ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳುವಂತೆ ಕುಟುಂಬಗಳಿಗೆ ಸಹಾಯಮಾಡುವುದು
1 “ಲೋಭವು ಆರೋಗ್ಯಕರವಾಗಿದೆ,” ಎಂದು ಒಬ್ಬ ಬಂಡವಾಳಗಾರನು ಅಮೆರಿಕದ ಒಂದು ಕಾಲೇಜಿನ ಪದವೀಧರರ ವರ್ಗಕ್ಕೆ ಹೇಳುತ್ತಾ ಕೂಡಿಸಿದ್ದು: “ನೀವು ಲೋಭಿಯಾಗಿದ್ದರೂ ನಿಮ್ಮ ವಿಷಯದಲ್ಲಿ ಒಳ್ಳೆಯವರೆಂದು ಭಾವಿಸಬಲ್ಲಿರಿ.” ಒಬ್ಬನು ತನ್ನ ಭವಿಷ್ಯತ್ತನ್ನು ಭದ್ರಪಡಿಸುವ ವಿಧವಾಗಿ ಲೋಕವು ಸ್ವಆಸಕ್ತಿಯನ್ನು ಹೇಗೆ ಪ್ರವರ್ಧಿಸುತ್ತದೆಂಬ ವಿಷಯದಲ್ಲಿ ಇದು ಪ್ರತಿನಿಧಿರೂಪವಾಗಿದೆ. ತೀರ ಭಿನ್ನವಾಗಿ, ಒಬ್ಬ ಕ್ರೈಸ್ತನು “ತನ್ನನ್ನು ನಿರಾಕರಿ”ಸಿಕೊಳ್ಳಬೇಕೆಂಬುದನ್ನು ಯೇಸು ಕಲಿಸಿದನು. ಯಾಕಂದರೆ “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” (ಮತ್ತಾ. 16:24-26) ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳಲಿಕ್ಕಾಗಿ, ಒಬ್ಬ ವ್ಯಕ್ತಿಯು ತನ್ನ ಇಡೀ ಜೀವಿತವನ್ನು ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರೀಕರಿಸಬೇಕು. ಇದು ಇಂದು ಕುಟುಂಬಗಳಿಗಾಗಿ ಅತಿ ಪ್ರಾಮುಖ್ಯ ಗುರಿಯಾಗಿದೆ. (ಕೀರ್ತ. 143:10; 1 ತಿಮೊ. 4:8) ಆ ಸಂದೇಶವು, ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿದೆ. ಜೀವನದಲ್ಲಿ ನಿಜವಾಗಿ ಏನು ಪ್ರಾಮುಖ್ಯವಾಗಿದೆ ಮತ್ತು ಜನರು ತಮ್ಮ ಕುಟುಂಬಗಳ ಕಡೆಗೆ ಯಾವ ವಿಧದಲ್ಲಿ ಉಪಯುಕ್ತವಾಗಿ ಕ್ರಿಯೆಗೈಯಬಲ್ಲರೆಂಬುದನ್ನು ನೋಡುವಂತೆ ಈ ಹೊಸ ಪ್ರಕಾಶನವು ಅವರಿಗೆ ಸಹಾಯ ಮಾಡುತ್ತದೆ. ನಾವು ಎಲ್ಲೆಡೆಯೂ ಸುವಾರ್ತೆಯನ್ನು ಸಾರುತ್ತಾ ಮುಂದುವರಿದಂತೆ, ನಮಗೆ ಭೇಟಿಯಾಗುವವರು ಕುಟುಂಬ ಸಂತೋಷ ಪುಸ್ತಕವನ್ನು ಓದುವಂತೆ ಪ್ರೋತ್ಸಾಹಿಸುವ ಯಾವ ವಿಷಯವನ್ನು ನಾವು ಹೇಳಬಲ್ಲೆವು? ಇಲ್ಲಿ ಕೆಲವು ಸಲಹೆಗಳಿವೆ:
