ನಿಮ್ಮ ಸಮಯವನ್ನು ಸದುಪಯೋಗಿಸಿರಿ
1 ಯೆಹೋವನು ಸಮಯ ಪ್ರಜ್ಞೆಯುಳ್ಳವನಾಗಿದ್ದಾನೆ. ನಾವು ಕೂಡ ಸಮಯದ ಅರಿವುಳ್ಳವರಾಗಿರಬೇಕೆಂದು ಆತನು ಅಪೇಕ್ಷಿಸುತ್ತಾನೆ. ಸಮಯ ಪ್ರಜ್ಞೆಯುಳ್ಳವರಾಗಿರುವುದಕ್ಕೆ ಆತನು ತನ್ನ ಸಂಸ್ಥೆಯ ಮುಖಾಂತರ ನಮಗೆ ಸಹಾಯವನ್ನೀಯುತ್ತಾನೆ. ‘ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟು ಇದೆ’ ಎಂಬುದಾಗಿ ಯಾವಾಗಲೂ ನಾವು ಪ್ರೇರೇಪಿಸಲ್ಪಡುತ್ತೇವೆ. (1 ಕೊರಿಂ. 15:58) ಈ ವಿಧದಲ್ಲಿ, ಯೆಹೋವನ ಸೇವೆಯಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗಿರ ಸಾಧ್ಯವಿದೆ.
2 ನಮ್ಮಲ್ಲಿ ಪ್ರತಿಯೊಬ್ಬರು ಪ್ರತಿ ವಾರ ಒಂದೇ ಪ್ರಮಾಣದ ಸಮಯವನ್ನು, ಅಂದರೆ 168 ತಾಸುಗಳನ್ನು ಹೊಂದಿದ್ದೇವೆ. ನಮ್ಮ ಸಮಯವನ್ನು ನಾವು ಎಷ್ಟು ಚೆನ್ನಾಗಿ ಉಪಯೋಗಿಸುತ್ತೇವೆ? ಯೆಹೋವನ ದೃಷ್ಟಿಕೋನದಿಂದ ಇದು ಯಾವ ಸಮಯವಾಗಿದೆ ಅನ್ನುವುದು ನಮಗೆ ನಿಜವಾಗಿಯೂ ತಿಳಿದಿದೆ ಎಂಬುದಾಗಿ ನಾವು ತೋರಿಸುತ್ತೇವೋ? ಅನಗತ್ಯವಾದ ಚಟುವಟಿಕೆಗಳಿಂದ ನಾವು ಅಪಕರ್ಷಿಸಲ್ಪಡುತ್ತಿದ್ದೇವೋ?
3 ನಾವು ಸುಸಂಘಟಿತರಾಗಿರುವುದು ಪ್ರಾಮುಖ್ಯ. ಅನೇಕರು ಒಂದು ಆದ್ಯತೆಯ ಪಟ್ಟಿಯನ್ನು ಕಾಪಾಡಲು ಪ್ರಯತ್ನಿಸುತ್ತಾರೆ. ಪ್ರತಿ ವಿಷಯವನ್ನು ಅದರ ಅಗ್ರಸ್ಥಾನಕ್ಕನುಸಾರವಾಗಿ ಪಟಿಮ್ಟಾಡಲಾಗುತ್ತದೆ. ಅದು ಹೇಗೆ ನಿರ್ಧರಿಸಲ್ಪಡಸಾಧ್ಯವಿದೆ? ಒಬ್ಬ ಮನುಷ್ಯನು “ತನ್ನ ಎಲ್ಲ ಪರಿಶ್ರಮಕ್ಕಾಗಿ ಒಳ್ಳೆಯದನ್ನು ನೋಡ” ಬೇಕು ಎಂದು ಬೈಬಲ್ ಹೇಳುತ್ತದೆ. (ಪ್ರಸಂ. 3:13, NW) ಕೆಲವು ಕೆಲಸಗಳು ಬೇರೆಯವುಗಳಿಗಿಂತ ಉತ್ತಮ ಫಲಿತಾಂಶಗಳನ್ನು ಫಲಿಸುತ್ತವೆ. ಪ್ರತಿಯೊಂದು ಕೆಲಸವು ತರುವ ಫಲಿತಾಂಶಗಳನ್ನು ಪರಿಗಣಿಸಿರಿ. ಕೆಲಸವನ್ನು ಮುಗಿಸುವುದು ಅತಿ ಮುಖ್ಯವಾದ ಪ್ರಯೋಜನಗಳನ್ನು ಉತ್ಪಾದಿಸುವುದೋ? ನಿಮ್ಮ ಪರಿಶ್ರಮಕ್ಕಾಗಿ ನೀವು ‘ಒಳ್ಳೆಯದನ್ನು ನೋಡು’ ವಿರೋ? ಇಲ್ಲದಿದ್ದರೆ, ಅದು ಒಂದು ತೀರ ಆದ್ಯತೆಯ ಕೆಲಸವು ಆಗಿಲ್ಲದಿರಬಹುದು.
