ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/93 ಪು. 3
  • ನೀವು ಅದನ್ನು ಮಾಡಬಲ್ಲಿರೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಅದನ್ನು ಮಾಡಬಲ್ಲಿರೊ?
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಹೊಸ ಸೇವಾ ವರ್ಷಕ್ಕೆ ಯೋಗ್ಯ ಗುರಿ
    2007 ನಮ್ಮ ರಾಜ್ಯದ ಸೇವೆ
  • ಬೇಕಾಗಿದ್ದಾರೆ—4,000 ಆಕ್ಸಿಲಿಯರಿ ಪಯನೀಯರರು
    1997 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಪೆಟ್ಟಿಗೆ
    1993 ನಮ್ಮ ರಾಜ್ಯದ ಸೇವೆ
  • ಯೆಹೋವನ ಗುಣಾತಿಶಯಗಳನ್ನು ಪ್ರಚಾರಮಾಡಿರಿ
    2007 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 7/93 ಪು. 3

ನೀವು ಅದನ್ನು ಮಾಡಬಲ್ಲಿರೊ?

1 ‘ಏನನ್ನು?’ ಎಂದು ನೀವು ಕೇಳುತ್ತೀರಿ. ಜ್ಞಾನೋಕ್ತಿ 3:27 ಉತ್ತರಿಸುವುದು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.” ನಿಮ್ಮ ಚಟುವಟಿಕೆಗಳನ್ನು ವಿಸ್ತರಿಸುವುದು ಮತ್ತು ಸಹಾಯಕ ಯಾ ಕ್ರಮದ ಪಯನೀಯರ್‌ ಸೇವೆಯಲ್ಲಿ ಭಾಗವಹಿಸುವುದು ‘ನಿಮ್ಮ ಕೈಯಲ್ಲಿ ಇದೆಯೊ?’ ನೀವು ಅದನ್ನು ಮಾಡಬಲ್ಲಿರೊ?

2 ಭಾರತದಲ್ಲಿ, 8 ಪ್ರಚಾರಕರಿಗೆ ಒಬ್ಬ ಪಯನೀಯರರಂತೆ, ಸರಾಸರಿ 1,501 ವಿಶೇಷ, ಕ್ರಮದ ಮತ್ತು ಸಹಾಯಕ ಪಯನೀಯರರು ಇದ್ದಾರೆಂದು 1993 ರ ವರ್ಷ ಪುಸ್ತಕ ದಲ್ಲಿ ಓದುವುದು ಎಷ್ಟು ಉತ್ತೇಜಕವಾಗಿತ್ತು. ಹೌದು, ಕಳೆದ ವರ್ಷ 100 ಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳು ಕ್ರಮದ ಪಯನೀಯರ್‌ ಸೇವೆಯನ್ನು ಪ್ರವೇಶಿಸಿದರು. ಸುಮಾರು ಪ್ರತಿ ಮೂರು ದಿನಗಳಿಗೆ, ತನ್ನ ಪರಿಸ್ಥಿತಿಗಳನ್ನು ಪರೀಕ್ಷಿಸಿ ತಾನು ಶುಶ್ರೂಷೆಯಲ್ಲಿ ಹೆಚ್ಚಿನದನ್ನು ಮಾಡಬಲ್ಲನೆಂದು ಕಂಡುಕೊಂಡ ಒಬ್ಬ ಪ್ರಚಾರಕನಿದ್ದನೆಂದು ಇದರ ಒಟ್ಟಾರ್ಥ.

3 ಸಹಾಯಕ ಪಯನೀಯರಿಂಗ್‌ ಸೇವೆಯು ಇತರರಿಗೆ ಉಪಕಾರ ಮಾಡುವ ಒಂದು ಹಾದಿಯಾಗಿದೆ. ಕಳೆದ ವರ್ಷ 1,198 ಸಹಾಯಕ ಪಯನೀಯರರ ಉಚ್ಚಾಂಕವಿತ್ತು. ಅದು ಅತ್ಯುತ್ತಮವಾದ ಸಂಗತಿಯಾಗಿದೆ. ವರ್ಷದ ಉದ್ದಕ್ಕೂ ಅನೇಕ ಬಾರಿ ಸಹಾಯಕ ಪಯನೀಯರ್‌ ಸೇವೆ ಮಾಡುವ ಮಾರ್ಗಗಳನ್ನು ಅನೇಕ ಪ್ರಚಾರಕರು ಹುಡುಕುತ್ತಿದ್ದಾರೆ.