2 ಮನೆಬಾಗಿಲಲ್ಲಿ ಮತ್ತು ಬೀದಿಯಲ್ಲಿ ಎರಡೂ ಕಡೆಗಳಲ್ಲಿ, ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ, ನೀವು “ಕುಟುಂಬ ಜೀವನವನ್ನು ಆನಂದಿಸಿರಿ” ಎಂಬ ಕಿರುಹೊತ್ತಗೆಯನ್ನು ಉಪಯೋಗಿಸಲು ಪ್ರಯತ್ನಿಸಬಹುದು. ನೀವು ಹೀಗೆ ಕೇಳಸಾಧ್ಯವಿದೆ:
◼ “ಆಧುನಿಕ ಜೀವನವು ನಮ್ಮ ಮೇಲೆ ತರುವಂತಹ ಎಲ್ಲಾ ಚಿಂತೆಗಳೊಂದಿಗೆ, ನಿಜವಾಗಿಯೂ ಒಂದು ಸಂತೋಷದ ಕುಟುಂಬ ಜೀವನವನ್ನು ಹೊಂದುವುದು ಸಾಧ್ಯವೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದು ಸಾಧ್ಯವೆಂಬುದಕ್ಕೆ ಈ ಕಿರುಹೊತ್ತಗೆಯು ಆಶ್ವಾಸನೆ ನೀಡುತ್ತದೆ. ನೀವು ಇದನ್ನು ಓದಲು ಇಷ್ಟಪಡುವಿರೊ?” ಅದು ಸ್ವೀಕರಿಸಲ್ಪಡುವಲ್ಲಿ, ನೀವು ಹೀಗೆ ಹೇಳುತ್ತಾ ಮುಂದುವರಿಸಬಲ್ಲಿರಿ: “ನೀವು ಈ ವಿಷಯದಲ್ಲಿ ಆಸಕ್ತರಾಗಿರುವುದರಿಂದ, ಕುಟುಂಬ ವೃತ್ತದಲ್ಲಿ ಸಂತೋಷವನ್ನು ಕಂಡುಕೊಳ್ಳುವ ವಿಧದ ಕುರಿತಾಗಿ ವಿವರವಾದ ಬುದ್ಧಿವಾದವನ್ನು ಒದಗಿಸುವ ಈ ಪುಸ್ತಕವನ್ನು ಓದುವುದರಲ್ಲಿಯೂ ನೀವು ಆನಂದಿಸಬಹುದು.” ಕುಟುಂಬ ಸಂತೋಷ ಪುಸ್ತಕದಲ್ಲಿನ ಪರಿವಿಡಿಯನ್ನು ತೋರಿಸಿರಿ. ಕಣ್ಸೆಳೆಯುವಂತಹ ಕೆಲವು ಅಧ್ಯಾಯ ಶೀರ್ಷಿಕೆಗಳನ್ನು ತೋರಿಸಿರಿ. ಪುಟ 10ಕ್ಕೆ ತಿರುಗಿಸಿರಿ, ಮತ್ತು 17ನೆಯ ಪ್ಯಾರಗ್ರಾಫ್ನ ಕೊನೆಯ ವಾಕ್ಯದಿಂದ ಹಿಡಿದು 18ನೆಯ ಪ್ಯಾರಗ್ರಾಫ್ನ ಕೊನೆಯ ವರೆಗೆ ಓದಿರಿ. ಪುಸ್ತಕವನ್ನು ನೀಡಿರಿ. ಹಂಚಿಕೊಳ್ಳಲು ನಿಮ್ಮಲ್ಲಿ ಇನ್ನೂ ಹೆಚ್ಚಿನ ವಿಷಯವಿದೆಯೆಂಬುದನ್ನು ವಿವರಿಸಿರಿ, ಮತ್ತು ನೀವು ಪುನಃ ಯಾವಾಗ ಭೇಟಿಯಾಗಬಹುದೆಂದು ಕೇಳಿರಿ.
