ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ಪ್ರಗತಿಪರರಾಗಿ ನಡೆಯುತ್ತಾ ಇರಿ
1 ಅಪೊಸ್ತಲ ಪೌಲನು ಯಾವುದನ್ನು ರಚಿಸುವುದರಲ್ಲಿ ಸಾಧನವಾಗಿದ್ದನೋ ಆ ಫಿಲಿಪ್ಪಿಯಲ್ಲಿರುವ ಸಭೆಗಾಗಿ ಅವನಿಗೆ ವಿಶೇಷವಾದ ಮಮತೆಯಿತ್ತು. ದಯಾಪರವಾದ ಅವರ ಭೌತಿಕ ಒದಗಿಸುವಿಕೆಗಳಿಗಾಗಿ ಅವನು ಕೃತಜ್ಞನಾಗಿದ್ದನು ಮತ್ತು ಅವರ ಕುರಿತು ಒಂದು ಒಳ್ಳೆಯ ಮಾದರಿಯಾಗಿ ಮಾತಾಡಿದನು.—2 ಕೊರಿಂ. 8:1-6.
2 ಫಿಲಿಪ್ಪಿಯವರಿಗೆ ಪೌಲನು ಬರೆದ ಪತ್ರವು ಆಳವಾದ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿತ್ತು. ಇನ್ಸೈಟ್ ಪುಸ್ತಕದ ಸಂಪುಟ 2, ಪುಟ 631 ವರದಿಸುವುದು: “ತಮ್ಮ ಒಳ್ಳೆಯ ಜೀವನಮಾರ್ಗದಲ್ಲಿ—ಮಹತ್ತಾದ ವಿವೇಚನಾ ಶಕ್ತಿಯನ್ನು ಹುಡುಕುವುದು ಮತ್ತು ಜೀವದಾಯಕ ವಾಕ್ಯದ ಮೇಲೆ ಭದ್ರವಾದ ಹಿಡಿತವನ್ನು ಹೊಂದಿರುವುದು, ಹೆಚ್ಚು ಬಲವಾದ ನಂಬಿಕೆ ಮತ್ತು ಬರಲಿರುವ ಬಹುಮಾನದಲ್ಲಿ ಭರವಸೆ—ಮುಂದುವರಿಯುವಂತೆ ತನ್ನ ಇಡೀ ಪತ್ರದಲ್ಲಿ ಅವನು ಫಿಲಿಪ್ಪಿ ಸಭೆಗೆ ಉತ್ತೇಜಿಸುತ್ತಾನೆ.” ತಮ್ಮ ಮತ್ತು ಅಪೊಸ್ತಲನ ನಡುವೆ ಪ್ರೀತಿಯ ಬಂಧವನ್ನು ಭದ್ರಪಡಿಸುತ್ತಾ, ಅವರು ಹೃತ್ಪೂರ್ವಕವಾಗಿ ಪ್ರತಿಕ್ರಿಯಿಸಿದರು. ಅವನ ಬುದ್ಧಿವಾದದ ಮೇಲೆ ಜಾಗ್ರತೆಯಿಂದ ಪ್ರತಿಬಿಂಬಿಸಲಿಕ್ಕಾಗಿ ನಮಗೆ ಒಳ್ಳೆಯ ಕಾರಣವನ್ನು ಕೊಡುವ—ನಿರ್ದಿಷ್ಟವಾಗಿ ಫಿಲಿಪ್ಪಿ 3:15-17 ರಲ್ಲಿ ಹೇಳಲ್ಪಟ್ಟಿರುವ ವಿಷಯ—ಮೂಲಕ, ಪೌಲನ ಮಾತುಗಳು ಇಂದು ನಮಗಾಗಿ ವಿಶೇಷ ಅರ್ಥವನ್ನು ಪಡೆದುಕೊಳ್ಳುತ್ತವೆ.
3 ಒಂದು ಪಕ್ವತೆಯ ಮನೋಭಾವವು ಅಗತ್ಯ: ಫಿಲಿಪ್ಪಿ 3:15 ರಲ್ಲಿ ಪೌಲನು ಅನೇಕ ವರ್ಷಗಳ ಅನುಭವವಿರುವ ಮನುಷ್ಯನಂತೆ ಬರೆದನು. ಸರಿಯಾದ ಮನೋಭಾವವುಳ್ಳ ಪಕ್ವತೆಯ ಕ್ರೈಸ್ತರಂತೆ ಅವರನ್ನು ಕೇಳಿಕೊಳ್ಳುತ್ತಾ, ಅವರ ಆತ್ಮಿಕ ಪ್ರಗತಿಯನ್ನು ಅವನು ಮನಗಂಡನು. ಯೇಸುವಿನಿಂದ ಪ್ರದರ್ಶಿಸಲ್ಪಟ್ಟ ನಮ್ರತೆ ಮತ್ತು ಗಣ್ಯತೆಯನ್ನು ಅವರ ಮನೋಭಾವವು ಪ್ರತಿಬಿಂಬಿಸುವ ವರೆಗೆ, ಅವರು “ನಿರ್ದೋಷಿಗಳೂ ಮುಗ್ಧರೂ, ದೇವರ ನಿಷ್ಕಳಂಕ ಮಕ್ಕಳೂ . . . , ಜೀವದಾಯಕ ವಾಕ್ಯದ ಮೇಲೆ ಭದ್ರವಾದ ಹಿಡಿತವನ್ನು ಇಟ್ಟಿರುವವರೂ” ಆಗಿ ಮುಂದುವರಿಯಸಾಧ್ಯವಿತ್ತು. (ಫಿಲಿ. 2:15, 16, NW) ಆ ಮಾತುಗಳನ್ನು ನಾವು ಓದುವಾಗ, ಪೌಲನು ನಮ್ಮೊಂದಿಗೆ ಮಾತಾಡುತ್ತಿದ್ದಾನೆಂದು ನಾವು ಭಾವಿಸಬೇಕು. ಹೀಗೆ ನಮ್ಮ ಸುಯೋಗಗಳಿಗಾಗಿ ನಮ್ರತೆಯ ಗಣ್ಯತೆಯನ್ನು ಪ್ರದರ್ಶಿಸುವ ಮೂಲಕ, ಯೇಸುವಿಗಿದ್ದ ತದ್ರೀತಿಯ ಮನೋಭಾವವನ್ನು ಪಡೆದುಕೊಳ್ಳಲು ನಾವು ಮನಃಪೂರ್ವಕವಾಗಿ ಬಯಸಬೇಕು. ಇದರಲ್ಲಿ ಮತ್ತು ಇನ್ನಿತರ ವಿಷಯಗಳಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುತ್ತಾ, ನಾವು ಪ್ರಾರ್ಥನೆಯಲ್ಲಿ ಯೆಹೋವನನ್ನು ಸತತವಾಗಿ ಬೇಡಿಕೊಳ್ಳುತ್ತೇವೆ.—ಫಿಲಿ. 4:6, 7.
