ಮನೆಯಿಂದ ಮನೆಯ ಶುಶ್ರೂಷೆಯ ಪಂಥಾಹ್ವಾನವನ್ನು ಎದುರಿಸುವುದು
1 ಮನೆಯಿಂದ ಮನೆಗೆ ಹೋಗುವ, ಅಪರಿಚಿತರನ್ನು ಭೇಟಿಮಾಡುವ ವಿಚಾರವು, ಶುದ್ಧ ಆರಾಧನೆಯನ್ನು ತೆಗೆದುಕೊಳ್ಳುವ ಅನೇಕರಿಗೆ ಒಂದು ನಿಜವಾದ ಪಂಥಾಹ್ವಾನವನ್ನು ಸಾದರಪಡಿಸುತ್ತದೆ. ಆದರೆ ಈ ಪಂಥಾಹ್ವಾನವನ್ನು ಒಬ್ಬ ವ್ಯಕ್ತಿಯು ಎದುರಿಸುವಂತೆ, ಯೆಹೋವನಿಗೋಸ್ಕರ ನಿಷ್ಕಪಟವಾದ ಪ್ರೀತಿಯು ಸಹಾಯ ಮಾಡುತ್ತದೆ, ಮತ್ತು ಸ್ವಭಾವದಲ್ಲಿ ಬಹಳ ನಾಚಿಕೆಯುಳ್ಳವರು ಕೂಡ ಸುಸಮಾಚಾರದ ಪೂರ್ಣ ಸಮಯದ ಸೌವಾರ್ತಿಕರಾಗುವಷ್ಟರ ತನಕ ಪ್ರಗತಿಮಾಡಿದ್ದಾರೆ.
2 ಆದಿ ಕ್ರೈಸ್ತರು ಮನೆಯಿಂದ ಮನೆಗೆ ಹೋಗುವ ಮೂಲಕ ದೇವರ ರಾಜ್ಯದ ಸುಸಮಾಚಾರವನ್ನು ಹಂಚಿದರೆಂಬುದು ಬೈಬಲ್ನಿಂದ ಸ್ಪಷ್ಟವಾಗಿಗುತ್ತದೆ. (ಅ. ಕೃತ್ಯಗಳು 5:42; 20:20, 21) ಈ 20 ನೆಯ ಶತಮಾನದಲ್ಲಿರುವ ಕ್ರೈಸ್ತರೋಪಾದಿ, ನಾವು ಕೂಡ ಈ ಕೆಲಸದಲ್ಲಿ ಭಾಗವಹಿಸುತ್ತೇವೆ. ಔದಾಸೀನ್ಯ, ಕಿರುಕುಳ, ತಿರಸ್ಕಾರ, ಯಾ ನೇರವಾದ ವಿರೋಧವನ್ನು ನಾವು ಎದುರಿಸಿದರೂ ಈ ಕೆಲಸವನ್ನು ಮಾಡುವಂತೆ ದೇವರು ಮತ್ತು ನಮ್ಮ ನೆರೆಯವರಿಗಾಗಿರುವ ನಮ್ಮ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ.
3 ಪಂಥಾಹ್ವಾನವನ್ನು ಎದುರಿಸುವುದರಿಂದ ಸಾಧಿಸುವ ಸಂಗತಿ: ನಾವು ಪ್ರತಿಸಲ ಭೇಟಿಮಾಡುವಾಗ, ಕೊನೆಗೆ ಮೊತ್ತದ ಫಲಿತಾಂಶವು ರಾಜ್ಯದ ಫಲವನ್ನು ಫಲಿಸಬಹುದೆಂದು ತಿಳಿದು, ನಾವು ಸತ್ಯದ ಕೆಲವೊಂದು ಬೀಜಗಳನ್ನು ಬಿತ್ತಲು ಯತ್ನಿಸುತ್ತೇವೆ. (ಪ್ರಸಂಗಿ 11:6) ವೈಯಕ್ತಿಕ ಪರಿಸ್ಥಿತಿಗಳು ಬದಲಾಗುತ್ತವೆ. ನಮ್ಮಲ್ಲಿ ಒಬ್ಬರು ಬಾಗಲಿನಲ್ಲಿ ಏನನ್ನು ಹೇಳಿದ್ದೇವೊ ಅದರ ಕುರಿತು ಯೋಚಿಸುವಂತೆ ಒಬ್ಬ ಮನೆಯವನನ್ನು ಮಾಡಲು ಏನಾದರೊಂದು ಸಂಗತಿ ಸಂಭವಿಸಬಹುದು, ಮತ್ತು ಮುಂದಿನ ಸಮಯ ಅವನು ಹೆಚ್ಚಾಗಿ ಸ್ವೀಕರಿಸುವವನಾಗಿರಬಹುದು.
