ಸೂಕ್ಷ್ಮ ಪರಿಜ್ಞಾನದೊಂದಿಗೆ ಸಾರಿರಿ
1 ಸೂಕ್ಷ್ಮ ಪರಿಜ್ಞಾನವನ್ನು ಹೊಂದಿರುವುದು, ನಾವು ಯಾರಿಗೆ ಸಾರುತ್ತೇವೋ ಆ ಜನರ ಕುರಿತಾದ ಯಾವುದೋ ವಿಷಯವನ್ನು ನಾವು ಅರ್ಥಮಾಡಿಕೊಳ್ಳುವುದನ್ನು ಅಗತ್ಯಪಡಿಸುತ್ತದೆ. ಏಕೆ? ಜನರ ಹೃದಯಗಳನ್ನು ತಲಪುವುದರಲ್ಲಿನ ನಮ್ಮ ಸಾಫಲ್ಯವು, ಅವರಿಗೆ ಹಿಡಿಸುವಂತಹ ಒಂದು ವಿಧಾನದಲ್ಲಿ ರಾಜ್ಯ ಸಂದೇಶವನ್ನು ಪ್ರಸ್ತುತಪಡಿಸುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿಸಿರುವುದರಿಂದಲೇ. ಜನವರಿ ತಿಂಗಳಿನಲ್ಲಿ, ಸಭೆಯು ಇನ್ನೂ ತನ್ನ ವಶದಲ್ಲಿಟ್ಟುಕೊಂಡಿರಬಹುದಾದ, ವಿವಿಧ ಬೈಬಲ್ ಅಭ್ಯಾಸದ ಪುಸ್ತಕಗಳನ್ನು ನಾವು ನೀಡಲಿರುವೆವು. ಇಲ್ಲದಿದ್ದರೆ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವನ್ನು ಪ್ರಚಾರಕರು ಉಪಯೋಗಿಸಬಹುದು, ಆದರೆ ತೆಲುಗು ಭಾಷೆಯ ಹೊರತಾಗಿ ಇದನ್ನು ವಿಶೇಷ ದರದಲ್ಲಿ ನೀಡಬಾರದಾಗಿದೆ. ಮುಂದಿನ ಸಲಹೆಗಳು ಸಹಾಯಕಾರಿಯಾಗಿರಬಹುದು.
2 “ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು” ಎಂಬ ಪುಸ್ತಕವನ್ನು ನೀಡಲು ನೀವು ಆರಿಸಿಕೊಳ್ಳುವುದಾದರೆ, 5ನೆಯ ಪುಟದಲ್ಲಿರುವ ಚಿತ್ರಕ್ಕೆ ನಿರ್ದೇಶಿಸಿ, ನೀವು ಹೀಗೆ ಹೇಳಸಾಧ್ಯವಿದೆ:
◼ “ಈ ಚಿತ್ರವು, ಭೂಮಿಗಾಗಿರುವ ದೇವರ ಉದ್ದೇಶದ ಕುರಿತು ಬೈಬಲು ಕಲಿಸುವಂತಹ ವಿಷಯದ ಕುರಿತಾದ ಒಬ್ಬ ಕಲಾಕಾರನ ಕಲ್ಪನೆಯಾಗಿದೆ. ಪ್ರಮೋದವನ ಭೂಮಿಯೊಂದರಲ್ಲಿ ಜೀವಿಸಲಿಕ್ಕಾಗಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕಾಗಿ ಅದು ಏನನ್ನು ಅಗತ್ಯಪಡಿಸುತ್ತದೆಂದು ನೀವು ಎಣಿಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅತಿ ಬೇಗನೆ ಭೂವ್ಯಾಪಕವಾಗಿ ನಿಜ ಶಾಂತಿ ಮತ್ತು ಭದ್ರತೆಯು ವಾಸ್ತವಿಕತೆಯಾಗಲಿರುವುದು ಮತ್ತು ಪ್ರಮೋದವನವು ಪುನಃಸ್ಥಾಪಿಸಲ್ಪಡಲಿರುವುದೆಂದು ಬೈಬಲು ತೋರಿಸುತ್ತದೆ. [ಕೀರ್ತನೆ 37:10, 11ನ್ನು ಓದಿರಿ.] ದೇವರು ಏನು ಮಾಡುವನೋ ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ನೀವು ಮಾಡಲು ಅಗತ್ಯವಿರುವ ವಿಷಯವನ್ನು ಈ ಪುಸ್ತಕವು ನಿಮಗೆ ತೋರಿಸಬಲ್ಲದು. ಈ ಪ್ರತಿಯನ್ನು ನೀವು ತೆಗೆದುಕೊಳ್ಳುವಂತೆ ನಾನು ಬಯಸುತ್ತೇನೆ.” ತದನಂತರ ಪ್ರಾಯಶಃ ವಿಶೇಷ ದರದಲ್ಲಿ ನೀಡಲ್ಪಡುತ್ತಿರುವ ಇನ್ನೊಂದು ಪುಸ್ತಕದೊಂದಿಗೆ, ಈ ಪುಸ್ತಕವನ್ನು ನೀಡಿರಿ.