4 ಫಿಲಿಪ್ಪಿ 3:16 ಸೂಚಿಸುವಂತೆ, ನಾವೆಲ್ಲರೂ ಪ್ರಗತಿಯನ್ನು ಮಾಡಲು ಪ್ರಯತ್ನಿಸಬೇಕು. “ಮುಂದಕ್ಕೆ ಚಲಿಸುವುದು, ಅಭಿವೃದ್ಧಿಯನ್ನು ಮಾಡುವುದು” ಎಂಬುದು “ಪ್ರಗತಿ” ಎಂಬ ಪದದ ಅರ್ಥವಾಗಿದೆ. ಪ್ರಗತಿಪರರಾಗಿರುವ ಜನರು “ಹೊಸ ಅಭಿಪ್ರಾಯಗಳು, ಅನ್ವೇಷಣೆಗಳು, ಅಥವಾ ಅವಕಾಶಗಳಲ್ಲಿ ಆಸಕ್ತರಾಗಿರುತ್ತಾರೆ.” ಕ್ರೈಸ್ತತ್ವವು ಎಂದಿಗೂ ಜಡವಾಗಿಲ್ಲ ಮತ್ತು ಅದನ್ನು ಬೋಧಿಸುವವರು ಮುಂದಕ್ಕೆ ಚಲಿಸುತ್ತಾ ಇರಬೇಕು ಎಂಬುದನ್ನು ಫಿಲಿಪ್ಪಿಯವರು ತಿಳಿಯಬೇಕೆಂದು ಪೌಲನು ಬಯಸಿದನು. ಅವರ ಪ್ರಗತಿಪರ ಆತ್ಮವು ಸ್ವತಃ ತಮ್ಮನ್ನು ಪರೀಕ್ಷಿಸಿಕೊಳ್ಳಲು, ತಮ್ಮ ಬಲಹೀನತೆಗಳನ್ನು ಅಂಗೀಕರಿಸಲು, ಮತ್ತು ಹೆಚ್ಚನ್ನು ಮಾಡುವ ಸಂದರ್ಭಗಳಿಗಾಗಿ ಎಟಕಿಸಿಕೊಳ್ಳಲು ಅಥವಾ ತಾವು ಈಗ ಮಾಡುತ್ತಿರುವ ವಿಷಯದ ಗುಣವನ್ನು ಪ್ರಗತಿಗೊಳಿಸಲಿಕ್ಕಾಗಿ ಮನಃಪೂರ್ವಕವಾಗಿ ಆಶಿಸುವ ಮೂಲಕ ಪ್ರದರ್ಶಿಸಲ್ಪಡುವುದು. ಇಂದು ಯೆಹೋವನ ಭೂ ಸಂಸ್ಥೆಯು ಅದರ ಚಟುವಟಿಕೆಯ ವ್ಯಾಪ್ತಿಯನ್ನು ಮತ್ತು ದೇವರ ವಾಕ್ಯದ ಕುರಿತಾದ ಅದರ ತಿಳಿವಳಿಕೆಯನ್ನು ಎಂದಿಗಿಂತಲೂ ಹೆಚ್ಚಾಗಿ ವಿಸ್ತರಿಸುತ್ತಾ, ಪ್ರಗತಿಪರವಾಗಿ ಮುಂದಕ್ಕೆ ಚಲಿಸುತ್ತಾ ಇದೆ. ಅದರ ಎಲ್ಲಾ ಒದಗಿಸುವಿಕೆಗಳ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಮತ್ತು ಅದರ ಕಾರ್ಯದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ, ನಮ್ಮಲ್ಲಿ ಪ್ರತಿಯೊಬ್ಬರು ಅದರೊಂದಿಗೆ ಸರಿಸಮನಾಗಿ ಮುಂದುವರಿಯಬೇಕು.
5 ಪ್ರಗತಿಯು ಸುವ್ಯವಸ್ಥಿತವಾದ ನಿಯತಕ್ರಮವನ್ನು ಅಗತ್ಯಪಡಿಸುತ್ತದೆ: ಪೌಲನು “ಇದೇ ನಿಯತಕ್ರಮದಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಾ ಹೋಗುವಂತೆ” ತನ್ನ ಸಹೋದರರನ್ನು ಒತ್ತಾಯಿಸುತ್ತಾ ಮುಂದುವರಿದನು. (ಫಿಲಿ. 3:16, NW) ವ್ಯಕ್ತಿಗಳನ್ನು ಯಾ ವಸ್ತುಗಳನ್ನು ಪರಸ್ಪರ ಸಂಬಂಧವುಳ್ಳ ಸ್ಥಾನಗಳಲ್ಲಿ ಇಡುವಂತೆ ಮತ್ತು ಸರಿಯಾಗಿ ವರ್ತಿಸುವಂತೆ, ಸುವ್ಯವಸ್ಥಿತರಾಗಿರುವುದು ನಮ್ಮನ್ನು ಅಗತ್ಯಪಡಿಸುತ್ತದೆ. ಯೆಹೋವನ ಸಂಸ್ಥೆಗೆ ಮತ್ತು ಒಬ್ಬರೊಂದಿಗೊಬ್ಬರು ನಿಕಟವಾಗಿರುವುದರ ಮೂಲಕ ಫಿಲಿಪ್ಪಿಯ ಕ್ರೈಸ್ತರು ತಮ್ಮನ್ನು ಸೂಕ್ತವಾದ ಸ್ಥಳದಲ್ಲಿ ಇರಿಸಿಕೊಂಡರು. ಅವರ ಜೀವಿತಗಳು ಪ್ರೀತಿಯ ನಿಯಮದಿಂದ ಆಳಲ್ಪಟ್ಟವು. (ಯೋಹಾನ 15:17; ಫಿಲಿ. 2:1, 2) “ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳುವಂತೆ” ಪೌಲನು ಅವರನ್ನು ಒತ್ತಾಯಿಸಿದನು. (ಫಿಲಿ. 1:27) ಅಂದು ಇದ್ದಂತೆಯೇ ಇಂದು ಕ್ರೈಸ್ತರಿಗೆ ಸುವ್ಯವಸ್ಥೆಯ ಅಗತ್ಯ ಮತ್ತು ಒಳ್ಳೆಯ ನಡವಳಿಕೆಯು ಪ್ರಾಮುಖ್ಯವಾಗಿದೆ.