4 ಮನೆಯಿಂದ ಮನೆಯ ನಮ್ಮ ಶುಶ್ರೂಷೆಯು ಸತ್ಯ ಮತ್ತು ನೀತಿಯ ಕಡೆಗೆ ಒಲವುಳ್ಳವರಿಗೆ ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ಕಲಿಯಲು ಅವಕಾಶವನ್ನು ಕೊಡುತ್ತಾ, ನಿತ್ಯಜೀವಕ್ಕೆ ನಡೆಸುವ ದಾರಿಯಲ್ಲಿ ಅವರನ್ನು ತೊಡಗಿಸುತ್ತದೆ. ಲೌಕಿಕ ಸುಖಭೋಗಗಳನ್ನು ಬೆನ್ನಟ್ಟುವವರು ಯೆಹೋವನ ಮೆಚ್ಚಿಕೆಯಲ್ಲಿ ಆನಂದಿಸಲಿಕ್ಕಾಗಿ ಬದಲಾಗಬೇಕೆಂದು ಪ್ರೀತಿಪರವಾಗಿ ಹೀಗೆ ಎಚ್ಚರಿಸಲ್ಪಡುತ್ತಾರೆ. ಈ ಶುಶ್ರೂಷೆಯು, ಮನೆಯವರು ಕೇಳಲಿ ಯಾ ಕೇಳದೆ ಇರಲಿ, ಯೆಹೋವನ ನಾಮವನ್ನು ಸಹ ತಿಳಿಯ ಪಡಿಸುತ್ತದೆ ಮತ್ತು ಆತನಿಗೆ ಘನತೆಯನ್ನು ತರುತ್ತದೆ.—ಯೆಹೆಜ್ಕೇಲ 3:11.
5 ಶುಶ್ರೂಷೆಯಲ್ಲಿ ಕೆಲಸಮಾಡುವುದು ನಿಸ್ವಾರ್ಥ ಪ್ರೀತಿ, ಸಂತೋಷ, ಸಮಾಧಾನ, ಮತ್ತು ದೀರ್ಘ ಶಾಂತಿಯಂಥ ಆತ್ಮದ ಫಲಗಳನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ. (ಗಲಾತ್ಯ 5:22) ಅದರಲ್ಲಿ ಇತರರಿಗೆ ಒಳ್ಳೆಯದನ್ನು ಮಾಡುವುದು ಒಳಗೂಡಿರುವದರಿಂದ, ನಾವು ದೀನರಾಗಿಯೂ, ಸಹಾನುಭೂತಿಯುಳ್ಳವರಾಗಿಯೂ ಇರಲು ಅದು ಸಹಾಯ ಮಾಡುತ್ತದೆ. ಯೆಹೋವನ ಕೆಲಸದಲ್ಲಿ ಕಾರ್ಯಮಗ್ನರಾಗಿರುವುದು ನಮ್ಮನ್ನು ಲೋಕದಿಂದ ಸಂರಕ್ಷಿಸುವ ಉದ್ದೇಶವನ್ನು ಪೂರೈಸುತ್ತದೆ.—1 ಕೊರಿಂಥ. 15:58.
