ತುರ್ತು ಪ್ರಜ್ಞೆಯಿಂದ ಸುವಾರ್ತೆಯನ್ನು ಸಾದರಪಡಿಸುವುದು
1 ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣ ಹೃದಯದಿಂದ ಪಾಲ್ಗೊಳ್ಳುವ ಮೂಲಕ, ದೇವರ ರಾಜ್ಯದ ವಾಗ್ದಾನಗಳಿಗಾಗಿ ನಾವು ನಮ್ಮ ಗಾಢವಾದ ಗಣ್ಯತೆಯನ್ನು ತೋರಿಸುತ್ತೇವೆ. ಈ ಕೆಲಸದಲ್ಲಿ ನಾವು ತುರ್ತು ಪ್ರಜ್ಞೆಯಿಂದ ಭಾಗವಹಿಸುವ ಅಗತ್ಯವಿದೆ. ಯಾಕೆ? ಯಾಕೆಂದರೆ ಕೆಲಸಗಾರರು ಕೆಲವರೇ ಇದ್ದಾರೆ, ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವು ನಿಕಟವಾಗುತ್ತಿದೆ, ಮತ್ತು ನಮ್ಮ ಟೆರಿಟೊರಿಯಲ್ಲಿರುವವರ ಜೀವಗಳು ಗಂಡಾಂತರದಲ್ಲಿವೆ. (ಯೆಹೆ. 3:19; ಮತ್ತಾ. 9:37, 38) ಅಂತಹ ಒಂದು ಭಾರವಾದ ಜವಾಬ್ದಾರಿಯು, ಶುಶ್ರೂಷೆಯಲ್ಲಿ ನಮ್ಮ ಅತ್ಯುತ್ತಮ ಪ್ರಯತ್ನಕ್ಕಾಗಿ ಕರೆನೀಡುತ್ತದೆ. ನಮ್ಮ ಕ್ಷೇತ್ರ ಸೇವಾ ಚಟುವಟಿಕೆಯ ವಿಷಯದಲ್ಲಿ ನಾವು ತುರ್ತು ಪ್ರಜ್ಞೆಯನ್ನು ಹೇಗೆ ತೋರಿಸಸಾಧ್ಯವಿದೆ? ಮುಂಚಿತವಾಗಿ ಒಳ್ಳೆಯ ನಿರೂಪಣೆಗಳನ್ನು ತಯಾರಿಸುವ ಮೂಲಕ, ಜನರನ್ನು ಎಲ್ಲೆಲ್ಲಿ ಕಂಡುಕೊಳ್ಳಬಹುದೊ ಅಲ್ಲೆಲ್ಲಾ ಅವರನ್ನು ಹುಡುಕುವುದರಲ್ಲಿ ಶ್ರದ್ಧಾವಂತರಾಗಿರುವ ಮೂಲಕ, ಆಸಕ್ತಿಯನ್ನು ತೋರಿಸುವವರೆಲ್ಲರ ನಿಷ್ಕೃಷ್ಟ ದಾಖಲೆಯನ್ನು ಮಾಡಿಕೊಳ್ಳುವ ಮೂಲಕ, ಆ ಆಸಕ್ತಿಯನ್ನು ಮುಂದುವರಿಸಿಕೊಂಡುಹೋಗಲು ತಡವಿಲ್ಲದೆ ಹಿಂದಿರುಗುವ ಮೂಲಕ ಮತ್ತು ಜೀವಗಳು ಒಳಗೂಡಿರುವುದರಿಂದ ನಾವು ನಮ್ಮ ಶುಶ್ರೂಷೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದನ್ನು ನೆನಪಿನಲ್ಲಿಡುವ ಮೂಲಕವೇ. ಫೆಬ್ರವರಿ ತಿಂಗಳಿನಲ್ಲಿ ಸುವಾರ್ತೆಯನ್ನು ತುರ್ತು ಪ್ರಜ್ಞೆಯಿಂದ ಸಾದರಪಡಿಸಲು ನಾವು ತಯಾರಿಸುತ್ತಿರುವಂತೆ, ಈ ಮುಂದಿನ ಸಲಹೆಗಳು ಸಹಾಯಕಾರಿಯಾಗಿರಬಹುದು. ನೀಡಿಕೆಯು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ, ಅಥವಾ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕಗಳು ಅಥವಾ ಎರಡೂ ಪುಸ್ತಕಗಳು ಆಗಿರುವುದು.