6 ಸ್ಥಾಪಿತ ಕಾರ್ಯವಿಧಾನದ ರೂಢಿಯ ಒಂದು ನಿರ್ವಹಣೆಯು ನಿಯತಕ್ರಮವಾಗಿದೆ. ಹೀಗೆ ಇದು ವಿಷಯಗಳನ್ನು ಮಾಡುವ ಸಾಂಪ್ರದಾಯಿಕ ವಿಧಾನದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ನಮ್ಮ ಮುಂದಿನ ಹೆಜ್ಜೆಗಾಗಿ ನಿರ್ಧಾರವನ್ನು ಮಾಡುವಾಗ ನಾವು ವಿರಾಮಕೊಡಬೇಕಾದ ಅಥವಾ ಚಿಂತಿಸಬೇಕಾದ ಅಗತ್ಯವಿಲ್ಲದ ಕಾರಣದಿಂದ ಒಂದು ನಿಯತಕ್ರಮವಿರುವುದು ನಮ್ಮ ಒಳಿತಿಗಾಗಿ ಕಾರ್ಯನಡಿಸಬಲ್ಲದು—ನಾವು ರೂಢಿಯ ಬಲದಿಂದ ಅಥವಾ ರೂಢಿಯಿಂದ ಹಿಂಬಾಲಿಸುವ ಒಂದು ಸ್ಥಾಪಿತ ವಿಧಾನವನ್ನು ಈಗಾಗಲೆ ಸ್ಥಾಪಿಸಿದ್ದೇವೆ.
7 ಹಿತಕರವಾದ, ಪ್ರಯೋಜನಕರವಾದ, ದಿವ್ಯ ಸಂಪ್ರದಾಯಗಳು ಮತ್ತು ಹವ್ಯಾಸಗಳು ಸುವ್ಯವಸ್ಥಿತವಾದ ದೇವಪ್ರಭುತ್ವ ನಿಯತಕ್ರಮದಲ್ಲಿ ಒಳಗೊಂಡಿವೆ—ಸ್ವತಃ ಆತ್ಮಿಕವಾಗಿ ಭಕ್ತಿವೃದ್ಧಿಮಾಡಿಕೊಳ್ಳುವ, ಇತರರಿಗೆ ಸಹಾಯಮಾಡುವ, ಮತ್ತು ಸಾಧ್ಯವಿದ್ದಲ್ಲಿ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡುವ ಉದ್ದೇಶದಿಂದಲೇ. ಈ ಗುರಿಗಳನ್ನು ಸಾಧಿಸುವುದರಲ್ಲಿ ಯಶಸ್ವಿಯು, ವೈಯಕ್ತಿಕ ಅಭ್ಯಾಸ, ಕೂಟಗಳಲ್ಲಿ ಕ್ರಮವಾದ ಹಾಜರಿ, ಮತ್ತು ಸಾರುವ ಕೆಲಸದಲ್ಲಿ ಭಾಗವಹಿಸುವಿಕೆಯನ್ನು ಒಳಗೊಳ್ಳುವ ಒಂದು ನಿಯತಕ್ರಮವನ್ನು ಸ್ಥಾಪಿಸುವುದನ್ನು ಮತ್ತು ಕಾಪಾಡಿಕೊಳ್ಳುವುದನ್ನು ಅಗತ್ಯಪಡಿಸುತ್ತದೆ.
8 ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ಒಳಗೂಡಿರುವ ಆವಶ್ಯಕವಾದ ಅಂಶಗಳು: “ನಿಷ್ಕೃಷ್ಟವಾದ ಜ್ಞಾನ ಮತ್ತು ಸಂಪೂರ್ಣ ವಿವೇಚನಾ ಶಕ್ತಿ”ಯು ಒಂದು ಅಗತ್ಯವಾಗಿದೆ. (ಫಿಲಿ. 1:9, NW) ವೈಯಕ್ತಿಕ ಅಭ್ಯಾಸವು ನಮ್ಮ ನಂಬಿಕೆಯನ್ನು ಆಳಗೊಳಿಸುತ್ತದೆ, ಸತ್ಯಕ್ಕಾಗಿ ನಮ್ಮ ಗಣ್ಯತೆಯನ್ನು ಬಲಪಡಿಸುತ್ತದೆ, ಮತ್ತು ಒಳ್ಳೆಯ ಕೆಲಸಗಳಿಗಾಗಿ ನಮ್ಮನ್ನು ಪ್ರಚೋದಿಸುತ್ತದೆ. ಆದಾಗಲೂ, ಕೆಲವರು ತಮ್ಮ ಅಭ್ಯಾಸ ರೂಢಿಗಳಲ್ಲಿ ಸ್ಥಿರರಾಗಿರುವುದನ್ನು ಕಷ್ಟವಾದದ್ದಾಗಿ ಕಂಡುಕೊಂಡಿದ್ದಾರೆ. ಕೊಡಲ್ಪಡುವ ಮುಖ್ಯ ಕಾರಣಗಳಲ್ಲಿ ಒಂದು, ಸಮಯದ ಕೊರತೆಯಾಗಿದೆ.
