ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/96 ಪು. 7
  • ಧೈರ್ಯದಿಂದ ಮಾತಾಡಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧೈರ್ಯದಿಂದ ಮಾತಾಡಿರಿ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಸುವಾರ್ತೆಯನ್ನು ಎಲ್ಲೆಡೆಯೂ ಸಾರಿರಿ
    1996 ನಮ್ಮ ರಾಜ್ಯದ ಸೇವೆ
  • ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಇರಿ
    2005 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 1/96 ಪು. 7

ಧೈರ್ಯದಿಂದ ಮಾತಾಡಿರಿ

1 ಇತ್ತೀಚಿನ ವರ್ಷಗಳಲ್ಲಿ, ಕೆಲವು ಕ್ಷೇತ್ರಗಳಲ್ಲಿರುವ ಪ್ರಚಾರಕರು, ಜನರೊಂದಿಗೆ ಅವರ ಮನೆಗಳಲ್ಲಿ ಮಾತಾಡುವುದನ್ನು ಹೆಚ್ಚು ಕಷ್ಟಕರವನ್ನಾಗಿ ಕಂಡುಕೊಳ್ಳುತ್ತಿದ್ದಾರೆ. ಮನೆಯಿಂದ ಮನೆಗೆ ಭೇಟಿಗಳು ಮಾಡಲ್ಪಡುವಾಗ, ತಮ್ಮ ಟೆರಿಟೊರಿಯಲ್ಲಿನ 50 ಪ್ರತಿಶತಕ್ಕಿಂತಲೂ ಹೆಚ್ಚಿನ ಜನರು ಮನೆಯಲ್ಲಿರುವುದಿಲ್ಲ ಎಂದು ಅನೇಕರು ವರದಿಸುತ್ತಾರೆ. ಫಲಿತಾಂಶವಾಗಿ, ವ್ಯಯಿಸಲ್ಪಡುವ ಅಧಿಕಾಂಶ ಸಮಯವು ನಿರುತ್ಪನ್ನಕಾರಿಯಾಗಿದೆ.

2 ವರ್ಷಗಳ ಹಿಂದೆ ಅನೇಕ ಜನರು, ಒಂದು ವಿಶ್ರಾಂತಿಯ ದಿನದೋಪಾದಿ ಸಾಮಾನ್ಯವಾಗಿ ವೀಕ್ಷಿಸಲ್ಪಡುತ್ತಿದ್ದ ಆದಿತ್ಯವಾರದಂದು ಮನೆಯಲ್ಲಿ ಕಂಡುಕೊಳ್ಳಲ್ಪಡುತ್ತಿದ್ದರು. ಪದ್ಧತಿಗಳು ಬದಲಾಗಿವೆ. ಇಂದು ಜನರಿಗೆ, ಐಹಿಕ ಉದ್ಯೋಗಗಳಲ್ಲಿ ಕೆಲಸ ಮಾಡುವುದು, ಶಾಪಿಂಗ್‌ನಂತಹ ಕುಟುಂಬದ ಆವಶ್ಯಕತೆಗಳಿಗೆ ಗಮನ ಕೊಡುವುದು, ಅಥವಾ ಮನೋರಂಜನೆಯಲ್ಲಿ ಒಳಗೂಡಿರುವುದು ಸಾಮಾನ್ಯ ವಿಷಯವಾಗಿದೆ; ಇದು ಸಹ ಅವರನ್ನು ಮನೆಯಿಂದ ಹೊರಗಿಡುತ್ತದೆ. ಆದುದರಿಂದ ಆದಿತ್ಯವಾರಗಳಂದು ಸಹ, ಮನೆಯಿಂದ ಮನೆಯಲ್ಲಿ ಜನರನ್ನು ಸಂಪರ್ಕಿಸುವುದು ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