2 ಸಮುದಾಯದಲ್ಲಿ ಎದುರಿಸಲ್ಪಡುತ್ತಿರುವ ಕೆಲವು ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಮೂಲಕ ನೀವು ಒಂದು ಸಂಭಾಷಣೆಯನ್ನು ಆರಂಭಿಸಲು ಶಕ್ತರಾಗಬಹುದು. ಅನಂತರ ನೀವು ಹೀಗೆ ಹೇಳಸಾಧ್ಯವಿದೆ:
◼ “ಒಬ್ಬ ದೇವರಿದ್ದಾನೆಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ, ‘ಆತನು ನಮಗಾಗಿ ಯಾವ ರೀತಿಯ ಭವಿಷ್ಯತ್ತನ್ನು ಬಯಸುತ್ತಾನೆ?’ ಎಂದು ಅವರು ಕುತೂಹಲಪಡುತ್ತಾರೆ. ನೀವು ಅದಕ್ಕೆ ಹೇಗೆ ಉತ್ತರಿಸುವಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಾನವಕುಲಕ್ಕಾಗಿ ದೇವರ ಚಿತ್ತವೇನು ಮತ್ತು ಅದನ್ನು ಪೂರೈಸಲಿಕ್ಕಾಗಿ ಆತನು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದಾನೆಂಬುದರ ಕುರಿತಾಗಿ ಬೈಬಲ್ ಏನು ಹೇಳುತ್ತದೆಂದು ನಿಮಗೆ ತಿಳಿದಿದೆಯೊ?” ಪ್ರಕಟನೆ 21:4ನ್ನು ಓದಿರಿ ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕದ 11ನೆಯ ಪುಟದಲ್ಲಿರುವ ಚಿತ್ರದೊಂದಿಗೆ ಅದನ್ನು ಜೋಡಿಸಿರಿ. ಇದು ನಮ್ಮ ಭವಿಷ್ಯತ್ತಿಗಾಗಿ ಏನನ್ನು ಅರ್ಥೈಸುತ್ತದೆಂಬುದನ್ನು ಇನ್ನಷ್ಟು ದೃಷ್ಟಾಂತಿಸಲಿಕ್ಕಾಗಿ, 12-13ನೆಯ ಪುಟಗಳಲ್ಲಿರುವ ಚಿತ್ರಕ್ಕೆ ತಿರುಗಿಸಿರಿ. 12ನೆಯ ಪ್ಯಾರಗ್ರಾಫ್ನಲ್ಲಿರುವ ಯೆಶಾಯ 11:6-9ನ್ನು ಓದಿರಿ. ಪುಸ್ತಕವನ್ನು ನೀಡಿರಿ. ಸಂಭಾಷಣೆಯನ್ನು ಮುಂದುವರಿಸಲಿಕ್ಕಾಗಿ ಹಿಂದಿರುಗಲು ಒಂದು ಅನುಕೂಲ ಸಮಯಕ್ಕಾಗಿ ಏರ್ಪಡಿಸಿರಿ.
