ನಿಜ ಸಂತೋಷಕ್ಕೆ ಒಂದು ಕೀಲಿ ಕೈ
1 ಲೂಕ 11:28ರಲ್ಲಿ ದಾಖಲಿಸಲ್ಪಟ್ಟಿರುವ ಯೇಸು ಕ್ರಿಸ್ತನ ಮಾತುಗಳು ನಮಗೆ ಶುಭ ವಾರ್ತೆಯಾಗಿವೆ, ಏಕೆಂದರೆ ಸಂತೋಷವನ್ನು ಹೇಗೆ ಕಂಡುಕೊಳ್ಳುವುದೆಂದು ಆತನು ನಮಗೆ ಹೇಳುತ್ತಾನೆ. ಆತನು ಹೇಳಿದ್ದು: “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯ [“ಸಂತೋಷಿತ,” NW]ರು.” ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಮತ್ತು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕಗಳು ಅಧಿಕ ಸಂತೋಷವನ್ನು ಕಂಡುಕೊಳ್ಳುವುದರಲ್ಲಿ ಅನೇಕರಿಗೆ ಸಹಾಯವನ್ನಿತ್ತಿವೆ. ಅವುಗಳನ್ನು ಇತರರಿಗೆ ನೀಡಲು ನಮಗೆ ಸಕಾರಣವಿದೆ.
2 ಏರುತ್ತಿರುವ ಪಾತಕ ಮತ್ತು ಹಿಂಸಾಕೃತ್ಯದ ಕುರಿತಾಗಿ ಅನೇಕರು ಚಿಂತಿತರಾಗಿರುವುದರಿಂದ, ಇದು ತುಸು ಆಸಕ್ತಿಯನ್ನು ಉಂಟುಮಾಡಬಹುದು:
◼ “ನಮ್ಮ ಅತ್ಯಂತ ಮಹಾನ್ ಅಗತ್ಯವು ಏನಾಗಿದೆ ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನೆಮ್ಮದಿಯ ಶಾಂತಿಭರಿತ ಜೀವಿತಗಳನ್ನು ಜೀವಿಸಲಿಕ್ಕೆ ನಮಗೆ ಅಗತ್ಯವಾಗಿರುವುದು ಭದ್ರತೆಯಾಗಿದೆ ಎಂಬುದಾಗಿ ಮನಗಾಣಿಸಲ್ಪಟ್ಟ ಅನೇಕ ಜನರಿದ್ದಾರೆ.” ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟ 14ಕ್ಕೆ ತಿರುಗಿಸಿರಿ ಮತ್ತು 16ನೇ ಪ್ಯಾರಗ್ರಾಫ್ನ ಪ್ರಥಮ ವಾಕ್ಯವನ್ನು ಓದಿರಿ. ಹೀಗೆ ಹೇಳುತ್ತಾ ಮುಂದುವರಿಸಿರಿ: “ಆದರೂ, ದುಷ್ಟತನವನ್ನು ನಾಶಮಾಡುವ, ಭೂಮಿಯ ಆಳ್ವಿಕೆಯನ್ನು ವಹಿಸಿಕೊಳ್ಳುವ, ಮತ್ತು ಲೋಕದಾದ್ಯಂತ ಶಾಂತಿಯನ್ನು ಸ್ಥಾಪಿಸುವ ಕುರಿತಾಗಿ ದೇವರು ವಾಗ್ದಾನಿಸಿದ್ದಾನೆ. ಈ ಘೋರವಾದ ಬದಲಾವಣೆಯನ್ನು ಪಾರಾಗಲು, ನಮಗೆ ನಿಜವಾಗಿ ಅಗತ್ಯವಾಗಿರುವುದು ಸತ್ಯ ಜ್ಞಾನವಾಗಿದೆ. ಆದರೆ ಯಾವುದರ ಕುರಿತಾದ ಜ್ಞಾನ?” ಬೈಬಲಿನಿಂದ ಇಲ್ಲವೇ ಪುಸ್ತಕದ ಮುಂದಿನ ಪುಟದಲ್ಲಿರುವ 19ನೇ ಪ್ಯಾರಗ್ರಾಫ್ನಿಂದ ಯೋಹಾನ 17:3ನ್ನು ಓದಿರಿ, ಮತ್ತು ದೇವರ ಕುರಿತಾದ ಜ್ಞಾನವು ಹೇಗೆ ನಿತ್ಯಜೀವಕ್ಕೆ ನಡೆಸಬಲ್ಲದೆಂಬುದನ್ನು ವಿವರಿಸಿರಿ. ಪುಸ್ತಕವನ್ನು ನೀಡಿರಿ ಮತ್ತು ಮಾನವಕುಲದ ಎಲ್ಲ ಅಗತ್ಯಗಳನ್ನು ತೃಪ್ತಿಗೊಳಿಸುವ ದೇವರ ಉದ್ದೇಶದ ಕುರಿತಾದ ಅದ್ಭುತಕರವಾದ ಮಾಹಿತಿಯನ್ನು ಅದು ಹೇಗೆ ಪ್ರಕಟಪಡಿಸುತ್ತದೆ ಎಂಬುದನ್ನು ತೋರಿಸಲು ಹಿಂದಿರುಗಿ ಬರಲು ಸಿದ್ಧರೆಂದು ಹೇಳಿರಿ.
