ಎಪ್ರಿಲ್ಗಾಗಿ ಸೇವಾ ಕೂಟಗಳು
ಎಪ್ರಿಲ್ 5 ರ ವಾರ
ಸಂಗೀತ 129 (66)
10 ನಿ: ಸ್ಥಳೀಕ ತಿಳಿಸುವಿಕೆಗಳು. ನಿಮ್ಮ ಟೆರಿಟೊರಿಗೆ ನಿರ್ದಿಷ್ಟ ಆಸಕ್ತಿಯದ್ದಾಗಿರಬಹುದಾದ ಲೇಖನಗಳನ್ನು ಎತ್ತಿತೋರಿಸುತ್ತಾ, ಪ್ರಚಲಿತ ಪತ್ರಿಕೆಗಳನ್ನು ಪರಾಮರ್ಶಿಸಿರಿ. ಇಬ್ಬರು ಪ್ರಚಾರಕರು, ಒಬ್ಬನು ಹಿರಿಯನು ಮತ್ತು ಒಬ್ಬನು ಎಳೆಯನು, ಸಂಕ್ಷಿಪ್ತ ಶಾಸ್ತ್ರೀಯ ಸಾದರಪಡಿಸುವಿಕೆಗಳನ್ನು ಪ್ರತ್ಯಕ್ಷಾಭಿನಯಿಸಲು ಏರ್ಪಡಿಸಿರಿ.
15 ನಿ: “ಕಾವಲಿನಬುರುಜು—ಹೊತ್ತುಹೊತ್ತಿಗೆ ಆತ್ಮಿಕ ಆಹಾರ.” ಪ್ರಶ್ನೋತ್ತರ ಚರ್ಚೆ. ಚಂದಾ ಯಾ ಪತ್ರಿಕೆಗಳನ್ನು ಅವರು ತೆಗೆದುಕೊಳ್ಳದೆ ಇರುವುದಾದರೂ, ನಿಜಾಸಕ್ತ ವ್ಯಕ್ತಿಗಳನ್ನು ಪುನಃ ಭೇಟಿ ಮಾಡುವ ಆವಶ್ಯಕತೆಯ ಮೇಲೆ ಹೇಳಿಕೆಗಳನ್ನು ಒಳಗೂಡಿಸಿರಿ. ಯಥಾರ್ಥ ಆಸಕ್ತಿಯ ರುಜುವಾತುಗಳಲ್ಲಿ ಸಂಭಾಷಿಸಲು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸಲು ಇಚ್ಛೆ, ಸಂಭಾಷಣೆಯಲ್ಲಿ ಒಳಗೊಳ್ಳುವಿಕೆ, ದಯಾಭರಿತ ಮನೋಭಾವ, ಬೈಬಲಿನ ವಚನಗಳ ಓದುವಿಕೆಯೊಂದಿಗೆ ಅನುಸರಿಸಿಹೋಗಲು ಇಚ್ಛೆ, ಮತ್ತು ಹೆಚ್ಚಿನ ಚರ್ಚೆಗೆ ಪುನಃ ಬರಲು ಆಮಂತ್ರಣ ಸೇರಿರುತ್ತದೆ.
20 ನಿ: “ಕಿರುಹೊತ್ತಗೆಗಳನ್ನು ಇತರ ಸಾಹಿತ್ಯಗಳೊಂದಿಗೆ ಜೋಡಿಸಿರಿ.” ಪ್ರಶ್ನೋತ್ತರ ಆವರಿಸುವಿಕೆ. ಪ್ಯಾರಗ್ರಾಫ್ 2-6 ರಲ್ಲಿರುವ ಸಲಹೆಗಳ ಮೇಲಾಧಾರಿತ ಚುಟುಕಾದ ಪ್ರತ್ಯಕ್ಷಾಭಿನಯಗಳನ್ನು ಸೇರಿಸಿರಿ.
