀವು ಪಯನೀಯರರಾಗಿ ಯೆಹೋವನನ್ನು ಸೇವಿಸಬಲ್ಲಿರೋ?
1 “ಬೆಳಕು ವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಒಂದರಲ್ಲಿ, ಒಬ್ಬ ಭಾಷಣಕರ್ತನು ಕೇಳಿದ್ದು: “ನೀವು ಪಯನೀಯರ್ ಆಗ ಬಲ್ಲಿರೋ? ನೀವು ಪಯನೀಯರ್ ಆಗುವಿರೋ?” ಹರ್ಮಗೆದ್ದೋನ್ ಅತೀ ಹತ್ತಿರವಿರುವುದರಿಂದ, ಮತ್ತು ಇದು ಸಾರುವ ಕೆಲಸವನ್ನು ಹಿಂದೆಂದಿಗಿಂತಲೂ ಹೆಚ್ಚು ಅವಸರದ್ದಾಗಿ ಮಾಡುವುದರಿಂದ ಈ ಪ್ರಶ್ನೆಗಳು ಸುಸಂಬದ್ಧವಾಗಿವೆ ಎಂದು ಆತನು ಗಮನಿಸಿದನು.—1 ಕೊರಿಂಥ 7:29ಎ.
2 ಪಯನೀಯರಿಂಗ್ ಕಷ್ಟಕರ ಕೆಲಸವೆಂಬುದಕ್ಕೆ ಸಂದೇಹವಿಲ್ಲ. ಅದಕ್ಕೆ ಸ್ವ ಶಿಸ್ತು ಮತ್ತು ಒಳ್ಳೇ ಸಂಘಟನೆಯು ಅವಶ್ಯವಾಗಿದೆ. ಆದರೂ, ಶುಶ್ರೂಷೆಯಲ್ಲಿನ ನಮ್ಮ ದುಡಿಮೆಯು “ನಿಷ್ಫಲ” ವಲ್ಲ. (1 ಕೊರಿಂಥ 15:58) ನಾವು ಬೆನ್ನಟಲ್ಟು ಆರಿಸಬಹುದಾದ ಮತ್ತು ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡುವ ಇತರ ಕಾರ್ಯಗಳ ಸಂಬಂಧದಲ್ಲಿ ಅದನ್ನೇ ಹೇಳಬಹುದೊ? ಯೆಹೋವನಿಗೋಸ್ಕರ ಪ್ರೀತಿಯು ಆತನ ಸೇವೆಯಲ್ಲಿ ಆಸಕ್ತಿಯುಳ್ಳವರಾಗಿರುವಂತೆ ಕ್ರೈಸ್ತರನ್ನು ಪ್ರಚೋದಿಸುತ್ತದೆ, ಮತ್ತು ಯೆಹೋವನ ಸೇವೆಗಾಗಿರುವ ಆಸಕ್ತಿಯು ಅನೇಕರನ್ನು ಪಯನೀಯರ್ ಕೆಲಸಕ್ಕೆ ನಡೆಸಿದೆ.—1 ಯೋಹಾನ 5:3; ಪ್ರಕಟನೆ 4:11.
3 ಹೈಸ್ಕೂಲನ್ನು ಈಗ ತಾನೇ ಮುಗಿಸುತ್ತಿರುವ ಯೆಹೋವನ ಅನೇಕ ಯುವ ಸೇವಕರು ಪಯನೀಯರಿಂಗ್ ಬಗ್ಗೆ ಗಂಭೀರವಾಗಿ ಆಲೋಚಿಸುತಿದ್ದಾರೆ. ಅದು ಪೂರ್ಣವಾಗಿ ತಕ್ಕುದಾಗಿದೆ. ಬೇರೆ ಯಾವ ಕೆಲಸವು ಪೂರ್ಣ ಸಮಯದ ಶುಶ್ರೂಷೆಗಿಂತ ಪ್ರಾಮುಖ್ಯವಾಗಿರಬಲ್ಲದು? (ಮತ್ತಾಯ 6:33) ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡಲೇ ಬೇಕು; ಇದು ಯೆಹೋವನ ಕೆಲಸವಾಗಿದೆ, ಮತ್ತು ಒಬ್ಬನ ತಾರುಣ್ಯದಿಂದಲೇ ಅದರಲ್ಲಿ ಒಳಗೂಡುವುದು ಎಂಥ ಒಂದು ಸುಯೋಗವಾಗಿದೆ!—ಮತ್ತಾಯ 24:14.