9 ಪ್ರತಿನಿತ್ಯ ಬೈಬಲನ್ನು ಓದುವುದರ ಪ್ರಯೋಜನಗಳನ್ನು ಎಷ್ಟು ಒತ್ತಿ ಹೇಳಿದರೂ ಸಾಲದು. ಅದರ ಉಪದೇಶವು ಪ್ರತಿಯೊಂದು ರೀತಿಯಲ್ಲಿ “ಉಪಯುಕ್ತ” ವಾಗಿದೆ. (2 ತಿಮೊ. 3:16, 17) ನಮ್ಮ ದಿನನಿತ್ಯದ ನಿಯತಕ್ರಮದಲ್ಲಿ ಬೈಬಲ್ ಅಧ್ಯಯನಕ್ಕಾಗಿ ನಾವು ಸಮಯವನ್ನು ಹೇಗೆ ಕಂಡುಕೊಳ್ಳುವೆವು? ಹೀಗೆ ತಮ್ಮ ಮನಸ್ಸು ಎಚ್ಚರವಾಗಿರುವಾಗ, ಪ್ರತಿದಿನ ಬೆಳಗ್ಗೆ ಕೆಲವು ನಿಮಿಷಗಳು ಬೇಗನೆ ಏಳುವ ಮೂಲಕ ಮಾಡಶಕ್ತರೆಂದು ಕೆಲವರು ಕಂಡುಕೊಂಡಿದ್ದಾರೆ. ರಾತ್ರಿ ಮಲಗುವ ಮುನ್ನ ಕೆಲವು ನಿಮಿಷಗಳಷ್ಟು ಓದುವಾಗ ಅವರಿಗೆ ಉತ್ತಮವೆನಿಸುತ್ತದೆ ಎಂದು ಇತರರು ಕಂಡುಕೊಳ್ಳುತ್ತಾರೆ. ದಿನದಲ್ಲಿ ಮನೆಯಲ್ಲಿರುವ ಹೆಂಡತಿಯರು, ಶಾಲೆಯಿಂದ ಅಥವಾ ಕೆಲಸದಿಂದ ಇತರರು ಮನೆಗೆ ಹಿಂದಿರುಗುವುದಕ್ಕೆ ಮೊದಲು ಮಧ್ಯಾಹ್ನಗಳಲ್ಲಿ ಸ್ವಲ್ಪ ಸಮಯವನ್ನು ಬದಿಗಿರಿಸಲು ಶಕ್ತರಾಗಬಹುದು. ಕ್ರಮವಾದ ಬೈಬಲ್ ವಾಚನದೊಂದಿಗೆ, ಕೆಲವರು ತಮ್ಮ ವಾರದ ಅಧ್ಯಯನ ಕ್ರಮದಲ್ಲಿ ರಾಜ್ಯ ಘೋಷಕರು (ಇಂಗ್ಲಿಷ್ನಲ್ಲಿ) ಪುಸ್ತಕದ ಓದುವಿಕೆಯನ್ನು ಒಳಗೂಡಿಸಿದ್ದಾರೆ.
10 ನಾವು ಹೊಸ ಹವ್ಯಾಸಗಳನ್ನು ಸ್ಥಾಪಿಸುವಾಗ, ಅವು ನಮ್ಮ ಹಿಂದಿನ ಹವ್ಯಾಸಗಳೊಂದಿಗೆ ಸಂಘರ್ಷಿಸುತ್ತವೆಂಬುದು ಒಂದು ನೈಜವಾದ ಸಾಧ್ಯತೆಯಾಗಿದೆ. ಹಿಂದೆ ನಾವು ನಮಗೆ ದೊರಕುವ ಸಮಯವನ್ನು ಅನಗತ್ಯವಾದ ಚಟುವಟಿಕೆಗಳು ಬಳಸುವಂತೆ ಅನುಮತಿಸುವ ಪ್ರವೃತ್ತಿಯುಳ್ಳವರಾಗಿದ್ದಿರಬಹುದು. ಆ ಕಾರ್ಯವಿಧಾನದಿಂದ ಹೊರಬರುವುದು ಸುಲಭವಲ್ಲ. ಯಾರೊಬ್ಬರೂ ನಮ್ಮ ಅಧ್ಯಯನ ಹವ್ಯಾಸಗಳನ್ನು ನಿರ್ದೇಶಿಸುವುದಿಲ್ಲ; ಅಥವಾ ಇದರ ಕುರಿತು ನಾವೇನನ್ನು ಮಾಡುತ್ತೇವೊ ಅದರ ಲೆಕ್ಕವೊಪ್ಪಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಗುವುದಿಲ್ಲ. ನಮ್ಮ ಅಭ್ಯಾಸ ಹವ್ಯಾಸಗಳ ಸ್ಥಿರತೆಯು ಹೆಚ್ಚಾಗಿ “ಅಧಿಕ ಪ್ರಾಮುಖ್ಯ ವಿಷಯಗಳ” ಕುರಿತಾದ ನಮ್ಮ ಗಣ್ಯತೆ ಮತ್ತು ಅವುಗಳಿಂದ ಪ್ರಯೋಜನವನ್ನು ಪಡೆಯಲಿಕ್ಕಾಗಿ “ಕಾಲವನ್ನು ಬೆಲೆಯುಳ್ಳದ್ದೆಂದು” ಕೊಂಡುಕೊಳ್ಳಲು ನಮ್ಮ ಮನಃಪೂರ್ವಕವಾದ ಇಚ್ಛೆಯ ಮೇಲೆ ಆಧಾರಿಸಿದೆ.—ಫಿಲಿ. 1:10, NW; ಎಫೆ. 5:16.