3 ಅನೇಕ ಜನರು ಲೋಕದಲ್ಲಿನ ಕಷ್ಟದಶೆಯ ಕುರಿತಾಗಿ ಚಿಂತಿತರಾಗಿರುವುದರಿಂದ, ನೀವು ಇದನ್ನು ಪ್ರಯತ್ನಿಸಬಹುದು:
◼ “ನಾನು ಮಾತಾಡುವ ಪ್ರತಿಯೊಬ್ಬರು ಭವಿಷ್ಯದ ಕುರಿತಾಗಿ ಚಿಂತಿತರಾಗಿದ್ದಾರೆ. ಶಾಂತಿಯ ಒಂದು ನೂತನ ಯುಗದ ಅಂಚಿನಲ್ಲಿ ನಾವಿದ್ದೇವೆಂದು ಲೋಕದ ಕೆಲವು ಮುಖಂಡರು ಭಾವಿಸುತ್ತಾರೆ. ಅದರ ಕುರಿತಾಗಿ ನಿಮಗೆ ಏನನಿಸುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮನುಷ್ಯನ ಎಲ್ಲ ಪ್ರಯತ್ನಗಳ ಹೊರತೂ ಕಷ್ಟದಶೆಯು ಲೋಕವ್ಯಾಪಕವಾಗಿ ಹೆಚ್ಚುತ್ತಾ ಮುಂದುವರಿದಿದೆ. ಈ ಸಮಸ್ಯೆಗಳಿಗಿರುವ ಏಕಮಾತ್ರ ಶಾಶ್ವತ ಪರಿಹಾರವನ್ನು ಬೈಬಲ್ ಪ್ರಕಟಪಡಿಸುತ್ತದೆ. [2 ಪೇತ್ರ 3:13ನ್ನು ಓದಿರಿ. 156ರಿಂದ 162ರ ವರೆಗಿನ ಪುಟಗಳಲ್ಲಿರುವ ಚಿತ್ರಗಳಿಗೆ ತಿರುಗಿಸಿರಿ, ಮತ್ತು ದೇವರ ಸ್ವರ್ಗೀಯ ರಾಜ್ಯವು ಈ ಭೂಮಿಗೆ ಹೇಗೆ ಶಾಶ್ವತವಾದ ಶಾಂತಿ ಮತ್ತು ಭದ್ರತೆಯನ್ನು ತರುವುದೆಂಬುದನ್ನು ವಿವರಿಸಿರಿ.] ನೀವು ಹೇಗೆ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ನಿತ್ಯಜೀವವನ್ನು ಅನುಭವಿಸುವ ಜನರ ಈ ನೂತನ ಸಮಾಜದ ಭಾಗವಾಗಸಾಧ್ಯವೆಂಬುದನ್ನು ನೋಡಲು ಈ ಪ್ರಕಾಶನವು ನಿಮಗೆ ಸಹಾಯವನ್ನೀಯುವುದು.”
4 ಕಾರ್ಯಮಗ್ನರಾಗಿರುವ ಯಾರಾದರೊಬ್ಬರನ್ನು ನೀವು ಸಂಧಿಸುವಲ್ಲಿ ಮತ್ತು ನೀವು ಸಂಕ್ಷಿಪ್ತವಾಗಿ ವಿಷಯವನ್ನು ಹೇಳಬೇಕಾಗಿರುವಲ್ಲಿ, ನೀವು ಇದನ್ನು ಹೇಳಬಹುದು:
◼ “ನಿಮಗೆ ಕೇವಲ ಅತ್ಯಲ್ಪ ಸಮಯವಿರುವುದರಿಂದ, ನಾನು ಈ ಶೀರ್ಷಿಕೆಯುಳ್ಳ [ಸೂಕ್ತವಾದ ಕಿರುಹೊತ್ತಗೆ ಅಥವಾ ಲೇಖನವನ್ನು ಆರಿಸಿಕೊಳ್ಳಿರಿ] ಕಿರುಹೊತ್ತಗೆಯನ್ನು [ಅಥವಾ ಪತ್ರಿಕೆಯ ಲೇಖನವನ್ನು] ಬಿಟ್ಟುಹೋಗಲು ಬಯಸುತ್ತೇನೆ. [ಪುಟ 6ಕ್ಕೆ ತಿರುಗಿಸಿರಿ ಮತ್ತು ಪ್ರಕಟನೆ 21:3, 4ನ್ನು ಓದಿರಿ.] ಅದನ್ನು ಓದಲು ನಾನು ನಿಮಗೆ ಪ್ರೋತ್ಸಾಹಿಸುತ್ತೇನೆ. ಮುಂದಿನ ಸಮಯ ನಾನು ಬಂದಾಗ, ಅದರ ಕುರಿತಾಗಿ ನೀವೇನು ನೆನಸುತ್ತೀರೆಂಬುದನ್ನು ತಿಳಿಯಲು ನಾನು ಬಯಸುತ್ತೇನೆ.”
