ಪ್ರತಿದಿನವೂ ಯೆಹೋವನನ್ನು ಸುತ್ತಿಸಿರಿ
1 ನಮ್ಮ ದೇವರಾದ ಯೆಹೋವನು, ಅದ್ಭುತನೂ ಪ್ರೀತಿಪೂರ್ಣ ಸೃಷ್ಟಿಕರ್ತನೂ ಎಲ್ಲಾ ಜೀವ ಮತ್ತು ಸಂತೋಷದ ಮೂಲನೂ ಆಗಿದ್ದಾನೆ. ಆತನ ಹಿರಿಮೆಯನ್ನು ಪರಿಗಣಿಸುವಾಗ, ತನ್ನ ಎಲ್ಲಾ ಸೃಷ್ಟಿಯಿಂದ ಸುತ್ತಿಯನ್ನು ಹೊಂದಲು ಆತನು ನಿಜವಾಗಿಯೂ ಅರ್ಹನಾಗಿದ್ದಾನೆ. ವೈಯಕ್ತಿಕವಾಗಿ, ನಾವು ಕೀರ್ತನೆಗಾರನು ಹೇಳಿದಂತೆ ಹೇಳಲು ಬಯಸುತ್ತೇವೆ: “ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು. ನನ್ನ ಬಾಯಿ ನಿನ್ನ ನೀತಿಯನ್ನೂ ರಕ್ಷಣೆಯನ್ನೂ ಹಗಲೆಲ್ಲಾ ವರ್ಣಿಸುತ್ತಿರುವದು.” (ಕೀರ್ತ. 71:14, 15) ಇದನ್ನು ಮಾಡಲಿಕ್ಕಾಗಿ, ನಾವು ಯೆಹೋವನನ್ನು ಅನುದಿನವೂ ಸುತ್ತಿಸಲು ಮಾರ್ಗಗಳನ್ನು ಹುಡುಕಬೇಕು ಮತ್ತು ಆತನ ಕುರಿತು, ಆತನ ನೀತಿಯ ಕುರಿತು, ಮತ್ತು ರಕ್ಷಣೆಗಾಗಿರುವ ಆತನ ಒದಗಿಸುವಿಕೆಗಳ ಕುರಿತು ಸದಭಿಪ್ರಾಯದಿಂದ ಮಾತಾಡುವಂತೆ ಪ್ರಚೋದಿಸಲ್ಪಡಬೇಕು.
2 ಯೆಹೋವನನ್ನು ಸುತ್ತಿಸುವುದರಲ್ಲಿ ಆದಿ ಕ್ರೈಸ್ತರು ಅತ್ಯುತ್ತಮವಾದ ಒಂದು ಮಾದರಿಯನ್ನಿಟ್ಟರು. ಪಂಚಾಶತ್ತಮದಲ್ಲಿ ದೀಕ್ಷಾಸ್ನಾನ ಪಡೆದುಕೊಂಡ 3,000 ಮಂದಿಯ ಕುರಿತು, ಅ. ಕೃತ್ಯಗಳು 2:46, 47ರಲ್ಲಿ ನಾವು ಓದುವುದು: “ಅವರು ದಿನಾಲು ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ . . . ಇದ್ದರು; ದೇವರನ್ನು ಕೊಂಡಾಡುವವರಾಗಿಯೂ ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. [ಮತ್ತು] ಕರ್ತ [“ಯೆಹೋವ,” NW]ನು ರಕ್ಷಣೆಯ ಮಾರ್ಗದಲ್ಲಿರುವವರನ್ನು ದಿನಾಲು ಅವರ ಮಂಡಲಿಗೆ ಸೇರಿಸುತ್ತಿದ್ದನು.” ಅವರು ಯೆಹೋವನ ಮತ್ತು ಆತನ ಮೆಸ್ಸೀಯನ ಕುರಿತು ಅದ್ಭುತಕರವಾದ ಸತ್ಯಗಳನ್ನು ಕಲಿಯುತ್ತಿದ್ದರು. ಇನ್ನೂ ಇತರರನ್ನು ಆಲಿಸುವಂತೆ, ಕಲಿಯುವಂತೆ ಮತ್ತು ಯೆಹೋವನನ್ನು ಸುತ್ತಿಸುವಂತೆ ಉತ್ತೇಜಿಸುತ್ತಾ, ಅವರ ಆನಂದವು ವ್ಯಾಪಿಸುವಂತಹದ್ದಾಗಿತ್ತು.
