ಜನರು ಮನೆಯಲ್ಲಿರದಿರುವಾಗ . . .
1. ಮನೆಮನೆಯ ಶುಶ್ರೂಷೆಯಲ್ಲಿ ನಾವು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ ಯಾವುದು?
1 ಅನೇಕ ಕ್ಷೇತ್ರಗಳಲ್ಲಿ ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದು ಹೆಚ್ಚೆಚ್ಚು ಕಷ್ಟಕರವಾಗುತ್ತಲಿದೆ. ಈ “ಕಡೇ ದಿವಸಗಳಲ್ಲಿ” ಜೀವನ ನಡೆಸಲು ಅನೇಕರಿಗೆ ಅಧಿಕ ತಾಸುಗಳವರೆಗೆ ದುಡಿಯಬೇಕಾಗುತ್ತದೆ. (2 ತಿಮೊ. 3:1) ಕೆಲವರು ಶಾಪಿಂಗ್ ಮಾಡಲು ಇಲ್ಲವೇ ಮನೋರಂಜನೆಯ ಸಲುವಾಗಿ ಮನೆಯಿಂದ ಹೊರಗಿರುತ್ತಾರೆ. ಅಂಥವರಿಗೆ ನಾವು ಸುವಾರ್ತೆಯನ್ನು ಹೇಗೆ ತಲುಪಿಸಬಹುದು?
2. ಮನೆಯಲ್ಲಿರದವರಿಗೆ ಕಾಳಜಿ ತೋರಿಸುತ್ತೇವೆಂದು ನಾವು ಹೇಗೆ ತೋರಿಸಬಲ್ಲೆವು?
2 ಒಳ್ಳೇ ದಾಖಲೆಗಳನ್ನಿಡಿ: ಮನೆಯಲ್ಲಿರದವರ ಕುರಿತು ಟಿಪ್ಪಣಿ ಬರೆದಿಡುವುದು ಮೊದಲ ಹೆಜ್ಜೆಯಾಗಿದೆ. ನಿಮ್ಮ ಟೆರಿಟೊರಿಯಲ್ಲಿ ನೀವು ಆಗಿಂದಾಗ್ಗೆ ಕೆಲಸ ಮಾಡುತ್ತಿರುವಲ್ಲಿ ಇದು ಮತ್ತಷ್ಟು ಪ್ರಾಮುಖ್ಯ. ರಸ್ತೆಯ ಹೆಸರು, ಟೆರಿಟೊರಿ ನಂಬರ್, ನಿಮ್ಮ ಹೆಸರು ಮತ್ತು ತಾರೀಖನ್ನು ನೀವು ಬರೆದಿಡುತ್ತೀರೊ? ನೀವು ಅಥವಾ ಬೇರೊಬ್ಬ ಪ್ರಚಾರಕನು ಮನೆಯಲ್ಲಿರದವರನ್ನು ಮತ್ತೆ ಭೇಟಿ ಮಾಡುವಾಗ ಹೆಚ್ಚಿನ ಟಿಪ್ಪಣಿಗಳನ್ನು ಬರೆಯುವಂತೆ ನೀವು ಆ ಹಾಳೆಯಲ್ಲಿ ಜಾಗಬಿಡಬಹುದು. ಸಾಕ್ಷಿಯ ಅವಧಿಯ ಕೊನೆಯಲ್ಲಿ ಆ ದಾಖಲೆಗಳನ್ನು ಅಥವಾ ಟಿಪ್ಪಣಿಗಳನ್ನು ಟೆರಿಟೊರಿ ಕಾರ್ಡ್ ಹೊಂದಿರುವ ಸಹೋದರನಿಗೆ ಹಿಂದಿರುಗಿಸಲು ಮರೆಯಬೇಡಿ. ಆದರೆ, ಮನೆಯಲ್ಲಿರದವರ ಆ ಕ್ಷೇತ್ರದಲ್ಲಿ ಕೆಲಸಮಾಡಲು ಪುನಃ ಅವನು ನಿಮ್ಮನ್ನೇ ನೇಮಿಸುವಲ್ಲಿ ಆ ಕಾರ್ಡ್ ಅನ್ನು ಅವನಿಗೆ ಹಿಂದಿರುಗಿಸುವ ಅವಶ್ಯಕತೆ ಇಲ್ಲ. ಆಸಕ್ತಿ ತೋರಿಸಿದವರಿಗೆ ನೀವೇ ಪುನರ್ಭೇಟಿ ಮಾಡುತ್ತೀರಾದರೆ ಆ ದಾಖಲೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದಿಡಿ.