6 ಪಂಥಾಹ್ವಾನವನ್ನು ಎದುರಿಸಲು ಸಹಾಯಮಾಡಿರಿ: ಈ ಅತಿ ಉತ್ತೇಜಕ ಕೆಲಸದಲ್ಲಿ ಹೇಗೆ ಭಾಗವಹಿಸಬಹುದೆಂದು ಹೊಸಬರು ಕಲಿಯುವ ಅವಶ್ಯವಿದೆ. ಅನೇಕ ಬಾರಿ ಭರವಸೆಯ ಕೊರತೆಯ ಕಾರಣ ಅವರು ಮನೆಯಿಂದ ಮನೆಗೆ ಹೋಗುವ ಕೇವಲ ಯೋಚನೆಯಿಂದಲೇ ಎದೆಗುಂದಬಹುದು. ನಾವು ಅವರೊಂದಿಗೆ ಕೆಲವು ಸಾಮಾನ್ಯ ಆಕ್ಷೇಪಣೆಗಳನ್ನು ಮತ್ತು ಪ್ರತ್ಯುತ್ತರವಾಗಿ ನಾವೇನನ್ನು ಹೇಳಬಹುದೆಂದು ಚರ್ಚಿಸಬಹುದು. ಸಂಭಾಷಣೆಯನ್ನು ತಡೆಯುವವರಿಗೆ ಪ್ರತ್ಯುತ್ತರ ನೀಡುವುದರ ಮೇಲೆ ರೀಸನಿಂಗ್ ಪುಸ್ತಕದಲ್ಲಿರುವ ಕೆಲವೊಂದು ಉತ್ತಮ ಸಲಹೆಗಳನ್ನು ಉಪಯೋಗಿಸಲು ನಾವು ಅಭ್ಯಾಸ ಮಾಡಬಲ್ಲೆವು. ಅವರನ್ನು ಕ್ಷೇತ್ರ ಸೇವೆಗಾಗಿ ತಯಾರಿಸಲು ನೆರವು ನೀಡಬಾರದೇಕೆ? ಕ್ರಮವಾಗಿ ಕ್ಷೇತ್ರಸೇವೆಗಾಗಿರುವ ಕೂಟಗಳನ್ನು ಹಾಜರಾಗುವ ಮತ್ತು ಅನಂತರ ಅಧಿಕ ಅನುಭವಸ್ಥ ಪ್ರಚಾರಕರೊಂದಿಗೆ ಕೆಲಸಮಾಡುವ ಮೂಲಕ ಕೂಡ ಅವರು ಬಹಳಷ್ಟು ಸಹಾಯವನ್ನು ಪಡೆಯಬಲ್ಲರು. ಒಂದು ಗುಂಪಿನೊಂದಿಗೆ ಕೆಲಸಮಾಡುವುದು ಅಧಿಕ ಬಲವರ್ಧಕವಾಗಿರಬಲ್ಲದು.
7 ನಾವು ಮನೆಯಿಂದ ಮನೆಗೆ ಹೋಗುವಾಗ, ನಮ್ಮ ದೇವರಾದ ಯೆಹೋವನನ್ನು ಪ್ರತಿನಿಧಿಸುವ ಸುಯೋಗ ನಮಗಿದೆ. ನಿಜವಾಗಿಯೂ ದೇವರ ಜೊತೆ ಕೆಲಸಗಾರರಾಗಿರುವದಕ್ಕಿಂತ ಒಬ್ಬನಿಗೆ ಇನ್ಯಾವ ಹೆಚ್ಚಿನ ಗೌರವ ಇರಬಲ್ಲದು? (1 ಕೊರಿಂಥ 3:9) ನಾವು ಆತನ ಮೇಲೆ ಆತುಕೊಂಡರೆ, ಆತನ ಆತ್ಮವು ಮನೆಯಿಂದ ಮನೆಯ ಶುಶ್ರೂಷೆಯ ಪಂಥಾಹ್ವಾನವನ್ನು ಎದುರಿಸಲು ನಮಗೆ ನೆರವು ನೀಡುವುದು.—2 ಕೊರಿಂಥ 3:5.