3 ಜನರು ಮನೆಯಲ್ಲಿ ಇಲ್ಲದಿರುವಾಗ, ಅವರು ಬೇರೆ ಎಲ್ಲಾದರೂ ಇದ್ದಾರೆಂಬುದನ್ನು ಇದು ಸ್ಪಷ್ಟವಾಗಿ ಅರ್ಥೈಸುತ್ತದೆ. ಜನರೊಂದಿಗೆ ಮಾತಾಡುವುದು ನಮ್ಮ ಗುರಿಯಾಗಿರುವುದರಿಂದ, ಬೀದಿಯಲ್ಲಿ, ಮಾರುಕಟ್ಟೆಯ ಸ್ಥಳದಲ್ಲಿ, ಅಥವಾ ಉದ್ಯೋಗ ಸ್ಥಳದಲ್ಲಿ ನಾವು ಸಂಧಿಸುವವರೊಂದಿಗೆ ಏಕೆ ಮಾತಾಡಬಾರದು. “ಕಂಡುಬಂದವ”ರನ್ನು ಸಮೀಪಿಸಿ, ಅವರಿಗೆ ಒಂದು ಸಾಕ್ಷಿಯನ್ನು ಕೊಡುವುದು ಅಪೊಸ್ತಲ ಪೌಲನ ಪದ್ಧತಿಯಾಗಿತ್ತು. (ಅ. ಕೃ. 17:17) ಆ ಸಮಯದಲ್ಲಿ ಇದು, ಸಾಕ್ಷಿಕಾರ್ಯದ ಒಂದು ಉತ್ಪನ್ನಕಾರಕ ವಿಧಾನವಾಗಿ ರುಜುವಾಯಿತು, ಮತ್ತು ನಮ್ಮ ದಿನದಲ್ಲಿ ಇದು ಸಾಕ್ಷಿಕಾರ್ಯದ ಉತ್ಪನ್ನಕಾರಕ ವಿಧಾನವಾಗಿದೆ.

4 ನಾವು ಮನೆಯಿಂದ ಮನೆಗೆ ಹೋಗುವಾಗ, ಜನರು ಅನಿಶ್ಚಿತವಾಗಿ ನಡೆದಾಡುತ್ತಿರುವುದನ್ನು ಅಥವಾ ಬಹುಶಃ ಯಾರಿಗಾದರೂ ಕಾಯುತ್ತಿರುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಒಂದು ಹಿತಕರವಾದ ದಿನದಂದು, ಅವರು ಉದ್ಯಾನವನದ ಬೆಂಚೊಂದರ ಮೇಲೆ ಕುಳಿತಿರಬಹುದು ಅಥವಾ ತಮ್ಮ ವಾಹನವನ್ನು ರಿಪೇರಿ ಮಾಡುತ್ತಾ ಅಥವಾ ತೊಳೆಯುತ್ತಾ ಇರಬಹುದು. ಸಂಭಾಷಣೆಯೊಂದನ್ನು ಆರಂಭಿಸಲಿಕ್ಕಾಗಿ, ಸ್ನೇಹದ ಒಂದು ನಸುನಗೆ ಮತ್ತು ಸ್ನೇಹಭಾವದ ಒಂದು ಅಭಿವಂದನೆಯು ತಾನೇ ನಮಗೆ ಅಗತ್ಯವಾಗಿರಬಹುದು. ಅವರು ಹತ್ತಿರದಲ್ಲೇ ವಾಸಿಸುತ್ತಿರುವಲ್ಲಿ, ಅವರ ಮನೆಯಲ್ಲಿ ಅವರನ್ನು ನಾವು ಭೇಟಿ ಮಾಡದೆ ಹೋಗಿದ್ದಿರಬಹುದು ಮತ್ತು ಈಗ ಅವರೊಂದಿಗೆ ಮಾತಾಡಲಿಕ್ಕಾಗಿ ನಮಗೆ ಈ ಅವಕಾಶವಿರುವುದರಿಂದ ನಾವು ಸಂತೋಷಿತರಾಗಿದ್ದೇವೆ ಎಂಬುದನ್ನು ಸಹ ನಾವು ಹೇಳಸಾಧ್ಯವಿದೆ. ಸ್ವಲ್ಪ ಹೆಚ್ಚು ಧೈರ್ಯವನ್ನು ತೋರಿಸಲಿಕ್ಕಾಗಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ಅನೇಕರು ಪ್ರತಿಫಲದಾಯಕವಾದ ಅನುಭವಗಳನ್ನು ಆನಂದಿಸಿದ್ದಾರೆ.

5 ಧೈರ್ಯವು ಫಲಿತಾಂಶಗಳನ್ನು ಪಡೆಯುತ್ತದೆ: ನಿಂತಿರುವ, ಬಸ್ಸಿಗಾಗಿ ಕಾಯುತ್ತಿರುವ, ಸಾವಕಾಶವಾಗಿ ನಡೆದಾಡುತ್ತಿರುವ, ಅಥವಾ ತಮ್ಮ ಕಾರುಗಳಲ್ಲಿ ಕುಳಿತುಕೊಂಡಿರುವ ಜನರನ್ನು ತಾನು ಸಮೀಪಿಸುತ್ತೇನೆಂದು ಒಬ್ಬ ಸಹೋದರನು ಹೇಳಿದನು. ಅವನು ಆದರಣೀಯವಾದ ಒಂದು ನಸುನಗೆ ಮತ್ತು ಪ್ರಸನ್ನವಾದ ಧ್ವನಿಯೊಂದಿಗೆ, ಭೇಟಿ ಮಾಡಲಿಕ್ಕಾಗಿಯೇ ಬಯಸುವ ಒಬ್ಬ ಸ್ನೇಹಭಾವದ ನೆರೆಯವನಂತೆ ವರ್ತಿಸುತ್ತಾನೆ. ಈ ರೀತಿಯಲ್ಲಿ ಅವನು ಹೆಚ್ಚು ಸಾಹಿತ್ಯವನ್ನು ನೀಡಿದ್ದಾನೆ ಮಾತ್ರವಲ್ಲದೆ, ಹಲವಾರು ಬೈಬಲ್‌ ಅಭ್ಯಾಸಗಳನ್ನು ಸಹ ಅವನು ಆರಂಭಿಸಿದ್ದಾನೆ.