11 ಅಗತ್ಯವಾದ ಬೋಧನೆ ಮತ್ತು ಉತ್ತೇಜನವನ್ನು ಒದಗಿಸುತ್ತಾ, ನಮ್ಮ ಆತ್ಮಿಕ ಪ್ರಗತಿಯಲ್ಲಿ ಕ್ರೈಸ್ತ ಕೂಟಗಳು ಒಂದು ಅತ್ಯಾವಶ್ಯಕವಾದ ಪಾತ್ರವನ್ನು ವಹಿಸುತ್ತವೆ. ಆದುದರಿಂದ, ಕೂಟಗಳನ್ನು ಹಾಜರಾಗುವುದು ನಮ್ಮ ಸುವ್ಯವಸ್ಥಿತವಾದ ನಿಯತಕ್ರಮದ ಇನ್ನೊಂದು ಅಗತ್ಯವಾದ ಭಾಗವಾಗಿದೆ. ಪೌಲನು ಇದರ ಪ್ರಮುಖತೆಯನ್ನು ಒತ್ತಿಹೇಳಿದನು. ಆದ್ಯತೆಯಿಂದ ನಿರ್ಧರಿಸಲ್ಪಡುವ ಒಂದು ಆಯ್ಕೆಯು ಇದಾಗಿರುವುದಿಲ್ಲ.—ಇಬ್ರಿ. 10:24, 25.
12 ನಮ್ಮ ಚಟುವಟಿಕೆಯ ವಾರದ ಕಾಲತಖ್ತೆಯನ್ನು ನಾವು ಯೋಜಿಸುವಾಗ, ಸುವ್ಯವಸ್ಥೆಯನ್ನು ಹೇಗೆ ಪ್ರದರ್ಶಿಸಸಾಧ್ಯವಿದೆ? ಕೆಲವರು ತಮ್ಮ ವೈಯಕ್ತಿಕ ಬೆನ್ನಟ್ಟುವಿಕೆಗಳ ಕಾಳಜಿ ವಹಿಸಲಿಕ್ಕಾಗಿ ನಿರ್ದಿಷ್ಟ ಸಮಯಗಳನ್ನು ಏರ್ಪಡಿಸುತ್ತಾರೆ ಮತ್ತು ಬಳಿಕ ಕೂಟಗಳನ್ನು ದೊರೆಯುವ ಯಾವುದೇ ಸಮಯದಲ್ಲಿ ಒಳಸೇರಿಸಲು ಪ್ರಯತ್ನಿಸುತ್ತಾರೆ, ಆದರೆ ಅದು ಇದಕ್ಕೆ ವಿರುದ್ಧವಾದ ರೀತಿಯಲ್ಲಿರಬೇಕು. ನಮ್ಮ ವಾರದ ಕೂಟಗಳಿಗೆ ಆದ್ಯತೆಯು ಕೊಡಲ್ಪಡಬೇಕು, ಮತ್ತು ಕೂಟಗಳು ಇಲ್ಲದಿರುವ ಸಮಯಗಳಲ್ಲಿ ಇತರ ಚಟುವಟಿಕೆಗಳು ಯೋಜಿಸಲ್ಪಡಬೇಕು.
13 ಕೂಟದ ಕ್ರಮವಾದ ಹಾಜರಿಯು ಒಳ್ಳೆಯ ಯೋಜನೆ ಮತ್ತು ಕುಟುಂಬದ ಸಹಕಾರವನ್ನು ಅಗತ್ಯಪಡಿಸುತ್ತದೆ. ವಾರದ ದಿನಗಳಲ್ಲಿ ನಮ್ಮಲ್ಲಿ ಅನೇಕರಿಗೆ ಚಟುವಟಿಕೆಯ ಕಾರ್ಯೋದ್ಯುಕ್ತ ಕಾಲತಖ್ತೆಯಿರುತ್ತದೆ, ಅದು ಅನೇಕವೇಳೆ ನಮ್ಮನ್ನು ಸಮಯದೊತ್ತಡಕ್ಕೊಳಗಾಗುವಂತೆ ಮಾಡಿಬಿಡುತ್ತದೆ. ಇದರ ಅರ್ಥವೇನಂದರೆ, ಸಾಧ್ಯವಿರುವುದಾದರೆ, ಕುಟುಂಬಕ್ಕೆ ಊಟಮಾಡಲು, ತಯಾರಾಗಲು, ಮತ್ತು ಕೂಟವು ಆರಂಭವಾಗುವುದಕ್ಕೆ ಮೊದಲು ಕೂಟಕ್ಕೆ ಆಗಮಿಸಲು ಸಾಕಷ್ಟು ಸಮಯವನ್ನು ಪಡೆದುಕೊಳ್ಳಲಿಕ್ಕಾಗಿ ಸಂಜೆಯೂಟವು ಸಾಕಷ್ಟು ಮೊದಲೇ ಏರ್ಪಡಿಸಲ್ಪಡಬೇಕು. ಇದಕ್ಕಾಗಿ ಕುಟುಂಬದ ಸದಸ್ಯರು ಅನೇಕ ವಿಧಗಳಲ್ಲಿ ಸಹಕರಿಸಬಲ್ಲರು.
14 ನಾವು ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ಪ್ರಗತಿಪರರಾಗಿ ಮುಂದುವರಿಯುತ್ತಾ ಹೋಗಬೇಕಾದಲ್ಲಿ ಕ್ರಮವಾದ ಕ್ಷೇತ್ರ ಸೇವೆಯು ಅವಶ್ಯವಾಗಿದೆ. ರಾಜ್ಯ ಸಂದೇಶವನ್ನು ಸಾರುವುದರ ಕುರಿತಾದ ನಮ್ಮ ಮಹತ್ತಾದ ಜವಾಬ್ದಾರಿಯನ್ನು ನಾವೆಲ್ಲರೂ ಸ್ಪಷ್ಟವಾಗಿಗಿ ಗ್ರಹಿಸುತ್ತೇವೆ. ಅದು ತಾನೇ ನಮ್ಮನ್ನು ಯೆಹೋವನ ಸಾಕ್ಷಿಗಳಾಗಿ ಮಾಡುತ್ತದೆ. (ಯೆಶಾ. 43:10) ಅದು ಅತ್ಯಂತ ತ್ವರಿತವಾಗಿರುವುದರಿಂದ ಮತ್ತು ಇಂದು ನಿರ್ವಹಿಸಲ್ಪಡುತ್ತಿರುವ ಪ್ರಯೋಜನಕರವಾದ ಕೆಲಸವು ಅದಾಗಿರುವುದರಿಂದ, ನಮ್ಮ ದೈನಂದಿನ ನಿಯತಕ್ರಮದ ಪ್ರಾಸಂಗಿಕವಾದ ಭಾಗದೋಪಾದಿ ಸೂಕ್ತವಾಗಿ ಅದನ್ನು ನಾವು ವೀಕ್ಷಿಸಬಲ್ಲ ಬೇರೊಂದು ಮಾರ್ಗವು ಇರುವುದಿಲ್ಲ. ಪೌಲನು ಎಚ್ಚರಿಸಿದಂತೆ: “ದೇವರಿಗೆ ಸ್ತೊತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ಆತನ ನಾಮಕ್ಕೆ ಸಾರ್ವಜನಿಕ ಘೋಷಣೆಯನ್ನು ಮಾಡುವ ತುಟಿಗಳ ಫಲವೇ ಅದಾಗಿದೆ.”—ಇಬ್ರಿ. 13:15, NW.
