ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು —ಸೆಕ್ರಿಟರಿ
1 “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆ”ಯುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ, ಸಭೆಯ ಸೆಕ್ರಿಟರಿಯು ಒಂದು ಮಹತ್ತ್ವದ ಪಾತ್ರವನ್ನು ವಹಿಸುತ್ತಾನೆ. (1 ಕೊರಿಂ. 14:40) ಸಭೆಯ ಸೇವಾ ಕಮಿಟಿಯ ಒಬ್ಬ ಸದಸ್ಯನೋಪಾದಿ, ಅವನು ಸಭೆಯ ಪತ್ರವ್ಯವಹಾರ ಮತ್ತು ಮುಖ್ಯ ದಾಖಲೆಗಳನ್ನು ನೋಡಿಕೊಳ್ಳುತ್ತಾನೆ. ಇತರ ಹಿರಿಯರಂತೆ ಅವನ ಕರ್ತವ್ಯಗಳು ಅಷ್ಟೇನೂ ಎದ್ದುಕಾಣುವುದಿಲ್ಲವಾದರೂ, ಅವನ ಸೇವೆಗಳು ತುಂಬ ಅಗತ್ಯವೂ ಗಣ್ಯಮಾಡಲ್ಪಡುವಂತಹವುಗಳೂ ಆಗಿವೆ.
2 ಸೊಸೈಟಿಯಿಂದ ಅಥವಾ ಇತರರಿಂದ ಪತ್ರಗಳು ಬರುವಾಗ, ಸೆಕ್ರಿಟರಿಯು ಅದನ್ನು ಓದುತ್ತಾನೆ ಮತ್ತು ಅಗತ್ಯವಿರುವಾಗ ಅದಕ್ಕೆ ಉತ್ತರವನ್ನು ಕೊಡುತ್ತಾನೆ. ಪಡೆದುಕೊಂಡ ಪತ್ರಗಳು ಹಿರಿಯರೆಲ್ಲರಿಗೂ ಓದಲು ಸಿಕ್ಕಿವೆ ಎಂಬುದನ್ನು ಖಚಿತಪಡಿಸಿಕೊಂಡು, ಅನಂತರ ಅವನ್ನು ಫೈಲ್ ಮಾಡುತ್ತಾನೆ. ಅವನು ಪತ್ರಿಕೆ ಮತ್ತು ಸಾಹಿತ್ಯ ಆರ್ಡರ್ ಫಾರ್ಮ್ಗಳನ್ನು ಪರೀಕ್ಷಿಸಿ, ಅವುಗಳನ್ನು ಸೊಸೈಟಿಗೆ ಕಳುಹಿಸುತ್ತಾನೆ. ಅವನು ಅಕೌಂಟ್ಸ್ ಮತ್ತು ಚಂದಾಗಳನ್ನು ನೋಡಿಕೊಳ್ಳುತ್ತಿರುವವರನ್ನು ಅಷ್ಟುಮಾತ್ರವಲ್ಲದೆ ಅಧಿವೇಶನ ಸಂಬಂಧಿತ ವಿಷಯಗಳನ್ನು ನೋಡಿಕೊಳ್ಳುತ್ತಾನೆ.
3 ಪ್ರತಿ ತಿಂಗಳಿನ ಆರನೇ ತಾರೀಖಿನೊಳಗೆ, ಸಭೆಯ ಮಾಸಿಕ ಕ್ಷೇತ್ರ ಸೇವಾ ವರದಿಯನ್ನು ಸೆಕ್ರಿಟರಿಯು ಸೊಸೈಟಿಗೆ ಕಳುಹಿಸಬೇಕಾಗಿರುವುದರಿಂದ, ಪ್ರತಿ ತಿಂಗಳಿನ ಕೊನೆಯಲ್ಲಿ ನಾವೆಲ್ಲರೂ ನಮ್ಮ ಕ್ಷೇತ್ರ ಚಟುವಟಿಕೆಯ ವರದಿಯನ್ನು ತಡಮಾಡದೇ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಅವನು ಈ ಸೇವಾ ವರದಿಗಳನ್ನು ಆಮೇಲೆ ಸಭೆಯ ಪ್ರಚಾರಕರ ರೆಕಾರ್ಡ್ ಕಾರ್ಡುಗಳಲ್ಲಿ ಬರೆಯುತ್ತಾನೆ. ಯಾವನೇ ಪ್ರಚಾರಕನು, ಚಟುವಟಿಕೆಯ ತನ್ನ ವೈಯಕ್ತಿಕ ರೆಕಾರ್ಡನ್ನು ನೋಡಲು ಕೇಳಿಕೊಳ್ಳಬಹುದು.