3. ಮನೆಯಲ್ಲಿರದವರನ್ನು ತಲಪಲಿಕ್ಕೆ ಕೆಲವು ಸಲಹೆಗಳು ಯಾವುವು?
3 ಬೇರೊಂದು ಸಮಯದಲ್ಲಿ ಪ್ರಯತ್ನಿಸಿ: ಪ್ರಾಯಶಃ ವಾರದ ದಿನಗಳಲ್ಲಿ ಮನೆಯಲ್ಲಿರದವರು, ಸಂಜಾ ವೇಳೆಯಲ್ಲಿ ಅಥವಾ ವಾರಾಂತ್ಯಗಳಲ್ಲಿ ಮನೆಯಲ್ಲಿರಬಹುದು. ಹೆಚ್ಚು ಸೂಕ್ತವಾಗಿರುವ ಸಮಯದಲ್ಲಿ ಅವರನ್ನು ಭೇಟಿಯಾಗಲು ನೀವು ನಿಮ್ಮ ಕಾರ್ಯತಖ್ತೆಯನ್ನು ಹೊಂದಿಸಿಕೊಳ್ಳಸಾಧ್ಯವಿದೆಯೊ? (1 ಕೊರಿಂ. 10:24) ಇಲ್ಲದಿದ್ದರೆ, ಬೇರೊಂದು ಸಮಯದಲ್ಲಿ ಭೇಟಿಮಾಡಲು ಶಕ್ತನಾಗಿರುವ ಒಬ್ಬ ಪ್ರಚಾರಕನಿಗೆ ಮನೆಯಲ್ಲಿರದವರ ವಿಳಾಸಗಳನ್ನು ಕೊಡಬಹುದು. ಅಥವಾ ಪತ್ರ ಬರೆಯುವ ಮೂಲಕ ಇಲ್ಲವೇ ಫೋನ್ ಕರೆಮಾಡುವ ಮೂಲಕ ಮನೆಯಲ್ಲಿರದವರನ್ನು ನೀವು ತಲಪಬಹುದು. ತಮ್ಮ ಅನಾರೋಗ್ಯದ ನಿಮಿತ್ತ ಮನೆಮನೆಯ ಸಾಕ್ಷಿಕಾರ್ಯದಲ್ಲಿ ಭಾಗವಹಿಸಲು ಅಶಕ್ತರಾದ ಪ್ರಚಾರಕರು ಹೀಗೆ ಮಾಡುವುದರಲ್ಲಿ ನಿಮ್ಮೊಂದಿಗೆ ಜೊತೆಗೂಡಲು ಇಚ್ಛಿಸಬಹುದು.
4. ಮನೆಯಲ್ಲಿರದವರನ್ನು ಪುನಃ ಸಂದರ್ಶಿಸುವ ಪ್ರಮುಖತೆಯನ್ನು ಯಾವ ಅನುಭವವು ದೃಷ್ಟಾಂತಿಸುತ್ತದೆ?
4 ಮನೆಯಲ್ಲಿರದವರನ್ನು ಸಂಪರ್ಕಿಸುವ ಪ್ರಮುಖತೆಯನ್ನು ಒಂದು ಅನುಭವವು ದೃಷ್ಟಾಂತಿಸುತ್ತದೆ. ಪ್ರಚಾರಕರು ಒಂದು ನಿರ್ದಿಷ್ಟ ಮನೆಯವರನ್ನು ಭೇಟಿಮಾಡಲು ಮೂರು ವರ್ಷಗಳ ವರೆಗೆ ಪದೇ ಪದೇ ಪ್ರಯತ್ನಿಸಿದ ಮೇಲೆ ಕಟ್ಟಕಡೆಗೆ ಆ ಮನೆಯವರನ್ನು ಸಂಪರ್ಕಿಸಶಕ್ತರಾದರು. ಆ ಮನೆಯವಳಾದರೊ, ಆ ಪ್ರದೇಶಕ್ಕೆ ಸ್ಥಳಾಂತರಿಸಿದಂದಿನಿಂದ ತನ್ನ ಬೈಬಲ್ ಅಧ್ಯಯನವನ್ನು ಮತ್ತೆ ಮುಂದುವರಿಸಲು ಅಷ್ಟೆಲ್ಲ ಸಮಯದಿಂದ ಸಾಕ್ಷಿಗಳಿಗಾಗಿ ಕಾಯುತ್ತಿದ್ದಳು.