3 “ಇರುವುದು ಈ ಜೀವಿತ ಮಾತ್ರವೋ?” ಎಂಬ ಪುಸ್ತಕವನ್ನು ನೀವು ಪ್ರದರ್ಶಿಸುವುದಾದರೆ, ಈ ರೀತಿ ಏನನ್ನಾದರೂ ನೀವು ಹೇಳಬಹುದು:
◼ “ಸಂತೋಷವನ್ನು ಕಂಡುಕೊಳ್ಳಲಿಕ್ಕಾಗಿ ಅವರು ಮಾಡುವ ಎಲ್ಲ ಪ್ರಯತ್ನಗಳ ಹೊರತಾಗಿಯೂ ಅವರ ಹಿಡಿತಕ್ಕೆ ಸಿಕ್ಕದಂತೆ ತೋರುವ ಸಂತೋಷಕ್ಕಾಗಿ, ಲೋಕದಾದ್ಯಂತ ಮಿಲಿಯಗಟ್ಟಲೆ ಜನರು ಹಂಬಲಿಸುತ್ತಾರೆ. ಅನೇಕರು ಜೀವಿತವನ್ನು, ಕೇವಲ ಅಲ್ಪಕಾಲದ ಕೆಲವು ವರ್ಷಗಳನ್ನು ಜೀವಿಸುವ, ಮಕ್ಕಳನ್ನು ಬೆಳೆಸುವ, ಮತ್ತು ಹಠಾತ್ತಾಗಿ ಮರಣವು ತಮ್ಮ ಮೇಲೆ ಬರುವ ಮೊದಲು ಅತ್ಯುತ್ತಮವಾದುದನ್ನು ಹಾರೈಸುವ ಒಂದು ವಿಷಯದೋಪಾದಿ ವೀಕ್ಷಿಸುತ್ತಾರೆ.” ತದನಂತರ 145ನೆಯ ಪುಟದಲ್ಲಿ, 2ರಿಂದ 5ನೆಯ ಪ್ಯಾರಗ್ರಾಫ್ಗಳಲ್ಲಿರುವ ಕೆಲವು ವಿಚಾರಗಳನ್ನು ಹಂಚಿಕೊಳ್ಳಿರಿ, ಕೀರ್ತನೆ 37:11ನ್ನು ಓದಿರಿ, ಮತ್ತು 142ನೆಯ ಪುಟದಲ್ಲಿ ವಿವರಿಸಲ್ಪಟ್ಟಿರುವಂತಹ ಒಂದು ಪ್ರಮೋದವನ, ಒಂದು ಹೊಸ ಲೋಕವನ್ನು ಸೃಷ್ಟಿಸುವುದು ದೇವರ ಉದ್ದೇಶವಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ತೋರಿಸಿರಿ. “ಆ ಪ್ರತೀಕ್ಷೆಯ ಕುರಿತು ನಿಮಗೆ ಹೇಗನಿಸುತ್ತದೆ?” ಎಂಬಂತಹ ಪ್ರಶ್ನೆಯನ್ನು ಕೇಳುವ ಮೂಲಕ, ಮನೆಯವನ ಹೇಳಿಕೆಗಳನ್ನು ಪಡೆದುಕೊಳ್ಳಿರಿ. ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಅದೊಂದೇ ಪುಸ್ತಕವನ್ನು ರೂ. 8.00ಕ್ಕೆ ಅಥವಾ ಹಳೆಯ ಪುಸ್ತಕಗಳಲ್ಲಿ ಇನ್ನೊಂದರೊಂದಿಗೆ ರೂ. 16.00ರ ಕಾಣಿಕೆಗೆ ನೀಡಿರಿ.
