ನಿಮ್ಮ ಮೊದಲ ಭೇಟಿಯಲ್ಲೇ ತಳಪಾಯವನ್ನು ಹಾಕಿರಿ
1 ಮೊದಲ ಭೇಟಿಯಲ್ಲಿ ನಾವು ಯೋಗ್ಯವಾದ ತಳಪಾಯವನ್ನು ಹಾಕುವಲ್ಲಿ ಪರಿಣಾಮಕಾರಿ ಪುನರ್ ಭೇಟಿಗಳನ್ನು ಮಾಡುವುದು ಸುಲಭವಾಗುತ್ತದೆ. ನಾವದನ್ನು ಮಾಡುವಂತೆ ರೀಸನಿಂಗ್ ಪುಸ್ತಕವು ನಮಗೆ ಸಹಾಯಮಾಡಬಹುದು.
2 ಮುಂದಿನ ನೀಡುವಿಕೆಯು ರೀಸನಿಂಗ್ ಪುಸ್ತಕದ ಪುಟ 10 ರಲ್ಲಿರುವ “ಬೈಬಲ್⁄ ದೇವರು” ಎಂಬ ಶಿರೋನಾಮದ ಕೆಳಗೆ, ಎರಡನೇ ಪೀಠಿಕೆಯ ಮೇಲೆ ಆಧರಿಸಿರುವುದು.
ಸ್ನೇಹಪರ ಅಭಿನಂದನೆಯ ಬಳಿಕ, ಹೇಳಿರಿ:
▪ “ಏರುತ್ತಿರುವ ಪ್ರತಿನಿತ್ಯದ ಸಮಸ್ಯೆಗಳಿಗೆ ವ್ಯಾವಹಾರಿಕ ಉತ್ತರಗಳನ್ನು ಎಲ್ಲಿ ಕಂಡು ಹಿಡಿಯುವುದು ಎಂದು ಇಂದು ಹೆಚ್ಚು ಹೆಚ್ಚು ಜನರು ಅನಿಶ್ಚಿತ ಭಾವನೆಯುಳ್ಳವರಾಗಿರುವುದನ್ನು ನಾವು ಕಂಡುಕೊಳ್ಳುತ್ತೇವೆ. ಅದು ನಿಜವೆಂದು ನೀವು ಕಂಡುಕೊಂಡಿರುವಿರೋ? [ಪ್ರತಿವರ್ತನೆಗೆ ಅನುಮತಿಸಿರಿ.] ಸಹಾಯಕ್ಕಾಗಿ ಬೈಬಲಿನ ಕಡೆಗೆ ಜನರು ನೋಡುವಂಥಾದ್ದಾಗಿತ್ತು. ಆದರೆ ಈಗ ಅನೇಕರು ತಮಗೆ ಸಂಶಯವಿದೆ ಎಂದು ಹೇಳುತ್ತಾರೆ. ಬೈಬಲಿನ ಬಗ್ಗೆ ನಿಮಗೆ ಹೇಗನಿಸುತ್ತದೆ?” ಮನೆಯವರು ಅದರ ಪ್ರಾಮಾಣ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸುವದಾದರೆ, ನೀವು ಬೈಬಲನ್ನು ನಂಬಶಕ್ತರೆಂಬುಂದಕ್ಕೆ ಕಾರಣವೆಂಬ ಟ್ರ್ಯಾಕ್ಟನ್ನು ಹೊರತೆಗೆಯಿರಿ ಮತ್ತು 2 ನೇ ಪುಟದಲ್ಲಿನ ಎರಡು ಮತ್ತು ಮೂರು ಪ್ಯಾರಗ್ರಾಫನ್ನು ಓದಿರಿ. ಒಂದು ವೇಳೆ ಮನೆಯವರು ಬೈಬಲು ದೇವರ ವಾಕ್ಯವೆಂದು ಒಪ್ಪುವುದಾದರೆ, ಟ್ರ್ಯಾಕ್ಟ್ನ 2 ನೇ ಪುಟದ ಎರಡನೇ ಪ್ಯಾರಗ್ರಾಫಿನಲ್ಲಿನ ವಚನಗಳನ್ನು ತೆರೆದು ಓದಿರಿ, ಮತ್ತು ಇವುಗಳನ್ನು ಅವರೊಂದಿಗೆ ಚುಟುಕಾಗಿ ಚರ್ಚಿಸಿರಿ.