ಸಂಗೀತ 14 (6) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 12 ರ ವಾರ
ಸಂಗೀತ 15 (119)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸ್ಮಾರಕಾಚರಣೆಯ ಸಂಬಂಧದಲ್ಲಿ ಯಾವುದೇ ಎದ್ದುಕಾಣುವ ಅನುಭವಗಳನ್ನು ತಿಳಿಸಿರಿ. “ಸೇವೆಯ ಒಂದು ಉತ್ತಮ ಸುಯೋಗ” ಲೇಖನದಿಂದ ಮುಖ್ಯ ವಿಚಾರಗಳನ್ನು ಚರ್ಚಿಸಿರಿ. ಸಮಯ ಅನುಮತಿಸಿದಂತೆ, ಸ್ಥಾಪಿತ ಪತ್ರಿಕಾ ಪಥವಿರುವ ಪ್ರಚಾರಕನ ಮುಖತಃ ಭೇಟಿ [ಇಂಟರ್ವ್ಯೂ] ಮಾಡಿರಿ. ಅವನದನ್ನು ಆರಂಭ ಮಾಡಿದ್ದು ಹೇಗೆ? ಮನೆಯವನಲ್ಲಿ ಆಸಕ್ತಿಯನ್ನು ಬೆಳಸಲು ಅವನಿಗೆ ಅದು ಹೇಗೆ ಸಹಾಯ ಮಾಡಿದೆ? ಈ ವಾರಾಂತ್ಯದಲ್ಲಿ ತಮ್ಮ ಕ್ಷೇತ್ರ ಸೇವಾ ಗುಂಪುಗಳೊಂದಿಗೆ ಕೆಲಸ ಮಾಡುವಂತೆ ಎಲ್ಲಾ ಪ್ರಚಾರಕರನ್ನು ಉತ್ತೇಜಿಸಿರಿ.
20 ನಿ: “ಹೊಸಬರು ಪ್ರಗತಿ ಮಾಡಲು ಸಹಾಯ ಮಾಡಿರಿ.” ಇಬ್ಬರು ಯಾ ಮೂವರು ಪುಸ್ತಕ ಅಧ್ಯಯನ ನಿರ್ವಾಹಕರಿಂದ ಒಂದು ಚರ್ಚೆ. ಲೇಖನದ ಅತ್ಯುಜ್ಜಲ್ವ ಭಾಗಗಳನ್ನು ಪರಾಮರ್ಶಿಸಿದ ನಂತರ, ಸ್ಥಳೀಕವಾಗಿ ಸಲಹೆಗಳನ್ನು ಅನ್ವಯಿಸಲು ಯಾವ ಯೋಜನೆಗಳನ್ನು ಮಾಡಲಾಗಿದೆ ಎಂದು ವಿವರಿಸಿರಿ. ಸ್ಮಾರಕಾಚರಣೆಗೆ ಹಾಜರಾದ ಹೊಸ ಆಸಕ್ತರಿಗೆ ನಾವು ಹೇಗೆ ಸಹಾಯ ಮಾಡಬಲ್ಲೆವು? ಕ್ಷೇತ್ರ ಸೇವೆಯಲ್ಲಿ ಅವರು ಪಾಲಿಗರಾಗಲು ಇಚ್ಛಿಸುವುದಾದರೆ, ಹೊಸಬರು ಯಾವ ಆವಶ್ಯಕತೆಗಳನ್ನು ಮುಟತ್ಟಕ್ಕದ್ದು? ಗತಕಾಲದಲ್ಲಿ ಅಕ್ರಮವಾಗಿ ಭಾಗವಹಿಸುವ ವ್ಯಕ್ತಿಗಳಿಗೆ ಸಹಾಯ ಮಾಡಲು ಏನು ಮಾಡಸಾಧ್ಯವಿದೆ? ಪ್ರತಿ ತಿಂಗಳು ಪೂರ್ಣ ಪಾಲು ಇರುವಂತೆ ಎಲ್ಲರನ್ನೂ ಹೇಗೆ ಹುರಿದುಂಬಿಸಬಹುದು? ಸಮರ್ಥ ಪ್ರಚಾರಕರು ಇತರರಿಗೆ ಸಹಾಯಿಸುವುದರಲ್ಲಿ ಹೇಗೆ ನೆರವಾಗಬಲ್ಲರು?—ರೋಮಾ. 15:1, 2.
15 ನಿ: “ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಅಭ್ಯಾಸಿಸುವುದು.” ಪ್ರಶ್ನೋತ್ತರಗಳು. ಮೇ 10ರ ವಾರದಲ್ಲಿ ಆರಂಭಗೊಳ್ಳುವ ಪುಸ್ತಕದ ಅಧ್ಯಯನಕ್ಕಾಗಿ ಉತ್ಸಾಹವನ್ನು ಬೆಳೆಸಿರಿ.
