ದೇವರ ಕುಮಾರನಾದ ಯೇಸು ಕ್ರಿಸ್ತನ ಕುರಿತು ಇತರರು ಕಲಿಯುವಂತೆ ಸಹಾಯ ಮಾಡಿರಿ
1 ಕ್ರೈಸ್ತರೆಂದು ಹೇಳಿಕೊಳ್ಳುವವರು ಮತ್ತು ಇತರರು, ವರ್ಷದ ಬೇರೆ ಯಾವುದೇ ಸಮಯಕ್ಕಿಂತಲೂ ಹೆಚ್ಚಾಗಿ ಯೇಸುವಿನ ಕುರಿತು ಯೋಚನೆ ಮಾಡುವ ತಿಂಗಳು ದಶಂಬರ ತಿಂಗಳಾಗಿದೆ. ಆದುದರಿಂದ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಪ್ರದರ್ಶಿಸಲು ಇದು ಉತ್ತಮವಾದ ತಿಂಗಳಾಗಿದೆ. ಇದು ಅಮೂಲ್ಯವಾದ ಪ್ರಕಾಶನವಾಗಿರುವುದರಿಂದ, ಶುಶ್ರೂಷೆಯಲ್ಲಿ ಸೂಕ್ತವಾದಾಗ ಅದನ್ನು ನೀಡಲು ಮತ್ತು ಅವರು ಅದರಿಂದ ಪ್ರಯೋಜನ ಪಡೆಯುವಂತೆ ಮನೆಯವರೊಂದಿಗೆ ಅದನ್ನು ನೀಡುವ ಎಲ್ಲಾ ಪ್ರಯತ್ನವನ್ನು ನಾವು ಮಾಡಬೇಕು. ಅದನ್ನು ನಾವು ಹೇಗೆ ಮಾಡಬಲ್ಲೆವು?
2 ಯೇಸುವಿನ ಮೇಲೆ ಗಮನವನ್ನು ಕೇಂದ್ರೀಕರಿಸುವ ಒಂದು ಬೈಬಲ್ ಆಧಾರಿತ ಸಂಭಾಷಣೆಯಲ್ಲಿ ನೇರವಾಗಿ ತೊಡಗಲು ಪ್ರಯತ್ನಿಸಿರಿ.
ಮನೆಯವನನ್ನು ವಂದಿಸಿದ ತರುವಾಯ, ಈ ರೀತಿಯಾಗಿ ಇನ್ನೇನಾದರೂ ನೀವು ಹೇಳಬಹುದು:
▪ “ತಮ್ಮ ಬೈಬಲಿನಲ್ಲಿ ಅನಂತವಾಗಿ ಜೀವಿಸುವುದರ ಕುರಿತು ಓದುವಾಗ, ಅವರು ಏನು ನೆನಸುತ್ತಾರೆಂದು ನಾವು ಇಂದು ನಮ್ಮ ನೆರೆಯವರನ್ನು ಕೇಳುತ್ತಿದ್ದೇವೆ. [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ಅದು ವಿಶೇಷವಾದ ಆಸಕ್ತಿಯ ವಿಷಯವಾಗಿದೆ ಯಾಕಂದರೆ ಬೈಬಲ್ ಆ ಸಾಧ್ಯತೆಯ ಕುರಿತು ಸುಮಾರು 40 ಬಾರಿ ಮಾತಾಡುತ್ತದೆ. ಅಂತಹ ಜೀವಿತವು ನಮಗೆ ಯಾವ ಅರ್ಥದಲ್ಲಿರಬಹುದು? ಪ್ರಕಟನೆ 21:4 ಏನನ್ನು ಹೇಳುತ್ತದೆ ಎಂದು ಗಮನಿಸಿರಿ. [ಓದಿರಿ.] ಏನನ್ನು ವಾಗ್ದಾನಿಸಲಾಗಿದೆ ಎಂಬುದನ್ನು ನೀವು ಗಮನಿಸಿದಿರೊ? [ಪ್ರತಿಕ್ರಿಯೆಗಾಗಿ ಅನುಮತಿ ನೀಡಿರಿ.] ನಿತ್ಯಜೀವವನ್ನು ನಾವು ಹೇಗೆ ಪಡೆಯಬಲ್ಲೆವು?” ಯೋಹಾನ 17:3ನ್ನು ಓದಿರಿ, ಮತ್ತು ದೇವರು ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದರ ಅಗತ್ಯವನ್ನು ಎತ್ತಿತೋರಿಸಿರಿ. ಆಮೇಲೆ ಅವನ ಆಸಕ್ತಿಯನ್ನು ಇನ್ನೂ ಕೆರಳಿಸುವ ಸಲುವಾಗಿ ಪೀಠಿಕೆಯಲ್ಲಿರುವ ಉಪಶೀರ್ಷಿಕೆಗಳನ್ನು ಉಪಯೋಗಿಸುತ್ತಾ ಮತ್ತು ಅದನ್ನು ರೂ. 40ರ ಕಾಣಿಕೆಗೆ ನೀಡುತ್ತಾ, ಮನೆಯವನಿಗೆ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ತೋರಿಸಿರಿ.