3 ನಿಮ್ಮ ಟೆರಿಟೊರಿಯಲ್ಲಿ ಅವಿಶ್ವಾಸವನ್ನು ವ್ಯಕ್ತಪಡಿಸುವವರು ಅನೇಕರು ಇರುವುದಾದರೆ, ಅವರ ಅಭಿರುಚಿಯನ್ನು ಕೆರಳಿಸಲು ರೀಸನಿಂಗ್ ಪುಸ್ತಕದ 10 ನೆಯ ಪುಟದಲ್ಲಿನ ಐದನೇ ಪೀಠಿಕೆಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿರಿ.
ನೀವು ಹೀಗನ್ನಬಹುದು:
▪ “ಇಂದು ಲೋಕದೊಳಗಿನ ಎಲ್ಲಾ ಹೋರಾಟಗಳ ದೃಷ್ಟಿಯಲ್ಲಿ, ಅನೇಕ ಯಥಾರ್ಥ ಜನರಿಗೆ ದೇವರಲ್ಲಿ ನಂಬಿಕೆಯನ್ನಿಡಲು ಕಷ್ಟವೆಂದು ತೋಚುತ್ತದೆ. ಅಥವಾ ಒಂದು ವೇಳೆ ಅವರು ಆತನಲ್ಲಿ ನಂಬಿಕೆಯನ್ನಿಡುವುದಾದರೂ, ನಾವು ಎದುರಿಸುವ ಸಮಸ್ಯೆಗಳನ್ನು ಆತನು ಬಗೆಹರಿಸಬಹುದೆಂದು ಅವರು ನಂಬುವುದಿಲ್ಲ. ನಿಮಗೆ ಹೇಗನಿಸುತ್ತದೆ? [ಪ್ರತಿವರ್ತನೆಗೆ ಅನುಮತಿಸಿರಿ.] ಮನುಷ್ಯ, ವಿಜ್ಞಾನ, ಮತ್ತು ಬೈಬಲಿನ ಬಗ್ಗೆ ಈ ಟ್ರ್ಯಾಕ್ಟ್ ಏನನ್ನಬಯಸುತ್ತದೆಂದು ಗಮನಿಸಿ.” ನೀವು ಬೈಬಲನ್ನು ನಂಬಶಕ್ತರೆಂಬುದಕ್ಕೆ ಕಾರಣವೆಂಬ ಟ್ರ್ಯಾಕ್ಟ್ನ 3 ನೇ ಪುಟದಲ್ಲಿನ ಐದನೇ ಪ್ಯಾರಗ್ರಾಫನ್ನು ಓದಲಾರಂಭಿಸಿರಿ.
4 ನಿಮ್ಮ ಮುಂದಿನ ಭೇಟಿಯನ್ನು ನಿರ್ಮಿಸಲು ಟ್ರ್ಯಾಕ್ಟ್ನಿಂದ ಪ್ರಶ್ನೆಗಳನ್ನೆಬ್ಬಿಸಿರಿ: ನಿಮ್ಮ ಮೊದಲ ಸಂದರ್ಶನೆಯನ್ನು ಫಲದಾಯಕ ಭೇಟಿಗಳ ಸರಣಿಯ ಕೇವಲ ಆರಂಭವೆಂದು ಅದಕ್ಕಾಗಿ ಯೋಜಿಸಿರಿ. ನೀವು ಬಹಳಷ್ಟು ವಿವರವಾಗಿ ಹೋಗಬೇಕೆಂಬದಾಗಿ ಭಾವಿಸಬೇಡಿರಿ; ನೀವು ಅವನಲ್ಲಿ ನಿಜವಾದ ಅಭಿರುಚಿಯಿಂದಿರುವುದಿಲ್ಲ ಎಂದು ಮನೆಯವರು ಭಾವಿಸುವಂತೆ ಅಷ್ಟು ಹಠಾತ್ತಾಗಿಯೂ ಕೂಡ ಇರಬಾರದು. ಟ್ರ್ಯಾಕ್ಟ್ನಿಂದ ಎರಡು ಅಥವಾ ಮೂರು ಪ್ಯಾರಗ್ರಾಫ್ಗಳನ್ನು ಓದಿಯಾದ ಮೇಲೆ, ಮುಂದಿನ ಭೇಟಿಯಲ್ಲಿ ಚರ್ಚಿಸಬಹುದಾದ ಒಂದು ಪ್ರಶ್ನೆಯನ್ನೆಬ್ಬಿಸಿರಿ.