3 ಸಂತೋಷ ಕುಟುಂಬ ಜೀವನದ ಕುರಿತಾದ ನಿಮ್ಮ ಆರಂಭದ ಸಂಭಾಷಣೆಯನ್ನು ನೀವು ಹೀಗೆ ಹೇಳುವ ಮೂಲಕ ಮುಂದುವರಿಸಿಕೊಂಡು ಹೋಗಬಹುದು:
◼ “ನೀವು ಪಡೆದುಕೊಂಡ ಪುಸ್ತಕದಲ್ಲಿ, ನೀವು ಗಣ್ಯಮಾಡಬಹುದೆಂದು ನಾನು ನೆನಸುವಂತಹ ಒಂದು ವಿಷಯವನ್ನು ನಿಮಗೆ ತೋರಿಸಲು ಇಷ್ಟಪಡುತ್ತೇನೆ. ಕೊನೆಯ ಅಧ್ಯಾಯವು, ಕುಟುಂಬ ಸಂತೋಷದ ನಿಜವಾದ ರಹಸ್ಯದ ಮೇಲೆ ಕೇಂದ್ರೀಕರಿಸುತ್ತದೆ. [ಪುಟ 183ರಲ್ಲಿರುವ 2ನೆಯ ಪ್ಯಾರಗ್ರಾಫನ್ನು ಓದಿರಿ.] ದೇವರ ಚಿತ್ತವನ್ನು ಮಾಡಲು ಜೊತೆಯಾಗಿ ಕೆಲಸಮಾಡುವುದು ಕೀಲಿ ಕೈಯಾಗಿದೆಯೆಂಬುದನ್ನು ಗಮನಿಸಿರಿ. ದೇವರ ಚಿತ್ತವೇನಾಗಿದೆ ಮತ್ತು ಅದನ್ನು ಮನೆವಾರ್ತೆಯಲ್ಲಿ ಹೇಗೆ ಅನ್ವಯಿಸಬೇಕೆಂಬುದನ್ನು ಕಲಿಯಲಿಕ್ಕಾಗಿ, ಕುಟುಂಬಗಳು ಬೈಬಲನ್ನು ಜೊತೆಯಾಗಿ ಅಭ್ಯಾಸಿಸುವಂತೆ ನಾವು ಶಿಫಾರಸ್ಸು ಮಾಡುತ್ತೇವೆ. ಕೇವಲ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳುವ ಒಂದು ಉಚಿತ ಬೈಬಲ್ ಅಭ್ಯಾಸದ ಪಾಠಕ್ರಮವನ್ನು ನಾವು ನೀಡುತ್ತೇವೆ. ನೀವು ಅನುಮತಿಸುವಲ್ಲಿ, ಅದು ಹೇಗೆ ನಡೆಸಲ್ಪಡುತ್ತದೆಂಬುದನ್ನು ನಾನು ನಿಮಗೆ ತೋರಿಸುವೆ.” ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ಅಥವಾ ಜ್ಞಾನ ಪುಸ್ತಕದೊಂದಿಗೆ—ಯಾವುದು ಹೆಚ್ಚು ಸೂಕ್ತವಾಗಿರುವುದೊ ಅದರೊಂದಿಗೆ—ಹಿಂದಿರುಗಿರಿ.