4 ಒಬ್ಬ ಪ್ರಚಾರಕನು ಒಂದು ಸಭೆಯಿಂದ ಇನ್ನೊಂದು ಸಭೆಗೆ ಬರುವಾಗ ಅಥವಾ ಹೋಗುವಾಗ, ಸೆಕ್ರಿಟರಿಯು ಆ ಸಭೆಯ ಹಿರಿಯರಲ್ಲಿ, ಸಭೆಯ ಪ್ರಚಾರಕ ರೆಕಾರ್ಡ್ ಕಾರ್ಡುಗಳೊಂದಿಗೆ ಪರಿಚಯ ಪತ್ರವನ್ನು ಕೇಳಿಕೊಳ್ಳುತ್ತಾನೆ ಅಥವಾ ಅವರಿಗೆ ಕಳುಹಿಸುತ್ತಾನೆ.—ನಮ್ಮ ಶುಶ್ರೂಷೆ, ಪುಟಗಳು 104-5.
5 ಪಯನೀಯರರ ಚಟುವಟಿಕೆಯನ್ನು ಸೆಕ್ರಿಟರಿಯು ಪುನರ್ವಿಮರ್ಶಿಸುತ್ತಾನೆ. ಮತ್ತು ಅವರೇನಾದರೂ ಸಮಸ್ಯೆಗಳನ್ನು ಎದುರಿಸುತ್ತಿರುವುದಾದರೆ ಅಂಥ ವಿಷಯಗಳನ್ನು ಅವನು ಹಿರಿಯರು ಮತ್ತು ವಿಶೇಷವಾಗಿ ಸೇವಾ ಮೇಲ್ವಿಚಾರಕರ ಸಮ್ಮುಖದಲ್ಲಿ ಚರ್ಚಿಸುತ್ತಾನೆ. ಕ್ಷೇತ್ರ ಸೇವೆಯಲ್ಲಿ ಅನಿಯಮಿತರಾಗಿರುವ ಪ್ರಚಾರಕರ ಬಗ್ಗೆ ಸಭಾ ಪುಸ್ತಕಭ್ಯಾಸ ಚಾಲಕನು ಗಮನಕೊಡುವಂತೆ ಅವನು ಜಾಗೃತಗೊಳಿಸುತ್ತಾನೆ. ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ಇಬ್ಬರೂ ಒಟ್ಟುಗೂಡಿ ಅಕ್ರಿಯ ಪ್ರಚಾರಕರಿಗೆ ಗಮನಕೊಡಲಿಕ್ಕಾಗಿ ಪ್ರಯತ್ನಗಳನ್ನು ಸುಸಂಘಟಿತಗೊಳಿಸುವುದರಲ್ಲಿ ನೇತೃತ್ವವನ್ನು ವಹಿಸುತ್ತಾರೆ.—ನಮ್ಮ ರಾಜ್ಯದ ಸೇವೆ, ಡಿಸೆಂಬರ್ 1987, ಪು. 1, (ಇಂಗ್ಲಿಷ್).
6 ಸೆಕ್ರಿಟರಿಯ ಕರ್ತವ್ಯಗಳನ್ನು ಹೆಚ್ಚು ಅರ್ಥಮಾಡಿಕೊಳ್ಳುವ ಮೂಲಕ, ಅವನ ಕೆಲಸವನ್ನು ನೆರವೇರಿಸಲಿಕ್ಕೆ ಸುಲಭವನ್ನಾಗಿ ಮಾಡಲು ನಮ್ಮಿಂದಾದ ಸಹಾಯವನ್ನು ನಾವು ಮಾಡೋಣ.—1 ಕೊರಿಂ. 4:2.