5 ಉದಾಹರಣೆಗಾಗಿ, 4 ನೇ ಪುಟದ ಮೂರನೇ ಪ್ಯಾರಗ್ರಾಫ್ನ ಕಡೆಗೆ ನೀವು ಗಮನವನ್ನು ಕೊಂಡೊಯ್ಯಬಹುದು ಮತ್ತು ಕೇಳಬಹುದು: “ಭವಿಷ್ಯತ್ತಿನ ಬಗ್ಗೆ ಅದು ಏನು ಹೇಳುತ್ತದೆಂದು ನಂಬಲು ಬೈಬಲು ಸಾಕಷ್ಟು ಪುರಾವೆಯನ್ನು ನೀಡುತ್ತದೆಂದು ನೀವೇಣಿಸುತ್ತಿರೊ?” ಇದು ಪುನರ್ ಭೇಟಿಯಲ್ಲಿ, ನೀವು ಸದಾ ಜೀವಿಸಬಲ್ಲಿರಿ ಪುಸ್ತಕದ 5 ನೆಯ ಅಧ್ಯಾಯವನ್ನು ಗಮನಿಸಬಹುದಾದಾಗ, ಉಲ್ಲೇಖಿಸಿ ಮಾತನಾಡುವ ವಿಷಯವನ್ನು ಸ್ಥಾಪಿಸುವುದು.
6 ಒಂದುವೇಳೆ ಮನೆಯವರು ನಮ್ಮ ಸಂದೇಶದಲ್ಲಿ ಅಭಿರುಚಿಯನ್ನು ತೋರಿಸುತ್ತಾರೆ, ಆದರೆ ಸಾಹಿತ್ಯವನ್ನು ಸ್ವೀಕರಿಸುವಲ್ಲಿ ಮೌನಿಗಳಾಗಿರುವುದಾದರೆ, ಆರಂಭಿಕ ಭೇಟಿಯಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದ ನೀಡುವಿಕೆಯನ್ನು ಮಾಡಲು ನೀವು ಆರಿಸಿಕೊಳ್ಳದೇ ಇರಬಹುದು. ಆದರೂ ನೀವು ಸದಾ ಜೀವಿಸಬಲ್ಲಿರಿ ಪುಸ್ತಕದ ವಿಷಯಸೂಚಿಯಲ್ಲಿನ ಪ್ರಮುಖ ಮತ್ತು ಅಭಿರುಚಿಕರ ವಿಷಯಗಳನ್ನು ಮನೆಯವರಿಗೆ ತೋರಿಸುವುದರ ಮೂಲಕ ಅವರಲ್ಲಿ ಆಸಕ್ತಿಯನ್ನು ಕೆರಳಿಸಿರಿ. ನಂತರ ನೀವು ಯಾವಾಗ ಆ ಮನೆಯವರನ್ನು ಪುನಃ ಸಂದರ್ಶಿಸುತ್ತೀರೊ ಆಗ ನೀವು ಪುಸ್ತಕವನ್ನು ದೊಡ್ಡ ಗಾತ್ರದ ಮುದ್ರಣಕ್ಕೆ ರೂ. 40 ಯಾ ಚಿಕ್ಕ ಗಾತ್ರದ ಮುದ್ರಣಕ್ಕೆ ರೂ. 20 ರ ಕಾಣಿಕೆಯ ಮೇಲೆ ನೀಡಬಹುದು.
7 ಒಂದುವೇಳೆ ನಾವು ಪ್ರತಿಯೊಂದು ಮನೆಯವರನ್ನು ಶಿಷ್ಯರಾಗಲು ಸಾಧ್ಯತೆ ಇರುವವರೆಂದು ವೀಕ್ಷಿಸುವದಾದರೆ, ಪುನರ್ ಭೇಟಿಗಾಗಿ ತಳಪಾಯವನ್ನು ಹಾಕುವ ಸಮಾಪ್ತಿಯ ಹೇಳಿಕೆಗಳನ್ನು ಉಪಯೋಗಿಸಲು ಪ್ರಯತ್ನಿಸುವೆವು.