4 ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಅಥವಾ ಟೆರಿಟೊರಿಯಲ್ಲಿನ ಯುವ ಜನರೊಂದಿಗೆ ಮಾತಾಡುವಾಗ, ಈ ಪ್ರಶ್ನೆಗೆ ನೀವು ಪ್ರತಿಕ್ರಿಯೆಯನ್ನು ಪಡೆದುಕೊಳ್ಳಬಹುದು:
◼ “ಹೆತ್ತವರು ಮತ್ತು ಅವರ ಮಕ್ಕಳು ಒಬ್ಬರು ಇನ್ನೊಬ್ಬರೊಂದಿಗೆ ಸಂವಾದದ ಮಾರ್ಗಗಳನ್ನು ತೆರೆದಿಡುವುದು ಎಷ್ಟು ಪ್ರಾಮುಖ್ಯ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬ ಜೀವನದ ಕುರಿತಾದ ಈ ಪುಸ್ತಕವು, ‘ಪ್ರಾಮಾಣಿಕವಾದ ಮತ್ತು ತೆರೆದ ಸಂವಾದ’ ಎಂಬ ವಿಷಯದ ಕುರಿತಾಗಿ ಏನನ್ನು ಹೇಳುತ್ತದೆಂಬುದನ್ನು ಗಮನಿಸಿರಿ. [ಕುಟುಂಬ ಸಂತೋಷ ಪುಸ್ತಕದ ಪುಟ 65ರಲ್ಲಿರುವ ಇಡೀ 4ನೆಯ ಪ್ಯಾರಗ್ರಾಫನ್ನು ಮತ್ತು 5ನೆಯ ಪ್ಯಾರಗ್ರಾಫ್ನ ಮೊದಲನೆಯ ವಾಕ್ಯವನ್ನು ಓದಿರಿ.] ಮುಂದಿನ ಪ್ಯಾರಗ್ರಾಫ್ಗಳು, ಒಂದು ಕುಟುಂಬದೊಳಗೆ ಸಂವಾದವನ್ನು ಹೇಗೆ ಉತ್ತಮಗೊಳಿಸಬಹುದೆಂಬುದರ ಕುರಿತಾಗಿ ವ್ಯಾವಹಾರಿಕ ಸಲಹೆಗಳನ್ನು ಒದಗಿಸುತ್ತವೆ. ಈ ಪುಸ್ತಕದ ಶೀರ್ಷಿಕೆಯು, ಕುಟುಂಬ ಸಂತೋಷದ ರಹಸ್ಯ ಎಂದಾಗಿದೆ. ನೀವು ಒಂದು ಪ್ರತಿಯನ್ನು ಪಡೆದು ಅದನ್ನು ಓದುವಂತೆ ನಿಮ್ಮನ್ನು ಉತ್ತೇಜಿಸಲು ನಾನು ಇಷ್ಟಪಡುವೆ.” ಅವನು ಓದುವ ವಿಷಯದ ಕುರಿತಾದ ಹೇಳಿಕೆಗಳನ್ನು ಪಡೆಯಲು ನೀವು ಪುನಃ ಬರುವಿರೆಂದು ವಿವರಿಸಿರಿ.
5 ಒಬ್ಬ ಯುವ ವ್ಯಕ್ತಿಯೊಂದಿಗೆ, ಹೆತ್ತವರ-ಮಗುವಿನ ನಡುವಿನ ಸಂವಾದದ ಕುರಿತಾದ ನಿಮ್ಮ ಆರಂಭದ ಸಂಭಾಷಣೆಯನ್ನು ನೀವು ಹೀಗೆ ಹೇಳುವ ಮೂಲಕ ವಿಕಸಿಸಸಾಧ್ಯವಿದೆ:
◼ “ನಿಮ್ಮ ಕುಟುಂಬದೊಂದಿಗೆ ಒಳ್ಳೆಯ ಸಂವಾದವನ್ನು ಇಟ್ಟುಕೊಳ್ಳುವುದರ ಮಹತ್ತ್ವದ ಕುರಿತಾಗಿ ನೀವು ತೋರಿಸಿದಂತಹ ಆಸಕ್ತಿಯನ್ನು ನಾನು ಗಣ್ಯಮಾಡಿದೆ. ಹೆತ್ತವರು ಮತ್ತು ಮಕ್ಕಳು ಚರ್ಚಿಸಬೇಕಾದಂತಹ ಅತಿ ಪ್ರಾಮುಖ್ಯ ವಿಷಯವು ಏನೆಂಬುದಾಗಿ ನೀವು ಹೇಳುವಿರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಕುಟುಂಬ ಸಂತೋಷ ಪುಸ್ತಕವನ್ನು 68ನೆಯ ಪುಟಕ್ಕೆ ತಿರುಗಿಸಿರಿ, ಮತ್ತು 11ನೆಯ ಪ್ಯಾರಗ್ರಾಫ್ನ ಮೊದಲ ಅರ್ಧ ಭಾಗದಲ್ಲಿ ಕಂಡುಬರುವ ಉತ್ತರವನ್ನು ಓದಿಹೇಳಿರಿ. “ಒಂದು ಸಾಪ್ತಾಹಿಕ ಬೈಬಲ್ ಅಭ್ಯಾಸವನ್ನು ಹೊಂದಿರುವುದು, ದೇವರ ಜ್ಞಾನವನ್ನು ಪಡೆದುಕೊಳ್ಳುವ ಒಂದು ಅತ್ಯುತ್ಕೃಷ್ಟ ಮಾರ್ಗವಾಗಿದೆ.” ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಪ್ರಸ್ತುತಪಡಿಸಿರಿ. ಅದರ 16 ಪಾಠಗಳು, ಬೈಬಲಿನ ಸಂದೇಶದ ಒಂದು ಮೂಲಭೂತ ಹೊರಮೇರೆಯನ್ನು ಒದಗಿಸುತ್ತವೆಂಬುದನ್ನು ವಿವರಿಸಿರಿ. ಪುಟ 2ರಲ್ಲಿರುವ ಪೀಠಿಕೆಯನ್ನು ಓದಿರಿ, ಮತ್ತು ಅನಂತರ ಮೊದಲನೆಯ ಪಾಠವನ್ನು ಒಟ್ಟಿಗೆ ಚರ್ಚಿಸುವ ಮೂಲಕ ಅಭ್ಯಾಸವನ್ನು ಆರಂಭಿಸಲು ನೀಡಿಕೆಯನ್ನು ಮಾಡಿರಿ.
6 ಮನೆಯಿಂದ ಮನೆಯ ಕೆಲಸದಲ್ಲಿ, ಅಥವಾ ಪ್ರಾಯಶಃ ಒಂದು ಉದ್ಯಾನವನದಲ್ಲಿ ಅಥವಾ ಒಂದು ಆಟದ ಬಯಲಿನಲ್ಲಿ ನೀವು ಒಬ್ಬ ಹೆತ್ತವರನ್ನು ಭೇಟಿಯಾಗುವಲ್ಲಿ, ಹೀಗೆ ಹೇಳುವ ಮೂಲಕ ನೀವು ಆಸಕ್ತಿಯನ್ನು ಕೆರಳಿಸಬಹುದು:
◼ “ಇಂದು ಮಕ್ಕಳನ್ನು ಪೋಷಿಸುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿದೆಯೆಂಬುದನ್ನು ನೀವು ಒಪ್ಪಿಕೊಳ್ಳುವಿರೆಂದು ನನಗೆ ನಿಶ್ಚಯವಿದೆ. ಅಹಿತಕರವಾದ ಪ್ರಭಾವಗಳಿಂದ ನಿಮ್ಮ ಕುಟುಂಬವನ್ನು ಯಾವುದು ಸಂರಕ್ಷಿಸಬಲ್ಲದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾನು ಗಣ್ಯಮಾಡಿರುವ ಉತ್ಕೃಷ್ಟ ಬುದ್ಧಿವಾದವು ಇಲ್ಲಿದೆ.” ಕುಟುಂಬ ಸಂತೋಷ ಪುಸ್ತಕದ 90ನೆಯ ಪುಟದಲ್ಲಿ 1ನೆಯ ಪ್ಯಾರಗ್ರಾಫ್ನಲ್ಲಿರುವ ದೃಷ್ಟಾಂತವನ್ನು ವಿವರಿಸಿ ಹೇಳಿರಿ ಮತ್ತು 2ನೆಯ ಪ್ಯಾರಗ್ರಾಫನ್ನು ಓದಿರಿ. ಕುಟುಂಬಗಳನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸುವುದರಲ್ಲಿ ಪರಿಣಾಮಕಾರಿಯಾಗಿರುವ ಸಮತೋಲನದ ನಿರ್ದೇಶನವನ್ನು ಅದು ಕೊಡುವ ವಿಧವನ್ನು ವಿವರಿಸಿರಿ. ಪುಸ್ತಕವನ್ನು ನೀಡಿರಿ, ಮತ್ತು ಏಳುವಂತಹ ಯಾವುದೇ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಸಿದ್ಧರಾಗಿರಿ.
