ಪುನಃ ಸೇವೆ ಸಲ್ಲಿಸಲು ಅವರಿಗೆ ಸಹಾಯಮಾಡಿರಿ
1 ತನ್ನ ಜೊತೆ ಕ್ರೈಸ್ತರಿಗಾಗಿರುವ ಭಾವಿ ಆತ್ಮಿಕ ಅಪಾಯವೊಂದನ್ನು ಗ್ರಹಿಸುತ್ತಾ, ಅಪೊಸ್ತಲ ಪೌಲನು ಬರೆದುದು: “ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗತಕ್ಕಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ; ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ವಿಮೋಚನೆಯು ಹತ್ತಿರವಾಯಿತು.” (ರೋಮಾ. 13:11) ಆತ್ಮಿಕವಾಗಿ ನಿದ್ರಾವಸ್ಥೆಯಲ್ಲಿದ್ದ ತನ್ನ ಸಹೋದರರ ಕುರಿತು ಪೌಲನು ಆಸ್ಥೆಯುಳ್ಳವನಾಗಿದ್ದನು; ಅವನು ಅವರನ್ನು ನವೀಕೃತ ಚಟುವಟಿಕೆಗೆ ಪುನಶ್ಚೈತನ್ಯಗೊಳಿಸಲು ತೀವ್ರಾಪೇಕ್ಷೆಯಿಂದಿದ್ದನು.
2 ಈ ಹಳೇ ಲೋಕದ ಇರುಳು ಹೆಚ್ಚಾಗಿ ಸಂದಿದೆ ಮತ್ತು ಹೊಸ ಲೋಕದ ಅರುಣೋದಯವು ಮುಂದೆಯೇ ಇದೆ ಎಂದು ನಿಜವಾಗಿ ಹೇಳಸಾಧ್ಯವಿದೆ. (ರೋಮಾ. 13:12) ಸುವಾರ್ತೆಯ ಸುವಾರ್ತಿಕರೋಪಾದಿ ನಮ್ಮೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಿಬಿಟ್ಟಿರುವ ನಮ್ಮ ಸಹೋದರರ ಕುರಿತು ಆಸ್ಥೆಯುಳ್ಳವರಾಗಿರಲು ನಮಗೆ ಸಕಾರಣವಿದೆ. ಕಳೆದ ಸೇವಾ ವರ್ಷದಲ್ಲಿ, ಭಾರತವೊಂದರಲ್ಲೇ, 230ಕ್ಕಿಂತಲೂ ಹೆಚ್ಚು ಪ್ರಚಾರಕರು ಪುನರ್ ಸಕ್ರಿಯಗೊಳಿಸಲ್ಪಟ್ಟರು. ಪುನಃ ಒಮ್ಮೆ ಯೆಹೋವನಿಗೆ ಸೇವೆ ಸಲ್ಲಿಸಲು ಇತರ ಅಕ್ರಿಯ ವ್ಯಕ್ತಿಗಳಿಗೆ ನಾವು ಹೇಗೆ ಸಹಾಯಮಾಡಬಲ್ಲೆವು?
