ಕುಟುಂಬ ಸಂತೋಷದ ರಹಸ್ಯದಲ್ಲಿ ಇತರರೊಂದಿಗೆ ಪಾಲಿಗರಾಗುವುದು
1 ಕುಟುಂಬವು, ಮಾನವ ಸಮಾಜದ ಮೂಲ ಏಕಾಂಶವಾಗಿದೆ, ಮತ್ತು ಹಲವಾರು ಕುಟುಂಬಗಳು ಸೇರಿ ಹಳ್ಳಿಗಳನ್ನು, ನಗರಗಳನ್ನು, ರಾಜ್ಯಗಳನ್ನು ಮತ್ತು ಇಡೀ ರಾಷ್ಟ್ರಗಳನ್ನು ರಚಿಸುತ್ತವೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಕುಟುಂಬ ಏಕಾಂಶವು ಒತ್ತಡದ ಕೆಳಗಿದೆ. ಕುಟುಂಬ ಜೀವಿತದ ಅಸ್ತಿತ್ವವನ್ನೇ ಬೆದರಿಕೆಗೊಡ್ಡುತ್ತಾ, ಶಕ್ತಿಶಾಲಿ ಪ್ರಭಾವಗಳು ಕಾರ್ಯನಡಿಸುತ್ತಿವೆ. ಕುಟುಂಬ ಏರ್ಪಾಡಿನ ವಿನ್ಯಾಸಕನಾದ ಯೆಹೋವನು, ನಾವು ಕುಟುಂಬ ಸಂತೋಷವನ್ನು ಗಳಿಸಸಾಧ್ಯವಾಗುವಂತೆ ನಮಗೆ ಸೂಚನೆಗಳನ್ನು ಒದಗಿಸಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! ಆತನ ಮಾರ್ಗದರ್ಶನಗಳನ್ನು ಅನುಸರಿಸುವವರು, ಸಮಸ್ಯೆಗಳು ಕಡಿಮೆಗೊಳಿಸಲ್ಪಟ್ಟು, ಒಂದು ಯಶಸ್ವೀ ಕುಟುಂಬ ಏಕಾಂಶವು ಪರಿಣಮಿಸುತ್ತದೆಂಬುದನ್ನು ಕಂಡುಕೊಳ್ಳುತ್ತಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ, ನಾವು ಕುಟುಂಬ ಸಂತೋಷದ ರಹಸ್ಯ ಪುಸ್ತಕವನ್ನು ಇತರರೊಂದಿಗೆ ಹಂಚುವುದರಲ್ಲಿ ಪಾಲಿಗರಾಗುವ ಸುಯೋಗವನ್ನು ಹೊಂದಿದ್ದೇವೆ. ಕುಟುಂಬ ಜೀವಿತದ ವಿಷಯದ ಕುರಿತಾಗಿ ಜನರನ್ನು ಸಮೀಪಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಸ್ನೇಹಪರರು, ಸಕಾರಾತ್ಮಕರು, ಮತ್ತು ವಿವೇಚನಾಶೀಲರಾಗಿರಿ. ನೀವೇನನ್ನು ಹೇಳಬಹುದು?
2 ಇಲ್ಲಿ ಕೊಡಲ್ಪಟ್ಟಿರುವಂತಹ ಪ್ರಶ್ನೆಯೊಂದನ್ನು ಎಬ್ಬಿಸುವ ಮೂಲಕ ನೀವು ಆರಂಭಿಸಸಾಧ್ಯವಿದೆ:
◼ “ಅನೇಕ ಕುಟುಂಬಗಳು, ಜೀವಿತದ ಒತ್ತಡಗಳನ್ನು ತಾಳಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಿವೆಯೆಂಬುದನ್ನು ನೀವು ಗಮನಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನೇಕ ಜನರು ಮನೆಯಲ್ಲಿ ಕಷ್ಟಗಳನ್ನು ಅನುಭವಿಸುತ್ತಾರೆಂದು ವರದಿಗಳು ಸೂಚಿಸುತ್ತವೆ. ಕುಟುಂಬಗಳು ಹೆಚ್ಚಿನ ಸ್ಥಿರತೆ ಮತ್ತು ಸಂತೋಷವನ್ನು ಕಂಡುಕೊಳ್ಳುವಂತೆ ಯಾವುದು ಸಹಾಯ ಮಾಡುವುದೆಂದು ನೀವು ನಂಬುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬದ ಏರ್ಪಾಡನ್ನು ದೇವರು ಆರಂಭಿಸಿದ್ದರಿಂದ, ಆತನು ಕೊಟ್ಟಿರುವ ಮಾರ್ಗದರ್ಶನಗಳನ್ನು ಪರೀಕ್ಷಿಸುವುದು ಸಮಂಜಸವಾಗಿರದೊ? [2 ತಿಮೊಥೆಯ 3:16, 17ನ್ನು ಓದಿರಿ.] ಇಂತಹ ಉಪಯುಕ್ತ ಉಪದೇಶವು, ಕುಟುಂಬ ಸಂತೋಷದ ರಹಸ್ಯ ಎಂಬ ಈ ಪುಸ್ತಕದಲ್ಲಿ ರೇಖಿಸಲ್ಪಟ್ಟಿದೆ.” ಅವನು ಯಾವುದನ್ನು ಒಂದು ಸಾಮಾನ್ಯ ಕುಟುಂಬ ಸಮಸ್ಯೆಯಾಗಿ ಪರಿಗಣಿಸುತ್ತಾನೆಂಬುದನ್ನು ಅನಂತರ ಆ ವ್ಯಕ್ತಿಗೆ ಕೇಳಿರಿ. ಆ ಸಮಸ್ಯೆಯನ್ನು ಚರ್ಚಿಸುವ ಅಧ್ಯಾಯವನ್ನು ತೋರಿಸಿ, ಪುಸ್ತಕವನ್ನು ನೀಡಿರಿ.