4 ನಮ್ಮ ಶುಶ್ರೂಷೆಯಲ್ಲಿ: ಇತರರು ಸೇವೆಗಾಗಿ ಕೂಡುವಿಕೆಗಳಿಗೆ ಸರಿಯಾದ ಸಮಯಕ್ಕೆ ಆಗಮಿಸಿ, ಸಲಹೆಗಳಿಗೆ ಜಾಗರೂಕರಾಗಿ ಕಿವಿಗೊಟ್ಟು, ಕ್ಷೇತ್ರಕ್ಕಾಗಿ ತಡವಿಲ್ಲದೆ ಬಿಡುವುದನ್ನು ನಾವು ಗಣ್ಯಮಾಡುತ್ತೇವೆ. ಕಾಯುವದಕ್ಕಿಂತ ನಾವು ಸಾರುವುದರಲ್ಲಿ ನಿರತರಾಗಿರುವುದು ಯುಕ್ತವಾಗಿರುವುದು. ಒಳ್ಳೆಯ ಕ್ರಮಕ್ಕಾಗಿರುವ ಆವಶ್ಯಕತೆಯ ಕುರಿತು ಪೌಲನು ಹೀಗೆ ಬರೆದಾಗ, ಆತನು ಬಲವಾದ ಅನಿಸಿಕೆಯನ್ನು ಹೊಂದಿದ್ದನೆಂಬುದು ನಿಸ್ಸಂಶಯ: “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.”—1 ಕೊರಿಂ. 14:40.
5 ನಾವು ಕ್ಷೇತ್ರ ಸೇವೆಯಲ್ಲಿ ಹೊರಗಿರುವಾಗ, ಟೀ ವಿರಾಮಗಳಿಂದ ಅತ್ಯಮೂಲ್ಯವಾದ ಸಮಯವನ್ನು ಕಳೆದುಕೊಳ್ಳಬಲ್ಲೆವು. ಹಾಗಿದ್ದರೂ, ಹವಾಮಾನದ ಸ್ಥಿತಿಗಳು ದುರ್ಭರವಾಗಿರುವಾಗ, ವಿರಾಮವೊಂದು ನಮ್ಮ ದಣಿವನ್ನಾರಿಸುವುದು ಮತ್ತು ನಾವು ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುವುದು. ಆದರೂ ಅನೇಕರು, ಜನರಿಗೆ ಸಾಕ್ಷಿ ಕೊಡುವುದರಲ್ಲಿ ನಿರತರಾಗಿರಲು ಇಷ್ಟಪಡುತ್ತಾರೆ ಮತ್ತು ಶುಶ್ರೂಷೆಯ ಸಮಯದಲ್ಲಿ ಬದಿಗಿರಿಸಿದ ಟೀ ವಿರಾಮಗಳಲ್ಲಿ, ಸಹೋದರರೊಂದಿಗಿನ ಸಂತೋಷಕೂಟಗಳನ್ನು ತೊರೆದಿದ್ದಾರೆ. ಸಮತೆಯು ಅತ್ಯಗತ್ಯವಾಗಿದೆ.
