ನಿಮ್ಮ ಅಭಿವೃದ್ಧಿಯನ್ನು ಪ್ರದರ್ಶಿಸಿರಿ
1 ನೀವು ಮೊತ್ತಮೊದಲಾಗಿ ರಾಜ್ಯ ಸಂದೇಶವನ್ನು ಕೇಳಿದ ಸಮಯವನ್ನು ಜ್ಞಾಪಿಸಿಕೊಳ್ಳಿರಿ. ಸರಳ ಸತ್ಯಗಳು, ಜ್ಞಾನ ಮತ್ತು ತಿಳುವಳಿಕೆಗಾಗಿರುವ ನಿಮ್ಮ ಬಯಕೆಯನ್ನು ಕೆರಳಿಸಿದವು. ನಿಮ್ಮ ಮಾರ್ಗಗಳಿಗಿಂತ ಯೆಹೋವನ ಮಾರ್ಗಗಳು ಎಷ್ಟೋ ಹೆಚ್ಚು ಮಹೋನ್ನತವಾಗಿರುವುದರಿಂದ, ಬೇಗನೆ ನೀವು ನಿಮ್ಮ ಜೀವನದ ರೀತಿಯಲ್ಲಿ ಸರಿಹೊಂದಿಸುವಿಕೆಗಳನ್ನು ಮಾಡುವ ಅಗತ್ಯವನ್ನು ಕಾಣಶಕ್ತರಾದಿರಿ. (ಯೆಶಾ. 55:8, 9) ನೀವು ಅಭಿವೃದ್ಧಿಯನ್ನು ಮಾಡಿ, ನಿಮ್ಮ ಜೀವಿತವನ್ನು ಸಮರ್ಪಿಸಿ, ದೀಕ್ಷಾಸ್ನಾನವನ್ನು ಪಡೆದುಕೊಂಡಿರಿ.
2 ಸ್ವಲ್ಪ ಆತ್ಮಿಕ ಪ್ರಗತಿಯನ್ನು ಮಾಡಿದ ಬಳಿಕ ಸಹ, ಜಯಿಸಬೇಕಾಗಿದ್ದ ಬಲಹೀನತೆಗಳು ಇನ್ನೂ ಇದ್ದವು. (ರೋಮಾ. 12:2) ಯಾವುದು ನಿಮ್ಮನ್ನು ಕ್ಷೇತ್ರ ಸೇವೆಯಲ್ಲಿ ಪಾಲ್ಗೋಳ್ಳಲು ಒಲವಿಲ್ಲದವರಂತೆ ಮಾಡಿತೋ, ಆ ಮನುಷ್ಯನ ಭಯವು ನಿಮಗಿದ್ದಿರಬಹುದು. ಅಥವಾ ದೇವರಾತ್ಮದ ಫಲವನ್ನು ಪ್ರದರ್ಶಿಸುವುದರಲ್ಲಿ ನೀವು ತಪ್ಪಿಹೋಗುತ್ತಿದ್ದಿರಬಹುದು. ಹಿಂಜರಿಯುವುದಕ್ಕೆ ಬದಲಾಗಿ, ಸ್ವತಃ ನಿಮಗಾಗಿ ದೇವಪ್ರಭುತ್ವ ಗುರಿಗಳನ್ನಿಡುವ ಮೂಲಕ ಅಭಿವೃದ್ಧಿಯನ್ನು ಮಾಡಲು ನೀವು ದೃಢನಿಶ್ಚಯವನ್ನು ಮಾಡಿದಿರಿ.
