ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಅಭ್ಯಾಸಿಸುವುದು
1 ಮೇ 10ರ ವಾರದಲ್ಲಿ ನಾವು ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ನಮ್ಮ ಸಭಾ ಪುಸ್ತಕ ಅಧ್ಯಯನಗಳಲ್ಲಿ ನಾವು ಅಭ್ಯಾಸ ಮಾಡಲು ಆರಂಭಿಸಲಿದ್ದೇವೆ. ಯೇಸು ಕ್ರಿಸ್ತನ ಜೀವನ ಮತ್ತು ಶುಶ್ರೂಷೆಯನ್ನು ಪುನರ್ವಿಮರ್ಶಿಸುವುದು ಎಂಥ ಆನಂದವಾಗಿರಲಿರುವುದು! ನಾವು ಹಿಂದೆ ಅಭ್ಯಾಸಿಸಿದ ಇತರ ಪುಸ್ತಕಗಳಿಗಿಂತ ಈ ಪುಸ್ತಕವು ಕೊಂಚಮಟ್ಟಿಗೆ ಭಿನ್ನವಾಗಿ ವಿನ್ಯಾಸಿಸಲ್ಪಟ್ಟಿರುವುದರಿಂದ, ಕೆಲವು ಮಾರ್ಗದರ್ಶಿಗಳು ಸಹಾಯಕಾರಿಯಾಗಿರುವುವು.
2 ಪುಸ್ತಕದಲ್ಲಿ ಪುಟ ಸಂಖ್ಯೆಗಳು ಇಲ್ಲದಿರುವುದರಿಂದ ನಮ್ಮ ರಾಜ್ಯದ ಸೇವೆ ಯಲ್ಲಿ ಪ್ರಕಾಶಿತವಾದ ಕಾರ್ಯತಖ್ತೆಯು ಅಭ್ಯಾಸಿಸಲಿಕ್ಕಿರುವ ಅಧ್ಯಾಯಗಳ ಪಟ್ಟಿಯಾಗಿದ್ದು, ಪ್ರತಿವಾರ ಸಾಮಾನ್ಯವಾಗಿ ಮೂರು ಯಾ ನಾಲ್ಕು ಇರುವವು. ಅಧ್ಯಾಯಗಳು 35, 111, ಮತ್ತು 116 ಉದ್ದವಾಗಿದ್ದು, ಪ್ರತಿಯೊಂದನ್ನು ಎರಡು ಭಾಗಗಳಾಗಿ ಮಾಡಲಾಗುವುದು. ಇಡೀ ಅಧ್ಯಾಯವನ್ನು ಅರ್ಹನಾದ ಸಹೋದರನು ಓದಿದ ನಂತರ, (ಯಾ, ಅಧ್ಯಾಯ 35, 111, ಮತ್ತು 116 ರಲ್ಲಿ ಉಪಶಿರೋಲೇಖದ ತನಕ), ಅಧ್ಯಯನ ನಿರ್ವಾಹಕನು ಓದಿದ ಅಧ್ಯಾಯ ಯಾ ವಿಭಾಗಕ್ಕೆ ಅನುಗುಣವಾದ ಅಧ್ಯಾಯದ ಕೊನೆಯಲ್ಲಿರುವ ಪ್ರಶ್ನೆಗಳನ್ನು ಕೇಳುವನು. ಉತ್ತರಗಳು ಯಾವಾಗಲೂ ಅಧ್ಯಾಯದಲ್ಲಿರುವಂತೆ ಅನುಕ್ರಮಿಕವಾಗಿ ಇರುವುದಿಲ್ಲ. ಸಂಕ್ಷಿಪ್ತ ಮತ್ತು ಮೊನಚಾದ ಹೇಳಿಕೆಗಳು ಪಾಠದಲ್ಲಿರುವ ವಿಷಯದ ಮೇಲಾಧಾರಿತವಾಗಿರತಕ್ಕದ್ದು.
