ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಕಾವಲಿನಬುರುಜು ಪತ್ರಿಕೆಯ ಅಭ್ಯಾಸ ಸಂಚಾಲಕ
1 ನಮಗೆ “ಹೊತ್ತುಹೊತ್ತಿಗೆ” ಆತ್ಮಿಕ ಆಹಾರವನ್ನು ಕೊಡಲಿಕ್ಕಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಪ್ರಮುಖ ಒದಗಿಸುವಿಕೆಯು, ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಪತ್ರಿಕೆಯೇ ಆಗಿದೆ. (ಮತ್ತಾ. 24:45) ಕಾವಲಿನಬುರುಜು ಅಭ್ಯಾಸವನ್ನು ನಡೆಸುವ ಹಿರಿಯನು, ಕ್ರೈಸ್ತ ಜೀವಿತದಲ್ಲಿ ಒಂದು ಉತ್ತಮ ಮಾದರಿಯನ್ನಿಡುವ ಒಬ್ಬ ಸಮರ್ಥ ಶಿಕ್ಷಕನೋಪಾದಿ ತುಂಬ ಪ್ರಾಮುಖ್ಯವಾದ ಜವಾಬ್ದಾರಿಯನ್ನು ಹೊಂದಿದ್ದಾನೆ.—ರೋಮಾ. 12:7; ಯಾಕೋ. 3:1.
2 ಪರಿಣಾಮಕಾರಿಯಾಗಿ ಕಲಿಸಲು, ಕಾವಲಿನಬುರುಜು ಅಭ್ಯಾಸ ಸಂಚಾಲಕನು, ತಯಾರುಮಾಡಲಿಕ್ಕಾಗಿ ಪ್ರತಿ ವಾರವೂ ನಿಜವಾಗಿಯೂ ಕಠಿನ ಪರಿಶ್ರಮವನ್ನು ಮಾಡಬೇಕು. ಇದನ್ನು ಅವನು ಪ್ರಾರ್ಥನಾಪೂರ್ವಕವಾಗಿಯೂ ಜಾಗರೂಕವಾಗಿಯೂ ಮಾಡುತ್ತಾನೆ. ಅಭ್ಯಾಸಿಸಲ್ಪಡುತ್ತಿರುವ ವಿಷಯವು ನಮ್ಮ ಹೃದಯಗಳಿಗೆ ಸ್ಪರ್ಶಿಸುವಂತೆ ಅವನು ಮಾಡುವ ನಿಜವಾದ ಪ್ರಯತ್ನದಲ್ಲಿ, ಸಭೆಯ ಕಡೆಗೆ ಅವನಿಗಿರುವ ತೀವ್ರಾಸಕ್ತಿಯನ್ನು ನಾವು ನೋಡಸಾಧ್ಯವಿದೆ. ಪಾಠದ ಮುಖ್ಯ ಅಂಶಗಳಿಗೆ ಅವನು ಗಮನವನ್ನು ಕೊಡುತ್ತಾನೆ ಮತ್ತು ಅವು ಆ ಲೇಖನದ ಶೀರ್ಷಿಕೆಗೆ ಹೇಗೆ ಸಂಬಂಧಿಸುತ್ತವೆ ಎಂಬುದನ್ನು ನೋಡುವಂತೆ ನಮಗೆ ಸಹಾಯಮಾಡುತ್ತಾನೆ.
3 ಅವನು ಸಂಪೂರ್ಣವಾಗಿ ತಯಾರುಮಾಡಬೇಕಾದರೆ, ಶಾಸ್ತ್ರವಚನಗಳು ಹೇಗೆ ಅನ್ವಯಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಮುಂಚಿತವಾಗಿಯೇ ಅವುಗಳನ್ನು ತೆರೆದುನೋಡಬೇಕು. ಅಭ್ಯಾಸದ ಸಮಯದಲ್ಲಿ ಬೈಬಲನ್ನು ಉಪಯೋಗಿಸಿ ಉತ್ತರಿಸುವಂತೆ ಸಭೆಯನ್ನು ಉತ್ತೇಜಿಸುವ ಮೂಲಕ ಅವನು ದೇವರ ವಾಕ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾನೆ. ಸಭಿಕರಿಂದ ಮುಖ್ಯವಾದ ಅಂಶವು ಆವರಿಸಲ್ಪಡದೇ ಇರುವಾಗ ಇಲ್ಲವೇ ಒಂದು ಮುಖ್ಯ ಶಾಸ್ತ್ರವಚನದ ಅನ್ವಯವನ್ನು ಯಾರೂ ಹೇಳದೇ ಹೋದಾಗ, ಅವನು ಆ ಮಾಹಿತಿಯನ್ನು ಹೊರತರಲು ಅದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾನೆ. ಈ ರೀತಿಯಲ್ಲಿ, ನಾವು ಸರಿಯಾದ ತೀರ್ಮಾನಕ್ಕೆ ಬರುವಂತೆ ಮತ್ತು ನಾವು ಏನನ್ನು ಕಲಿತುಕೊಳ್ಳುತ್ತಿದ್ದೇವೋ ಅದನ್ನು ನಮ್ಮ ಜೀವಿತಗಳಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವಂತೆ ಅವನು ನಮಗೆ ಸಹಾಯಮಾಡುತ್ತಾನೆ.
