ಆಸಕ್ತಿಯನ್ನು ತೋರಿಸಿದವರೆಲ್ಲರಿಗೆ ಸಹಾಯ ಮಾಡುವುದು
1 ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದವರೆಲ್ಲರಿಗೆ ಮಾರ್ಚ್ನಲ್ಲಿ ಸಹಾಯಿಸಲು ಮತ್ತು ಸ್ಮಾರಕಾಚರಣೆಗೆ ಆಮಂತ್ರಿಸಲು ನಮ್ಮ ನಂಬಿಕೆ ಮತ್ತು ಅವರೆಡೆಗಿನ ನಮ್ಮ ಪ್ರೀತಿಯು ನಮ್ಮನ್ನು ಪ್ರೇರಿಸತಕ್ಕದ್ದು. ಕ್ರಿಸ್ತನ ವಿಮೋಚನ ಯಜ್ಞದ ಮೇಲೆ ಕೇಂದ್ರಿತವಾಗಿರುವ, ರಕ್ಷಣೆಯ ಯೆಹೋವನ ಒದಗಿಸುವಿಕೆಯ ಕಡೆಗೆ ಅಂತಹವರನ್ನು ನಡಿಸುವ ಆವಶ್ಯಕತೆ ಇದೆ.—ಇಬ್ರಿ. 9:28.
2 ಸ್ಮಾರಕಾಚರಣೆಗೆ ನೀವು ಆಮಂತ್ರಿಸಲು ಬಯಸುವವರ ಯಾದಿಯೊಂದನ್ನು ಮಾಡುವುದು ಒಳ್ಳೆಯ ಒಂದು ಕಲ್ಪನೆಯಾಗಿದೆ. ಸಂದರ್ಭ ಒದಗಿದಂತೆ ಕೂಟಗಳಿಗೆ ಹಾಜರಾಗುವ, ಹಾಗೂ ಈ ಹಿಂದೆ ಅಭ್ಯಾಸ ಮಾಡಿದ್ದ ಯಾ ಇನ್ಯಾವುದೇ ರೀತಿಗಳಲ್ಲಿ ಆಸಕ್ತಿಯನ್ನು ತೋರಿಸಿದ ಯಾರೇ ಒಬ್ಬನನ್ನು ಅದರಲ್ಲಿ ಸೇರಿಸಿರಿ. ಅವಿಶ್ವಾಸಿ ಸಂಗಾತಿಗಳು ಮತ್ತು ಕುಟುಂಬದ ಇತರ ಸದಸ್ಯರನ್ನು ಮರೆಯಬೇಡಿರಿ. ನಿಮ್ಮ ಯಾದಿಯನ್ನು ಮಾಡಿದ ನಂತರ, ಪ್ರತಿಯೊಬ್ಬನನ್ನು ಕರೆಯಲು ಒಂದು ವಿಶೇಷ ಪ್ರಯತ್ನ ಮಾಡಿರಿ. ಕೆಲವು ನಿರ್ದಿಷ್ಟ ಕರೆಗಳನ್ನು ಮಾಡಲು ನಿಮಗೆ ನೆರವಾಗುವಂತೆ ಹಿರಿಯರನ್ನು ಕೇಳಲು ನೀವು ಇಚ್ಛಿಸಬಹುದು.
3 ಈ ಕರೆಯಲ್ಲಿ ನೀವೇನು ಹೇಳಸಾಧ್ಯವಿದೆ?
ಬೆಚ್ಚಗೆನ ಅಭಿವಂದನೆಗಳ ನಂತರ, ನೀವು ಇಂತಹ ರೀತಿಯಲ್ಲಿ ಹೇಳಸಾಧ್ಯವಿದೆ:
▪ “ಹಿಂದೆ, ನೀವು ಆತ್ಮಿಕ ವಿಷಯಗಳಲ್ಲಿ ಅಭಿರುಚಿಯನ್ನು ತೋರ್ಪಡಿಸಿದ್ದೀರಿ, ಮತ್ತು ಒಂದು ವಿಶೇಷ ಘಟನೆಯ ಈ ಆಮಂತ್ರಣವನ್ನು ನೀವು ಗಣ್ಯಮಾಡುವಿರಿ ಎಂದು ನಾನೆಣಿಸಿದೆ. [ಮನೆಯವನಿಗೆ ಸ್ಮಾರಕಾಚರಣೆಯ ಮುದ್ರಿತ ಆಮಂತ್ರಣವನ್ನು ಕೊಡಿರಿ.] ಕ್ರಿಸ್ತನ ಮರಣದ ಸ್ಮಾರಕಾಚರಣೆಯು, ಕರ್ತನಾದ ಯೇಸು ಕ್ರಿಸ್ತನು ಆಚರಿಸಲು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ ಒಂದೇ ಘಟನೆಯಾಗಿದೆ. ಅವನ ಮರಣದ ಮೂಲಕ ಕ್ರಿಸ್ತನು ಏನನ್ನು ಪೂರೈಸಿದನು ಮತ್ತು ಅದರ ಮೂಲಕ ನಾವು ನಿತ್ಯ ಜೀವವನ್ನು ಹೇಗೆ ಪಡೆಯಸಾಧ್ಯವಿದೆ ಎಂಬುದನ್ನು ಪುನಃ ವಿಮರ್ಶಿಸಲು ನಾವು ಮುನ್ನೋಡುತ್ತೇವೆ. ಕಳೆದ ವರುಷ ಈ ವಿಶೇಷ ಕೂಟದಲ್ಲಿ 1 ಕೋಟಿ 14 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಹಾಜರಿದ್ದರು. ಈ ವರ್ಷದ ಹಾಜರಿಯಲ್ಲಿ ನನ್ನೊಂದಿಗೆ ನೀವು ಸೇರುವುದು ಒಂದು ಸಂತಸದ ಸಂಗತಿಯಾಗಲಿರುವುದು.” ನಿಮ್ಮ ಸಭೆಯು ಸ್ಮಾರಕಾಚರಣೆಯನ್ನು ನಡಿಸುವ ಸಮಯ ಮತ್ತು ಸ್ಥಳವನ್ನು ಬರೆದುಕೊಳ್ಳುವಂತೆ ಖಚಿತಮಾಡಿಕೊಳ್ಳಿರಿ. ಅಗತ್ಯವಿದ್ದಲ್ಲಿ ವಾಹನ ಸೌಕರ್ಯ ಒದಗಿಸುವ ನೀಡುವಿಕೆ ಕೂಡ ಮಾಡಿರಿ.