15 ಪ್ರತಿಯೊಂದು ವಾರಕ್ಕಾಗಿ ನಾವು ನಮ್ಮ ಚಟುವಟಿಕೆಯನ್ನು ಯೋಜಿಸುವಾಗ, ಕ್ಷೇತ್ರ ಸೇವೆಗಾಗಿ ನಿರ್ದಿಷ್ಟವಾದ ಸಮಯಗಳು ಬದಿಗಿರಿಸಲ್ಪಡಬೇಕು. ಪ್ರತಿ ವಾರ ಅನೇಕ ಸಮಯಗಳಲ್ಲಿ ಸಭೆಯು ಸೇವೆಗಾಗಿ ಕೂಟಗಳ ಏರ್ಪಾಡುಗಳನ್ನು ಹೊಂದಿರುವುದು ಸಂಭವನೀಯ, ಮತ್ತು ಅವುಗಳಲ್ಲಿ ಯಾವುದಕ್ಕೆ ನಾವು ಬೆಂಬಲ ನೀಡಬಲ್ಲೆವೆಂಬುದನ್ನು ನಿರ್ಧರಿಸುವುದರ ಕುರಿತಾದ ಒಂದು ವಿಷಯವು ಮಾತ್ರ ಅದಾಗಿರುತ್ತದೆ. ಪತ್ರಿಕೆಗಳು ಮತ್ತು ಇತರ ಸಾಹಿತ್ಯದೊಂದಿಗೆ ಮನೆಯಿಂದ ಮನೆಯ ಸೇವಾಕೆಲಸ, ಪುನರ್ಭೇಟಿಗಳು, ಮತ್ತು ಬೈಬಲ್ ಅಧ್ಯಯನಗಳಂತಹ ಸೇವೆಯ ಪ್ರತಿಯೊಂದು ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳಲಿಕ್ಕಾಗಿ ಎಟಕಿಸಿಕೊಳ್ಳುವುದು ಒಳ್ಳೆಯದಾಗಿರಬಹುದು. ಸಾಹಿತ್ಯಗಳನ್ನು ಕೊಂಡೊಯ್ಯುವ ಮೂಲಕ ಮತ್ತು ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಸಂದರ್ಭಗಳಿಗೆ ಎಚ್ಚರವಿರುವ ಮೂಲಕ ಅನೌಪಚಾರಿಕ ಸಾಕ್ಷಿಕಾರ್ಯಕ್ಕಾಗಿ ಸಹ ನಾವು ಮುಂದಾಗಿಯೇ ಯೋಜಿಸಬಹುದು. ನಾವು ಸಾಮಾನ್ಯವಾಗಿ ಇತರರೊಂದಿಗೆ ಕ್ಷೇತ್ರ ಸೇವೆಗಾಗಿ ಹೋಗುವುದರಿಂದ, ಪರಸ್ಪರವಾಗಿ ಅನುಕೂಲವಾಗಿರುವ ಏರ್ಪಾಡುಗಳನ್ನು ಮಾಡಶಕ್ತರಾಗುವಂತೆ ಅವರ ಕಾಲತಖ್ತೆಯ ಕುರಿತು ವಿಚಾರಿಸುವ ಅಗತ್ಯವಿದೆ.
16 ಟೆರಿಟೊರಿಯಲ್ಲಿ ಅನಾದರವಿದ್ದಾಗ್ಯೂ ಸಾರುವಿಕೆಯ ನಮ್ಮ ನಿಯತಕ್ರಮವು ಕಾಪಾಡಿಕೊಳ್ಳಲ್ಪಡಬೇಕು. ಕೇವಲ ಕೆಲವರು ಮಾತ್ರ ಸಮ್ಮತಿ ಸೂಚಕವಾಗಿ ಪ್ರತಿಕ್ರಿಯಿಸುವರೆಂದು ನಮಗೆ ಮುಂದಾಗಿಯೇ ತಿಳಿದದೆ. (ಮತ್ತಾ. 13:15; 24:9) ‘ದಂಗೆಕೋರರೂ, ದುರಹಂಕಾರಿಗಳೂ, ಮತ್ತು ಕಠಿನ ಹೃದಯಿಗಳೂ’ ಆಗಿದ್ದ ಜನರಿಗೆ ಸಾರುವಂತೆ ಯೆಹೆಜ್ಕೇಲನು ಆಜ್ಞಾಪಿಸಲ್ಪಟ್ಟಿದ್ದನು. ಅವನ ‘ಹಣೆಯನ್ನು ಅವರ ಹಣೆಯಷ್ಟೇ ಗಟ್ಟಿಯಾಗಿ’ ಅಂದರೆ, “ಕಗ್ಗಲ್ಲಿಗಿಂತ ಕಠಿನವಾದ ವಜ್ರ” ದಂತೆ ಮಾಡುವ ಮೂಲಕ ಯೆಹೆಜ್ಕೇಲನಿಗೆ ಸಹಾಯಮಾಡುವೆನೆಂದು ಯೆಹೋವನು ವಾಗ್ದಾನಿಸಿದನು. (ಯೆಹೆ. 2:3, 4; 3:7-9) ಆದುದರಿಂದ ಸೇವೆಗಾಗಿ ಒಂದು ಕ್ರಮವಾದ ನಿಯತಕ್ರಮವು ಸತತ ಪ್ರಯತ್ನವನ್ನು ಅಗತ್ಯಪಡಿಸುತ್ತದೆ.
