ಮಾನವ ಇತಿಹಾಸದಲ್ಲಿ ಅತಿ ಪ್ರಮುಖ ಘಟನೆ
1 ತನ್ನ ತಂದೆಯ ನಿರ್ದೇಶಕ್ಕನುಸಾರ, ನಮ್ಮನ್ನು ನಿತ್ಯ ಜೀವಕ್ಕೆ ನಡಿಸಸಾಧ್ಯವಿರುವ ಸತ್ಯಕ್ಕೆ ಸಾಕ್ಷಿಯನ್ನು ನೀಡಲಿಕ್ಕಾಗಿ, ಯೇಸು ಭೂಮಿಗೆ ಬಂದನು. (ಯೋಹಾನ 18:37) ಮರಣದ ತನಕ ಆತನ ನಂಬಿಗಸ್ತಿಕೆಯು ಯೆಹೋವನಿಗೆ ಗೌರವವನ್ನು ತಂದಿತು, ದೇವರ ನಾಮವನ್ನು ಪವಿತ್ರೀಕರಿಸಿತು, ಮತ್ತು ಒಂದು ಪ್ರಾಯಶ್ಚಿತವ್ತನ್ನು ಒದಗಿಸಿತು. (ಯೋಹಾನ 17:4, 6) ಇದು ತಾನೇ ಮಾನವ ಇತಿಹಾಸದಲ್ಲಿ ಯೇಸುವಿನ ಮರಣವನ್ನು ಅತಿ ಪ್ರಮುಖ ಘಟನೆಯನ್ನಾಗಿ ಮಾಡಿತು.
2 ಆದಾಮನ ಸೃಷ್ಟಿಯಂದಿನಿಂದ, ಈ ಭೂಮಿಯ ಮೇಲೆ ಜೀವಿಸಿರುವವರಲ್ಲಿ ಕೇವಲ ಇಬ್ಬರು ಪರಿಪೂರ್ಣ ಮನುಷ್ಯರಿದ್ದರು. ಆದಾಮನು ತನ್ನ ಅಜನಿತ ಸಂತಾನಕ್ಕೆ ಅದ್ಭುತಕರ ಆಶೀರ್ವಾದಗಳನ್ನು ತರುವ ಸ್ಥಾನದಲ್ಲಿದ್ದನು. ಅದರ ಬದಲು, ಆತನು ಸ್ವಾರ್ಥಪರವಾಗಿ ದಂಗೆಯೆದ್ದು, ಮರಣದಲ್ಲಿ ಅಂತ್ಯಗೊಳ್ಳುವ ಒಂದು ದರಿದ್ರ ಅಸ್ತಿತ್ವಕ್ಕೆ ಅವರನ್ನು ತಳ್ಳಿದನು. ಯೇಸು ಬಂದಾಗ, ಆತನು ಪರಿಪೂರ್ಣವಾದ ನಿಷ್ಠೆ ಮತ್ತು ವಿಧೇಯತೆಯನ್ನು ಪ್ರದರ್ಶಿಸಿ, ನಂಬಿಕೆಯನ್ನು ಆಚರಿಸುವವರೆಲರ್ಲಿಗೆ ನಿತ್ಯ ಜೀವದ ಅವಕಾಶವನ್ನು ತೆರೆದನು.—ಯೋಹಾ. 3:16; ರೋಮಾ. 5:12.
3 ಯೇಸುವಿನ ಯಜ್ಞಾರ್ಪಿತ ಮರಣದೊಂದಿಗೆ ಬೇರೆ ಯಾವುದೇ ಘಟನೆಯು ಸರಿದೂಗದು. ಅದು ಮಾನವ ಇತಿಹಾಸದ ಪಥವನ್ನು ಬದಲಾಯಿಸಿತು. ಅದು ಸತ್ತವರಿಂದ ಕೋಟ್ಯಂತರ ಜನರನ್ನು ಪುನರುತ್ಥಾನಗೊಳಿಸಲು ಆಧಾರವನ್ನು ಒದಗಿಸಿತು. ದುಷ್ಟತನಕ್ಕೆ ಒಂದು ಅಂತ್ಯವನ್ನು ತರುವ ಮತ್ತು ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡಲಿರುವ ಒಂದು ಶಾಶ್ವತವಾದ ರಾಜ್ಯಕ್ಕೆ ಅಸ್ತಿವಾರವನ್ನು ಹಾಕಿತು. ಕಟ್ಟಕಡೆಗೆ ಎಲ್ಲಾ ಮಾನವಕುಲವನ್ನು ದಬ್ಬಾಳಿಕೆ ಮತ್ತು ದಾಸತ್ವದಿಂದ ಅದು ಸ್ವತಂತ್ರಗೊಳಿಸುವುದು.—ಕೀರ್ತ. 37:11; ಅ. ಕೃ. 24:15; ರೋಮಾ. 8:21, 22.