4 ಮನೆಯವನಿಗೆ ಬೈಬಲ್ ಜ್ಞಾನದ ಹಿನ್ನೆಲೆಯಿರುವುದಾದರೆ, ಬಗೆಹರಿಸಲ್ಪಟ್ಟಿರದ ಯಾವುದೋ ಸಾಮಾಜಿಕ ಸಮಸ್ಯೆಯ ಕುರಿತಾದ ಸದ್ಯದ ವಾರ್ತಾ ವಿಷಯದೊಂದಿಗೆ ಆರಂಭಿಸಿ, ಹೀಗೆ ಕೇಳುವ ಮೂಲಕ ನೀವು “ನಿನ್ನ ರಾಜ್ಯವು ಬರಲಿ” ಎಂಬ ಪುಸ್ತಕವನ್ನು ಉಪಯೋಗಿಸಬಲ್ಲಿರಿ:
◼ “ಲೋಕನಾಯಕರು ಈ ಸಮಸ್ಯೆಯನ್ನು ಎಂದಾದರೂ ಒಂದು ದಿನ ಬಗೆಹರಿಸುವರೆಂದು ನೀವು ಯೋಚಿಸುತ್ತೀರೊ? [ಮನೆಯವನ ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಅಂಗೀಕರಿಸಿರಿ.] ಈ ರೀತಿಯ ಸಮಸ್ಯೆಯು ಅಸ್ತಿತ್ವದಲ್ಲಿರದಂತಹ ಲೋಕವೊಂದರಲ್ಲಿ ಜೀವಿಸುವುದನ್ನು ನಾವೆಲ್ಲರೂ ಗಣ್ಯಮಾಡುವೆವು. ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತೇವೋ ಆ ದೇವರ ಸರಕಾರದ ಆಳಿಕೆಯ ಕೆಳಗೆ, ಸಮಸ್ಯೆಯ ನಿರ್ಮೂಲನವು ವಾಸ್ತವವಾಗಿ ಪರಿಣಮಿಸುವುದು.” ಅಂತಿಮವಾಗಿ ಶಾಂತಿ ಮತ್ತು ಭದ್ರತೆಯು ಹೇಗೆ ಪರಿಗ್ರಹಿಸಲ್ಪಡುವುದು ಎಂಬುದನ್ನು ತೋರಿಸಲಿಕ್ಕಾಗಿ, ಯೆಶಾಯ 32:17, 18ನ್ನು ಓದಿರಿ. 5ನೆಯ ಪುಟದಲ್ಲಿ ಆರಂಭವಾಗುವ ಮೊದಲನೆಯ ಪ್ಯಾರಗ್ರಾಫನ್ನೂ ಓದಿ, ಭೂಮಿಗಾಗಿ ದೇವರು ವಾಗ್ದಾನಿಸುವ ವಿಷಯಗಳು, ಸಮೀಪದ ಭವಿಷ್ಯತ್ತಿನಲ್ಲಿ ನಿಜವಾಗಿ ಪರಿಣಮಿಸುವವು ಎಂಬುದಕ್ಕೆ ಶಾಸ್ತ್ರೀಯ ಪುರಾವೆಯನ್ನು ಈ ಪುಸ್ತಕವು ಒದಗಿಸುತ್ತದೆ ಎಂದು ವಿವರಿಸಿರಿ. ಪುಸ್ತಕವನ್ನು ಬಿಡಿಯಾಗಿ, ಅಥವಾ ಸೂಕ್ತವಾಗಿರುವಲ್ಲಿ, ಇನ್ನೊಂದು ಪುಸ್ತಕದೊಂದಿಗೆ ನೀಡಿರಿ.
5 “ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು” ಎಂಬ ಪುಸ್ತಕವನ್ನು ಉಪಯೋಗಿಸುವ ಮೂಲಕ, ಒಂದು ಸಂಕ್ಷಿಪ್ತವಾದ ನಿರೂಪಣೆಯನ್ನು ಮಾಡಲು ನೀವು ಬಯಸುವಲ್ಲಿ, ಆ ಪುಸ್ತಕದ 4ನೆಯ ಪುಟವನ್ನು ತೆರೆದು, ಹೀಗೆ ಕೇಳಸಾಧ್ಯವಿದೆ:
◼ “ತನ್ನ ಮೌಲ್ಯಗಳ ಮೇಲಿನ ಇಂದಿನ ಆಕ್ರಮಣವನ್ನು ಕುಟುಂಬ ಏರ್ಪಾಡು ಪಾರಾಗಬಲ್ಲದೊ?” ಮನೆಯವನ ಪ್ರತಿಕ್ರಿಯೆಯನ್ನು ಅಂಗೀಕರಿಸಿರಿ, ಮತ್ತು ತದನಂತರ 5ನೆಯ ಪುಟದಲ್ಲಿರುವ ಮೊದಲನೆಯ ಪ್ಯಾರಗ್ರಾಫನ್ನು ಓದಿರಿ. ಪುಸ್ತಕವನ್ನು ರೂ. 15.00ರ ಕಾಣಿಕೆಗೆ ನೀಡಿರಿ. (ತೆಲುಗು ಭಾಷೆಯ ಮುದ್ರಣವನ್ನು ವಿಶೇಷ ದರದಲ್ಲಿ ರೂ. 8.00ಕ್ಕೆ ನೀಡಸಾಧ್ಯವಿದೆ.)
6 ನಾವು ಭೇಟಿಯಾಗುವಂತಹ ಜನರ ಆವಶ್ಯಕತೆಗಳನ್ನು ಮತ್ತು ಆಸಕ್ತಿಗಳನ್ನು ವಿವೇಚಿಸಲು, ಒಳ್ಳೆಯ ಸೂಕ್ಷ್ಮ ಪರಿಜ್ಞಾನವು ನಮ್ಮನ್ನು ಶಕ್ತರನ್ನಾಗಿ ಮಾಡುವುದು. ಹೀಗೆ ಹೇಳುವ ಮೂಲಕ ಜ್ಞಾನೋಕ್ತಿ 16:23 ನಮಗೆ ಇದರ ಕುರಿತಾಗಿ ಆಶ್ವಾಸನೆಯನ್ನೀಯುತ್ತದೆ: “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನ [“ಸೂಕ್ಷ್ಮ ಪರಿಜ್ಞಾನ,” NW]ವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ ಹೆಚ್ಚಿಸುವದು.”