3 ಪ್ರತಿನಿತ್ಯವೂ ಸಂದರ್ಭಗಳು ದೊರಕುತ್ತವೆ: ಇಂದು ಅನೇಕರು ಅನೌಪಚಾರಿಕ ಸಾಕ್ಷಿಕಾರ್ಯದ ಮೂಲಕ ತಾವು ಪ್ರತಿದಿನವೂ ಯೆಹೋವನನ್ನು ಸುತ್ತಿಸಸಾಧ್ಯವಿದೆಯೆಂಬುದನ್ನು ಕಂಡುಕೊಳ್ಳುತ್ತಾರೆ. ಮುಂಚಿತವಾಗಿ ಯೋಜಿಸುವುದು, ಹೆಚ್ಚು ಉತ್ಪನ್ನಕಾರಕವಾಗಿರುವಂತೆ ಅವರಿಗೆ ಸಹಾಯ ಮಾಡುತ್ತದೆ. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಮಾಡಿದ್ದ ಒಬ್ಬ ಸಹೋದರಿಯು, ಯಾರೋ ಒಬ್ಬರು ತನ್ನ ಕಾರಿನ ಎರಡು ಕಿಟಕಿಗಳನ್ನು ಒಡೆದುಹಾಕಿ, ಒಳನುಗ್ಗಿರುವುದನ್ನು ಕಂಡುಕೊಂಡಳು. ಅವಳು ಒಂದು ಗ್ಯಾರೆಜ್ಗೆ ಫೋನ್ ಮಾಡಿದಳು, ತದನಂತರ ಆ ಯಂತ್ರಕರ್ಮಿಗೆ ಸಾಕ್ಷಿ ನೀಡಲು ಸಿದ್ಧಳಾದಳು. ಯೆಹೋವನ ಮಾರ್ಗದರ್ಶನೆಗಾಗಿ ಪ್ರಾರ್ಥಿಸುವುದು ಅವಳ ತಯಾರಿಯಲ್ಲಿ ಒಳಗೂಡಿತ್ತು. ಪರಿಣಾಮವಾಗಿ, ಅವಳು ಯಂತ್ರಕರ್ಮಿಗೆ ಒಂದು ತಾಸಿನ ತನಕ ಸಾಕ್ಷಿ ನೀಡಿದಳು ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಅವನಿಗೆ ನೀಡಿದಳು.
4 ತಮ್ಮ ನಾಯಿಗಳನ್ನು ಅಡಾಡ್ಡಿಸುತಿದ್ತಾಗ್ದ, ಇನ್ನೊಬ್ಬ ಸಹೋದರಿಯು ಕ್ರಮವಾಗಿ ನೆರೆಯವಳೊಬ್ಬಳನ್ನು ಭೇಟಿಯಾದಳು. ಒಂದು ಸಂಧಿಸುವಿಕೆಯ ಸಮಯದಲ್ಲಿ, ಜೀವನದ ಸಮಸ್ಯೆಗಳ ಕುರಿತು ಅವರು ಗಂಭೀರವಾಗಿ ಸಂಭಾಷಿಸಿದರು, ಮತ್ತು ಅದು ಹೆಚ್ಚಿನ ಚರ್ಚೆಗಳಿಗೆ ಮುನ್ನಡಿಸಿತು. ಸಕಾಲದಲ್ಲಿ ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ಆಸಕ್ತಿಕರವಾಗಿ, ಅವಳು ದೇವರಲ್ಲಿ ಅಥವಾ ಬೈಬಲಿನಲ್ಲಿ ನಂಬಿಕೆಯನ್ನು ಇಡದಿದ್ದ ಕಾರಣದಿಂದ, ಯೆಹೋವನ ಸಾಕ್ಷಿಗಳು ತನ್ನ ಮನೆಬಾಗಿಲಿಗೆ ಭೇಟಿ ನೀಡುತ್ತಿದ್ದಲ್ಲಿ, ತಾನು ಅವರಿಗೆ ಕಿವಿಗೊಡುತ್ತಿದ್ದಿರಲಿಲ್ಲವೆಂದು ನೆರೆಯವಳು ತದನಂತರ ಒಪ್ಪಿಕೊಂಡಳು.