4 ಜ್ಞಾಪಕದ ಆಚರಣೆಯೊಂದಿಗೆ ಪ್ರತಿ ವರ್ಷ ತನ್ನ ಮರಣವನ್ನು ಸ್ಮರಿಸಲು ಯೇಸು ತನ್ನ ಶಿಷ್ಯರಿಗೆ ಉಪದೇಶಿಸಿದ ಕಾರಣವನ್ನು ಗಣ್ಯಮಾಡಲು ಇದೆಲ್ಲವು ಸಹಾಯ ಮಾಡುತ್ತದೆ. (ಲೂಕ 22:19) ಅದರ ಮಹತ್ವವನ್ನು ಗಣ್ಯಮಾಡುತ್ತಾ, ಶುಕ್ರವಾರ, ಎಪ್ರಿಲ್ 14 ರಂದು ಸೂರ್ಯಾಸ್ತಮಾನದ ಅನಂತರ ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಭೆಗಳೊಂದಿಗೆ ಜೊತೆಸೇರಲು ನಾವು ಮುನ್ನೋಡುತ್ತೇವೆ. ಆ ಸಮಯಕ್ಕೆ ಮೊದಲು, ಭೂಮಿಯ ಮೇಲೆ ಯೇಸುವಿನ ಕಡೆಯ ದಿನಗಳ ಮತ್ತು ಸತ್ಯಕ್ಕಾಗಿ ಅವನ ಧೈರ್ಯದ ನಿಲುವಿನ ಕುರಿತಾದ ಬೈಬಲ್ ವೃತ್ತಾಂತಗಳನ್ನು ಒಂದು ಕುಟುಂಬದೋಪಾದಿ ಓದುವುದು ಒಳ್ಳೇಯದು. (ಶಿಫಾರಸ್ಸು ಮಾಡಲ್ಪಟ್ಟ ಭಾಗಗಳು 1995 ಕ್ಯಾಲೆಂಡರ್ ನಲ್ಲಿ ಎಪ್ರಿಲ್ 9-14 ರಲ್ಲಿ ಗುರುತುಮಾಡಲ್ಪಟ್ಟಿವೆ.) ನಮ್ಮ ಸೃಷ್ಟಿಕರ್ತನಿಗೆ ತೋರಿಸಬೇಕಾದ ಭಕ್ತಿಯ ವಿಷಯದಲ್ಲಿ ಆತನು ನಮಗೆ ಒಂದು ನಮೂನೆಯನ್ನು ಇಟ್ಟನು. (1 ಪೇತ್ರ 2:21) ಈ ಪ್ರಮುಖ ಒಟ್ಟುಗೂಡುವಿಕೆಗೆ ನಮ್ಮ ಸ್ನೇಹಿತರನ್ನು ಮತ್ತು ಕುಟುಂಬವನ್ನು, ಹಾಗೂ ಬೈಬಲ್ ವಿದ್ಯಾರ್ಥಿಗಳನ್ನು ಮತ್ತು ಇತರ ಆಸಕ್ತ ವ್ಯಕ್ತಿಗಳನ್ನು ಆಮಂತ್ರಿಸಲು, ನಮ್ಮ ಕೈಲಾದದ್ದೆಲ್ಲವನ್ನು ನಾವು ಮಾಡೋಣ. ಏನು ನಡೆಯಲಿದೆ ಎಂಬುದನ್ನು ಮತ್ತು ಕುರುಹುಗಳ ಅರ್ಥವನ್ನು ಮುಂಚಿತವಾಗಿಯೇ ವಿವರಿಸಿರಿ.—1 ಕೊರಿಂ. 11:23-26.
5 ರಾಜ್ಯ ಸಭಾಗೃಹವು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇದೆಯೆಂದು ಖಚಿತಪಡಿಸಲು ಹಿರಿಯರು ಸಾಕಷ್ಟು ಮುಂಚೆ ಯೋಜಿಸಬೇಕು. ಯಾರಾದರೂ ಕುರುಹುಗಳನ್ನು ತರುವಂತೆ ಏರ್ಪಾಡುಗಳನ್ನು ಮಾಡಬೇಕಾಗಿದೆ. ಕುರುಹುಗಳ ದಾಟಿಸುವಿಕೆಯು ಚೆನ್ನಾಗಿ ವ್ಯವಸ್ಥಿತವಾಗಿರಬೇಕು. ಕರ್ತನ ಸಂಧ್ಯಾ ಭೋಜನಕ್ಕೆ ನಾವು ಗೌರವವನ್ನು ತೋರಿಸಬಹುದಾದ ವಿಧದ ಕುರಿತಾಗಿ ಸಹಾಯಕಾರಿ ಸಲಹೆಗಳು ಮಾರ್ಚ್ 1, 1985ರ ಕಾವಲಿನಬುರುಜು ಪುಟ 21 ರಲ್ಲಿ (ಇಂಗ್ಲಿಷಿನಲ್ಲಿ ಫೆಬ್ರವರಿ 15, 1985, ಪುಟ 19) ಕೊಡಲ್ಪಟ್ಟಿದ್ದವು. ಆಚರಣೆಯ ಮುಂಚಿನ ಕೆಲವು ದಿವಸಗಳಲ್ಲಿ ಮತ್ತು ಅದನ್ನು ಹಿಂಬಾಲಿಸುವ ಕೆಲವು ದಿವಸಗಳಿಗೆ ಸಭೆಯು ವಿಸ್ತರಿತವಾದ ಕ್ಷೇತ್ರ ಸೇವಾ ಚಟುವಟಿಕೆಗಳನ್ನು ಏರ್ಪಡಿಸುವುದು ಯೋಗ್ಯವಾಗಿರುವದು.
6 ಕಳೆದ ವರ್ಷ, ಈ ಪ್ರಾಮುಖ್ಯ ಘಟನೆಯ ಆಚರಣೆಗೆ ಒಟ್ಟು 1,22,88,917 ಜನರು ಹಾಜರಿದ್ದರು. ನಮ್ಮ ಕ್ಯಾಲೆಂಡರ್ನಲ್ಲಿ ಇದು ಅತಿ ಮಹತ್ವದ ದಿನವಾಗಿರುವದರಿಂದ, ನಾವು ಎಲ್ಲರೂ ಉಪಸ್ಥಿತರಿರಬೇಕು.