ಮನೆಯಲ್ಲಿಲ್ಲದವರ ಒಂದು ರೆಕಾರ್ಡನ್ನು ಏಕೆ ಇಡಬೇಕು?
1 ಒಬ್ಬ ಸಾಕ್ಷಿ ದಂಪತಿಗಳು ದಿನದ ಆರಂಭದಲ್ಲಿ ಕ್ಷೇತ್ರ ಸೇವೆಯಲ್ಲಿ ಹೊರಗೆ ಇದ್ದರು. ಅನಂತರ ಅದೇ ದಿನ, ಆ ಟೆರಿಟೊರಿಯಲ್ಲಿರುವ ಮನೆಯಲ್ಲಿಲ್ಲದವರನ್ನು ಸಂದರ್ಶಿಸಲು ಅವರು ಹಿಂದಿರುಗಿದರು. ಒಬ್ಬ ಮನುಷ್ಯನು ಅವರನ್ನು ಒಳಗೆ ಆಮಂತ್ರಿಸಿ, ತೀವ್ರಾಭಿಲಾಷೆಯಿಂದ ಕಿವಿಗೊಟ್ಟನು. ಅವನು ಒಂದು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ತೆಗೆದುಕೊಂಡನು ಮತ್ತು ಸಾಕ್ಷಿಗಳು ಹಿಂದಿರುಗಿ ಬರುವರೋ ಎಂದು ಕೇಳಿದನು. ಅವನು ಈ ಮುಂಚೆ ಎಂದೂ ಯೆಹೋವನ ಸಾಕ್ಷಿಗಳೊಂದಿಗೆ ಮಾತಾಡಿರಲಿಲ್ಲ ಮತ್ತು ಅವನ ಅನೇಕ ಪ್ರಶ್ನೆಗಳು ಉತ್ತರಿಸಲ್ಪಡುವಂತೆ ಬಯಸಿದನು; ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ಈ ದಂಪತಿಗಳು ಇಂತಹ ಕುರಿಸದೃಶವಾದ ಒಬ್ಬ ವ್ಯಕ್ತಿಯನ್ನು ಕಂಡುಹಿಡಿದದ್ದಕ್ಕಾಗಿ ಅತ್ಯಾನಂದಿಸಿದರು. ಅಂತಹ ಒಂದು ಅನುಭವವನ್ನು ಪಡೆದುಕೊಳ್ಳಲು ನೀವು ಇಷ್ಟಪಡುತ್ತೀರೋ? ಮನೆಯಲ್ಲಿಲ್ಲದವರ ಒಂದು ಒಳ್ಳೆಯ ರೆಕಾರ್ಡನ್ನು ಇಡುವುದು ಮತ್ತು ತಡವಿಲ್ಲದೆ ಹಿಂದಿರುಗುವುದು ನಿಮಗೆ ಹಾಗೆ ಮಾಡಲು ಸಾಧ್ಯಮಾಡಬಹುದು.