3 ನೀವು ನಿಮ್ಮ ಸಮರ್ಪಣೆಯನ್ನು ಮಾಡಿಕೊಂಡಂದಿನಿಂದ ಈಗ ಹಲವಾರು ವರ್ಷಗಳು ಗತಿಸಿರಬಹುದು. ಹಿಂದಿರುಗಿ ನೋಡುವಲ್ಲಿ, ಸ್ವತಃ ನಿಮ್ಮಲ್ಲಿ ನೀವು ಯಾವ ಅಭಿವೃದ್ಧಿಯನ್ನು ಕಾಣಬಲ್ಲಿರಿ? ನಿಮ್ಮ ಗುರಿಗಳಲ್ಲಿ ಕೆಲವನ್ನು ನೀವು ಸಾಧಿಸಿದ್ದೀರೊ? ನಿಮಗೆ “ಆರಂಭದಲ್ಲಿದ್ದಂತಹ”ದ್ದೇ ಹುರುಪು ಇದೆಯೊ? (ಇಬ್ರಿ. 3:14, NW) “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು” ಎಂದು ಪೌಲನು ತಿಮೊಥೆಯನನ್ನು ಪ್ರಚೋದಿಸಿದಾಗ, ಅವನು ಈಗಾಗಲೇ ಅನೇಕ ವರ್ಷಗಳ ಅನುಭವವಿದ್ದ ಒಬ್ಬ ಪ್ರೌಢ ಕ್ರೈಸ್ತನಾಗಿದ್ದನು.—1 ತಿಮೊ. 4:15.
4 ವೈಯಕ್ತಿಕ ಪರೀಕ್ಷೆಯ ಅಗತ್ಯವಿದೆ: ನಾವು ನಮ್ಮ ಗತ ಜೀವನ ರೀತಿಯ ಕುರಿತಾಗಿ ಪರ್ಯಾಲೋಚಿಸುವಾಗ, ನಾವು ಆರಂಭಿಸಿದಾಗ ನಮಗಿದ್ದ ಬಲಹೀನತೆಗಳಲ್ಲಿ ಕೆಲವು, ನಮ್ಮಲ್ಲಿ ಇರುತ್ತಾ ಮುಂದುವರಿಯುವುದನ್ನು ನಾವು ಕಂಡುಕೊಳ್ಳುತ್ತೇವೊ? ನಾವು ಇಟ್ಟಂತಹ ಗುರಿಗಳಲ್ಲಿ ಕೆಲವನ್ನು ತಲಪಲು ನಾವು ಸೋತಿದ್ದೇವೊ? ಹಾಗಿರುವುದಾದರೆ, ಏಕೆ? ನಮ್ಮಲ್ಲಿ ಸದುದ್ದೇಶಗಳು ಇರುವಾಗ್ಯೂ, ನಾವು ಕಾಲಹರಣ ಮಾಡಿದಿರ್ದಬಹುದು. ಬಹುಶಃ ಜೀವನದ ಚಿಂತೆಗಳು ಅಥವಾ ಈ ವ್ಯವಸ್ಥೆಯ ಒತ್ತಡಗಳು ನಮ್ಮನ್ನು ತಡೆದಿಡುವಂತೆ ನಾವು ಅನುಮತಿಸಿದ್ದೇವೆ.—ಲೂಕ 17:28-30.
5 ಗತ ಸಮಯದ ಕುರಿತು ನಾವು ಏನನ್ನೂ ಮಾಡಸಾಧ್ಯವಿಲ್ಲದಿರುವಾಗ, ಭವಿಷ್ಯತ್ತಿನ ಕುರಿತು ನಿಶ್ಚಯವಾಗಿ ನಾವು ಏನನ್ನಾದರೂ ಮಾಡಸಾಧ್ಯವಿದೆ. ಸ್ವತಃ ನಾವು ಪ್ರಾಮಾಣಿಕವಾಗಿ ಗುಣವಿಮರ್ಶೆಮಾಡಿಕೊಂಡು, ನಾವು ಎಲ್ಲಿ ಕೊರತೆಯುಳ್ಳವರಾಗಿದ್ದೇವೆ ಎಂಬುದನ್ನು ಕಂಡುಕೊಂಡು, ತದನಂತರ ಅಭಿವೃದ್ಧಿಮಾಡಲು ಏಕಾಗ್ರತೆಯ ಪ್ರಯತ್ನವನ್ನು ಮಾಡಸಾಧ್ಯವಿದೆ. ದೇವರಾತ್ಮದ ಫಲಗಳಾದ ಆತ್ಮನಿಯಂತ್ರಣ, ಶಮೆದಮೆ, ಅಥವಾ ದೀರ್ಘಶಾಂತಿಯನ್ನು ತೋರ್ಪಡಿಸುವುದರಲ್ಲಿ ನಾವು ಹೆಚ್ಚು ಉತ್ತಮವಾಗಿ ಕಾರ್ಯನಡಿಸಬೇಕಾದ ಅಗತ್ಯವಿರಬಹುದು. (ಗಲಾ. 5:22, 23) ಇತರರೊಂದಿಗೆ ಹೊಂದಿಕೊಂಡುಹೋಗುವುದರಲ್ಲಿ ಅಥವಾ ಹಿರಿಯರೊಂದಿಗೆ ಸಹಕರಿಸುವುದರಲ್ಲಿ ನಮಗೆ ಕಷ್ಟವಿರುವುದಾದರೆ, ನಾವು ದೈನ್ಯವನ್ನು ಮತ್ತು ವಿನಯವನ್ನು ಬೆಳೆಸಿಕೊಳ್ಳುವುದು ಪ್ರಾಮುಖ್ಯವಾಗಿದೆ.—ಫಿಲಿ. 2:2, 3.