3 ಹೀಗೆ ಹೇಳುವ ಮೂಲಕ ಪುನರ್ಭೇಟಿಯಲ್ಲಿ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಗುರಿಯನ್ನು ನೀವು ಬೆನ್ನಟ್ಟಬಹುದು:
◼ “ಕುಟುಂಬ ಜೀವಿತದ ವಿಷಯದಲ್ಲಿ ನೀವೇನನ್ನು ಹೇಳಿದಿರೊ ಅದರ ಕುರಿತಾಗಿ ನಾನು ಯೋಚಿಸಿದ್ದೇನೆ, ಮತ್ತು ನೀವು ಆನಂದಿಸುವಿರೆಂದು ನಾನು ನೆನಸುವ ಒಂದು ಬ್ರೋಷರನ್ನು ತಂದಿದ್ದೇನೆ. [ಅಪೇಕ್ಷಿಸು ಬ್ರೋಷರನ್ನು ತೋರಿಸಿ, ಪುಟ 16ಕ್ಕೆ ತಿರುಗಿಸಿ, ಮೇಲಿರುವ ಆರು ಪ್ರಶ್ನೆಗಳನ್ನು ಓದಿರಿ.] ಕುಟುಂಬ ಸಂತೋಷಕ್ಕೆ ನೆರವನ್ನೀಯಲು, ಕುಟುಂಬದಲ್ಲಿರುವ ಪ್ರತಿಯೊಬ್ಬನೂ ತನ್ನ ಪಾತ್ರವನ್ನು ವಹಿಸಬೇಕೆಂಬುದು ವ್ಯಕ್ತ. ನೀವು ಸ್ವಲ್ಪ ಸಮಯವನ್ನು ಕೊಡುವಲ್ಲಿ, ಈ ಮಾಹಿತಿಯಿಂದ ನೀವು ಅತಿ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ನಾನು ಪ್ರದರ್ಶಿಸಬಲ್ಲೆ.” ಅನಂತರ ಪಾಠ 8ನ್ನು ಅಭ್ಯಾಸಿಸಲು ಆರಂಭಿಸಿರಿ.
4 ಒಂದು ಚರ್ಚೆಯನ್ನು ಆರಂಭಿಸುವ ಇನ್ನೊಂದು ವಿಧವು, ಪ್ರಾಯಶಃ ಹೀಗೆ ಹೇಳುವ ಮೂಲಕ ಒಂದು ಸಮಸ್ಯೆಯನ್ನು ಉಲ್ಲೇಖಿಸುವುದಾಗಿದೆ:
◼ “ಎಲ್ಲರೂ ಸಂತುಷ್ಟಿ ಮತ್ತು ಸಂತೃಪ್ತಿಯನ್ನು ಅನುಭವಿಸಲು ಬಯಸುವುದಾದರೂ, ಅನೇಕ ಕುಟುಂಬಗಳು ಇದರಲ್ಲಿ ನಿಜವಾಗಿಯೂ ಯಶಸ್ಸು ಪಡೆದಿಲ್ಲವೆಂದು ತೋರುತ್ತದೆ. ನಿಜ ಸಂತೋಷವನ್ನು ಕಂಡುಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡುವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂದು ಕುಟುಂಬಗಳಲ್ಲಿ ನಾವು ಯಾವ ರೀತಿಯ ಸಮಸ್ಯೆಗಳನ್ನು ನೋಡುವೆವೆಂಬುದನ್ನು ಬೈಬಲ್ ಬಹಳ ಸಮಯದ ಹಿಂದೆಯೇ ಪ್ರಕಟಪಡಿಸಿತು. [2 ತಿಮೊಥೆಯ 3:1-3ನ್ನು ಓದಿರಿ.] ಆದಾಗಲೂ, ಈ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಬಾಳುವ ಸಂತೋಷವನ್ನು ಗಳಿಸಲು, ಏನು ಮಾಡಬೇಕೆಂಬುದನ್ನೂ ಬೈಬಲ್ ಕುಟುಂಬಗಳಿಗೆ ಹೇಳುತ್ತದೆ. ಅದರ ಮೂಲತತ್ವಗಳು, ಕುಟುಂಬ ಸಂತೋಷದ ರಹಸ್ಯ ಎಂಬ ಈ ಪುಸ್ತಕದಲ್ಲಿ ಪ್ರಸ್ತುತಪಡಿಸಲ್ಪಟ್ಟಿವೆ.” ಅನಂತರ, ಒಂದು ಸೂಕ್ತ ಅಧ್ಯಾಯದ ಅಂತ್ಯದಲ್ಲಿರುವ ಪುನರ್ವಿಮರ್ಶಾ ರೇಖಾಚೌಕವನ್ನು ತೋರಿಸಿ, ಅದನ್ನು ಓದಿ, ಪುಸ್ತಕವನ್ನು ನೀಡಿರಿ.
