ನೀವು ಆಸಕ್ತಿಯನ್ನು ಕಂಡಲಿಗ್ಲೆ ಹಿಂದಿರುಗಿರಿ
1 ಚಂದಾಗಳನ್ನು ಪಡೆಯುವುದರಲ್ಲಿ ಮತ್ತು ಪತ್ರಿಕೆಗಳು ಹಾಗೂ ಬ್ರೋಷರುಗಳನ್ನು ಹಂಚುವುದರಲ್ಲಿ ನಮ್ಮಲ್ಲಿ ಅನೇಕರು ಯಶಸ್ಸನ್ನು ಹೊಂದಿದ್ದೇವೆ. ನಾವು ಹಿಂದಿರುಗಿ ಹೆಚ್ಚಿನ ಆಸಕ್ತಿಯನ್ನು ಪ್ರಚೋದಿಸಲು ಪ್ರಯತ್ನಿಸುವಂಥದ್ದು ಪ್ರಾಮುಖ್ಯವಾಗಿದೆ. ಹಾಗೆ ಮಾಡುವುದರಲ್ಲಿ ನಮ್ಮ ಯಶಸ್ಸು, ಒಂದು ಪುನರ್ಭೇಟಿಯನ್ನು ಮಾಡುವ ಮೊದಲು ನಾವು ಎಷ್ಟು ಚೆನ್ನಾಗಿ ತಯಾರಿಸುತ್ತೇವೊ, ಅದರ ಮೇಲೆ ಅವಲಂಬಿಸಬಹುದು.
2 ವಯಸ್ಕರಿಗೆ ಸಂಬಂಧಪಡುವ ಅದೇ ವಿಷಯಗಳ ಕುರಿತು ಹೆಚ್ಚಿನ ಯುವ ಜನರು ಚಿಂತಿಸುತ್ತಾರೆ ಎಂಬುದನ್ನು ಜ್ಞಾಪಕದಲ್ಲಿಡಿ. ಎಚ್ಚರ!ದ ಮೇ ಸಂಚಿಕೆಗಳಲ್ಲಿ, ಯುವ ಜನರ ದೃಷ್ಟಿಕೋನದಿಂದ ಪ್ರಚಲಿತ ಸಮಸ್ಯೆಗಳನ್ನು ಪರಿಶೀಲಿಸುವ ಲೇಖನಗಳು ಇವೆ. ಜೀವನದಲ್ಲಿ ಯಾವುದು ನಿಜವಾಗಿಯೂ ಪ್ರಾಮುಖ್ಯವಾಗಿದೆ ಎಂಬುದನ್ನು ಗಣ್ಯಮಾಡಲು, ಎಳೆಯರಿಗೆ ಅಷ್ಟೇ ಅಲ್ಲದೆ ಅವರ ಹೆತ್ತವರಿಗೆ ಕೂಡ ಸಹಾಯ ಮಾಡಬಲ್ಲ ಒಳನೋಟವನ್ನು ಈ ಲೇಖನಗಳು ಒದಗಿಸುತ್ತವೆ.
3 (ಪಾಕ್ಷಿಕ ಮುದ್ರಣದ) ಮೇ 8ರ “ಎಚ್ಚರ!” ಪತ್ರಿಕೆಯನ್ನು ನೀವು ನೀಡಿರುವುದಾದರೆ, ಮೇ 22ರ ಸಂಚಿಕೆಯನ್ನು ನೀಡುವ ಮೂಲಕ ಅದನ್ನು ಅನುಸರಿಸಲು ನೀವು ಯೋಜಿಸಬಹುದು. ನೀವು ಹೀಗೆ ಹೇಳಬಹುದು:
▪ “ನಿಮ್ಮೊಂದಿಗೆ ನಾನು ಬಿಟ್ಟು ಹೋದ ಹಿಂದಿನ ಸಂಚಿಕೆಯು, ಮಕ್ಕಳಿಗಾಗಿರುವ ನಿರೀಕ್ಷೆಯ ವಿಷಯದ ಮೇಲೆ ಲೇಖನಗಳನ್ನು ಪ್ರದರ್ಶಿಸಿತು. ಭವಿಷ್ಯತ್ತಿಗಾಗಿ ಅಲ್ಪ ನಿರೀಕ್ಷೆಯನ್ನು ನೀಡುವ ಲೋಕದಲ್ಲಿ ನಮ್ಮ ಯುವ ಜನರು ಬೆಳೆಯಬೇಕಾಗಿದೆ. ದಂಗೆಯೇಳುವ ನಡತೆಯ ಮೂಲಕ ತಮ್ಮ ಕೋಪವನ್ನು ಅವರಲ್ಲಿ ಅನೇಕರು ತೋರಿಸುತ್ತಾರೆ. ಆದರೆ ತಮ್ಮ ಸಮತೂಕವನ್ನು ಇಟ್ಟುಕೊಳ್ಳುವ ಮತ್ತು ಉನ್ನತ ಧ್ಯೇಯಗಳನ್ನು ಕಾಪಾಡಿಕೊಳ್ಳುವ ಕೆಲವರು ಇದ್ದಾರೆ. ಒಬ್ಬ ಹದಿವಯಸ್ಕನ ನಿಲುವನ್ನು ಒಂದು ಉಚ್ಚ ನ್ಯಾಯಾಲಯವು ಹೇಗೆ ಎತ್ತಿಹಿಡಿಯಿತು ಎಂಬ ಸಂಗತಿಯನ್ನು ಇತ್ತೀಚೆಗಿನ ಎಚ್ಚರ! ದಲ್ಲಿರುವ ಈ ಲೇಖನವು ವಿವರಿಸುತ್ತದೆ. ಅದು ಹೇಳಲಿರುವ ವಿಷಯವನ್ನು ನೀವು ಗಣ್ಯಮಾಡುವಿರೆಂದು ನಾನು ನೆನಸುತ್ತೇನೆ.”