2 ಮನೆಯಲ್ಲಿಲ್ಲದವರ ಒಂದು ನಿಷ್ಕೃಷ್ಟ ರೆಕಾರ್ಡನ್ನು ಇಡುವಂತೆ ಮತ್ತು ಬೇಗನೆ ಪುನಃ ಒಮ್ಮೆ ಸಂದರ್ಶಿಸುವಂತೆ ನಮ್ಮನ್ನು ಪದೇ ಪದೇ ಉತ್ತೇಜಿಸಲಾಗಿದೆ. ಮೇಲಿನ ಅನುಭವವು ತೋರಿಸುವಂತೆ, ಅದೇ ದಿನದಲ್ಲಿ ಇನ್ನೊಂದು ಭೇಟಿಯು ಅತ್ಯುತ್ತಮವಾದ ಫಲಿತಾಂಶಗಳನ್ನು ತರಬಹುದು. ನೇಮಿಸಲ್ಪಟ್ಟ ಟೆರಿಟೊರಿಯನ್ನು ಆವರಿಸುವುದರಲ್ಲಿ ನಾವು ತತ್ಪರರಾಗಿರುವಾಗ, ಮನೆಯಲ್ಲಿಲ್ಲದವರ ಒಂದು ರೆಕಾರ್ಡನ್ನು ಇಡುವುದರಲ್ಲಿ ನಾವು ಪ್ರಾಯಶಃ ಶ್ರದ್ಧಾಪೂರ್ವಕರಾಗಿರಲಿಕ್ಕಿಲ್ಲ. ಕೆಲವರು ಹೇಳುತ್ತಾರೆ: ‘ನಾವು ನಮ್ಮ ಟೆರಿಟೊರಿಯನ್ನು ಪ್ರತಿ ಎರಡು ಅಥವಾ ಮೂರು ವಾರಗಳಲ್ಲಿ ಆವರಿಸುತ್ತೇವೆ; ನಾವೂ ಹೇಗೂ ಬೇಗನೆ ಹಿಂದೆ ಬರಲಿರುವದರಿಂದ ಅಂತಹ ಒಂದು ರೆಕಾರ್ಡನ್ನು ಇಡುವ ಅಗತ್ಯವಿಲ್ಲ.’ ಆದರೆ ಇದು ನಾವು ಒಂದು ರೆಕಾರ್ಡನ್ನು ಇಡುವಂತೆ ಇನ್ನೂ ಹೆಚ್ಚಿನ ಕಾರಣವನ್ನು ನಮಗೆ ಕೊಡುತ್ತದೆ. ಎಲ್ಲಿ ಟೆರಿಟೊರಿಯನ್ನು ಪದೇ ಪದೇ ಆವರಿಸಲಾಗುತ್ತದೋ, ಅಲ್ಲಿ ಮನೆಯಲ್ಲಿಲ್ಲದವರನ್ನು ಅನುಸರಿಸಿ ಹೋಗುವುದು ಅರ್ಹರಾಗಿರುವವರನ್ನು ಹುಡುಕಿ ತೆಗೆಯುವುದರಲ್ಲಿ ಹೆಚ್ಚು ಸಂಪೂರ್ಣರಾಗಿರಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅದು ಹೇಗೆ?
3 ಅನೇಕ ಕ್ಷೇತ್ರಗಳಲ್ಲಿ, ನಿವಾಸಿಗಳಲ್ಲಿ 50 ಶೇಕಡ ಅಥವಾ ಹೆಚ್ಚಿನವರು ದಿನದ ಸಮಯದಲ್ಲಿ ಮನೆಯಲ್ಲಿರುವುದಿಲ್ಲ. ಆದುದರಿಂದ ವಾಸ್ತವದಲ್ಲಿ, ಮನೆಯಲ್ಲಿಲ್ಲದವರ ಮೇಲೆ ಹೆಚ್ಚು ಕೇಂದ್ರೀಕರಿಸುವ ಮೂಲಕ ನಾವು ಹೆಚ್ಚು ಟೆರಿಟೊರಿಯನ್ನು ಲಭ್ಯಗೊಳಿಸುತ್ತೇವೆ. ಟೆರಿಟೊರಿಯು ಕೆಲವೇ ಸಲ ಆವರಿಸಲ್ಪಟ್ಟರೂ, ಟೆರಿಟೊರಿಯು ಆವರಿಸಲ್ಪಟ್ಟಿದೆಯೆಂದು ಗುರುತಿಸುವ ಮುಂಚೆ ಎಲ್ಲರನ್ನು ತಲಪಲು ಒಂದು ಪ್ರಯತ್ನವನ್ನು ಮಾಡಲಾಗುವಾಗ ನಾವು ಪರಿಣಾಮಗಳನ್ನು ಉತ್ತಮಗೊಳಿಸಬಲ್ಲೆವು.