4 ಕಾವಲಿನಬುರುಜು ಅಭ್ಯಾಸವನ್ನು ನಡೆಸುವವನು ತನ್ನ ಕಲಿಸುವ ಸಾಮರ್ಥ್ಯವನ್ನು ಪ್ರಗತಿಪರವಾಗಿ ಉತ್ತಮಗೊಳಿಸಿಕೊಳ್ಳಲು ಪ್ರಯತ್ನಪಡುತ್ತಾನೆ. ಅವನೇ ಸ್ವತಃ ಎಲ್ಲ ವಿಷಯಗಳನ್ನು ಹೇಳುವುದಿಲ್ಲ, ಬದಲಿಗೆ ನಾವು ನಮ್ಮ ಸ್ವಂತ ಮಾತುಗಳಲ್ಲಿ, ಚುಟುಕಾದ ಮತ್ತು ನೇರವಾದ ಉತ್ತರವನ್ನು ಕೊಡುವಂತೆ ನಮ್ಮನ್ನು ಉತ್ತೇಜಿಸುತ್ತಾನೆ. ಒಂದು ಪ್ಯಾರಗ್ರಾಫ್ಗೆ ಉತ್ತರವನ್ನು ಕೊಡುವ ಪ್ರಥಮ ವ್ಯಕ್ತಿಯು, ಮುದ್ರಿತ ಪ್ರಶ್ನೆಗೆ ಚುಟುಕಾದ, ನೇರವಾದ ಉತ್ತರವನ್ನು ಕೊಡುವಂತೆ ಅವನು ಆಗಾಗ್ಗೆ ಜ್ಞಾಪಿಸಬಹುದು. ಸಭಿಕರಿಂದ ಹೇಳಲ್ಪಡುವ ಇನ್ನೂ ಹೆಚ್ಚಿನ ಉತ್ತರಗಳು, ಶಾಸ್ತ್ರವಚನಗಳ ಅನ್ವಯ, ಅದನ್ನು ಬೆಂಬಲಿಸುವ ಇತರ ಉತ್ತರಗಳು ಅಥವಾ ವಿಷಯದ ಪ್ರಾಯೋಗಿಕ ಅನ್ವಯವನ್ನು ಗಮನಕ್ಕೆ ತರಬಹುದು. ವೈಯಕ್ತಿಕ ಮತ್ತು ಕುಟುಂಬ ತಯಾರಿಯನ್ನು ಮಾಡುವಂತೆ ಉತ್ತೇಜಿಸುವ ಮೂಲಕ, ಭಾಗವಹಿಸುವಂತೆ ಪ್ರತಿಯೊಬ್ಬರಲ್ಲಿರುವ ಆಸೆಯನ್ನು ಜಾಗೃತಗೊಳಿಸಲು ಕಾವಲಿನಬುರುಜು ಅಭ್ಯಾಸದ ಸಂಚಾಲಕನು ಶ್ರಮಿಸುತ್ತಾನೆ.
5 “ಯೆಹೋವನಿಂದ ಶಿಕ್ಷಿತರಾಗಿರುವ”ವರೋಪಾದಿ, “ಉಪದೇಶದಲ್ಲಿಯೂ ಕಷ್ಟಪಡುವವರನ್ನು” ಅಂದರೆ, ಕಾವಲಿನಬುರುಜು ಅಭ್ಯಾಸ ಸಂಚಾಲಕರಂಥ “ಮನುಷ್ಯರಲ್ಲಿ ವರದಾನ”ಗಳನ್ನು ನಾವು ಗಣ್ಯಮಾಡುತ್ತೇವೆ.—ಯೆಶಾ. 54:13; 1 ತಿಮೊ. 5:17; ಎಫೆ. 4:8, 11, NW.