4 ನೀವು ಪ್ರಥಮ ಬಾರಿ ಸಂದರ್ಶಿಸಿದ್ದಾಗ, ಮನೆಯವನು ಪತ್ರಿಕೆಗಳ ಬಿಡಿ ಪ್ರತಿಗಳನ್ನು ಮಾತ್ರ ಪಡೆದಿದ್ದರೆ, ನೀವು ಹಿಂದಿರುಗಿದಾಗ, ಈ ಪ್ರಸ್ತಾವವನ್ನು ಉಪಯೋಗಿಸುತ್ತಾ ಒಂದು ಚಂದಾವನ್ನು ನೀಡಲು ನಿರ್ಣಯಿಸಬಹುದು:
▪ “ಈ ಭೂಮಿಯ ಭವಿಷ್ಯತ್ತಿನ ಕುರಿತು ಕಳೆದ ಸಲ ನಮ್ಮ ಸಂಕ್ಷಿಪ್ತ ಚರ್ಚೆಯಲ್ಲಿ ನಾನು ಆನಂದಿಸಿದೆ. ದೇವರು ದುಷ್ಟತನ ಮತ್ತು ಕಷ್ಟಾನುಭವಕ್ಕೆ ಅಂತ್ಯವನ್ನು ತರುವಾಗ, ಜೀವಿತವು ಇಲ್ಲಿ ಯಾವ ರೀತಿಯದ್ದಾಗಿರಬಹುದೆಂದು ನೀವು ಊಹಿಸಬಲ್ಲಿರೊ? ಕಾವಲಿನಬುರುಜು (ಅಥವಾ ಎಚ್ಚರ!) ಪತ್ರಿಕೆಯು, ದೇವರ ರಾಜ್ಯವು ತರುವ ಆಶೀರ್ವಾದಗಳ ಕಡೆಗೆ ಕ್ರಮವಾಗಿ ಗಮನವನ್ನು ಸೆಳೆದು, ಅವುಗಳನ್ನು ವರ್ಣಿಸುತ್ತದೆಂದು ನಿಮಗೆ ಗೊತ್ತಿತ್ತೊ? [ನೀವು ಬಿಟ್ಟುಹೋದ ಪತ್ರಿಕೆಯಿಂದ ಅಥವಾ ನಿಮ್ಮಲ್ಲಿರುವ ಪತ್ರಿಕೆಯಿಂದ ಒಂದು ಅಂಶವನ್ನು ಆರಿಸಿರಿ.] ಈ ಪತ್ರಿಕೆಗಳಲ್ಲಿ ಒಂದನ್ನು (ಯಾ ಎರಡನ್ನೂ) ನೀವು ಕ್ರಮವಾಗಿ ಪಡೆಯುವಂತೆ ನಾನು ಬಯಸುತ್ತೇನೆ.”