4 ನೀವು “ಅದನ್ನು ಮಾಡ” ಸಾಧ್ಯವೊ ಇಲ್ಲವೊ ಎಂದು ನಿರ್ಧರಿಸಲು, ನೀವು ಮೊದಲು ನಿಮ್ಮ ಹೃತ್ಪೂರ್ವಕವಾದ ಬಯಕೆಯನ್ನು ಪರಿಗಣಿಸಬೇಕು. (ಮತ್ತಾ. 22:37-39) ಅಪೊಸ್ತಲ ಕೃತ್ಯಗಳು 20:35 (NW) ಹೇಳುವುದು: “ತೆಗೆದುಕೊಳ್ಳುವದಕ್ಕಿಂತ ಕೊಡುವುದರಲ್ಲಿಯೇ ಹೆಚ್ಚಿನ ಸಂತೋಷವಿದೆ.” ನಿಸ್ಸಂದೇಹವಾಗಿ, ಆತ್ಮಿಕ ಸಹಾಯವನ್ನು ಯಾರು ಹೃದಯದಿಂದ ಧಾರಾಳವಾಗಿ ಕೊಡುತ್ತಾರೊ ಅವರಿಗೆ ಯೋಗ್ಯವಾದ ಬಯಕೆ ಇರುತ್ತದೆ. ಒಬ್ಬ ಸಫಲ ಪ್ರಚಾರಕ ಯಾ ಪಯನೀಯರರಾಗಿರಲು, ಆ ಬಯಕೆಯು ಅವಶ್ಯವಾಗಿದೆ.

5 ಎರಡನೆಯದಾಗಿ, ನಿಮ್ಮ ಸದ್ಯದ ಪರಿಸ್ಥಿತಿಗಳನ್ನು ಪರಿಗಣಿಸಿರಿ. ಪೂರ್ಣ ಸಮಯ ಸೇವೆ ಮಾಡಲು ನಿಮ್ಮ ದೈನಿಕ ಕಾರ್ಯಗಳಲ್ಲಿ ಹೊಂದಾಣಿಕೆಗಳನ್ನು ನೀವು ಮಾಡಬಲ್ಲಿರೊ? ಪ್ರತಿಯೊಬ್ಬರೂ ಮಾಡಲು ಸಾಧ್ಯವಿಲ್ಲ. ಆದರೆ ಪ್ರಾರ್ಥನಾಪೂರ್ವಕ ಸ್ವಪರೀಕ್ಷೆಯ ಅನಂತರ, ಪ್ರತಿ ವರ್ಷ ಸಾವಿರಾರು ಜನರು ‘ಅದನ್ನು ಮಾಡುವ’ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. (ಕೊಲೊ. 4:5; w77 ಪು. 701) ಉದಾಹರಣೆಗಾಗಿ, ಕೆಲವು ಕುಟುಂಬಗಳು ಪ್ರತ್ಯೇಕ ತಿಂಗಳುಗಳನ್ನು ಕೆಲವು ಯಾ ಕುಟುಂಬದ ಎಲ್ಲ ಸದಸ್ಯರು ಸಹಾಯಕ ಪಯನೀಯರ್‌ ಸೇವೆ ಮಾಡಲು ಆರಿಸುತ್ತವೆ. ಬೇರೆ ಕುಟುಂಬಗಳು ತಮ್ಮಲ್ಲಿ ಒಬ್ಬ ಸದಸ್ಯನನ್ನು ಕ್ರಮದ ಪಯನೀಯರನಂತೆ ಸೇವೆ ಮಾಡಲು ಬಿಡುತ್ತವೆ. ನಿಮ್ಮ ಕುಟುಂಬವು ಈ ಸಾಧ್ಯತೆಗಳಿಗೆಲ್ಲ ಪರಿಗಣನೆ ಕೊಟ್ಟಿದೆಯೊ?—ಜ್ಞಾನೋಕ್ತಿ 11:25 ನೋಡಿ.

6 ನೀವು ಒಬ್ಬ ಪ್ರಚಾರಕರಂತೆ ಯಾ ಒಬ್ಬ ಪಯನೀಯರರಂತೆ ಸೇವೆ ಸಲ್ಲಿಸಿದರೂ, ಇತರರು ಸತ್ಯವನ್ನು ತಿಳಿಯುವಂತೆ ಸಹಾಯ ಮಾಡುವುದೇ ನಿಜವಾದ ತೃಪ್ತಿಯನ್ನು ತರುತ್ತದೆ. ನಿಜವಾದ ಸಂತೋಷ ಇತರರಿಗೆ ಒಳ್ಳೆಯದನ್ನು ಮಾಡುವದರಿಂದ ಬರುತ್ತದೆ ಎಂದು ನಮಗೆ ಗೊತ್ತಿದೆ, ವಿಶೇಷವಾಗಿ ಅದು ‘ನಿಮ್ಮ ಕೈಲಾಗುವ’ ಸಂದರ್ಭವಿರುವಲ್ಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