4 ಪೂರ್ಣ ಸಮಯದ ಸೇವೆಯನ್ನು ತಕ್ಕೊಳ್ಳುವಂತೆ ಹೆತ್ತವರಾದ ನೀವು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಿರೊ? ಈ ಉಪಯುಕಕ್ತರ ಕೆಲಸದಲ್ಲಿ ಅವರ ಪೂರ್ಣ ಹೃದಯ, ಆತ್ಮ, ಮನಸ್ಸು, ಮತ್ತು ಬಲವನ್ನು ಅವರು ಉಪಯೋಗಿಸಬೇಕೆಂದು ನೀವು ಬಯಸುತ್ತೀರೆಂದು ನಿಮ್ಮ ಮಕ್ಕಳು ಸ್ಪಷ್ಟವಾಗಿಗಿ ತಿಳಿದುಕೊಳ್ಳುತ್ತಾರೊ? (ಮಾರ್ಕ 12:30) ಅನೇಕ ಯುವ ಪ್ರಚಾರಕರು ತಮ್ಮ ಶಾಲಾ ವರ್ಷಗಳಲ್ಲಿ ಪ್ರತಿಯೊಂದು ಸಂದರ್ಭಗಳಲ್ಲಿ ಸಹಾಯಕ ಪಯನೀಯರರಾಗಿ ಭಾಗವಹಿಸುವುದರ ಮೂಲಕ ತಮ್ಮನ್ನೇ ಕ್ರಮದ ಪಯನೀಯರರಾಗಲು ತಯಾರಿಸುತ್ತಾರೆ. ನಿಜವಾಗಿಯೂ ಯೆಹೋವನಿಗಾಗಿ ಅಂಥ ಭಕ್ತಿಯು ಆತನ ಹೃದಯವನ್ನು ಅನುರಾಗದಿಂದ ತುಂಬಿಸುತ್ತದೆ!—ಜ್ಞಾನೋಕ್ತಿ 27:11.
5 ಖಂಡಿತವಾಗಿಯೂ, ಪಯನೀಯರ್ ಸೇವೆಗಾಗಿ ಎಡೆಗೊಡುವಂತೆ ಎಲ್ಲರಿಗೆ ಸಂದರ್ಭಗಳಿರಲಿಕ್ಕಿಲ್ಲ. ಆದಾಗ್ಯೂ, ನೀವು ವಿವಾಹಿತರಾಗಿರಲಿ, ಒಬ್ಬಂಟಿಗರಾಗಿರಲಿ, ತರುಣರಾಗಿರಲಿ ಯಾ ವೃದ್ಧರಾಗಿರಲಿ, ಸುವಾರ್ತೆಯ ಪಯನೀಯರ್ ಶುಶ್ರೂಷಕರಾಗಿ ಯೆಹೋವನನ್ನು ಸೇವಿಸಲು ಗಂಭೀರ ಮತ್ತು ಪ್ರಾರ್ಥನಾಪೂರ್ವಕ ಪರಿಗಣನೆಯನ್ನು ಕೊಟ್ಟಿರುವಿರೊ? (ಕೊಲೊಸ್ಸೆ. 3:23) ಅನೇಕ ಮದುವೆಯಾದ ಯುವ ದಂಪತಿಗಳು ಒಬ್ಬರು ಅಥವಾ ಇಬ್ಬರೂ ಪಯನೀಯರರಾಗುವಂತೆ ಅವರ ಶುಶ್ರೂಷೆಯನ್ನು ವಿಸ್ತರಿಸಲು ಕೆಲಸವನ್ನು ಮಾಡುತ್ತಿದ್ದಾರೆ.
6 ಒಂದು ವೇಳೆ ನೀವು ಸದ್ಯಕ್ಕೆ ಕ್ರಮದ ಪಯನೀಯರರಾಗುವ ಸ್ಥಿತಿಯಲ್ಲಿಲ್ಲವಾದರೆ, ಸಹಾಯಕ ಪಯನೀಯರರಾಗಿ ಸೇವೆ ಮಾಡಬಲ್ಲಿರೊ? ಪ್ರಾಯಶಃ ನಿಮ್ಮ ಸಭೆಯಲ್ಲಿನ ಅನೇಕ ಪ್ರಚಾರಕರು ಅದನ್ನು ಏಪ್ರಿಲ್ನಲ್ಲಿ ಮಾಡಲು ಯೋಜನೆಗಳನ್ನು ಮಾಡುತ್ತಿರಬಹುದು. ನೀವು ಅವರ ಜತೆ ಸೇರಬಹುದೊ? ಯೆಹೋವನ ಎಲ್ಲಾ ನಿಷ್ಠೆಯ ಸೇವಕರು ಅನೇಕ ಆಶೀರ್ವಾದಗಳನ್ನು ಹೊಂದುವುದಾದರೂ, ಕುರಿಗಳಂಥವರನ್ನು ಹುಡುಕುವ ರಾಜ್ಯದ ಸೇವೆಯಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುವ ಸ್ಥಾನದಲ್ಲಿ ಯಾರಿರುತ್ತಾರೊ ಅವರಿಗಾಗಿ ಅಧಿಕ ಆಶೀರ್ವಾದಗಳು ಕಾಯುತ್ತಿವೆ.—ಅ. ಕೃತ್ಯಗಳು 20:35.