ನೀವು ಪಯನೀಯರ ಪಂಕ್ತಿಗಳನ್ನು ಮತ್ತೆ ಸೇರಬಲ್ಲಿರೊ?
1 ಕಳೆದ ಐದು ವರ್ಷಗಳಲ್ಲಿ, ಲೋಕವ್ಯಾಪಕವಾಗಿ ಸಾವಿರಗಟ್ಟಲೆ ಕ್ರಮದ ಪಯನೀಯರರು ಪಯನೀಯರ ಪಂಕ್ತಿಗಳನ್ನು ಬಿಡುವುದನ್ನು ಅನಿವಾರ್ಯವಾದದ್ದಾಗಿ ಕಂಡುಕೊಂಡರು. ನೀವೂ ಅವರಲ್ಲಿ ಒಬ್ಬರೊ? ಹಾಗಿರುವಲ್ಲಿ, ಈ ಸುಯೋಗವನ್ನು ಬಿಟ್ಟುಕೊಡಲು ನಿಮಗೆ ಕಾರಣವಿದೆಯೆಂಬುದರಲ್ಲಿ ಸಂದೇಹವಿಲ್ಲ. ಅದು ಅನಿರೀಕ್ಷಿತವಾದದ್ದೂ ಮತ್ತು ನಿಮ್ಮ ನಿಯಂತ್ರಣಕ್ಕೆ ಮೀರಿದ್ದಾದ ವಿಷಯವಾಗಿದ್ದಿರಬಹುದು. ಆ ಕಾರಣವು ಇನ್ನೂ ಇದೆಯೊ? ಆರೋಗ್ಯ, ಹಣಕಾಸಿನ ಸಮಸ್ಯೆಗಳು, ಅಥವಾ ಕುಟುಂಬದ ಹಂಗುಗಳು ನಿಮ್ಮನ್ನು ನಿಲ್ಲಿಸುವಂತೆ ಅಗತ್ಯಪಡಿಸಿರುವಲ್ಲಿ, ನಿಮ್ಮ ಪರಿಸ್ಥಿತಿಗಳು ಪ್ರಗತಿಗೊಂಡಿವೆಯೊ? ಕ್ರಮದ ಪಯನೀಯರ್ ಸೇವೆಯ ಆಶೀರ್ವಾದಗಳನ್ನು ಪುನಃ ಅನುಭವಿಸಲಿಕ್ಕಾಗಿ ನಿಮ್ಮನ್ನು ಅನುಮತಿಸುವಂತಹ ಕೆಲವು ಗಮನಾರ್ಹವಾದ ಸರಿಪಡಿಸುವಿಕೆಗಳನ್ನು ನೀವು ಮಾಡಸಾಧ್ಯವಿದೆಯೊ? ಪುನಃ ಅರ್ಜಿಹಾಕುವುದರ ಕುರಿತು ನೀವು ಆಲೋಚಿಸಿದ್ದೀರೊ?
2 ನಿಮಗೆ ತಿಳಿದಿರುವಂತೆ, ಒಬ್ಬ ಪಯನೀಯರೋಪಾದಿ ನೀವು ಯಶಸ್ಸನ್ನು ಪಡೆಯಬೇಕಾದರೆ ಒಳ್ಳೆಯ ವ್ಯವಸ್ಥಾಪನೆ ಮತ್ತು ಜಾಗರೂಕವಾದ ಕಾಲತಖ್ತೆಮಾಡುವುದು ಅಗತ್ಯವಾಗಿವೆ. ಸಾಮಾನ್ಯವಾಗಿ ಮನೋರಂಜನೆಗಾಗಿ ನಿಮಗೆ ಅಧಿಕವಾದ ಸಮಯವು ಇರದಿದ್ದಾಗ್ಯೂ, ಒಬ್ಬ ಪಯನೀಯರನ ವಿಶ್ರಾಂತಿಯ ಸಂಕ್ಷಿಪ್ತ ಅವಧಿಗಳು ಅನೇಕವೇಳೆ ಹೆಚ್ಚು ಸಂತೃಪ್ತಕರವಾದವುಗಳೂ ಪ್ರತಿಫಲವನ್ನೀಯುವವುಗಳೂ ಆಗಿ ಪರಿಣಮಿಸುವವು. (ಜ್ಞಾನೋ. 19:17; ಅ.ಕೃ. 20:35) ಸೇವೆಯಲ್ಲಿ ನಿಮ್ಮನ್ನು ಹೆಚ್ಚು ಕಾರ್ಯಮಗ್ನರಾಗಿರಿಸಿಕೊಳ್ಳುವ ಮೂಲಕ, ಲೋಕದಿಂದ ಹಿಂಬಾಲಿಸಲ್ಪಡುವ ಸ್ವಾರ್ಥಾನ್ವೇಷಕವಾದ, ಸುಲಭ ಜೀವಿತ ಮಾರ್ಗದ ಪ್ರಭಾವದಿಂದ ನೀವು ರಕ್ಷಿಸಲ್ಪಡುತ್ತೀರಿ. ನೀವು ಸ್ವತ್ಯಾಗಿಗಳೂ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವವರೂ ಆಗಿರುವಲ್ಲಿ ಯೆಹೋವನು ನಿಮ್ಮನ್ನು ಆತ್ಮಿಕವಾಗಿ ಐಶ್ವರ್ಯವಂತರನ್ನಾಗಿ ಮಾಡುವನೆಂದು ಆತನು ವಾಗ್ದಾನಿಸಿದ್ದಾನೆ. ಯೆಹೋವನ ಸೇವೆಯಲ್ಲಿ ಸಂಪೂರ್ಣಹೃದಯಿಗಳಾಗಿರುವುದರಿಂದ ನೀವು ಖಂಡಿತವಾಗಿಯೂ ನೈಜವಾದ ಆನಂದ ಮತ್ತು ಸಂತೃಪ್ತಿಯನ್ನು ಅನುಭವಿಸುವಿರಿ.—ಜ್ಞಾನೊ. 10:22; ಕೊಲೊ. 3:23, 24.
