ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ದಾಖಲಾತಿ
1 ಸುವಾರ್ತೆಯ ಶುಶ್ರೂಷಕರಾಗಿ ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳನ್ನು ತರಬೇತುಗೊಳಿಸುವುದರಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯು ನೆರವಾಗಿರುತ್ತದೆ. ನಾವು ಮೊದಲು ಈ ಶಾಲೆಯಲ್ಲಿ ಹೆಸರನ್ನು ದಾಖಲಿಸಿಕೊಂಡಾಗ, ನಮಗೆ ಹೇಗೆ ಭಯದ ಹಾಗೂ ಕೊರತೆಯ ಅನಿಸಿಕೆಯಾಯಿತು ಎಂದು ನಮ್ಮಲ್ಲಿ ಅನೇಕರಿಗೆ ಜ್ಞಾಪಕವಿದೆ. ಈಗ ಭಾಷಣಕಾರರು ಹಾಗೂ ದೇವರ ವಾಕ್ಯದ ಬೋಧಕರೋಪಾದಿ ನಮ್ಮ ಆತ್ಮಿಕ ಬೆಳವಣಿಗೆಯಲ್ಲಿ ಅದರ ಪಾತ್ರವನ್ನು ನಾವು ಕೃತಜ್ಞತಾಪೂರ್ವಕವಾಗಿ ಅಂಗೀಕರಿಸುತ್ತೇವೆ. (ಅ. ಕೃ. 4:13ನ್ನು ಹೋಲಿಸಿರಿ.) ಈ ಗಮನಾರ್ಹವಾದ ಶಾಲೆಯಲ್ಲಿ ನೀವು ಹೆಸರನ್ನು ದಾಖಲಿಸಿಕೊಂಡಿದ್ದೀರೊ?
2 ಯಾರು ಹೆಸರನ್ನು ದಾಖಲಿಸಿಕೊಳ್ಳಬಹುದು? ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ ಪುಟ 73 ಉತ್ತರಿಸುವುದು: “ಸಭೆಯಲ್ಲಿ ಕಾರ್ಯಶೀಲರೀತಿಯಲ್ಲಿ ಕೂಡಿಕೊಂಡಿರುವವರೆಲ್ಲರೂ, ಹೊಸದಾಗಿ ಕೂಟಗಳಿಗೆ ಹಾಜರಾಗುತ್ತಿರುವವರು ಸಹ, ಅವರು ಕ್ರೈಸ್ತ ಮೂಲತತ್ವಗಳಿಗೆ ಹೊಂದಿಕೆಯಾಗಿರದ ಜೀವನವನ್ನು ನಡೆಸುವವರಾಗಿಲ್ಲದಿರುವಲ್ಲಿ ತಮ್ಮ ಹೆಸರನ್ನು ಕೊಡಬಹುದು.” ಅರ್ಹರಾಗುವ ಎಲ್ಲಾ ಪುರುಷರು, ಸ್ತ್ರೀಯರು, ಹಾಗೂ ಮಕ್ಕಳು, ಶಾಲಾ ಮೇಲ್ವಿಚಾರಕರನ್ನು ಭೇಟಿಯಾಗಿ, ತಮ್ಮ ಹೆಸರನ್ನು ದಾಖಲಿಸಿಕೊಳ್ಳುವಂತೆ ನಾವು ಆಮಂತ್ರಿಸುತ್ತೇವೆ.
3 1997ಕ್ಕಾಗಿ ಶಾಲಾ ಕಾರ್ಯಕ್ರಮ: 1997ಕ್ಕಾಗಿರುವ ದೇವಪ್ರಭುತ್ವ ಶುಶ್ರೂಷಾ ಶಾಲಾ ಕಾರ್ಯಕ್ರಮವು, ಬೈಬಲ್ ಬೋಧನೆಗಳನ್ನು ಆವರಿಸುತ್ತದೆ. ನಮ್ಮ ಮಾತನಾಡುವ ಹಾಗೂ ಕಲಿಸುವ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಿಕೊಳ್ಳುವುದರೊಂದಿಗೆ, ಪ್ರತಿ ವಾರ ಅದರ ಪಾಠಕ್ರಮದಲ್ಲಿ ಕಂಡುಬರುವ ಅನೇಕ ಆತ್ಮಿಕ ರತ್ನಗಳಿಂದ ನಾವು ಕಲಿಯುತ್ತೇವೆ. (ಜ್ಞಾನೋ. 9:9) ನಾವು ಶಾಲೆಗೆ ತಯಾರಿಸುವಲ್ಲಿ—ಇದರಲ್ಲಿ ಸಾಪ್ತಾಹಿಕ ಬೈಬಲ್ ವಾಚನ ಮಾಡುವುದೂ ಸೇರಿದೆ—ಮತ್ತು ಕ್ರಮವಾಗಿ ಉಪಸ್ಥಿತರಾಗುವಲ್ಲಿ, ಕಾರ್ಯಕ್ರಮದಿಂದ ನಾವು ಮಹತ್ತಾದ ಆತ್ಮಿಕ ಪ್ರಯೋಜನವನ್ನು ಪಡೆಯಬಲ್ಲೆವು.