4 ಸ್ಮಾರಕಾಚರಣೆಗೆ ಹೊಸಬರು ಹಾಜರಾಗುವಾಗ, ಅವರು ಸುಸ್ವಾಗತಿಸಲ್ಪಟ್ಟಿದ್ದಾರೆಂಬ ಅನುಭವ ಪಡೆಯತಕ್ಕದ್ದು. ಸ್ಥಳೀಕ ಪ್ರಚಾರಕರೊಂದಿಗೆ ಪರಿಚಯಿಸಿಕೊಳ್ಳಲು ಅವರಿಗೆ ಸಹಾಯ ಮಾಡಿರಿ ಮತ್ತು ಅವರ ಮನೆಯ ಹತ್ತಿರ ವಾಸಿಸಬಹುದಾದ ಯಾರಾದರೂ ಆಸಕ್ತ ವ್ಯಕ್ತಿಗಳೊಂದಿಗೆ ಅವರನ್ನು ಪರಿಚಯಪಡಿಸಿರಿ. ಅವರ ಸ್ವಂತ ನೆರೆಹೊರೆಯಲ್ಲಿ ಅನೇಕರು ಸತ್ಯದಲ್ಲಿ ಆಸಕ್ತರಾಗಿದ್ದಾರೆಂದು ತಿಳಿದುಕೊಳ್ಳುವುದು ಅವರನ್ನು ಪ್ರೋತ್ಸಾಹಿಸುವುದು. ಸಾಧ್ಯವಿರುವಲ್ಲಿ, ಸ್ಮಾರಕಾಚರಣೆಯ ಸಮಯದಲ್ಲಿ ನಿಮ್ಮ ಕುಟುಂಬದೊಂದಿಗೆ ಕುಳಿತುಕೊಳ್ಳಲು ಅವರನ್ನು ಆಮಂತ್ರಿಸಿರಿ.
5 ಸ್ಮಾರಕಾಚರಣೆಗೆ ಹಾಜರಾಗುವುದು ತಾನೇ ಅವರಿಗೆ ರಕ್ಷಣೆಯ ಅಭಯವನ್ನು ಕೊಡುವುದಿಲ್ಲವೆಂಬುದು ನಿಜ. ಆದರೆ ನೀವು ಆಮಂತ್ರಿಸುವ ಅನೇಕರಿಗೆ, ಯೇಸುವಿನ ಸುರಿದ ರಕ್ತದ ಮೇಲೆ ನಂಬಿಕೆಯನ್ನು ಪ್ರದರ್ಶಿಸುವ ಅವರ ಮೊದಲ ಹೆಜ್ಜೆಯಾಗಿರಬಲ್ಲದು. ಕೂಟವಾದ ನಂತರ ಮನೆಗೆ ಹಿಂತೆರಳುವ ದಾರಿಯಲ್ಲಿ, ಮುಂದಿನ ಆದಿತ್ಯವಾರದ ಸಾರ್ವಜನಿಕ ಭಾಷಣಕ್ಕೆ ಮತ್ತು ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾಗಲು ಅವನು ಬಯಸುತ್ತಾನೋ ಎಂದು ಸಂದರ್ಶಕನಿಗೆ ವಿಚಾರಿಸಿರಿ. ಹುರುಪುಳ್ಳವರೂ, ಸಹಾಯ ಮಾಡುವ ಪ್ರವೃತ್ತಿಯವರೂ ಆಗಿರ್ರಿ. ನಿಮಗಾಗುವ ರೀತಿಯಲ್ಲಿ ಅವನಿಗೆ ಸಹಾಯಿಸಲು ನೀವು ಇಚ್ಛೆಯುಳ್ಳವರಾಗಿದ್ದೀರಿ ಎಂದವನಿಗೆ ತಿಳಿಯಲಿ. ಎಷ್ಟೊಂದು ಬೇಗನೆ ಅವನು ಕ್ರಮಭರಿತ ರೀತಿಯಲ್ಲಿ ನಮ್ಮೊಂದಿಗೆ ಸಹವಾಸ ಮಾಡಲು ಆರಂಭಿಸುತ್ತಾನೋ, ಅಷ್ಟೊಂದು ಕ್ಷಿಪ್ರ ಗತಿಯಲ್ಲಿ ಅವನ ಆತ್ಮಿಕ ಪ್ರಗತಿಯುಂಟಾಗುವುದು. ನಾವು ಸಹಾಯಿಸಲು ಸಾಧ್ಯವಾಗಿರಬಹುದಾದ ಇನ್ನೂ ಅನೇಕರೊಂದಿಗೆ “ಮಹಾ ಸಂಕಟ”ದಿಂದ ಪಾರಾಗುವದು ನಮಗೆ ಎಂತಹ ಆನಂದ ಮತ್ತು ತೃಪ್ತಿಯದ್ದಾಗಿರುವುದು!—ಪ್ರಕ. 7:9, 14.