5 ಮಾರಾಟಗಾರರು ಅಥವಾ ಇನ್ನಿತರರು ತಮ್ಮ ಮನೆಬಾಗಿಲಿಗೆ ಭೇಟಿ ನೀಡುವಾಗ, ಒಂದು ಸಾಕ್ಷಿಯನ್ನು ಕೊಡಸಾಧ್ಯವಿದೆಯೆಂದು ಕೆಲವರು ಕಂಡುಕೊಳ್ಳುತ್ತಾರೆ. ಜೀವವಿಮೆಯ ಮಾರಾಟ ಮಾಡುತ್ತಿದ್ದ ಮನುಷ್ಯನೊಬ್ಬನು, ಐರ್ಲಂಡ್ನಲ್ಲಿನ ಒಬ್ಬ ಸಹೋದರಿಯನ್ನು ಭೇಟಿಯಾದನು. ತಾನು ನಿತ್ಯ ಜೀವವನ್ನು ಅನುಭವಿಸುವುದರ ಕಡೆಗೆ ಮುನ್ನೋಡುತ್ತಿದ್ದೇನೆಂದು ಅವಳು ವಿವರಿಸಿದಳು. ಒಬ್ಬ ರೋಮನ್ ಕ್ಯಾಥೊಲಿಕನೋಪಾದಿ ಬೆಳೆಸಲ್ಪಟ್ಟಿದ್ದ ಈ ಮನುಷ್ಯನಿಗೆ ಇದು ಸಂಪೂರ್ಣವಾಗಿ ಹೊಸತಾದ ಒಂದು ವಿಚಾರವಾಗಿತ್ತು. ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಅವನು ಸ್ವೀಕರಿಸಿದನು, ಮುಂದಿನ ವಾರ ಕೂಟವೊಂದಕ್ಕೆ ಹಾಜರಾದನು, ಮತ್ತು ಬೈಬಲ್ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡನು. ಈಗ ಈ ಮಾರಾಟಗಾರನು ಒಬ್ಬ ದೀಕ್ಷಾಸ್ನಾನಿತ ಸಹೋದರನಾಗಿದ್ದಾನೆ.
6 ಪ್ರತಿದಿನವೂ ಯೆಹೋವನನ್ನು ಸುತ್ತಿಸಲಿಕ್ಕಿರುವ ಸಂದರ್ಭಗಳಿಗೆ ನಾವೆಲ್ಲರೂ ಎಚ್ಚರದಿಂದಿರತಕ್ಕದ್ದು. ಎಲ್ಲಿ ಅವುಗಳನ್ನು ಕಾಣಸಾಧ್ಯವಿದ್ದು, ಸಂದರ್ಶಕರಿಗೆ ಸುಲಭವಾಗಿ ನೀಡಸಾಧ್ಯವಿದೆಯೋ ಅಲ್ಲಿ, ಕೆಲವು ಪತ್ರಿಕೆಗಳು ಮತ್ತು ಕಿರುಹೊತ್ತಗೆಗಳನ್ನು ಇಡುವುದು ಸಹಾಯಕಾರಿಯಾಗಿದೆ. ಕೆಲವು ಕ್ಷೇತ್ರಗಳಲ್ಲಿ ಒಂದು ಉದ್ಯಾನವನದ ಬೆಂಚಿನ ಮೇಲೆ ಕಳೆಯುವ ಸ್ವಲ್ಪ ಸಮಯವು, ಕೆಲವು ನಿಮಿಷಗಳ ವರೆಗೆ ವಿಶ್ರಾಂತಿ ಪಡೆದುಕೊಳ್ಳಲಿಕ್ಕಾಗಿ ನಿಲ್ಲುವ ಇತರರಿಗೆ ಸಾಕ್ಷಿ ನೀಡಲಿಕ್ಕಾಗಿ ನಿಮಗೆ ಅನೇಕ ಅವಕಾಶಗಳನ್ನು ಕೊಡಬಹುದು. ಶಾಲೆಯಲ್ಲಿರುವ ಕೆಲವು ಸಾಕ್ಷಿ ಯುವ ಜನರು, ಬೈಬಲ್ ಸಾಹಿತ್ಯವನ್ನು ಗಮನಿಸಿ, ಪ್ರಶ್ನೆಗಳನ್ನು ಕೇಳುವ ಯಾರೊಂದಿಗಾದರೂ ಸಂಭಾಷಣೆಯೊಂದನ್ನು ಆರಂಭಿಸುವ ಒಂದು ಮಾರ್ಗದಂತೆ ಅವನ್ನು ತಮ್ಮ ಡೆಸ್ಕಿನ ಮೇಲೆ ಇಡುತ್ತಾರೆ. ನೀವು ಉಪಯೋಗಿಸಸಾಧ್ಯವಿರುವ ಒಂದು ಅಥವಾ ಎರಡು ಶಾಸ್ತ್ರವಚನ ಉಲ್ಲೇಖಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಿ. ನಿಮಗೆ ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಳ್ಳಿರಿ. ಹಾಗೆ ಮಾಡುತ್ತಿರುವುದಕ್ಕಾಗಿ ನೀವು ಆಶೀರ್ವದಿಸಲ್ಪಡುವಿರಿ.—1 ಯೋಹಾ. 5:14.