5 ನೀವು ಹಿಂದಿರುಗುವಾಗ, ಒಂದು ಅಭ್ಯಾಸವನ್ನು ಆರಂಭಿಸಲು “ಅಪೇಕ್ಷಿಸು” ಬ್ರೋಷರನ್ನು ಉಪಯೋಗಿಸಿರಿ. ನೀವು ಹೀಗೆ ಹೇಳಸಾಧ್ಯವಿದೆ:
◼ “ಕುಟುಂಬ ಜೀವಿತಕ್ಕೆ ಅನ್ವಯಿಸುವ ಬೈಬಲಿನ ಮೂಲತತ್ವಗಳನ್ನು ಪರೀಕ್ಷಿಸಲು ನೀವು ತೋರಿಸಿದ ಸಿದ್ಧಮನಸ್ಸಿನಿಂದ ನಾನು ಪ್ರಭಾವಿತನಾದೆ. ಬೈಬಲಿನಲ್ಲಿ ಕಂಡುಬರುವ ವ್ಯಾವಹಾರಿಕ ಸಲಹೆಯನ್ನು ಅನುಸರಿಸುವುದರಿಂದ ಅತ್ಯುತ್ತಮವಾದ ಫಲಿತಾಂಶಗಳು ಸಾಧಿಸಲ್ಪಡುತ್ತವೆ ಎಂಬುದನ್ನು ಅನುಭವವು ತೋರಿಸಿದೆ. ಅದು ಹಾಗೇಕೆ ಎಂಬುದರ ಕುರಿತಾದ ಒಂದು ಸರಳ ವಿವರಣೆ ಇಲ್ಲಿದೆ.” ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 1ರ ಮೊದಲನೆಯ ಪ್ಯಾರಗ್ರಾಫನ್ನು ಓದಿರಿ. ಕೀರ್ತನೆ 1:1-3 ಅಥವಾ ಯೆಶಾಯ 48:17, 18ನ್ನು ಇದರಲ್ಲಿ ಸೇರಿಸಿರಿ. ಅವಕಾಶವು ಅನುಮತಿಸುವಲ್ಲಿ, ಪಾಠದ ಉಳಿದ ಭಾಗವನ್ನು ಪರಿಗಣಿಸಿರಿ. ಮುಂದಿನ ಪಾಠವನ್ನು ಜೊತೆಯಾಗಿ ಅಭ್ಯಾಸಿಸಲು ಪುನಃ ಬರುವಿರೆಂದು ಹೇಳಿರಿ.