5 “ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು” ಎಂಬ ಪುಸ್ತಕವನ್ನು ನೀವು ಉಪಯೋಗಿಸುತ್ತಿರುವಾಗ, ನೀವು ಈ ರೀತಿಯಲ್ಲಿ ಏನನ್ನಾದರೂ ಹೇಳಬಹುದು:
◼ “ಹಿಂದಿನ ಸಂತತಿಗಳಿಗೆ ಅಜ್ಞಾತವಾಗಿದ್ದ ಪಂಥಾಹ್ವಾನಗಳನ್ನು ಆಧುನಿಕ ಕುಟುಂಬವು ಎದುರಿಸುತ್ತದೆಂಬುದನ್ನು ನೀವು ಸಮ್ಮತಿಸುವುದಿಲ್ಲವೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಿಮ್ಮ ಅಭಿಪ್ರಾಯದಲ್ಲಿ ಇದು ಏಕೆ ಸಂಭವಿಸುತ್ತಿದೆ? [ಪ್ರತಿಕ್ರಿಯೆಯನ್ನು ಸ್ವೀಕರಿಸಿರಿ. 2 ತಿಮೊಥೆಯ 3:1-3ಕ್ಕೆ ತಿರುಗಿಸಿರಿ ಮತ್ತು ಓದಿರಿ.] ‘ತಂದೆತಾಯಿಗಳಿಗೆ ಅವಿಧೇಯರು’ ಮತ್ತು ‘ಮಮತೆಯಿಲ್ಲದವರು’ ಎಂಬ ವಾಕ್ಸರಣಿಗಳು ನಮ್ಮ ದಿನದಲ್ಲಿರುವ ಅನೇಕರನ್ನು ನಿಷ್ಕೃಷ್ಟವಾಗಿ ವರ್ಣಿಸುತ್ತವೆ. ಹಾಗಿದ್ದರೂ, ಈ ಸಮಸ್ಯೆಗಳನ್ನು ಮುಂತಿಳಿಸಿದ ಅದೇ ದೇವರು, ಕುಟುಂಬವೊಂದನ್ನು ಒಟ್ಟಿಗೆ ಅತಿ ನಿಕಟವಾಗಿ ಹೇಗೆ ಸೆಳೆಯುವುದು ಎಂಬುದರ ಮೇಲೆ ನಮಗೆ ಸ್ವಸ್ಥವಾದ ಮಾರ್ಗದರ್ಶನೆಯನ್ನೂ ನೀಡಿದ್ದಾನೆ.” ಪುಟ 2ರಲ್ಲಿರುವ “ಪ್ರಕಾಶಕರು” ಎಂಬುದರಿಂದ ಪ್ಯಾರಗ್ರಾಫ್ ಅನ್ನು ಓದಿ, ಪುಸ್ತಕವನ್ನು ರೂ. 15ರ ಕಾಣಿಕೆಗೆ ನೀಡಿರಿ (ತೆಲುಗು ಮುದ್ರಣವು ವಿಶೇಷ ದರದಲ್ಲಿ ನೀಡಲ್ಪಡಸಾಧ್ಯವಿದೆ).
6 ಫೆಬ್ರವರಿ ತಿಂಗಳಿನಲ್ಲಿ ಈ ಪ್ರಕಾಶನಗಳಲ್ಲಿ ಒಂದನ್ನು ಅಥವಾ ಎರಡನ್ನೂ ನೀಡುವುದರ ಮೂಲಕ, ಬೈಬಲಿನಲ್ಲಿ ಕಂಡುಬರುವ ಸ್ವಸ್ಥ ಬುದ್ಧಿವಾದವನ್ನು ಅನುಸರಿಸುವುದು, ನಿಜ ಸಂತೋಷಕ್ಕೆ ಒಂದು ಕೀಲಿ ಕೈ ಆಗಿದೆ ಎಂಬುದನ್ನು ಕಲಿಯಲು ನಾವು ಜನರಿಗೆ ಅವಕಾಶವನ್ನು ನೀಡೋಣ.—ಕೀರ್ತ. 119:105.