17 ಅನುಕರಿಸಲಿಕ್ಕಾಗಿ ಒಳ್ಳೆಯ ಉದಾಹರಣೆಗಳು: ಮುಂದಾಳುತನವನ್ನು ತೆಗೆದುಕೊಳ್ಳುವ ಯಾರಾದರೊಬ್ಬರು ಇರುವಾಗ ನಮ್ಮಲ್ಲಿ ಅನೇಕರು ಕ್ಷೇತ್ರ ಸೇವೆಯಲ್ಲಿ ಹೆಚ್ಚು ಉತ್ತಮವಾಗಿ ಕಾರ್ಯನಡಿಸುತ್ತೇವೆ. ಪೌಲನು ಮತ್ತು ಅವನ ಸಂಗಡಿಗರು ಒಂದು ಒಳ್ಳೆಯ ಮಾದರಿಯನ್ನಿಟ್ಟರು, ಮತ್ತು ಅವನನ್ನು ಅನುಕರಿಸುವಂತೆ ಅವನು ಇತರರನ್ನು ಪ್ರೋತ್ಸಾಹಿಸಿದನು. (ಫಿಲಿ. 3:17) ತನ್ನನ್ನು ಆತ್ಮಿಕವಾಗಿ ದೃಢವಾಗಿರಿಸಿಕೊಳ್ಳಲಿಕ್ಕಾಗಿ ಅಗತ್ಯವಾದ ಎಲ್ಲಾ ಅಂಶಗಳನ್ನು ಅವನ ನಿಯತಕ್ರಮವು ಒಳಗೊಂಡಿತ್ತು.
18 ಇಂದು ಸಹ ಅತ್ಯುತ್ತಮವಾದ ಉದಾಹರಣೆಗಳಿಂದ ನಾವು ಆಶೀರ್ವದಿಸಲ್ಪಟ್ಟಿದ್ದೇವೆ. ಇಬ್ರಿಯ 13:7 ರಲ್ಲಿ, ಪೌಲನು ಒತ್ತಾಯಿಸಿದ್ದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; . . . ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” ಕ್ರಿಸ್ತನು ನಮ್ಮ ಮಾದರಿಯಾಗಿದ್ದಾನೆ ನಿಶ್ಚಯ, ಆದರೆ ಮುಂದಾಳುತನವನ್ನು ತೆಗೆದುಕೊಳ್ಳುವವರಿಂದ ಅಭ್ಯಸಿಸಲ್ಪಡುವ ನಂಬಿಕೆಯನ್ನು ನಾವು ಅನುಕರಿಸಬಲ್ಲೆವು. ಪೌಲನಂತೆ, ಹಿರಿಯರು ಇತರರಿಗೆ ಒಳ್ಳೆಯ ಮಾದರಿಗಳಾಗಿರಬೇಕಾದ ಅಗತ್ಯದ ಕುರಿತು ಎಚ್ಚರವುಳ್ಳವರಾಗಿರಬೇಕು. ಅವರ ವೈಯಕ್ತಿಕ ಪರಿಸ್ಥಿತಿಗಳು ಬದಲಾಗಬಹುದಾದರೂ, ರಾಜ್ಯ ಅಭಿರುಚಿಗಳನ್ನು ಪ್ರಥಮವಾಗಿಡುವುದರಲ್ಲಿ ಅವನು ಸುವ್ಯವಸ್ಥಿತವಾದ ನಿಯತಕ್ರಮವನ್ನು ಕಾಪಾಡಿಕೊಳ್ಳುತ್ತಿದ್ದಾನೆಂಬುದನ್ನು ಪ್ರತಿಯೊಬ್ಬನೂ ತೋರಿಸಲು ಶಕ್ತನಾಗಿರಬೇಕು. ಸ್ಥಳೀಯವಾದ ಮತ್ತು ಕುಟುಂಬದ ಹಂಗುಗಳು ಇರುವಾಗಲೂ, ವೈಯಕ್ತಿಕ ಅಭ್ಯಾಸ, ಕೂಟದ ಹಾಜರಿ, ಮತ್ತು ಕ್ಷೇತ್ರ ಸೇವೆಯಲ್ಲಿ ಮುಂದಾಳುತ್ವವನ್ನು ತೆಗೆದುಕೊಳ್ಳುವುದರಲ್ಲಿ ಹಿರಿಯರು ಸುವ್ಯವಸ್ಥಿತವಾದ ಹವ್ಯಾಸಗಳಿರುವವರಾಗಿರಬೇಕು. ಅವರು ‘ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವರೂ’ ಆಗಿದ್ದಾರೆಂದು ಹಿರಿಯರು ಸ್ಪಷ್ಟಪಡಿಸುವುದರ ಮೂಲಕ, ಸಭೆಯಲ್ಲಿರುವ ಎಲ್ಲರು ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ಕಾರ್ಯನಡಿಸುತ್ತಾ ಹೋಗುವಂತೆ ಪ್ರೋತ್ಸಾಹಿಸಲ್ಪಡುವರು.—1 ತಿಮೊ. 3:4, 5.