3 ಪ್ರಕಟನೆ 21:4ರ ಕುರಿತಾದ ಹಿಂದಿನ ಚರ್ಚೆಯನ್ನು ನೀವು, ಈ ಸಂಕ್ಷಿಪ್ತ ನಿರೂಪಣೆಯೊಂದಿಗೆ ಅನುಸರಿಸಸಾಧ್ಯವಿದೆ:
◼ “ನನ್ನ ಹಿಂದಿನ ಭೇಟಿಯಲ್ಲಿ, ಮಾನವಕುಲಕ್ಕಾಗಿ ಒಂದು ಹೊಸ ಭೂಸಮಾಜವನ್ನು ತಯಾರಿಸಲಿಕ್ಕಾಗಿರುವ ದೇವರ ವಾಗ್ದಾನದ ಕುರಿತಾಗಿ ನಾವು ಮಾತಾಡಿದೆವು. [ಸದಾ ಜೀವಿಸಬಲ್ಲಿರಿ ಪುಸ್ತಕದ 12-13ನೆಯ ಪುಟಗಳಲ್ಲಿರುವ ಚಿತ್ರಕ್ಕೆ ಪುನಃ ಗಮನವನ್ನು ಸೆಳೆಯಿರಿ.] ನಿಮ್ಮ ಕುಟುಂಬವು ಇಂತಹ ಪರಿಸ್ಥಿತಿಗಳನ್ನು ಅನುಭವಿಸುವುದನ್ನು ನೋಡಲು ನೀವು ಇಚ್ಛಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪ್ರಶ್ನೆಯೇನೆಂದರೆ, ದೇವರ ವಾಗ್ದಾನಗಳು ಎಷ್ಟು ವಿಶ್ವಾಸಾರ್ಹವಾಗಿವೆ? ಸ್ವತಃ ಆತನೇ ಏನು ಹೇಳುತ್ತಾನೆಂಬುದನ್ನು ದಯವಿಟ್ಟು ಗಮನಿಸಿರಿ.” ತೀತ 1:2ನ್ನು ಮತ್ತು 56ನೆಯ ಪುಟದಲ್ಲಿರುವ ಪ್ಯಾರಗ್ರಾಫ್ 28ನ್ನು ಓದಿರಿ. ಆ ಪ್ಯಾರಗ್ರಾಫ್ಗಾಗಿರುವ ಮುದ್ರಿತ ಪ್ರಶ್ನೆಯ (ಎ) ಭಾಗವನ್ನು ಕೇಳಿರಿ ಮತ್ತು ಆ ಪ್ಯಾರಗ್ರಾಫ್ನ ಕೊನೆಯ ವಾಕ್ಯವನ್ನು ಒಳಗೂಡಿಸುತ್ತಾ ಉತ್ತರದ ಕಡೆಗೆ ಗಮನವನ್ನು ಸೆಳೆಯಿರಿ. ಒಂದು ಉಚಿತ ಬೈಬಲ್ ಅಭ್ಯಾಸದ ನೀಡಿಕೆಯ ಕುರಿತಾಗಿ ತಿಳಿಸಿರಿ. ಅದನ್ನು ಅನಂತರ ಪ್ರತ್ಯಕ್ಷಾಭಿನಯಿಸಿ ತೋರಿಸಲು ಏರ್ಪಡಿಸಿರಿ.
4 ಕುಟುಂಬದಲ್ಲಿನ ಬೆಳೆಯುತ್ತಿರುವ ಸಮಸ್ಯೆಗಳ ಕುರಿತಾಗಿ ಅನೇಕರು ಚಿಂತಿತರಾಗಿರುವುದರಿಂದ, ಆರಂಭದ ಭೇಟಿಯಲ್ಲಿ ನೀವು ಈ ರೀತಿಯಲ್ಲಿ ಏನನ್ನಾದರೂ ಹೇಳಬಹುದು:
◼ “ಬಹುಮಟ್ಟಿಗೆ ಪ್ರತಿಯೊಬ್ಬರೂ, ಆಧುನಿಕ ಕುಟುಂಬದಿಂದ ಎದುರಿಸಲ್ಪಡುವ ಸಮಸ್ಯೆಗಳ ಕುರಿತಾಗಿ ಚಿಂತಿತರಾಗಿದ್ದಾರೆ. [ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿನ ಅಮಲೌಷಧ ಸಮಸ್ಯೆ ಮತ್ತು ಹೆಂಡತಿಯರು ಕೆಲಸಮಾಡಬೇಕಾಗಿರುವಾಗ, ಮನೆ ಮತ್ತು ಮಕ್ಕಳ ಕಾಳಜಿ ವಹಿಸುವ ಸಮಸ್ಯೆಯಂತಹ ಕೆಲವೊಂದು ಸಮಸ್ಯೆಗಳನ್ನು ತಿಳಿಸಿರಿ.] ಅನೇಕ ದಶಕಗಳಿಂದ, ಮಾನವ ಸಲಹೆಗಾರರು ಈ ವಿಷಯಗಳ ಕುರಿತು ಸಲಹೆಯನ್ನು ನೀಡಿದ್ದಾರೆ ಮತ್ತು ಜನರು ಅವರಿಗೆ ಕಿವಿಗೊಟ್ಟಿದ್ದಾರೆ. ಹಾಗಾದರೆ ಪರಿಸ್ಥಿತಿಗಳು ಹದಗೆಡುತ್ತಾ ಹೋಗುತ್ತಿರುವುದೇಕೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕೆಲವು ಜನರು ಹಳೆಯ ಕಾಲದ್ದೆಂದು ವೀಕ್ಷಿಸುವ ಸಲಹೆಯನ್ನು ಬೈಬಲ್ ನೀಡುತ್ತದೆ, ಆದರೆ ಅದು ಪುನಃ ಪುನಃ ವ್ಯಾವಹಾರಿಕವಾಗಿ ರುಜುವಾಗಿದೆ.” ಒಂದು ಉದಾಹರಣೆಯೋಪಾದಿ, ಕುಟುಂಬ ಜೀವನ ಪುಸ್ತಕದ, 43ನೆಯ ಪುಟದಲ್ಲಿರುವ ಜ್ಞಾನೋಕ್ತಿ 10:19ನ್ನು ಓದಿರಿ. ಆ ಪುಟದಲ್ಲಿ ಮತ್ತು ಹಿಂದಿನ ಪುಟದಲ್ಲಿರುವ ಇತರ ಶಾಸ್ತ್ರವಚನಗಳನ್ನು ತೋರಿಸಿರಿ, ಮತ್ತು ಆ ಪುಸ್ತಕವು ಬೈಬಲಿನಲ್ಲಿ ಅಡಕವಾಗಿರುವ ಹಳತಾಗದ ವಿವೇಕದ ವ್ಯಾವಹಾರಿಕ ಅನ್ವಯವನ್ನು ಮಾಡುವ ವಿಧವನ್ನು ವಿವರಿಸಿರಿ. ಹಿಂದಿರುಗಿ ಬಂದು, ಕುಟುಂಬ ಜೀವನವು ಹೇಗೆ ಉತ್ತಮಗೊಳಿಸಲ್ಪಡಸಾಧ್ಯವಿದೆ ಎಂಬುದನ್ನು ಇನ್ನೂ ಹೆಚ್ಚಾಗಿ ಚರ್ಚಿಸಲಿಕ್ಕಾಗಿ ಯೋಜನೆಗಳನ್ನು ಮಾಡಿರಿ.
5 ಒಬ್ಬನ ಕುಟುಂಬ ಜೀವನದಲ್ಲಿ ಸಂತೋಷವು ಹೇಗೆ ವೃದ್ಧಿಸಲ್ಪಡಸಾಧ್ಯವಿದೆ ಎಂಬುದನ್ನು ವಿವರಿಸಲು ಹಿಂದಿರುಗುವಿರೆಂದು ನೀವು ಮಾತುಕೊಟ್ಟಿರುವಲ್ಲಿ, ನೀವು ಈ ಪ್ರಸ್ತಾವವನ್ನು ಪ್ರಯತ್ನಿಸಬಹುದು:
◼ “ಕುಟುಂಬ ಜೀವನವನ್ನು ಹೇಗೆ ಉತ್ತಮಗೊಳಿಸಲು ಸಾಧ್ಯವಿದೆಯೆಂಬ ನಮ್ಮ ಚರ್ಚೆಯನ್ನು ನಾವು ಮುಂದುವರಿಸಲು ಸಾಧ್ಯವಾಗುವಂತೆ, ಪುನಃ ಬರಲಿಕ್ಕಾಗಿ ನಾನು ವಿಶೇಷ ಪ್ರಯತ್ನವನ್ನು ಮಾಡಿದೆ. ಕುಟುಂಬ ಜೀವನವನ್ನು ಉತ್ತಮಗೊಳಿಸಲಿಕ್ಕಾಗಿ ಬೈಬಲ್ ಉತ್ತಮ ಸಲಹೆಯನ್ನು ನೀಡುತ್ತದೆಂಬುದನ್ನು ನನ್ನ ಹಿಂದಿನ ಭೇಟಿಯಲ್ಲಿ ನಾವು ನೋಡಿದೆವು.” ಕುಟುಂಬ ಜೀವನ ಪುಸ್ತಕದ ‘ವಿಷಯಾನುಕ್ರಮಣಿಕೆ’ ಪುಟಕ್ಕೆ ತಿರುಗಿಸಿರಿ ಮತ್ತು ಮನೆಯವನು ತನಗೆ ತೀರ ಹೆಚ್ಚು ಆಸಕ್ತಿಕರವಾಗಿರುವ ಅಧ್ಯಾಯವನ್ನು ಆರಿಸಿಕೊಳ್ಳುವಂತೆ ಬಿಡಿರಿ. ಪುಟದ ಕೆಳಭಾಗದಲ್ಲಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ವಿಷಯವನ್ನು ಅಭ್ಯಾಸಿಸುವ ಮೂಲಕ ಅದರ ಹೆಚ್ಚಿನ ಪ್ರಯೋಜನವನ್ನು ಅವನು ಪಡೆದುಕೊಳ್ಳಸಾಧ್ಯವಿರುವ ವಿಧವನ್ನು ತೋರಿಸಿರಿ. ಅದನ್ನು ಅವನೊಂದಿಗೆ ಅಭ್ಯಾಸಿಸಲು ನೀಡಿಕೊಳ್ಳಿರಿ ಮತ್ತು ಒಡನೆಯೇ ಅಭ್ಯಾಸವನ್ನು ಆರಂಭಿಸಲು ಪ್ರಯತ್ನಿಸಿರಿ.
6 ಪರಿಸರದ ವಿಷಯದಲ್ಲಿ ಅನೇಕ ಜನರು ಆಸಕ್ತರಾಗಿರಲಾಗಿ, ಒಂದು ಸಂಭಾಷಣೆಯನ್ನು ಆರಂಭಿಸಲು ನೀವು ಇಂಥ ವಿಷಯವನ್ನು ಹೇಳಸಾಧ್ಯವಿದೆ:
◼ “ನಮ್ಮ ಗಾಳಿ, ನೀರು, ಮತ್ತು ಆಹಾರದ ಮಾಲಿನ್ಯದ ಕುರಿತಾಗಿ ಬಹುಮಟ್ಟಿಗೆ ಎಲ್ಲರೂ ಚಿಂತಿತರಾಗಿದ್ದಾರೆಂಬುದನ್ನು ನಾವು ಕಂಡುಕೊಂಡಿದ್ದೇವೆ. ಕೆಲವು ದೇಶಗಳಲ್ಲಿ, ಪರಿಸರದ ಸ್ಥಿತಿಯು ಈಗಾಗಲೇ ಜೀವಕ್ಕೆ ಬೆದರಿಕೆಯನ್ನೊಡ್ಡುವಂತಹದ್ದಾಗಿದೆ. ದೇವರು ಭೂಮಿಯ ಸೃಷ್ಟಿಕರ್ತನಾಗಿರುವುದರಿಂದ, ಆತನು ಇದರ ಕುರಿತಾಗಿ ಏನು ಮಾಡುವನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವು ಈ ಭೂಗ್ರಹವನ್ನು ಉಪಯೋಗಿಸುವ ವಿಧದ ಕುರಿತಾಗಿ ದೇವರು ಲೆಕ್ಕ ಕೇಳಲಿದ್ದಾನೆಂದು ಬೈಬಲ್ ಹೇಳುತ್ತದೆ. [ಪ್ರಕಟನೆ 11:18ಬಿಯನ್ನು ಓದಿರಿ.] ಎಲ್ಲಾ ಮಾಲಿನ್ಯದಿಂದ ಮುಕ್ತವಾಗಿರುವ ಒಂದು ಲೋಕದಲ್ಲಿ ಜೀವಿಸುವುದನ್ನು ಊಹಿಸಿಕೊಳ್ಳಿರಿ!” ಪ್ರಕಟನೆ 21:3, 4ರಲ್ಲಿ ಸೂಚಿಸಲ್ಪಟ್ಟಿರುವಂತೆ, ಒಂದು ಪ್ರಮೋದವನದ ಕುರಿತಾದ ದೇವರ ವಾಗ್ದಾನಕ್ಕೆ ನಿರ್ದೇಶಿಸಿರಿ. ಸದಾ ಜೀವಿಸಬಲ್ಲಿರಿ ಪುಸ್ತಕದ, 153ನೆಯ ಪುಟದಲ್ಲಿರುವ ಕೊನೆಯ ಚಿತ್ರವನ್ನು ತೋರಿಸಿ, ಅದನ್ನು 156ರಿಂದ 158ನೆಯ ಪುಟಗಳಲ್ಲಿರುವ ಚಿತ್ರಗಳೊಂದಿಗೆ ಹೋಲಿಸಿರಿ. ಪುಸ್ತಕವನ್ನು ನೀಡಿ, ಹಿಂದೆ ಬರಲು ಏರ್ಪಾಡು ಮಾಡಿರಿ.
7 ಪ್ರಮೋದವನ ಭೂಮಿಯಲ್ಲಿ ಆಸಕ್ತಿಯನ್ನು ತೋರಿಸಿರುವ ಒಬ್ಬರನ್ನು ಸಂದರ್ಶಿಸಲು ಹಿಂದಿರುಗುವಾಗ, ನೀವು ಹೀಗೆ ಹೇಳಬಹುದು:
◼ “ನನ್ನ ಹಿಂದಿನ ಭೇಟಿಯಲ್ಲಿ, ಒಂದು ಮಾಲಿನ್ಯಭರಿತ ಭೂಮಿಯ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ, ದೇವರು ಮಾನವನ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡಬೇಕಾಗುವುದು ಎಂಬುದನ್ನು ನಾವು ಒಪ್ಪಿಕೊಂಡೆವು. ಆದರೆ ಪ್ರಶ್ನೆಯೇನೆಂದರೆ, ದೇವರು ರಚಿಸುವ ನೀತಿಯ ಹೊಸ ಲೋಕದೊಳಗೆ ಪಾರಾಗಲು ನಾವು ಏನು ಮಾಡತಕ್ಕದ್ದು?” ಯೋಹಾನ 17:3ನ್ನು ಓದಿರಿ. ಈ ವಿಶೇಷ ಜ್ಞಾನವನ್ನು ಗಳಿಸಲಿಕ್ಕಾಗಿ, ನಮ್ಮ ಉಚಿತ ಬೈಬಲ್ ಅಭ್ಯಾಸ ಕ್ರಮದ ಲಾಭವನ್ನು ಪಡೆಯುವಂತೆ ಮನೆಯವನನ್ನು ಆಮಂತ್ರಿಸಿರಿ.
8 ಆಧುನಿಕ ದಿನದ ಕೊಯ್ಲಿನ ಕೆಲಸಗಾರರೋಪಾದಿ ಮತ್ತು ಒಂದು ಜೀವರಕ್ಷಕ ಸಾರುವ ಕೆಲಸವನ್ನು ಮಾಡಲಿಕ್ಕಾಗಿ ಉಪಯೋಗಿಸಲ್ಪಡುವುದು, ಎಂತಹ ಒಂದು ಸುಯೋಗವಾಗಿದೆ! ನಮ್ಮ “ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು,” ಸುವಾರ್ತೆಯನ್ನು ತುರ್ತು ಪ್ರಜ್ಞೆಯಿಂದ ಸಾದರಪಡಿಸುವುದರಲ್ಲಿ ನಾವೆಲ್ಲರೂ ಕಾರ್ಯಮಗ್ನರಾಗಿರೋಣ.—1 ಕೊರಿಂ. 15:58.