6 ಸೇವಾ ಸುಯೋಗಗಳಿಗಾಗಿ ನಿಲುಕಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ನಾವು ನಮ್ಮ ಅಭಿವೃದ್ಧಿಯನ್ನು ಪ್ರದರ್ಶಿಸಬಲ್ಲೆವೊ? ಹೆಚ್ಚಿನ ಪ್ರಯತ್ನದೊಂದಿಗೆ, ಸಹೋದರರು ಶುಶ್ರೂಷಾ ಸೇವಕರಾಗಿ ಅಥವಾ ಹಿರಿಯರಾಗಿ ಅರ್ಹರಾಗಲು ಶಕ್ತರಾಗಬಹುದು. ನಮ್ಮಲ್ಲಿ ಕೆಲವರು ಕ್ರಮದ ಪಯನೀಯರರೋಪಾದಿ ನಮೂದಿಸಿಕೊಳ್ಳಲು ಶಕ್ತರಾಗಬಹುದು. ಇನ್ನೂ ಅನೇಕರಿಗೆ, ಆಕ್ಸಿಲಿಯರಿ ಪಯನೀಯರ್ ಸೇವೆಯು ತಲಪಸಾಧ್ಯವಿರುವ ಗುರಿಯಾಗಿರಬಹುದು. ಇತರರು ವೈಯಕ್ತಿಕ ಅಭ್ಯಾಸ ಹವ್ಯಾಸಗಳನ್ನು ಉತ್ತಮಗೊಳಿಸಲು, ಸಭಾ ಕೂಟಗಳಲ್ಲಿ ಹೆಚ್ಚು ಕ್ರಿಯಾಶೀಲ ಪಾಲುದಾರರಾಗಲು, ಅಥವಾ ಸಭಾ ಪ್ರಚಾರಕರೋಪಾದಿ ಹೆಚ್ಚು ಉತ್ಪನ್ನದಾಯಕರಾಗಿರಲು ಶ್ರಮಿಸಬಹುದು.
7 ನಿಶ್ಚಯವಾಗಿ, ನಾವು ಎಲ್ಲಿ ಅಭಿವೃದ್ಧಿಯನ್ನು ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನಿರ್ಧರಿಸುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. “ಪ್ರೌಢತೆಯ ಕಡೆಗೆ ಮುಂದುವರಿಯಲು” ನಾವು ಮಾಡುವ ಪ್ರಾಮಾಣಿಕ ಪ್ರಯತ್ನವು, ನಮ್ಮ ಆನಂದಕ್ಕೆ ಬಹಳವಾಗಿ ಕೂಡಿಸುವುದು ಮತ್ತು ನಮ್ಮನ್ನು ಸಭೆಯ ಹೆಚ್ಚು ಉತ್ಪನ್ನದಾಯಕ ಸದಸ್ಯರನ್ನಾಗಿ ಮಾಡುವುದು ಎಂಬುದಾಗಿ ನಾವು ಖಾತ್ರಿಯಿಂದಿರಸಾಧ್ಯವಿದೆ.—ಇಬ್ರಿ. 6:1, NW.