ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/93 ಪು. 7
  • ಸೇವೆಯ ಒಂದು ಉತ್ತಮ ಸುಯೋಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಯ ಒಂದು ಉತ್ತಮ ಸುಯೋಗ
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಮ್ಮ ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ
    1996 ನಮ್ಮ ರಾಜ್ಯದ ಸೇವೆ
  • ಪತ್ರಿಕಾ ಮಾರ್ಗಗಳ ಮೂಲಕ “ರಾಜ್ಯದ ಬೀಜವನ್ನು ಬಿತ್ತುವುದು”
    1998 ನಮ್ಮ ರಾಜ್ಯದ ಸೇವೆ
  • ಪತ್ರಿಕಾ ಮಾರ್ಗ—ಬೈಬಲ್‌ ಅಧ್ಯಯನ ಆರಂಭಿಸಲು ಸಹಾಯಕ
    2014 ನಮ್ಮ ರಾಜ್ಯದ ಸೇವೆ
  • ನಿಮ್ಮ ಶುಶ್ರೂಷೆಯಲ್ಲಿ ಪತ್ರಿಕೆಗಳನ್ನು ಕೊಡುವುದಕ್ಕೆ ಪ್ರಾಧಾನ್ಯ ನೀಡಿರಿ
    2005 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 4/93 ಪು. 7

ಸೇವೆಯ ಒಂದು ಉತ್ತಮ ಸುಯೋಗ

1 ಕಾಲೇಜಿನ ಆರು ವರ್ಷಗಳಲ್ಲಿ ಕಲಿತಿರುವುದಕ್ಕಿಂತಲೂ ನಿಜ ಮೌಲ್ಯದ ಎಷ್ಟೋ ಹೆಚ್ಚು ಸಂಗತಿಗಳನ್ನು ಕಾವಲಿನಬುರುಜು ಮತ್ತು ಎಚ್ಚರ! ವನ್ನು ಓದುವುದರಿಂದ ತಾನು ಕಲಿತೆನು ಎಂದು ಒಬ್ಬ ವಾಚಕನು ಹೇಳಿದನು. ಕೇವಲ ಕೊಂಚ ಸಮಯಕ್ಕಾಗಿ ನಮ್ಮ ಈ ಪತ್ರಿಕೆಗಳನ್ನು ಓದಿಯಾದ ನಂತರ ಮೆಚ್ಚಿಗೆಯ ಇಂತಹ ಅಂತಃಕರಣ ಪೂರ್ವಕ ಹೇಳಿಕೆಗಳನ್ನು ಯಥಾರ್ಥ ವಾಚಕರು ಮಾಡುವುದೇನೂ ಅಸಾಮಾನ್ಯವಲ್ಲ. ನಿಜವಾಗಿಯೂ ಮೂಲ್ಯವೆಂದೆಣಿಸುವವರೊಂದಿಗೆ ನಮ್ಮ ಪತ್ರಿಕೆಗಳನ್ನು ಕ್ರಮವಾಗಿ ಹಂಚುವುದರಲ್ಲಿ ನಾವು ಎಷ್ಟು ಸುಯೋಗ ಪಡೆದವರಾಗಿದ್ದೇವೆ!

2 ಸತ್ಯದಲ್ಲಿ ಅನೇಕ ಜನರಿಗೆ ತುಸು ಆಸಕ್ತಿ ಇರುವುದಾದರೂ, ಒಂದು ಮನೆ ಬೈಬಲ್‌ ಅಧ್ಯಯನವನ್ನು ಸ್ವೀಕರಿಸುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿರುವುದಿಲ್ಲ. ಆದರೆ ಕಾವಲಿನಬುರುಜು ಮತ್ತು ಎಚ್ಚರ!ದ ಹೊಸ ಸಂಚಿಕೆಗಳೊಂದಿಗೆ ಕ್ರಮಾನುಗತವಾಗಿ ಯಾರಾದರೊಬ್ಬರು ಪುನರ್ಭೇಟಿ ಮಾಡುವಲ್ಲಿ, ಅವರ ಆಸಕ್ತಿಯನ್ನು ಬೆಳಸಬಹುದು. ಹೌದು, ಪತ್ರಿಕಾ ಪಥದಲ್ಲಿ ನಂಬಿಗಸ್ತಿಕೆಯಿಂದ ಪತ್ರಿಕೆಗಳನ್ನು ಬಟವಾಡೆಮಾಡುವುದರಿಂದ, ಕಟ್ಟಕಡೆಗೆ ಕ್ರಮದ ಬೈಬಲ್‌ ಅಧ್ಯಯನವೊಂದಿರಲು ಜನರು ಒಪ್ಪುವಂತೆ ನಡಿಸಲು ಸಹಾಯ ಮಾಡಿದೆ.

3 ನಾವು ಮೊದಲಾಗಿ ಪತ್ರಿಕೆಗಳನ್ನು ಓದಿದರೆ ಮತ್ತು ನಮ್ಮ ಪಟ್ಟಿಯಲ್ಲಿರುವ ಪ್ರತಿ ವ್ಯಕ್ತಿಗೆ ವಿಶಿಷ್ಟ ಆಸಕ್ತಿಯದ್ದಾಗಿರುವ ನಿರ್ದಿಷ್ಟ ವಿಚಾರಗಳ ಟಿಪ್ಪಣಿ ಮಾಡಿಕೊಂಡರೆ, ಪತ್ರಿಕೆ ಪಥವಿರುವುದರಿಂದ ನಾವು ವೈಯಕ್ತಿಕವಾಗಿ ಪ್ರಯೋಜನ ಪಡೆಯುವೆವು.

4 ಮೊದಲ ಬಾರಿ ಪತ್ರಿಕೆಗಳನ್ನು ಸ್ವೀಕರಿಸುವಾಗ ವ್ಯಕ್ತಿಯೊಬ್ಬನು ಅಭಿರುಚಿಯನ್ನು ತೋರಿಸಿದರೆ, ಪ್ರತಿ ಎರಡು ವಾರಗಳಿಗೊಮ್ಮೆ ನಮ್ಮ ಪತ್ರಿಕೆಗಳಲ್ಲಿ ಬರುವ ಗಮನಾರ್ಹವಾದ ಲೇಖನಗಳನ್ನು ಮತ್ತು ಅವುಗಳನ್ನು ನೀವು ಬಟವಾಡೆಮಾಡಲು ಸಂತೋಷಿಸುವಿರಿ ಎಂದು ವಿವರಿಸಬಹುದು. ಕ್ರಮಾನುಗತವಾಗಿ ಅನುಸರಿಸಲು ಖಚಿತಮಾಡಿರಿ ಮತ್ತು ಬೈಬಲ್‌ ವಿಷಯಗಳಲ್ಲಿ ಮನೆವಾರ್ತೆಯವನೊಂದಿಗೆ ಸಂಭಾಷಿಸಲು ಅವಕಾಶಗಳ ಸದುಪಯೋಗ ಮಾಡಿರಿ. ಈ ಉತ್ತಮ ಸೇವಾ ಸುಯೋಗದಲ್ಲಿ ನೀವು ಆನಂದಿಸುವಿರೆಂದು ನಾವು ಬಲ್ಲೆವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