6 ಬಲವಾದ ನಂಬಿಕೆಯಿರುವುದಾದರೂ, ಬೈಬಲಿನ ಬುದ್ಧಿವಾದವನ್ನು ಅವಶ್ಯವಾಗಿ ಗಣ್ಯಮಾಡದಿರುವ ಜನರೊಂದಿಗೆ ಮಾತಾಡುವಾಗ, ನೀವು ಈ ರೀತಿಯ ಸಂಕ್ಷಿಪ್ತ ನಿರೂಪಣೆಯನ್ನು ಕೊಡಸಾಧ್ಯವಿದೆ:
◼ “ಹೆಚ್ಚಿನ ಜನರ ಧಾರ್ಮಿಕ ನಂಬಿಕೆಯು ಏನೇ ಆಗಿರಲಿ, ಕುಟುಂಬಗಳು ಇಂದು ತುಂಬ ಸಮಸ್ಯೆಗಳನ್ನು ಎದುರಿಸುತ್ತಿವೆಯೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಕೆಲವರು ಬುದ್ಧಿವಾದಕ್ಕಾಗಿ ತಮ್ಮ ಪವಿತ್ರ ಶಾಸ್ತ್ರಗಳ ಕಡೆಗೆ ತಿರುಗುತ್ತಾರೆ, ಆದರೆ ವಿಷಾದಕರವಾಗಿ ಇಂದು ಅನೇಕ ಯುವ ಜನರು ಧಾರ್ಮಿಕ ಗ್ರಂಥಗಳನ್ನು ಅಸಂಬದ್ಧವಾದುದಾಗಿ ವೀಕ್ಷಿಸುತ್ತಾರೆ. ನಾವು ನಮ್ಮ ಜೀವಿತಗಳನ್ನು ಎಷ್ಟು ಅತ್ಯುತ್ತಮವಾಗಿ ನಡಿಸಸಾಧ್ಯವಿದೆ ಎಂಬುದರ ಕುರಿತು, ನಮ್ಮ ಸೃಷ್ಟಿಕರ್ತನು ನಮಗೆ ಯಾವುದೇ ಸೂಚನೆಗಳನ್ನು ಕೊಟ್ಟಿರಬಹುದೆಂದು ನೀವು ನೆನಸುತ್ತೀರೊ? ಕುಟುಂಬ ಜೀವಿತಕ್ಕೆ ಸಂಬಂಧಿಸಿದ ವಿಷಯಗಳಲ್ಲೂ, ದೇವರು ಮತ್ತು ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆಯೆಂಬುದನ್ನು ತೋರಿಸುವ ಒಂದು ಪ್ರಕಾಶನವು ಇಲ್ಲಿದೆ.” ಪುಸ್ತಕವನ್ನು ನೀಡಿರಿ.
7 ಅಥವಾ ನೀವು ಕೇವಲ ಹೀಗೆ ಹೇಳಬಹುದು:
◼ “ಲೋಕವ್ಯಾಪಕವಾಗಿ ಕುಟುಂಬ ಸಮಸ್ಯೆಗಳು ವೃದ್ಧಿಯಾಗುತ್ತಿವೆ ಮತ್ತು ಸಮಾಜದ ಜವಾಬ್ದಾರಿಯುತ ಸದಸ್ಯರು ಇದರ ಕುರಿತಾಗಿ ತೀರ ಚಿಂತಿತರಾಗಿದ್ದಾರೆ. ಲೋಕದಲ್ಲೆಲ್ಲಾ ಉಪಯುಕ್ತವಾಗಿ ಪರಿಣಮಿಸಿರುವ ಈ ಪ್ರಕಾಶನವನ್ನು ನೀವು ಸ್ವೀಕರಿಸಬೇಕೆಂದು ನಾನು ಬಯಸುವೆ. ಯಾಕಂದರೆ, ಜನರು ತಮ್ಮ ಕುಟುಂಬದ ಪ್ರಯೋಜನಕ್ಕಾಗಿ ನಿರ್ದಿಷ್ಟ ಸಾರ್ವತ್ರಿಕ ಸೂತ್ರಗಳನ್ನು ಅನ್ವಯಿಸಿಕೊಳ್ಳುವಂತೆ ಈ ಪುಸ್ತಕವು ಸಹಾಯ ಮಾಡುತ್ತದೆ. ಅದರ ಹೇಳಿಕೆಗಳು, ಕೇವಲ ಒಂದು ಧರ್ಮ ಅಥವಾ ಸಂಸ್ಕೃತಿ
ಯ ಜನರಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿಲ್ಲ, ಆದುದರಿಂದ ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಆಗಿರಬಹುದಾದರೂ, ಈ ಪುಸ್ತಕದಲ್ಲಿ ನೀವು ವ್ಯಾವಹಾರಿಕ ಸಲಹೆಗಳನ್ನು ಕಂಡುಕೊಳ್ಳುವಿರೆಂದು ನನಗೆ ನಿಶ್ಚಯವಿದೆ.”
8 ಕುಟುಂಬ ಸಂತೋಷಕ್ಕೆ ನಡಿಸುವ ರಹಸ್ಯವನ್ನು—ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅನುಸರಿಸುವುದು—ಇತರರೊಂದಿಗೆ ಹಂಚಿಕೊಳ್ಳಲು ನಮ್ಮಿಂದ ಸಾಧ್ಯವಿರುವ ಪ್ರತಿಯೊಂದು ಪ್ರಯತ್ನವನ್ನು ನಾವು ಮಾಡೋಣ.—ಕೀರ್ತ. 19:7-10.