5 ನೀವು ಹಿಂದಿರುಗಿ ಹೋದಾಗ, ಮನೆಯವನು ತನ್ನ ಸ್ವಂತ ಧಾರ್ಮಿಕ ಸಾಹಿತ್ಯವನ್ನು ಪಡೆಯುತ್ತಾನೆಂದು ನಿಮಗೆ ಬಹುಶಃ ತಿಳಿದುಬರುವುದು, ಮತ್ತು ಅದು ಸಾಕೆಂದು ಅವನಿಗನಿಸಬಹುದು. ನೀವು ಹೀಗೆ ಹೇಳಬಹುದು:
▪ “ನಮ್ಮ ಧರ್ಮವು ಏನೇ ಆಗಿರಲಿ, ನಾವೆಲ್ಲರು ಅದೇ ರೀತಿಯ ಆತಂಕಗಳಿಂದ—ಅಪರಾಧ, ಗಂಭೀರವಾದ ಅನಾರೋಗ್ಯ, ಪರಿಸರದ ಚಿಂತೆಗಳಿಂದ—ಪ್ರಭಾವಿಸಲ್ಪಡುತ್ತೇವೆ, ಅಲ್ಲವೆ? [ಹೇಳಿಕೆಗಾಗಿ ಅನುಮತಿ ನೀಡಿರಿ.] ಈ ಸಮಸ್ಯೆಗಳಿಗೆ ಯಾವುದೇ ನೈಜವಾದ ಪರಿಹಾರ ಇದೆಯೆಂದು ನಿಮಗನಿಸುತ್ತದೊ? [ಓದಿ 2 ಪೇತ್ರ 3:13.] ನಮ್ಮ ಸಾಹಿತ್ಯದ ಉದ್ದೇಶವು ಕಾವಲಿನಬುರುಜು ಪತ್ರಿಕೆಯ 2 ನೆಯ ಪುಟದಲ್ಲಿ ತಿಳಿಸಲ್ಪಟ್ಟಿದೆ. [ಆಯ್ದ ಒಂದು ಯಾ ಎರಡು ವಾಕ್ಯಗಳನ್ನು ಓದಿರಿ.] ಬೈಬಲಿನ ಮೇಲೆ ಆಧಾರಿಸಿರುವ ಆಶಾಜನಕ ಸಂದೇಶವನ್ನು ಅವು ಹೊಂದಿರುವುದರಿಂದ, ಯೆಹೋವನ ಸಾಕ್ಷಿಗಳಲ್ಲದ ಅನೇಕ ಜನರು ನಮ್ಮ ಪ್ರಕಾಶನಗಳನ್ನು ಓದುವುದರಲ್ಲಿ ಆನಂದಿಸುತ್ತಾರೆ.” ಮನೆಯವನ ಪ್ರತಿಕ್ರಿಯೆಯು ಅನುಕೂಲಕರವಾಗಿದ್ದರೆ, ನಮ್ಮ ಬೈಬಲ್ ಅಧ್ಯಯನದ ಕಾರ್ಯಕ್ರಮವನ್ನು ವಿವರಿಸಿರಿ.
6 ಈ ಪ್ರಸ್ತಾವವನ್ನು ನೀವು ತೆಗೆದುಕೊಳ್ಳಬಹುದು:
▪ “ಕಳೆದ ಬಾರಿ ನಾನು ಇಲ್ಲಿದ್ದಾಗ, ನಮ್ಮ ಲೋಕಕ್ಕಾಗಿರುವ ಭವಿಷ್ಯತ್ತಿನ ಪ್ರತೀಕ್ಷೆಗಳ ಕುರಿತು ನಾವು ಮಾತಾಡಿದೆವು. ಈ ವರದಿಯ ಕುರಿತು ನೀವೇನು ನೆನಸುತ್ತೀರಿ? [ಆತಂಕದ ಕೆಲವು ಪ್ರಚಲಿತ ವಾರ್ತೆಗಳನ್ನು ತಿಳಿಸಿರಿ.] ಆ ರೀತಿಯ ವಿಷಯಗಳನ್ನು ಜನರು ಕೇಳುವಾಗ, ಈ ಲೋಕವು ಏನಾಗುತ್ತಿದೆ ಎಂದು ಅವರು ಬೆರಗಾಗುವಂತೆ ಅದು ಮಾಡುತ್ತದೆ, ಅಲ್ಲವೆ? ಬೈಬಲಿನಲ್ಲಿ 2 ತಿಮೊಥೆಯ 3:1-5 ರಲ್ಲಿ ಮುಂತಿಳಿಸಲಾದ ‘ಕಡೇ ದಿನಗಳಲ್ಲಿ’ ನಾವು ಜೀವಿಸುತ್ತಾ ಇದ್ದೇವೆಂದು ಇಂತಹ ವಿಷಯಗಳು ಸೂಚಿಸುತ್ತವೆ ಎಂಬುದಾಗಿ ನಾವು ನಂಬುತ್ತೇವೆ.” ಮುಖ್ಯವಿಷಯಗಳನ್ನು ಓದಿದ ತರುವಾಯ, ಆ ವರ್ಣನೆಯನ್ನು ಹೋಲುವ ಜನರನ್ನು ಅವನು ನೋಡಿದಾನ್ದೊ ಎಂದು ನೀವು ಕೇಳಸಾಧ್ಯವಿದೆ. ರೀಸನಿಂಗ್ ಪುಸ್ತಕದಲ್ಲಿ ಪುಟಗಳು 234-8 ರಲ್ಲಿರುವ ಉಪಶೀರ್ಷಿಕೆಗಳಲ್ಲಿ ಒಂದರ ಚರ್ಚೆಯೊಂದಿಗೆ ಮುಂದುವರಿಸಿರಿ.
7 ನಾವು ಚೆನ್ನಾಗಿ ತಯಾರಿಸಿ, ಸಹಾಯ ಮಾಡಲು ಯಥಾರ್ಥವಾದ ಬಯಕೆಯನ್ನು ತೋರಿಸುವುದಾದರೆ, ಪ್ರಾಮಾಣಿಕಹೃದಯದವರು ಆಲಿಸುವರೆಂಬ ಭರವಸೆಯಿಂದ ನಾವಿರಬಲ್ಲೆವು.—ಯೋಹಾನ 10:27, 28.