6 ವಲಸೆ ಹೋಗಲು “ಬಕವೂ . . . ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ” ಮತ್ತು ಇರುವೆಯು ಚಳಿಗಾಲಕ್ಕಾಗಿ ಸಿದ್ಧವಾಗಿರುವ ಸಲುವಾಗಿ “ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿಡುವದು” ಎಂದು ಬೈಬಲ್ ಹೇಳುತ್ತದೆ. (ಯೆರೆ. 8:7; ಜ್ಞಾನೋ. 6:6-8) ಸಮಯವನ್ನು ಸದುಪಯೋಗಿಸುವ ಗೂಡಾರ್ಥವು ಅಲ್ಲಿಯೇ ಇದೆ. ನಾವು ಸಹ ‘ನಮ್ಮ ನೇಮಿತ ಸಮಯಗಳನ್ನು’ ತಿಳಿದಿರತಕ್ಕದ್ದು. ಅತಿಯಾಗಿ ಕಟ್ಟುನಿಟ್ಟಿನವರಾಗಿರದೆ, ನಾವು ಸಮಯದ ಪ್ರಜ್ಞೆಯುಳ್ಳವರಾಗಿರಬೇಕು. ಕೇವಲ ನಾವು ಏನು ಮಾಡಬೇಕೆನ್ನುವುದನ್ನು ತಿಳಿಯುವುದು ಮಾತ್ರವಲ್ಲ ಅದನ್ನು ಯಾವಾಗ ಮಾಡುವ ಅಗತ್ಯವಿದೆಯೆಂಬುದನ್ನು ನಾವು ತಿಳಿದಿರುವುದು ಸಹ ಆವಶ್ಯಕವಾಗಿದೆ. ಸಂಭವನೀಯ ವಿಳಂಬಗಳಿಗೆ ವಿನಾಯಿತಿ ನೀಡುತ್ತಾ, ಮುಂದಾಲೋಚಿಸುವ ಅಭ್ಯಾಸವನ್ನು ನಾವು ಇಟ್ಟುಕೊಳ್ಳಬೇಕು. ಮತ್ತು ನಮ್ಮ ಕೂಟಗಳಿಗಾಗಿ, ಕ್ಷೇತ್ರ ಶುಶ್ರೂಷೆಗಾಗಿ, ಮತ್ತು ಇತರ ದೇವಪ್ರಭುತ್ವ ಚಟುವಟಿಕೆಗಳಿಗಾಗಿರುವ ತಯಾರಿಕೆಯಂಥ, ಅತಿ ಪ್ರಾಮುಖ್ಯವಾದ ವಿಷಯಕ್ಕಾಗಿ ಸಮಯವನ್ನಿಡಲು, ಕೆಲವು ಚಟುವಟಿಕೆಗಳನ್ನು ಕಡಿಮೆಗೊಳಿಸಲು ಸಹ ನಾವು ಸಿದ್ಧಮನಸ್ಸಿನವರಾಗಿರಬೇಕು.
7 “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ,” ಎಂದು ನಮಗೆ ಕಲಿಸುವ ನಮ್ಮ ಸ್ವರ್ಗೀಯ ತಂದೆಯಾದ, ಯೆಹೋವ ದೇವರ ಹಾಗೆ ನಾವಿರಲು ಬಯಸುತ್ತೇವೆ. (ಪ್ರಸಂ. 3:1) ನಮ್ಮ ಸಮಯವನ್ನು ಸದುಪಯೋಗಿಸುವ ಮೂಲಕ, ನಾವು “ನಮ್ಮ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸ” ಬಲ್ಲೆವು.—2 ತಿಮೊ. 4:5, NW.