5. ಒಂದು ಟೆರಿಟೊರಿಯು ಯಾವಾಗ ಪೂರ್ತಿಯಾಗಿ ಆವರಿಸ್ಪಡುತ್ತದೆ?
5 ಟೆರಿಟೊರಿಯನ್ನು ಪೂರ್ತಿಯಾಗಿ ಆವರಿಸಿ: ಒಂದು ಟೆರಿಟೊರಿಯು ಯಾವಾಗ ಪೂರ್ತಿಯಾಗಿ ಆವರಿಸಲ್ಪಡುತ್ತದೆ? ಸಾಮಾನ್ಯವಾಗಿ ಪ್ರತಿ ಮನೆಯ ಯಾರನ್ನಾದರೂ ತಲಪಲು ಸಾಕಷ್ಟು ಪ್ರಯತ್ನವನ್ನು ಮಾಡಿದ ಬಳಿಕವೇ ಆ ಟೆರಿಟೊರಿಯು ಪೂರ್ತಿಗೊಳ್ಳುತ್ತದೆ. ವಿಶೇಷವಾಗಿ ಪದೇ ಪದೇ ಆವರಿಸಲ್ಪಡದ ಟೆರಿಟೊರಿಗಳಲ್ಲಿ, ಯಾವ ಮನೆಗಳಲ್ಲಿ ಜನರಿಲ್ಲವೊ ಅಲ್ಲಿ ವಿವೇಚನೆಯಿಂದ ಒಂದು ಟ್ರ್ಯಾಕ್ಟನ್ನೊ ಒಂದು ಹಳೇ ಪತ್ರಿಕೆಯನ್ನೊ ಬಿಟ್ಟು ಬರುವುದು ಸೂಕ್ತವಾಗಿರಬಹುದು. ಟೆರಿಟೊರಿಯನ್ನು ನಾಲ್ಕು ತಿಂಗಳೊಳಗೆ ಪೂರ್ತಿಗೊಳಿಸಬೇಕು ಮತ್ತು ಹಿಂದಿರುಗಿಸಬೇಕು. ಈ ಮೂಲಕ ಟೆರಿಟೊರಿ ಸೇವಕನಿಗೆ ತನ್ನ ದಾಖಲೆಗಳನ್ನು ನವೀಕರಿಸಲು ಸಾಧ್ಯವಾಗುವುದು.
6. ನಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರಿಗೆ ಸುವಾರ್ತೆಯನ್ನು ತಲಪಿಸಲು ನಾವು ಏಕೆ ಪ್ರಯತ್ನಿಸಬೇಕು?
6 ಆದಷ್ಟು ಜನರು ಯೆಹೋವನ ನಾಮವನ್ನು ಹೇಳಿಕೊಳ್ಳುವ ಅವಕಾಶವನ್ನು ಪಡೆಯಬೇಕು ಮತ್ತು ಹೀಗೆ ರಕ್ಷಿಸಲ್ಪಡಬೇಕು ಎಂಬುದೇ ನಮ್ಮ ಬಯಕೆ. (ರೋಮಾ. 10:13, 14) ನಾವು ಮನೆಮನೆಯ ಸೇವೆಮಾಡುವಾಗ ಮನೆಯಲ್ಲಿ ಇಲ್ಲದಿರಬಹುದಾದ ಜನರೂ ಇದರಲ್ಲಿ ಸೇರಿದ್ದಾರೆ. ಹೀಗೆ ಅಪೊಸ್ತಲ ಪೌಲನಂತೆ “ದೇವರ ಕೃಪೆಯ ವಿಷಯವಾದ ಸುವಾರ್ತೆಗೆ ಸಮಗ್ರ ಸಾಕ್ಷಿಯನ್ನು ನೀಡುವುದು” ನಿಮ್ಮ ಬಯಕೆಯಾಗಿರಲಿ.—ಅ. ಕೃ. 20:24, NW.