ದೇವಪ್ರಭುತ್ವ ವಾರ್ತಾಗಳು
ನಮ್ಮ ಕಾರ್ಯವು ಇತ್ತೀಚೆಗೆ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಈ ಕೆಳಗಿನ ದೇಶಗಳಲ್ಲಿ ಎದ್ದುಕಾಣುವ ಬೈಬಲ್ ಅಧ್ಯಯನ ಚಟುವಟಿಕೆಯು ನವಂಬರದಲ್ಲಿ ವರದಿಸಲ್ಪಟ್ಟಿದೆ:
ಆಲ್ಬೇನಿಯಾ: ಒಟ್ಟಿಗೆ 99 ಪ್ರಚಾರಕರು 210 ಬೈಬಲ್ ಅಧ್ಯಯನಗಳನ್ನು ನಡೆಸಿದರು.
ಬಾಲಿಕ್ಟ್ ರಾಜ್ಯಗಳು: ಈ ದೇಶಗಳ ಸಂಯುಕ್ತ ಮೊತ್ತವಾಗಿ, 2,199 ಪ್ರಚಾರಕರು ಮತ್ತು 4,632 ಬೈಬಲ್ ಅಧ್ಯಯನಗಳು ವರದಿ ಮಾಡಲ್ಪಟ್ಟಿವೆ.
ಬಲ್ಗೇರಿಯ: ಅವರ 296 ಪ್ರಚಾರಕರು 657 ಬೈಬಲ್ ಅಧ್ಯಯನಗಳನ್ನು ವರದಿಸಿದರು.
ಹುರಿದುಂಬಿಸುವ ವರದಿಗಳು ಆಫ್ರಿಕದಿಂದಲೂ ಕೂಡ ಬಂದಿವೆ:
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್: ಅಕ್ಟೋಬರದಲ್ಲಿ 1,600 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಮುಟ್ಟಲಾಯಿತು, ಮತ್ತು ಅವರು 2,966 ಮನೆ ಬೈಬಲ್ ಅಧ್ಯಯನಗಳನ್ನು ವರದಿಸಿದರು.
ಚಾಡ್: ಅಕ್ಟೋಬರದಲ್ಲಿ 345 ಪ್ರಚಾರಕರೊಂದಿಗೆ, ಅವರ ಆರು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳಿಗೆ 654 ಹಾಜರಿ ಇತ್ತು.
ರ್ವಾಂಡ: ನವಂಬರದಲ್ಲಿ 1,762 ಪ್ರಚಾರಕರು 6,270 ಮನೆ ಬೈಬಲ್ ಅಧ್ಯಯನಗಳನ್ನು ವರದಿಸಿದರು.
ನಮ್ಮ ದಿನಗಳಲ್ಲಿ ಒಟ್ಟುಗೂಡಿಸುವ ಕಾರ್ಯವನ್ನು ತ್ವರಿತಗೊಳಿಸುವ ವಾಗ್ದಾನವನ್ನು ಯೆಹೋವನು ಈಗ ನೆರವೇರಿಸುತ್ತಾ ಇದ್ದಾನೆಂಬುದಕ್ಕೆ ಈ ಸಂಯುಕ್ತ ವರದಿಗಳು ಮನತಟ್ಟುವ ಪುರಾವೆಗಳನ್ನು ಕೊಡುತ್ತವೆ.—ಯೆಶಾ. 60:22.