3 ಹಿರಿಯರು ಮಾಡಸಾಧ್ಯವಿರುವ ವಿಷಯ: ಅಕ್ರಿಯರಾಗಿರುವವರಲ್ಲಿ ಹೆಚ್ಚಿನವರು ಸತ್ಯವನ್ನು ತೊರೆದುಬಿಟ್ಟಿಲ್ಲ; ಕೇವಲ ನಿರುತ್ಸಾಹ, ವೈಯಕ್ತಿಕ ಸಮಸ್ಯೆಗಳು, ಪ್ರಾಪಂಚಿಕತೆ, ಅಥವಾ ಜೀವನದ ಇತರ ವ್ಯಾಕುಲತೆಗಳಿಂದ ಅವರು ಸಾರುವ ಕಾರ್ಯವನ್ನು ನಿಲ್ಲಿಸಿಬಿಟ್ಟಿದ್ದಾರೆ. (ಲೂಕ 21:34-36) ಸಾಧ್ಯವಿರುವಲ್ಲಿ, ಅವರು ಅಕ್ರಿಯರಾಗಿ ಪರಿಣಮಿಸುವ ಮುನ್ನವೇ ಅವರಿಗೆ ಸಹಾಯಮಾಡುವುದು ಬಹಳ ಉತ್ತಮವಾಗಿದೆ. ಸೇವಾ ಚಟುವಟಿಕೆಯನ್ನು ವರದಿಸುವುದರಲ್ಲಿ ಒಬ್ಬ ಪ್ರಚಾರಕನು ಅಕ್ರಮನಾಗಿ ಪರಿಣಮಿಸುವಾಗ, ಸಭಾ ಸೆಕ್ರಿಟರಿಯು ಸಭಾ ಪುಸ್ತಕ ಅಭ್ಯಾಸ ನಿರ್ವಾಹಕನನ್ನು ಜಾಗೃತಗೊಳಿಸಬೇಕು. ಒಂದು ಕುರಿಪಾಲನ ಭೇಟಿಗಾಗಿ ಏರ್ಪಾಡುಗಳನ್ನು ಮಾಡಸಾಧ್ಯವಿದೆ. ಅವರು ಸಮಸ್ಯೆಯ ಮೂಲಭೂತ ಕಾರಣವನ್ನು ಮತ್ತು ನೆರವನ್ನು ಹೇಗೆ ನೀಡಸಾಧ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು.—ಸೆಪ್ಟೆಂಬರ್ 15, 1993ರ ಕಾವಲಿನಬುರುಜು, 20-3ನೆಯ ಪುಟಗಳನ್ನು ನೋಡಿರಿ.
4 ಇತರರು ಸಹಾಯಮಾಡಸಾಧ್ಯವಿರುವ ವಿಧ: ಅಕ್ರಿಯರಾಗಿರುವ ಯಾರನ್ನಾದರೂ ನಮ್ಮಲ್ಲಿ ಹೆಚ್ಚಿನವರು ತಿಳಿದಿದ್ದೇವೆ. ಗತ ಸಮಯದಲ್ಲಿ ನಮಗೆ ತುಂಬಾ ಸಮೀಪವಾಗಿದ್ದ ಒಬ್ಬ ವ್ಯಕ್ತಿಯು ಅವನಾಗಿರಬಹುದು. ಸಹಾಯಮಾಡಲು ನಾವೇನು ಮಾಡಬಲ್ಲೆವು? ಒಂದು ಸಂಕ್ಷಿಪ್ತ ಭೇಟಿಯನ್ನು ನೀಡಬಾರದೇಕೆ. ನೀವು ಅವನ ಸಾಂಗತ್ಯವನ್ನು ಕಳೆದುಕೊಳ್ಳುತ್ತೀರೆಂಬುದನ್ನು ಅವನಿಗೆ ಹೇಳಿರಿ. ಹರ್ಷಚಿತ್ತರೂ ಸಕಾರಾತ್ಮಕರೂ ಆಗಿರ್ರಿ. ಅವನು ಆತ್ಮಿಕವಾಗಿ ಅಸ್ವಸ್ಥನಾಗಿದ್ದಾನೆಂಬುದನ್ನು ಸೂಚಿಸದೆ ನಿಮ್ಮ ಆಸ್ಥೆಯನ್ನು ವ್ಯಕ್ತಪಡಿಸಿರಿ. ಸಭೆಯಿಂದ ಪೂರೈಸಲ್ಪಡುತ್ತಿರುವ ಆತ್ಮೋನ್ನತಿಮಾಡುವ ಅನುಭವಗಳನ್ನು ಅಥವಾ ಇತರ ಒಳ್ಳೆಯ ವಿಷಯಗಳನ್ನು ಹೇಳಿರಿ. ಉತ್ಸಾಹಪೂರ್ವಕವಾಗಿ “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನದ ಕುರಿತು ಅವನಿಗೆ ಹೇಳಿರಿ ಮತ್ತು ಹಾಜರಾಗಲು ಅವನನ್ನು ಉತ್ತೇಜಿಸಿರಿ. ಸಭೆಯೊಂದಿಗೆ ಪುನಃ ಸಹವಾಸಿಸುವುದು ಅವನಿಗೆ ಇತರ ಯಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ಸಹಾಯಮಾಡಬಹುದು. ಸಭೆಗಳಿಗೆ ಅವನೊಂದಿಗೆ ಜೊತೆಗೂಡಿ ಹೋಗಲು ಸಿದ್ಧರಾಗಿದ್ದೀರೆಂದು ಹೇಳಿರಿ. ನೀವು ಪಡೆದ ಪ್ರತಿಕ್ರಿಯೆಯ ಕುರಿತು ಹಿರಿಯರಿಗೆ ತಿಳಿಯಪಡಿಸಿರಿ.