ಸಂಗೀತ 39 (16) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 19 ರ ವಾರ
ಸಂಗೀತ 194 (105)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ತಕ್ಕ ಪ್ರಕಟಣೆಗಳು. ಅಕೌಂಟ್ಸ್ ವರದಿ ಮತ್ತು ಯಾವುದೇ ಕಾಣಿಕೆಯ ಅಂಗೀಕಾರವನ್ನು ಓದಿರಿ. ಲೂಕ 6:38 ಓದಿರಿ, ಮತ್ತು ಲೋಕವ್ಯಾಪಕ ಕಾರ್ಯಕ್ಕಾಗಿ ಮತ್ತು ಸ್ಥಳೀಕ ಸಭೆಯ ಆವಶ್ಯಕತೆಗಾಗಿ ಬೆಂಬಲಿಸುವುದರಲ್ಲಿ ಅವರ ಉದಾರತೆಗಾಗಿ ಸಭೆಯನ್ನು ಪ್ರಶಂಸಿಸಿರಿ.
20 ನಿ: ಮಹಾನ್ ಪುರುಷ ಪುಸ್ತಕದಿಂದ ಸಭಾ ಪುಸ್ತಕ ಅಧ್ಯಯನವನ್ನು ನಡಿಸುವುದು. ಸಭಾ ಪುಸ್ತಕ ಅಧ್ಯಯನ ನಿರ್ವಾಹಕನು ಅಧ್ಯಯನವು ಹೇಗೆ ನಡಿಸಲ್ಪಡುವುದೆಂದು ಸಭೆಗೆ ಪ್ರತ್ಯಕ್ಷಾಭಿನಯಿಸಲು ನಾಲ್ಕೈದು ಪ್ರಚಾರಕರ ಒಂದು ಗುಂಪನ್ನು ಬಳಸುತ್ತಾನೆ. ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ನಾಲ್ಕನೆಯ ಪುಟದಲ್ಲಿ ವಿವರಿಸಲ್ಪಟ್ಟ ನಿರ್ದೇಶನಗಳಿಗನುಸಾರ, ಈ ಪ್ರತ್ಯಕ್ಷಾಭಿನಯವು ಚೆನ್ನಾಗಿ ತಯಾರಿಸಿದ್ದಾಗಿರಬೇಕು. ಮಹಾನ್ ಪುರುಷ ಪುಸ್ತಕದ 11 ನೆಯ ಅಧ್ಯಾಯವನ್ನುಪಯೋಗಿಸಿರಿ. ಉದ್ದ ಶಾಸ್ತ್ರೀಯ ಉಲ್ಲೇಖಗಳನ್ನು ಒಬ್ಬನಿಗಿಂತ ಹೆಚ್ಚು ವಾಚಕನು ಇರುವಂತೆ ವಿಭಜಿಸಬಹುದು ಯಾ ಇಡೀ ಭಾಗವನ್ನು ಓದಲು ಸಮಯ ಅನುಮತಿಸದಿದ್ದಲ್ಲಿ ಮುಖ್ಯಾಂಶಗಳನ್ನು ಹೇಗೆ ಎತ್ತಿ ತೋರಿಸಬಹುದು ಎಂದು ಪ್ರತ್ಯಕ್ಷಾಭಿನಯಿಸಿರಿ. ಬಳಸಲ್ಪಟ್ಟ ವಿಧಾನವನ್ನು ತೋರಿಸಲು ನಿರ್ವಾಹಕನು ಮಧ್ಯೇ ಮಧ್ಯೇ ಚುಟುಕಾದ ಹೇಳಿಕೆಗಳನ್ನು ಮಾಡಬಹುದು. ಸಭಿಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪುಸ್ತಕದ ಪ್ರತಿಯನ್ನು ಅನುಸರಿಸತಕ್ಕದ್ದು.
15 ನಿ: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ.” ಪುರವಣಿಯ 1-8 ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. ಪ್ಯಾರಗ್ರಾಫ್ 7 ರಲ್ಲಿ ನಮೂದಿಸಲ್ಪಟ್ಟ ಸಾಹಿತ್ಯಗಳ ಅತ್ಯುಜ್ಜಲ್ವತೆಗಳನ್ನು ಪರಾಮರ್ಶಿಸಿರಿ. ಸಮರ್ಥ ಪ್ರಚಾರಕನು ಸಭೆಗಳಾಗಿ ನಾವು ಯಾಕೆ ಸಂಸ್ಥಾಪಿಸಲ್ಪಟ್ಟಿದ್ದೇವೆ ಎಂದು ಹೊಸ ವ್ಯಕ್ತಿಯು ತಿಳಿದು ಕೊಳ್ಳಲು ಸಹಾಯಿಸುವ ವಿಧವನ್ನು ಪ್ರತ್ಯಕ್ಷಾಭಿನಯಿಸಲಿ. (w84 11⁄1 ಪು. 15 ಪ್ಯಾರ. 6, 7) ಕ್ರೈಸ್ತಪ್ರಪಂಚದ ಧಾರ್ಮಿಕ ಆರಾಧನೆಯೊಂದಿಗೆ ನಮ್ಮ ಕೂಟಗಳು ತೀವ್ರ ವಿಪರ್ಯಸ್ತವಾಗಿರುವ ಮುಖ್ಯ ಲಕ್ಷಣಗಳನ್ನು ಎತ್ತಿಹೇಳಿರಿ. ಸಂಸ್ಥಾಪನೆಗೆ ಅಧಿಕತಮ ಗಣ್ಯತೆಯನ್ನು ಮತ್ತು ಅದರ ಭಾಗವಾಗಿರುವುದರ ಆವಶ್ಯಕತೆಯನ್ನು ವಿದ್ಯಾರ್ಥಿಯು ಬೆಳಸಲು ಸಹಾಯಿಸುವಂತೆ ರಚಿಸಿದ ಒಂದು ಚುಟುಕಾದ ಚರ್ಚೆಯನ್ನು ಬೈಬಲ್ ಅಭ್ಯಾಸಗಳನ್ನು ನಡಿಸುವವರೊಂದಿಗೆ ಪ್ರತಿ ವಾರ ಒಳಗೂಡಿಸಲು ಪ್ರೋತ್ಸಾಹಿಸಿರಿ.
ಸಂಗೀತ 28 (5) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 26 ರ ವಾರ
ಸಂಗೀತ 180 (100)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆಗಳು. ಸಹಾಯಕ ಪಯನೀಯರ್, ಹೊಸ ಬೈಬಲ್ ಅಭ್ಯಾಸಗಳ ಆರಂಭಿಸುವಿಕೆ, ಯಾ ಸ್ಮಾರಕಾಚರಣೆಗೆ ಹಾಜರಾದ ಆಸಕ್ತರಿಗೆ ನೆರವಾಗುವುದು ಇಂತಹ ಈ ತಿಂಗಳಲ್ಲಿ ಅವರ ವಿಸ್ತರಿತ ಕ್ಷೇತ್ರ ಸೇವಾ ಚಟುವಟಿಕೆಯ ಅನುಭವಗಳನ್ನು ಹೇಳುವಂತೆ ವ್ಯಕ್ತಿಗಳನ್ನು ಆಮಂತ್ರಿಸಿರಿ.
15 ನಿ: ಪ್ರಶ್ನಾ ಪೆಟ್ಟಿಗೆ. ಸಹಾಯಕ ಪಯನೀಯರ್ ಆಗಿ ಸೇವೆ ಸಲ್ಲಿಸಿದ ಸೇವಾ ಮೇಲ್ವಿಚಾರಕನಿಂದ ಯಾ ಇತರ ಹಿರಿಯನಿಂದ ಸಕಾರಾತ್ಮಕ ಮತ್ತು ಹುರಿದುಂಬಿಸುವ ಚರ್ಚೆ. ಆಗಾಗ ಸಹಾಯಕ ಪಯನೀಯರರೋಪಾದಿ ಸೇವಿಸುವ ಒಬ್ಬ ಯಾ ಇಬ್ಬರು ಪ್ರಚಾರಕರನ್ನು ಮುಖತಃ ಭೇಟಿ ಮಾಡಿರಿ.
20 ನಿ: “ಯೆಹೋವನ ಮಂದಿರಕ್ಕೆ ಹೋಗೋಣ, ಬಾ.” ಪುರವಣಿಯ 9-14 ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. ಪ್ಯಾರಗ್ರಾಫ್ಗಳು 12 ಮತ್ತು 13 ರಲ್ಲಿರುವ ಸಲಹೆಗಳನ್ನು ಬಳಸಿ, ಹಿಂದಕ್ಕೆ ಸರಿಯುವ ಒಬ್ಬನೊಡನೆ ಮಾತನಾಡುವ ವಿಧವನ್ನು ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ.
ಸಂಗೀತ 127 (64) ಮತ್ತು ಸಮಾಪ್ತಿಯ ಪ್ರಾರ್ಥನೆ.