3 ಪೂರ್ಣ ಸಮಯದ ಶುಶ್ರೂಷೆಯು ವಿಶೇಷವಾಗಿ ಕೆಲವರಿಗೆ ಮಾತ್ರ ಒಂದು ಸುಯೋಗವಾಗಿ ದೊರಕುತ್ತದೆಂದು ವೀಕ್ಷಿಸಲ್ಪಡಬೇಕೊ? ಇಲ್ಲ. ನಮ್ಮ ಸಮರ್ಪಣೆಯ ಪ್ರತಿಜ್ಞೆಯ ದೃಷ್ಟಿಯಿಂದ, ಪರಿಸ್ಥಿತಿಗಳು ಅದನ್ನು ಅಸಾಧ್ಯವನ್ನಾಗಿ ಮಾಡುವ ಹೊರತು ಪ್ರತಿಯೊಬ್ಬ ಕ್ರೈಸ್ತನು ಪೂರ್ಣಸಮಯದ ಸೇವೆಗೆ ಗಂಭೀರವಾದ ಪರಿಗಣನೆಯನ್ನು ಕೊಡಬೇಕು.—ಮಾರ್ಕ 12:30.
4 ಪ್ರಸ್ತುತ ನಿಮ್ಮ ಆರೋಗ್ಯ ಮತ್ತು ಶಾಸ್ತ್ರೀಯ ಜವಾಬ್ದಾರಿಗಳು ಸ್ಪಷ್ಟವಾಗಿಗಿ ನಿಮ್ಮನ್ನು ಪಯನೀಯರ್ ಸೇವೆಯನ್ನು ಮಾಡುವಂತೆ ಅನುಮತಿಸುವುದಿಲ್ಲವಾದರೆ, ಯೆಹೋವನಿಗೆ ಅದು ಗೊತ್ತಿದೆ ಮತ್ತು ಆತನು ತಿಳಿಯುತ್ತಾನೆಂದು ನೀವು ಭರವಸೆಯಿಂದಿರಸಾಧ್ಯವಿದೆ. ನಿಮ್ಮ ಪರಿಸ್ಥಿತಿಗಳು ಅನುಮತಿಸುವಲ್ಲಿ ನಿಮ್ಮ ನಂಬಿಗಸ್ತಿಕೆಗಾಗಿ ಆತನು ನಿಮಗೆ ಪ್ರತಿಫಲವನ್ನೀಯುವನು. (1 ಕೊರಿಂ. 4:2; 2 ಕೊರಿಂ. 8:12) ಆದರೂ, ಈಗ ನೀವು ಪುನಃ ಪಯನೀಯರ್ ಸೇವೆಯನ್ನು ಮಾಡಲು ನಿಮಗೆ ಒಪ್ಪಿಗೆಯಿದೆಯೆಂದು ಕಂಡುಬರುವುದಾದರೆ, ಅಧ್ಯಕ್ಷ ಮೇಲ್ವಿಚಾರಕರನ್ನು ಸಮೀಪಿಸಿ ಅರ್ಜಿಯನ್ನು ಯಾಕೆ ಕೇಳಬಾರದು?