19 ಹೊಸ ಸೇವಾ ವರ್ಷಕ್ಕಾಗಿ ಗುರಿಗಳು: ನಮ್ಮ ವೈಯಕ್ತಿಕ ನಿಯತಕ್ರಮದ ಮೇಲೆ ಪ್ರತಿಬಿಂಬಿಸಲು ಹೊಸ ಸೇವಾ ವರ್ಷದ ಆರಂಭವು ಸೂಕ್ತವಾದ ಒಂದು ಸಮಯವಾಗಿದೆ. ಕಳೆದ ವರ್ಷದ ನಮ್ಮ ಚಟುವಟಿಕೆಯ ಒಂದು ಪುನರ್ವಿಮರ್ಶೆಯು ಏನನ್ನು ತೋರಿಸುತ್ತದೆ? ನಮ್ಮ ಚಟುವಟಿಕೆಯ ಮಟ್ಟವನ್ನು ಕಾಪಾಡಿಕೊಳ್ಳಲು ಅಥವಾ ಬಹುಶಃ ಪ್ರಗತಿಗೊಳಿಸಲು ನಾವು ಶಕ್ತರಾಗಿದ್ದೇವೊ? ನಮ್ಮ ವೈಯಕ್ತಿಕ ಅಭ್ಯಾಸದಲ್ಲಿ ನಾವು ಹೆಚ್ಚು ಸಂಪೂರ್ಣರಾಗಿದ್ದಿರಬಹುದು. ನಾವು ಕೂಟಗಳನ್ನು ಹೆಚ್ಚು ಉತ್ತಮವಾದ ಕ್ರಮದಲ್ಲಿ ಹಾಜರಾಗಿದ್ದಿರಬಹುದು ಅಥವಾ ಆಕ್ಸಿಲಿಯರಿ ಪಯನೀಯರರೋಪಾದಿ ದಾಖಲಾಗುವ ಮೂಲಕ ನಮ್ಮ ಕ್ಷೇತ್ರ ಸೇವೆಯನ್ನು ಅಧಿಕಗೊಳಿಸಿರಬಹುದು. ನಮ್ಮ ಸಭೆ ಅಥವಾ ಕುಟುಂಬದಲ್ಲಿರುವ ಇತರರಿಗಾಗಿ ನಾವು ನಿರ್ವಹಿಸಿರುವ ಕ್ರೈಸ್ತ ದಯೆಯ ಕುರಿತಾದ ನಿರ್ದಿಷ್ಟವಾದ ಕೃತ್ಯಗಳನ್ನು ಗುರುತಿಸಲು ನಾವು ಶಕ್ತರಾಗಿರಬಹುದು. ಹಾಗಿರುವಲ್ಲಿ, ದೇವರನ್ನು ಸಂತೋಷಪಡಿಸುವ ಒಂದು ಮಾರ್ಗದಲ್ಲಿ ನಾವು ನಡೆದಿದ್ದೇವೆಂದು ಹರ್ಷಿಸಲು ನಮಗೆ ಕಾರಣವಿದೆ, ಮತ್ತು ‘ಅದನ್ನು ಇನ್ನೂ ಹೆಚ್ಚಾಗಿ ಮಾಡುತ್ತಾ ಇರಲು’ ನಮಗೆ ಸಕಾರಣವಿದೆ.—1 ಥೆಸ. 4:1.
20 ನಮ್ಮ ನಿಯತಕ್ರಮವು ಅಸಂಗತವೂ ವಿರಳವೂ ಆದದ್ದಾಗಿರುವುದಾದರೆ ಆಗೇನು. ಆತ್ಮಿಕವಾಗಿ ನಾವು ಹೇಗೆ ಪ್ರಭಾವಿಸಲ್ಪಟ್ಟಿದ್ದೇವೆ? ಯಾವುದೋ ಕಾರಣಕ್ಕಾಗಿ ನಮ್ಮ ಪ್ರಗತಿಯು ತಡೆಹಿಡಿಯಲ್ಪಟ್ಟಿತ್ತೊ? ಯೆಹೋವನ ಸಹಾಯಕ್ಕಾಗಿ ಬೇಡುವುದರ ಮೂಲಕ ಪ್ರಗತಿಯು ಆರಂಭವಾಗುತ್ತದೆ. (ಫಿಲಿ. 4:6, 13) ನಿಮ್ಮ ನಿಯತಕ್ರಮದ ಸರಿಹೊಂದಿಸುವ ಅಂಶಗಳ ಕುರಿತು ಅವರ ಸಹಾಯವನ್ನು ಕೇಳಿಕೊಳ್ಳುತ್ತಾ, ನಿಮ್ಮ ಅಗತ್ಯಗಳನ್ನು ನಿಮ್ಮ ಕುಟುಂಬದ ಇತರರೊಂದಿಗೆ ಚರ್ಚಿಸಿರಿ. ನಿಮಗೆ ಸಮಸ್ಯೆಗಳಿರುವಲ್ಲಿ, ಹಿರಿಯರನ್ನು ಸಹಾಯಕ್ಕಾಗಿ ಕೇಳಿಕೊಳ್ಳಿರಿ. ನಾವು ಮನಃಪೂರ್ವಕವಾದ ಪ್ರಯತ್ನವನ್ನು ಮಾಡುವುದಾದರೆ ಮತ್ತು ಯೆಹೋವನ ಮಾರ್ಗದರ್ಶನೆಗೆ ಪ್ರತಿಕ್ರಿಯಿಸುವುದಾದರೆ, “ಆಲಸ್ಯಗಾರರೂ ನಿಷ್ಫಲರೂ” ಆಗುವುದನ್ನು ನಾವು ತೊರೆಯುವೆವೆಂದು ನಾವು ಭರವಸೆಯಿಂದಿರಸಾಧ್ಯವಿದೆ.—2 ಪೇತ್ರ 1:5-8.
21 ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ನಡೆಯುವುದು, ನಿಮ್ಮ ಪ್ರಯತ್ನಗಳನ್ನು ಸಾರ್ಥಕವನ್ನಾಗಿ ಮಾಡುವ ಆಶೀರ್ವಾದಗಳಿಗೆ ನಡೆಸುತ್ತದೆ. ನೀವು ಸುವ್ಯವಸ್ಥಿತವಾದ ನಿಯತಕ್ರಮದಲ್ಲಿ ಪ್ರಗತಿಪರರಾಗಿ ನಡೆಯಲು ನಿರ್ಧರಿಸಿದಂತೆ, “ನಿಮ್ಮ ಕೆಲಸದಲ್ಲಿ ಸಾವಕಾಶಮಾಡದಿರಿ. ಆತ್ಮದಿಂದ ಪ್ರಕಾಶಿಸುತ್ತಾ ಇರಿ. ಯೆಹೋವನಿಗೆ ಸೇವಕರಾಗಿರಿ.” (ರೋಮಾ. 12:11, NW)—ಈ ವಿಷಯದ ಕುರಿತಾದ ಹೆಚ್ಚು ವಿವರವಾದ ಪರಿಗಣನೆಗಾಗಿ, ಮೇ 1, 1985ರ ಕಾವಲಿನಬುರುಜು ವಿನ ಪುಟಗಳು 13-17 ನೋಡಿರಿ.