4 ಮನೆಯಲ್ಲಿಲ್ಲದವರನ್ನು ಸಂದರ್ಶಿಸುವುದನ್ನು ಸಾಮಾನ್ಯವಾಗಿ ಇನ್ನೊಂದು ದಿನಕ್ಕಾಗಿ, ಹೆಚ್ಚಾಗಿ ಒಂದೇ ವಾರದೊಳಗೆ ಮಾಡಲು ಏರ್ಪಡಿಸಸಾಧ್ಯವಿದೆ. ಪ್ರಥಮ ಭೇಟಿಯು ಮಾಡಲ್ಪಟ್ಟಿರುವಂತಹದಕ್ಕಿಂತ ಭಿನ್ನವಾದ ಒಂದು ದಿನ ಮತ್ತು ಸಮಯದಲ್ಲಿ ಹಿಂದಿರುಗುವುದು ಒಳ್ಳೆಯದೆಂದು ಕೆಲವರು ಕಂಡುಕೊಳ್ಳುತ್ತಾರೆ. ವಾರದಲ್ಲಿ ಬರೆದಿಟ್ಟಂತಹ ಮನೆಯಲ್ಲಿಲ್ಲದವರನ್ನು ಅನುಸರಿಸಲು ಶನಿವಾರ ಅಥವಾ ಆದಿತ್ಯವಾರದಂದು ಸ್ವಲ್ಪ ಸಮಯವನ್ನು ಉಪಯೋಗಿಸಲು ನೀವು ಆರಿಸಬಹುದು. ಮತ್ತು ಇನ್ನೊಂದು ಸಾಧ್ಯತೆಯಾಗಿ, ಸಾಯಂಕಾಲದ ಆರಂಭದ ತಾಸುಗಳಲ್ಲಿ ಅಂತಹ ಭೇಟಿಗಳನ್ನು ಮಾಡುವುದು ಫಲದಾಯಕವೆಂದು ಅನೇಕ ಸಭೆಗಳು ಕಂಡುಹಿಡಿದಿವೆ. ಅರ್ಧಕ್ಕಿಂತ ಹೆಚ್ಚಿನ ನಿವಾಸಿಗಳು ಮನೆಯಲ್ಲಿರುವದನ್ನು ಅವರು ಕಂಡುಕೊಳ್ಳಬಹುದು.
5 ಪುನರ್ಭೇಟಿಗಳನ್ನು ನೀವು ನಿಮ್ಮ ವೈಯಕ್ತಿಕ ರೆಕಾರ್ಡುಗಳಲ್ಲಿ ಪಟ್ಟಿಮಾಡಬೇಕು. ಎಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲವೋ ಅಲ್ಲಿ ಹೋಗಲು ನೀವು ಅಶಕ್ತರಾಗಿರುವಲ್ಲಿ, ಮನೆಯಲ್ಲಿಲ್ಲದವರ ನಿಮ್ಮ ರೆಕಾರ್ಡು, ಆ ಟೆರಿಟೊರಿಯಲ್ಲಿ ಹೋಗುವ ಮುಂದಿನ ಗುಂಪು ಉಪಯೋಗಿಸಲಾಗುವಂತೆ, ಸೇವಾ ಗುಂಪನ್ನು ನಿರ್ವಹಿಸುವ ಸಹೋದರನಿಗೆ ಕೊಡಲ್ಪಡಬೇಕು.
6 ನಮ್ಮ ಶುಶ್ರೂಷೆಯ ಈ ಅಂಶಕ್ಕೆ ಹೆಚ್ಚು ನಿಕಟವಾದ ಗಮನವನ್ನು ಕೊಡುವುದು ನಮ್ಮ ಉತ್ಪನ್ನತೆ ಹಾಗೂ ನಮ್ಮ ಆನಂದವನ್ನು ಹೆಚ್ಚಿಸಬಲ್ಲದು. ಕುರಿಸದೃಶರಿಗಾಗಿ ಹುಡುಕುವುದರಲ್ಲಿ ಮತ್ತು ಪರಾಮರಿಸುವುದರಲ್ಲಿ ನಾವು ಸಂಪೂರ್ಣರಾಗಿದ್ದೇವೆ ಎಂದು ತಿಳಿಯುವುದರಿಂದ ಬರುವ ತೃಪ್ತಿಯನ್ನು ಅದು ನಮಗೆ ಕೊಡುತ್ತದೆ.—ಯೆಹೆ. 34:11-14.