3 ನಿರ್ದಿಷ್ಟ ಮನೆಯವನಿಗೆ ಈ ಪ್ರಸ್ತಾವ ಮತ್ತು ಪ್ರಕಾಶನವು ಯೋಗ್ಯವಲ್ಲ ಎಂದು ನಿಮಗೆ ಅನಿಸಿದರೆ, ಕಾವಲಿನಬುರುಜು ಮತ್ತು ಎಚ್ಚರ!ದ ಪ್ರಚಲಿತ ಸಂಚಿಕೆಗಳನ್ನು ನೀವು ನೀಡಬಹುದು ಅಥವಾ ಈ ಲೋಕವು ಪಾರಾಗುವುದೊ? ಎಂಬ ಕಿರುಹೊತ್ತಗೆಯನ್ನು ಬಿಟ್ಟು ಬರಬಹುದು. ನೀಡಲಾದ ಪ್ರಕಾಶನದಲ್ಲಿನ ಒಂದು ಯಾ ಎರಡು ನಿರ್ದಿಷ್ಟವಾದ ಅಂಶಗಳ ಕಡೆಗೆ ಗಮನವನ್ನು ಸೆಳೆಯಿರಿ. ವಿಷಯವನ್ನು ಅವನೊಂದಿಗೆ ಚರ್ಚಿಸುವುದನ್ನು ಮುಂದುವರಿಸಲು ಅನುಕೂಲವಾದ ಸಮಯದಲ್ಲಿ ಹಿಂದಿರುಗುವ ಅನುಮತಿ ಪಡೆಯಿರಿ.
4 ಮನೆಯವನು ಕಾರ್ಯಮಗ್ನನಾಗಿ ತೋರಿದರೆ, ಮೇಲಿನ ನಿರೂಪಣೆಯನ್ನು ಕಡಿಮೆಗೊಳಿಸುವುದು ವಿವೇಕಪ್ರದವಾಗಿರಬಹುದು. ಮುಂದಿನ ನಿರೂಪಣೆಯನ್ನು ಉಪಯೋಗಿಸುವುದು ಸರಳವೆಂದು ಹೊಸ ಪ್ರಚಾರಕರೂ ಕೂಡ ಕಂಡುಕೊಳ್ಳಬಹುದು.