5 ಅಕ್ರಿಯನಾಗಿ ಪರಿಣಮಿಸಿದ್ದ ಒಬ್ಬ ವ್ಯಕ್ತಿಯು ಕೂಟಗಳಿಗೆ ಹಿಂದಿರುಗುವಾಗ, ಗತ ಕಾಲದಲ್ಲಿ ಅವನು ತಿಳಿದಿದ್ದ ಇತರರನ್ನು ಎದುರುಗೊಳ್ಳುವಾಗ ಮುಜುಗರಪಡುವುದು ಸಂಭವನೀಯ. “ನೀವು ಎಲ್ಲಿ ಹೋಗಿದ್ದಿರಿ?” ಎಂದು ಕೇಳದಿರಿ. ಅದಕ್ಕೆ ಬದಲಾಗಿ, ಸ್ವಾಗತದ ಅನಿಸಿಕೆಯನ್ನು ಅವನಿಗೆ ಉಂಟುಮಾಡಿರಿ. ಸಂಭಾಷಣೆಯಲ್ಲಿ ಅವನನ್ನು ಒಳಗೂಡಿಸಿರಿ. ಅವನಿಗೆ ತಿಳಿದಿರದ ವ್ಯಕ್ತಿಗಳಿಗೆ ಅವನನ್ನು ಪರಿಚಯಿಸಿರಿ. ಅವನಲ್ಲಿ ಸಂಗೀತ ಪುಸ್ತಕವೊಂದು ಮತ್ತು ಅಭ್ಯಸಿಸಲ್ಪಡುವ ಸಾಮಗ್ರಿಯಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ, ಕೂಟದ ಸಮಯದಲ್ಲಿ ಅವನೊಂದಿಗೆ ಕುಳಿತುಕೊಳ್ಳಿರಿ. ಹಿಂದಿರುಗಿಬರಲು ಅವನನ್ನು ಉತ್ತೇಜಿಸಿರಿ, ಮತ್ತು ಅಗತ್ಯವಿರುವಲ್ಲಿ ನಿಮ್ಮ ನೆರವನ್ನು ನೀಡಿರಿ.
6 ದಾರಿತಪ್ಪಿದವರಿಗಾಗಿ ಹೃತ್ಪೂರ್ವಕವಾದ ಮಮತೆಯನ್ನು ಪಡೆದಿರುವುದರಿಂದ, ಅಂಥ ವ್ಯಕ್ತಿಗಳು ಆತ್ಮಿಕವಾದೊಂದು ಚೇತರಿಸುವಿಕೆಯನ್ನು ಮಾಡುವಾಗ, ಯೆಹೋವ ಮತ್ತು ಯೇಸು ಆನಂದಿಸುತ್ತಾರೆ. (ಮಲಾ. 3:7; ಮತ್ತಾ. 18:12-14) ಪುನಃ ಯೆಹೋವನಿಗೆ ಸೇವೆ ಸಲ್ಲಿಸಲು ಇತರರಿಗೆ ಸಹಾಯಮಾಡುವುದರಲ್ಲಿ ನಾವು ಸಫಲರಾಗುವುದಾದರೆ, ಅದೇ ಹರ್ಷವನ್ನು ನಾವು ಅನುಭವಿಸಬಲ್ಲೆವು.