7 “ಕುಟುಂಬ ಸಂತೋಷ” ಪುಸ್ತಕವನ್ನು ಸ್ವೀಕರಿಸಿರುವ ಒಬ್ಬ ಹೆತ್ತವರಿಗೆ ಮಾಡುವ ನಿಮ್ಮ ಎರಡನೆಯ ಭೇಟಿಯಲ್ಲಿ, ನೀವು ಸಂಭಾಷಣೆಯನ್ನು ಈ ವಿಧದಲ್ಲಿ ಮುಂದುವರಿಸಸಾಧ್ಯವಿದೆ:
◼ “ನಾವು ಪ್ರಥಮ ಸಲ ಭೇಟಿಯಾದಾಗ, ನೀವು ನಿಮ್ಮ ಮಕ್ಕಳ ಕುರಿತಾಗಿ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತೀರಿ ಎಂಬುದನ್ನು ಮತ್ತು ಅವರನ್ನು ತಪ್ಪಾದ ಪ್ರಭಾವಗಳಿಂದ ಸಂರಕ್ಷಿಸಲು ಸಾಧ್ಯವಿರುವಂತಹದ್ದೆಲ್ಲವನ್ನೂ ಮಾಡಲು ಬಯಸುತ್ತೀರೆಂಬುದನ್ನು ನಾನು ನೋಡಸಾಧ್ಯವಿತ್ತು. ನೀವು ಅದನ್ನು ಇನ್ನೂ ಓದಿರದಿದ್ದರೂ, ನಾನು ನಿಮ್ಮೊಂದಿಗೆ ಬಿಟ್ಟುಹೋದಂತಹ ಆ ಪುಸ್ತಕದಲ್ಲಿ, ನೀವು ನೋಡಲೇಬೇಕಾದ ಒಂದು ಅತಿ ಪ್ರಾಮುಖ್ಯ ಅವಲೋಕನವು ಇದೆ. [ಪುಟ 59ರಲ್ಲಿರುವ 19ನೆಯ ಪ್ಯಾರಗ್ರಾಫನ್ನು ಓದಿರಿ.] ದೇವರೊಂದಿಗೆ ಒಂದು ಸಂಬಂಧವನ್ನು ವಿಕಸಿಸಿಕೊಳ್ಳುವುದು, ನಾವು ಆತನ ಲಿಖಿತ ವಾಕ್ಯವಾದ ಬೈಬಲಿನ ಪುಟಗಳ ಮೂಲಕ ಆತನನ್ನು ತಿಳಿದುಕೊಳ್ಳುವುದನ್ನು ಅವಶ್ಯಪಡಿಸುತ್ತದೆ. ನಾವು ಬೈಬಲನ್ನು ಒಂದು ಕುಟುಂಬದೋಪಾದಿ ಹೇಗೆ ಅಭ್ಯಾಸಿಸುತ್ತೇವೆಂಬುದನ್ನು ನಾನು ಪ್ರದರ್ಶಿಸುವಂತೆ ನೀವು ಇಷ್ಟಪಡುವಿರೊ?”
8 ಲೌಕಿಕ ಸಲಹೆಗಾರರು ಕುಟುಂಬಗಳಿಗೆ ಸಂತೋಷದ ಮಾರ್ಗವನ್ನು ತೋರಿಸಲಾರರು, ಬದಲಾಗಿ ಅವರನ್ನು ನಿಶ್ಚಯವಾಗಿಯೂ ನಿರಾಶೆಗೊಳಿಸುವರು. ಎಲ್ಲೆಡೆಯೂ ಇರುವ ಜನರು, ಒಂದು ಚಿರಸ್ಥಾಯಿ ಭವಿಷ್ಯತ್ತನ್ನು ದೊರಕಿಸಿಕೊಳ್ಳುವಂತೆ ದೇವರ ವಾಕ್ಯದಿಂದ ಸಹಾಯ ಮಾಡಲ್ಪಡಲು ಸಾಧ್ಯವಾಗುವಂತೆ, ನಾವು ಕುಟುಂಬ ಸಂತೋಷ ಪುಸ್ತಕವನ್ನು ವ್ಯಾಪಕವಾಗಿ ವಿತರಿಸೋಣ.—1 ತಿಮೊ. 6:19.