4 1997ರ 2ನೇ ವಿದ್ಯಾರ್ಥಿ ನೇಮಕದ ಬೈಬಲ್ ವಾಚನಗಳಲ್ಲಿ ಹೆಚ್ಚಿನವು, ಕಳೆದ ವರುಷದಲ್ಲಿದ್ದುದಕ್ಕಿಂತ ಚಿಕ್ಕದಾಗಿವೆ. ಈ ನೇಮಕಕ್ಕಾಗಿ ತಯಾರಿಸುವಾಗ, ವಿದ್ಯಾರ್ಥಿಯು ತನ್ನ ಓದುವಿಕೆಗೆ ತಗಲುವ ಸಮಯವನ್ನು ಜಾಗರೂಕತೆಯಿಂದ ನಿರ್ಧರಿಸಬೇಕು. ಆಮೇಲೆ ತನ್ನ ಭಾಗಕ್ಕಾಗಿ ನೇಮಕವಾದ ಐದು ನಿಮಿಷಗಳಲ್ಲಿ ಎಷ್ಟನ್ನು ಪೀಠಿಕೆಗೆ ಹಾಗೂ ಸಮಾಪ್ತಿಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ನಿರ್ಧರಿಸಬೇಕು. ಇದು ವಿದ್ಯಾರ್ಥಿಯು ತನ್ನ ಸಮಯವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುವಂತೆ ಮತ್ತು ತನ್ನ ಓದುವ ಸಾಮರ್ಥ್ಯವನ್ನೂ, ಅಚಿಂತಿತವಾಗಿ ಮಾತಾಡುವ ಕಲೆಯನ್ನೂ ಬೆಳೆಸಿಕೊಳ್ಳುವಂತೆ ಅನುಮತಿಸುವುದು.—1 ತಿಮೊ. 4:13.
5 ಜ್ಞಾನ ಪುಸ್ತಕದ ಮೇಲೆ ಆಧಾರಿತವಾದ 3ನೇ ವಿದ್ಯಾರ್ಥಿ ನೇಮಕದಲ್ಲಿನ ನಿರೂಪಣೆಗಳಿಗೆ, ಸಾಧ್ಯವಾದ ಸನ್ನಿವೇಶವಾಗಿ ಅನೌಪಚಾರಿಕ ಸಾಕ್ಷಿಕಾರ್ಯವು ಸೇರಿಸಲ್ಪಟ್ಟಿದೆ. ಆದುದರಿಂದ, ಈ ನೇಮಕದ ಸನ್ನಿವೇಶವಾಗಿ ಒಬ್ಬ ಸಹೋದರಿಯು, ಒಂದು ಪುನರ್ಭೇಟಿಯನ್ನೊ, ಒಂದು ಮನೆ ಬೈಬಲಭ್ಯಾಸವನ್ನೊ, ಅಥವಾ ಅನೌಪಚಾರಿಕ ಸಾಕ್ಷಿಕಾರ್ಯವನ್ನೊ ಆರಿಸಿಕೊಳ್ಳಬಹುದು. ನಿಸ್ಸಂದೇಹವಾಗಿ, ಹೆಚ್ಚಿನ ಮಹತ್ವವು ಪರಿಣಾಮಕಾರಿ ಕಲಿಸುವಿಕೆಗೆ ಕೊಡಲ್ಪಡಬೇಕೇ ಹೊರತು ಸನ್ನಿವೇಶಕ್ಕಲ್ಲ.
6 ನಿಮಗೆ ಉಪದೇಶ ಭಾಷಣ, ಬೈಬಲ್ ಮುಖ್ಯಾಂಶಗಳು, ಅಥವಾ ವಿದ್ಯಾರ್ಥಿ ಭಾಷಣವನ್ನು ಕೊಡುವ ಸುಯೋಗವಿರುವುದಾದರೆ, ನೀವು ನಿಮ್ಮ ಭಾಗವನ್ನು ಚೆನ್ನಾಗಿ ತಯಾರಿಸುವ ಮತ್ತು ಪೂರ್ವಾಭಿನಯಿಸುವ ಮೂಲಕ, ದೃಢ ನಿಶ್ಚಯದಿಂದ ಮತ್ತು ಉತ್ಸಾಹದಿಂದ ಅದನ್ನು ಸಾದರಪಡಿಸುವ ಮೂಲಕ, ಸಮಯ ಮೀರಿ ಹೋಗದಿರುವ ಮೂಲಕ, ಶಾಲಾ ಮೇಲ್ವಿಚಾರಕನ ಸಲಹೆಗೆ ಕಿವಿಗೊಡುವ ಮತ್ತು ಅದನ್ನು ಅನ್ವಯಿಸುವ ಮೂಲಕ, ಹಾಗೂ ಯಾವಾಗಲೂ ನಿಮ್ಮ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಲು ಪ್ರಯತ್ನಿಸುವ ಮೂಲಕ, ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ನಿಮ್ಮ ಗಣ್ಯತೆಯನ್ನು ತೋರಿಸಸಾಧ್ಯವಿದೆ. ಹೀಗೆ ಶಾಲೆಯಲ್ಲಿನ ನಿಮ್ಮ ದಾಖಲಾತಿಯು, ನಿಮಗೂ ಸಭಿಕರೆಲ್ಲರಿಗೂ ಒಂದು ಆಶೀರ್ವಾದವಾಗಿ ಪರಿಣಮಿಸುವುದು.