5 ನಿಮ್ಮ ಕುಟುಂಬವು ಸಹಾಯ ಮಾಡಬಲ್ಲದೊ? ನಿಮ್ಮ ಕುಟುಂಬದ ಹಂಗುಗಳನ್ನು ನೀವು ಪಾಲಿಸಬೇಕಾದ ಅಗತ್ಯವಿದ್ದುದರಿಂದ ನೀವು ಪಂಕ್ತಿಗಳನ್ನು ಬಿಟ್ಟಿರಬಹುದು. ನೀವು ಪಯನೀಯರ್ ಕೆಲಸವನ್ನು ಪುನಃ ಪ್ರವೇಶಿಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುವ ಒಂದು ಸ್ಥಾನದಲ್ಲಿ ಕುಟುಂಬದ ಇತರ ಸದಸ್ಯರು ಇರುವಲ್ಲಿ ಅದು ಸಾಧ್ಯವೊ? ಕೆಲವರಿಗೆ, ನಿರ್ದಿಷ್ಟವಾದ ಜವಾಬ್ದಾರಿಗಳನ್ನು ವಹಿಸುವುದರಲ್ಲಿ ಸ್ವಲ್ಪ ಸಹಾಯಿಸುವಲ್ಲಿ, ಪಯನೀಯರ್ ಸೇವೆಯು ಪುನಃ ಒಮ್ಮೆ ಪ್ರಾಪ್ತವಾಗುತ್ತದೆ.
6 ಕುಟುಂಬದ ಇತರ ಸದಸ್ಯರ ಕಡೆಯಿಂದ ಒಳ್ಳೆಯ ಸಹಕಾರ ಮತ್ತು ಸ್ವಲ್ಪ ಹೆಚ್ಚಿನ ಪ್ರಯತ್ನವು ಇದನ್ನು ಸಾಧ್ಯವನ್ನಾಗಿ ಮಾಡಬಹುದು. ಹಣಕಾಸು ಅಥವಾ ವಾಹನ ಸೌಕರ್ಯದ ನೆರವಿನಿಂದ, ಹಾಗೂ ಸೇವೆಯಲ್ಲಿ ಒಟ್ಟಿಗೆ ಕೆಲಸಮಾಡಲಿಕ್ಕಾಗಿ ಕ್ರಮವಾದ ಭೇಟಿ ಏರ್ಪಾಡುಗಳನ್ನು ಮಾಡುವ ಮೂಲಕ ಸಹಾಯವನ್ನು ಕೊಡಬಹುದು. ಅವರು ಸಹಾಯವನ್ನೀಯುವ ಇತರ ಮಾರ್ಗಗಳಿರುವುದು ಸಂಭವನೀಯ. ಈ ಸೇವಾ ಸುಯೋಗವನ್ನು ಪುನಃ ತೆಗೆದುಕೊಳ್ಳುವಂತೆ ಪರಿಸ್ಥಿತಿಗಳು ನಿಮ್ಮನ್ನು ಅನುಮತಿಸದಿರುವುದಾದರೆ, ಹಾಗೆ ಮಾಡಲು ಶಕವ್ತಾಗಿರುವ ಕುಟುಂಬದ ಇನ್ನೊಬ್ಬ ಸದಸ್ಯನಿಗೆ ಅಂತಹ ನೆರವನ್ನು ನೀಡಬಹುದು.
7 ಒಂದು ಕುಟುಂಬದೋಪಾದಿ ಈ ಸಮಸ್ಯೆಯನ್ನು ಯಾಕೆ ಚರ್ಚಿಸಬಾರದು? ನೀವದನ್ನು ಕುಟುಂಬದ ಒಂದು ಕಾರ್ಯಯೋಜನೆಯಾಗಿ ಮಾಡುವುದಾದರೆ ಅದರ ಪ್ರತೀಕ್ಷೆಗಳು ಒಳ್ಳೆಯವುಗಳಾಗಿರಬಹುದು. ಈ ಪಂಕ್ತಿಗೆ ಇನ್ನೊಬ್ಬ ಪಯನೀಯರನು ಕೂಡಿಸಲ್ಪಡಸಾಧ್ಯವಿರುವಲ್ಲಿ, ಅವರು ಅದರಲ್ಲಿ ಪಾಲಿಗರಾಗಿದ್ದಾರೆಂದು ಇಡೀ ಮನೆವಾರ್ತೆಯು ಯುಕ್ತವಾಗಿ ಭಾವಿಸಬಲ್ಲದು. ಅಂತಹ ಉದಾರ ಆತ್ಮವು ಟೆರಿಟೊರಿಯಲ್ಲಿ ರಾಜ್ಯ ಸಾಕ್ಷಿಗೆ ಹೆಚ್ಚನ್ನು ಕೂಡಿಸುವುದು ಮಾತ್ರವಲ್ಲ, ಕುಟುಂಬವನ್ನು ಆತ್ಮಿಕವಾಗಿ ಹೆಚ್ಚು ನಿಕಟವಾಗಿ ಒಟ್ಟುಗೂಡಿಸುವುದು.—ಲೂಕ 6:38; ಫಿಲಿ. 2:2-4.