ನಮ್ಮನ್ನು ಪರಿಚಯಿಸಿಕೊಂಡ ಬಳಿಕ, ನಾವು ಹೀಗೆ ಹೇಳಬಹುದು:
▪ “ತಮ್ಮ ಬೈಬಲಿನಲ್ಲಿ ಅನಂತಜೀವನವನ್ನು ಪಡೆಯುವುದರ ಕುರಿತು ಓದುವಾಗ, ಅವರು ಏನು ನೆನಸುತ್ತಾರೆಂದು ನಾವು ಇಂದು ನಮ್ಮ ನೆರೆಯವರನ್ನು ಕೇಳುತ್ತಿದ್ದೇವೆ. ಉದಾಹರಣೆಗೆ, ಯೋಹಾನ 17:3 ರಲ್ಲಿ ಯೇಸು ಏನು ಹೇಳಿದನೆಂಬುದನ್ನು ಗಮನಿಸಿರಿ. [ಓದಿರಿ.] ಯೇಸು ಕ್ರಿಸ್ತನ ಕುರಿತು ಮತ್ತು ಅವನು ಏನನ್ನು ಕಲಿಸಿದನು ಎಂಬುದರ ಕುರಿತು ಜನರು ಹೆಚ್ಚನ್ನು ಕಲಿಯುವಂತೆ ಸಹಾಯ ಮಾಡಲು, ಈ ಪುಸ್ತಕವು ಪ್ರಕಟಿಸಲಾಗಿದೆ.” ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಕೆಲವೊಂದು ಸುಂದರವಾದ ದೃಷ್ಟಾಂತಗಳು ಇರುವ ಕಡೆಗೆ ತೆರೆಯಿರಿ. ಪೀಠಿಕೆಗೆ ತೆರಳಿ, “ಅವನ ಕುರಿತು ಕಲಿಯುವದರಿಂದ ಪ್ರಯೋಜನ” ಎಂಬ ಉಪಶೀರ್ಷಿಕೆಯ ಕೆಳಗೆ ಇರುವ ಎರಡನೆಯ ಪ್ಯಾರಗ್ರಾಫನ್ನು ಓದಿರಿ. ಆಮೇಲೆ ಪ್ರಕಾಶನವನ್ನು ಅವನಿಗೆ ನೀಡಿರಿ.
5 ಪುಸ್ತಕವನ್ನು ನೀವು ಕೊಟ್ಟರೆ, “ಪರಲೋಕದಿಂದ ಸಂದೇಶಗಳು” ಎಂಬ ಮೊದಲನೆಯ ಅಧ್ಯಾಯವನ್ನು ಆ ಸಮಯದಲ್ಲಿ ಅಥವಾ ಕೆಲವು ದಿನಗಳಾನಂತರ ಒಂದು ಪುನಃ ಸಂದರ್ಶನದಲ್ಲಿ ಚರ್ಚಿಸಲು ಕೇಳಿಕೊಳ್ಳುವ ಮೂಲಕ ಒಂದು ಬೈಬಲ್ ಅಧ್ಯಯನಕ್ಕಾಗಿ ತಳಪಾಯವನ್ನು ಹಾಕಿರಿ. ಮುಂದಿನ ಭೇಟಿಯಲ್ಲಿ ವ್ಯಯಿಸಬೇಕಾದ ಸಮಯದ ಒಂದು ನಿರ್ದಿಷ್ಟ ಅವಧಿಯನ್ನು ಮನೆಯವನಿಗೆ ತಿಳಿಸುವ ಬದಲು, ಕೇವಲ ಕೆಲವೇ ನಿಮಿಷಗಳಲ್ಲಿ, ದೇವರ ವಾಕ್ಯವಾದ ಬೈಬಲಿನಿಂದ ಯೇಸು ಕ್ರಿಸ್ತನ ಕುರಿತು ಹೆಚ್ಚು ಆಸಕ್ತಿಕರ ಮಾಹಿತಿಯನ್ನು ಅವನು ಕಲಿಯಬಲ್ಲನೆಂದು ಹೇಳಿರಿ.
6 ನಿತ್ಯಜೀವಕ್ಕೆ ನಡೆಸುವ ದಾರಿಯ ಕಡೆಗೆ ಇತರರು ಬರುವಂತೆ ಸಹಾಯ ಮಾಡುವ ಸಲುವಾಗಿ, ದೇವರ ಮಗನಾದ ಯೇಸು ಕ್ರಿಸ್ತನ ಕುರಿತಾದ ಸತ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಈ ಲೌಕಿಕ ರಜಾ ಕಾಲವನ್ನು ನಾವೆಲ್ಲರೂ ಉಪಯೋಗಿಸೋಣ.—ಮತ್ತಾ. 7:14.