3 ಅನಂತರ, ಸಮಯ ಅನುಮತಿಸಿದಂತೆ, ಅಧ್ಯಾಯದ ಕೊನೆಯಲ್ಲಿ ನಮೂದಿಸಿರುವ ಎಲ್ಲಾ ಶಾಸ್ತ್ರವಚನಗಳನ್ನು ಓದತಕ್ಕದ್ದು. ಹಲವಾರು ಪ್ರಚಾರಕರು ಓದುವಿಕೆಯಲ್ಲಿ ಪಾಲಿಗರಾಗಲು ಸಾಧ್ಯವಾಗುವಂತೆ ಶಾಸ್ತ್ರವಚನಗಳ ಉದ್ದವಾದ ಉಲ್ಲೇಖಗಳನ್ನು ಚಿಕ್ಕ ವಿಭಾಗಗಳಾಗಿ ವಿಭಜಿಸತಕ್ಕದ್ದು, ಮತ್ತು ಅನಂತರ ಓದಿರುವುದರ ಮೇಲೆ ಹೇಳಿಕೆಗಳನ್ನು ನೀಡಸಾಧ್ಯವಿದೆ. ಪುಸ್ತಕದಲ್ಲಿ ಯಾವುದು ಅತ್ಯುಜ್ಜಲ್ವವಾಗಿ ಕೊಡಲ್ಪಟ್ಟಿರುವುದೋ ಅವು ನಾವು ಓದಿದ ಶಾಸ್ತ್ರವಚನಗಳಿಗೆ ಹೇಗೆ ಸಂಬಂಧಿಸಿವೆ ಎಂದು ನಿರ್ವಾಹಕನಿಂದ ತಯಾರಿಸಲ್ಪಟ್ಟ ಚೂಪಾದ ಪ್ರಶ್ನೆಗಳು ಅರ್ಥಭರಿತ ಹೇಳಿಕೆಗಳನ್ನು ಹೊರಪಡಿಸಲು ನೆರವಾಗುವವು. ಎಲ್ಲಾ ಪ್ರಶ್ನೆಗಳು ಮತ್ತು ಹೇಳಿಕೆಗಳು ಯೇಸು ಕ್ರಿಸ್ತನ, ಅವನ ಜೀವನ ನಡಾವಳಿಯ, ಮತ್ತು ಅವನ ಬೋಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡತಕ್ಕದ್ದು.
4 ಮಹಾನ್ ಪುರುಷ ಪುಸ್ತಕವು ಯೇಸುವಿನ ಜೀವಿತವನ್ನು ಕಾಲಾನುಕ್ರಮವಾಗಿ ಪರಿಗಣಿಸುತ್ತದೆ. ಘಟನೆಗಳನ್ನು ದೃಗ್ಗೋಚರವಾಗಿ ಮಾಡುವುದು ಮತ್ತು ಅವು ಎಲ್ಲಿ ಸಂಭವಿಸಿದವು ಎಂದು ಮನಸ್ಸಿನಲ್ಲಿ ನಾಟಿಸುವುದು ಅವುಗಳನ್ನು ನೆನಪಿನಲ್ಲಿಡಲು ಒಂದು ನಿಜ ಸಹಾಯವಾಗಿರಸಾಧ್ಯವಿದೆ. ಆದಕಾರಣ, ಸವರ್ಣದ ಚಿತ್ರಣಗಳನ್ನು ಪರಿಗಣಿಸುವುದನ್ನು ಮತ್ತು ಪೀಠಿಕೆಯನ್ನು ಹಿಂಬಾಲಿಸಿ, ಪುಸ್ತಕದ ಆರಂಭದಲ್ಲಿ ಕಂಡುಬರುವ ಭೂಪಟವನ್ನು ಆಗಿಂದಾಗ್ಗೆ ಪರಾಮರ್ಶಿಸುವುದನ್ನು ಖಚಿತಮಾಡಿಕೊಳ್ಳಿರಿ.
5 ಮೊದಲನೆಯ ವಾರದಲ್ಲಿ ಪುಸ್ತಕದ ಪೀಠಿಕೆಯನ್ನು ಪರಿಗಣಿಸಲಾಗುವುದು. ಉಪಶೀರ್ಷಿಕೆಯ ಕೆಳಗೆ ಕೊಡಲ್ಪಟ್ಟ ಎಲ್ಲಾ ಪ್ಯಾರಗ್ರಾಫ್ಗಳನ್ನು ಓದಿದ ನಂತರ, ನಿರ್ವಾಹಕನು ಅವನು ತಯಾರುಗೊಳಿಸಿದ ತಕ್ಕದಾದ ಪ್ರಶ್ನೆಗಳನ್ನು ಕೇಳುವನು. ಈ ಆರಂಭಿಕ ಪರಿಗಣನೆಯು ಹಿಂಬಾಲಿಸುವ ಅಧ್ಯಯನಗಳಿಗಾಗಿ ವೇದಿಕೆಯನ್ನು ಅಣಿಗೊಳಿಸುವುವು. ಹಾಜರಾಗುವವರೆಲ್ಲರ ತಯಾರಿಯ ಮೇಲೆ ಸಮಾಚಾರವನ್ನು ಆವರಿಸುವುದರ ಯಶಸ್ಸಿನ ಮಟ್ಟವು ಬಹಳ ಮಟ್ಟಿಗೆ ಹೊಂದಿಕೊಂಡಿರುವುದು. ನಮ್ಮ ಕರ್ತನೂ, ರಕ್ಷಕನೂ ಆದ ಯೇಸು ಕ್ರಿಸ್ತನು, ಹಾಗೂ ಜೀವಿಸಿದವರಲ್ಲಿ ಮಹಾನ್ ಪುರುಷನ ಸುಪರಿಚಯವುಳ್ಳವರಾಗಲು ಗುಂಪಿಗೆ ಸಹಾಯವಾಗುವಂತೆ, ವಿಶೇಷವಾಗಿ ನಿರ್ವಾಹಕನು ಪ್ರತಿವಾರ ಒಳ್ಳೇ ರೀತಿಯಲ್ಲಿ ತಯಾರಿಸತಕ್ಕದ್ದು.