ಪ್ರಶ್ನಾ ಪೆಟ್ಟಿಗೆ
● ಒಬ್ಬ ಪ್ರಚಾರಕನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡುವಾಗ, ಹೊಸ ಸಭೆಗೆ ವರ್ಗಾಯಿಸುವುದರಲ್ಲಿ ಅವನಿಗೆ ನೆರವಾಗಲು ಏನನ್ನು ಮಾಡಬೇಕು?
ಒಬ್ಬ ಪ್ರಚಾರಕನು ಇನ್ನೊಂದು ಸಭೆಯಿಂದ ಬಂದ ಕೂಡಲೇ ಸಭಾ ಸೆಕ್ರಿಟರಿಯು ಆ ಪ್ರಚಾರಕನಿಂದ ಅವನ ಹಿಂದಿನ ಸಭೆಯ ಹೆಸರನ್ನು ಮತ್ತು ಆ ಸಭೆಯ ಸೆಕ್ರಿಟರಿಯ ಹೆಸರು ಮತ್ತು ವಿಳಾಸವನ್ನು ಪಡಕೊಳ್ಳಬೇಕು. ಅನಂತರ ಅವನು ಹಿಂದಣ ಸಭೆಯ ಸೆಕ್ರಿಟರಿಗೆ ಬರೆದು, ಕಾಂಗ್ರಿಗೇಶನ್ಸ್ ಪಬ್ಲಿಷರ್ ರೆಕಾರ್ಡ್ ಕಾರ್ಡ್‌ಗಾಗಿ ಮತ್ತು ಒಂದು ಪರಿಚಯ ಪತ್ರಕ್ಕಾಗಿ ವಿನಂತಿಸಬೇಕು. ಈ ವಿನಂತಿಯನ್ನು ಪಡೆಯುವ ಸೆಕ್ರಿಟರಿಯು ಅದಕ್ಕೆ ವಿಳಂಬವಿಲ್ಲದೆ ಪ್ರತಿಕ್ರಿಯಿಸಬೇಕು.—ಆರ್‌ಗನೈಸ್ಟ್ ಟು ಎಕಾಂಪ್ಲಿಶ್ ಅವರ್ ಮಿನಿಷ್ಟ್ರಿ ಪುಟ 104-5 ನೋಡಿ.
ಸ್ಥಳಾಂತರ ಮಾಡಲು ಯೋಜಿಸುವ ಪ್ರಚಾರಕನು, ತಾನು ಬಿಡುವ ಸಭೆಯ ಹಾಗೂ ಸಭಾ ಸೆಕ್ರಿಟರಿಯ ಸರಿಯಾದ ಹೆಸರು ಮತ್ತು ವಿಳಾಸವು ತನ್ನಲ್ಲಿ ಇದೆಯೋ ಎಂಬದನ್ನು ಖಚಿತ ಮಾಡಿಕೊಳ್ಳುವ ಮೂಲಕ ನೆರವಾಗಸಾಧ್ಯವಿದೆ. ಅನಂತರ, ಹೊಸ ಸಭೆಗೆ ಬಂದಾಗ, ಈ ಸಮಾಚಾರವನ್ನು ಅಲ್ಲಿಯ ಸೆಕ್ರಿಟರಿಗೆ ಕೊಡುವುದಾದರೆ ಅವನು, ತಡವಿಲ್ಲದೆ ಆ ಕಾರ್ಯವನ್ನು ಕೈಕೊಳ್ಳುವನು. ಹೊಸ ಸಭೆಗೆ ನೀಡುವ ಕ್ಷೇತ್ರಸೇವಾ ವರದಿಗಳನ್ನು, ರೆಕಾರ್ಡ್ ಕಾರ್ಡನ್ನು ಪಡೆಯುವ ತನಕ ಇಟ್ಟುಕೊಳ್ಳಬಹುದು. ತದನಂತರ ಪ್ರಚಾರಕನ ಚಟುವಟಿಕೆಯು ರೆಕಾರ್ಡ್ ಕಾರ್ಡಲ್ಲಿ ಹಾಕಲ್ಪಡುತ್ತದೆ ಮತ್ತು ಸಭೆಯ ಮುಂದಿನ ತಿಂಗಳ ರಿಪೋರ್ಟ್‌ಲ್ಲಿ ಸೇರಿಸಲ್ಪಡುತ್ತದೆ.
ಕೆಲವು ಸಂದರ್ಭಗಳಲ್ಲಿ ಪ್ರಚಾರಕನಿಗೆ, ತಾನು ಸ್ಥಳಾಂತರ ಮಾಡುವ ಸಭೆಯ ಸೆಕ್ರಿಟರಿಯ ಹೆಸರು ಮತ್ತು ವಿಳಾಸವು ಈ ಮೊದಲೇ ಗೊತ್ತಿರಬಹುದು. ಹಾಗಿದ್ದರೆ, ವಿನಂತಿಯು ಬರುವ ತನಕ ಹಿರಿಯರು ಕಾಯುವ ಅಗತ್ಯವಿರುವುದಿಲ್ಲ. ಆ ಪ್ರಚಾರಕನ ಚಟುವಟಿಕೆಯ ರೆಕಾರ್ಡ್‌ನ್ನು ಮತ್ತು ಒಂದು ಪರಿಚಯ ಪತ್ರವನ್ನು ಪ್ರಚಾರಕನು ಹೋಗಲಿರುವ ಸಭೆಯ ಸೆಕ್ರಿಟರಿಗೆ ಕೂಡಲೇ ಅಂಚೆ ಮೂಲಕ ಕಳುಹಿಸಬಹುದು.