6 ಮತ್ತೊಬ್ಬ ಸಹೋದರನೂ ಅವನ ಹೆಂಡತಿಯೂ ಮನೆಯಿಂದ ಮನೆಗೆ ಭೇಟಿ ಮಾಡುತ್ತಿದ್ದರು; ಆಗ ಕಿರಾಣಿ ಸಾಮಾನುಗಳ ಒಂದು ದೊಡ್ಡ ಚೀಲವನ್ನು ಹೊತ್ತುಕೊಂಡು ಹೋಗುತ್ತಿದ್ದ ಒಬ್ಬ ಸ್ತ್ರೀಯನ್ನು ಅವರು ಸಂಧಿಸಿದರು. ತನ್ನ ಕುಟುಂಬದ ಆವಶ್ಯಕತೆಗಳನ್ನು ನೋಡಿಕೊಳ್ಳುವುದರಲ್ಲಿನ ಅವಳ ಕಾರ್ಯತತ್ಪರತೆಗಾಗಿ ಅವಳನ್ನು ಪ್ರಶಂಸಿಸುತ್ತಾ, ಅವರು ಸಂಭಾಷಣೆಯೊಂದನ್ನು ಆರಂಭಿಸಿದರು. “ಆದರೆ ಮಾನವಕುಲದ ಅಗತ್ಯಗಳನ್ನು ಯಾರು ಸರಬರಾಯಿಮಾಡಬಲ್ಲರು?” ಎಂದು ಅವರು ಕೇಳಿದರು. ಅದು ಆ ಸ್ತ್ರೀಯ ಆಸಕ್ತಿಯನ್ನು ಕೆರಳಿಸಿತು. ಒಂದು ಸಂಕ್ಷಿಪ್ತ ಸಂಭಾಷಣೆಯು, ಅವರನ್ನು ಅವಳು ತನ್ನ ಮನೆಗೆ ಆಮಂತ್ರಿಸುವುದಕ್ಕೆ ನಡಿಸಿತು, ಅಲ್ಲಿ ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು.

7 ಆದುದರಿಂದ ಮುಂದಿನ ಬಾರಿ ನೀವು ಮನೆಯಿಂದ ಮನೆಗೆ—ಆದಿತ್ಯವಾರದಲ್ಲಿಯಾಗಿರಲಿ ವಾರದ ಇನ್ನೊಂದು ದಿನದಲ್ಲಿಯಾಗಿರಲಿ—ಸಾಕ್ಷಿನೀಡುತ್ತಿರುವಾಗ ಮತ್ತು ಜನರು ಮನೆಯಲ್ಲಿ ಇಲ್ಲದಿರುವುದನ್ನು ನೀವು ಕಂಡುಕೊಳ್ಳುವಾಗ, ಬೀದಿಯಲ್ಲಿ ಅಥವಾ ಇನ್ನೆಲ್ಲಿಯಾದರೂ ನೀವು ಸಂಧಿಸುವ ಜನರೊಂದಿಗೆ ಮಾತಾಡಲಿಕ್ಕಾಗಿ ನೀವು ಸ್ವಲ್ಪ ಹೆಚ್ಚು ಧೈರ್ಯವನ್ನು ಏಕೆ ತಂದುಕೊಳ್ಳಬಾರದು? (1 ಥೆಸ. 2:2) ಹೆಚ್ಚು ಉತ್ಪನ್ನಕರವಾದ ಶುಶ್ರೂಷೆಯು ನಿಮಗಿರಬಹುದು, ಮತ್ತು ನಿಮ್ಮ ಸೇವೆಯಲ್ಲಿ ಹೆಚ್ಚು ಮಹತ್ತಾದ ಆನಂದವನ್ನು ನೀವು ಅನುಭವಿಸುವಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