ಕುಟುಂಬ ಸದಸ್ಯರು ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕರಿಸುವ ವಿಧ—ಸಭಾ ಕೂಟಗಳಲ್ಲಿ
1 ಸಭಾ ಕೂಟಗಳಲ್ಲಿ ಕೂಡಿಬರುವಂತೆ ಕೊಡಲ್ಪಟ್ಟಿರುವ ಆಜ್ಞೆಯನ್ನು ಕ್ರೈಸ್ತ ಕುಟುಂಬಗಳು ಪಾಲಿಸಬೇಕು. (ಇಬ್ರಿ. 10:24, 25) ಉತ್ತಮ ಸಹಕಾರವನ್ನು ನೀಡುವ ಮೂಲಕ, ಕೂಟಗಳಿಗಾಗಿ ತಯಾರಿಸುವುದರಲ್ಲಿ, ಹಾಜರಾಗುವುದರಲ್ಲಿ ಮತ್ತು ಪಾಲ್ಗೊಳ್ಳುವುದರಲ್ಲಿ ಎಲ್ಲರೂ ಯಶಸ್ಸನ್ನು ಕಂಡುಕೊಳ್ಳಸಾಧ್ಯವಿದೆ. ಕುಟುಂಬದ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಹಾಗಿದ್ದರೂ, ಮನೆಯಲ್ಲಿ ಎಷ್ಟೇ ಮಕ್ಕಳಿರಲಿ ಮತ್ತು ಅವರ ವಯಸ್ಸು ಎಷ್ಟೇ ಆಗಿರಲಿ, ಒಬ್ಬ ಕ್ರೈಸ್ತ ಪತಿ, ಒಬ್ಬ ವಿಶ್ವಾಸಿ ಪತ್ನಿ ಅಥವಾ ಒಂಟಿ ಹೆತ್ತವರು, ಆತ್ಮಿಕ ವಿಷಯಗಳಲ್ಲಿ ಕುಟುಂಬದ ಐಕ್ಯವನ್ನು ಹೆಚ್ಚಿಸಲಿಕ್ಕಾಗಿ ಕಾರ್ಯನಡೆಸಸಾಧ್ಯವಿದೆ.—ಜ್ಞಾನೋ. 1:8.
2 ತಯಾರಿಮಾಡಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳಿರಿ: ಪ್ರತಿಯೊಬ್ಬರೂ ಸಭಾ ಕೂಟಗಳಿಗೆ ಚೆನ್ನಾಗಿ ತಯಾರಿಮಾಡಿಕೊಂಡು ಹೋಗಲಿಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಸಹಕರಿಸುವ ಅಗತ್ಯವಿದೆ. ಅನೇಕರು ಸಾಪ್ತಾಹಿಕ ಕಾವಲಿನಬುರುಜು ಅಭ್ಯಾಸಕ್ಕಾಗಿರುವ ಲೇಖನವನ್ನು ಒಟ್ಟಿಗೆ ಅಭ್ಯಾಸಮಾಡುತ್ತಾರೆ. ಕೆಲವರು ಸಭಾ ಪುಸ್ತಕ ಅಭ್ಯಾಸಕ್ಕಾಗಿ ತಯಾರಿಮಾಡುತ್ತಾರೆ ಅಥವಾ ವಾರದ ಬೈಬಲ್ ವಾಚನವನ್ನು ಕುಟುಂಬದೋಪಾದಿ ಓದುತ್ತಾರೆ. ಕೂಟಗಳಿಗೆ ಹಾಜರಾಗುವ ಮುಂಚೆ, ಮುಖ್ಯಾಂಶಗಳನ್ನು ಅರ್ಥಮಾಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಈ ರೀತಿಯಲ್ಲಿ, ಕೇಳಿಸಿಕೊಂಡ ವಿಷಯಗಳಿಂದ ಎಲ್ಲರೂ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವರು ಮತ್ತು ಅವಕಾಶವು ಸಿಗುವಾಗ ಅದರಲ್ಲಿ ಭಾಗವಹಿಸಲು ಸಿದ್ಧರಾಗಿರುವರು.—1 ತಿಮೊ. 4:15.
3 ಭಾಗವಹಿಸಲಿಕ್ಕಾಗಿ ಯೋಜನೆಯನ್ನು ಮಾಡಿರಿ: ಕೂಟಗಳಲ್ಲಿ ಉತ್ತರವನ್ನು ಕೊಡುವ ಮೂಲಕ ಇತರರ ಮುಂದೆ ತಮ್ಮ ನಿರೀಕ್ಷೆಯನ್ನು ಘೋಷಿಸುವ ಗುರಿಯನ್ನು ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಹೊಂದಿರಬೇಕು. (ಇಬ್ರಿ. 10:23) ಕುಟುಂಬದ ಒಬ್ಬ ಸದಸ್ಯನಿಗೆ ಇದನ್ನು ಮಾಡಲು ಸಹಾಯ ಅಥವಾ ಉತ್ತೇಜನದ ಅಗತ್ಯವಿದೆಯೇ? ದೇವಪ್ರಭುತ್ವ ಶುಶ್ರೂಷಾ ಶಾಲೆಯ ನೇಮಕಗಳನ್ನು ತಯಾರಿಸುವುದರಲ್ಲಿ ಪ್ರತಿಯೊಬ್ಬರಿಗೂ ಯಾವ ಸಹಾಯದ ಅಗತ್ಯವಿದೆ? ತಮ್ಮ ಗಂಡಂದಿರು ಆಸಕ್ತಿಯನ್ನು ತೋರಿಸುವಾಗ, ಇಲ್ಲವೇ ತಕ್ಕ ಉದಾಹರಣೆಯನ್ನು ಅಥವಾ ಪ್ರಾಯೋಗಿಕವಾದ ಒಂದು ಸೆಟ್ಟಿಂಗ್ ಅನ್ನು ನೀಡುವಾಗ, ಪತ್ನಿಯರು ನಿಜವಾಗಿಯೂ ಅದನ್ನು ಗಣ್ಯಮಾಡುತ್ತಾರೆ. ತಮ್ಮ ಎಳೆಯ ಮಕ್ಕಳಿಗೆ ನೇಮಕಗಳನ್ನು ತಾವು ತಯಾರಿಸಬೇಕು ಎಂಬುದಾಗಿ ಹೆತ್ತವರು ನೆನಸಬಾರದು. ಹಾಗೆ ಮಾಡುವುದು ಮಕ್ಕಳ ಸೃಜನಶೀಲತೆಯನ್ನು ದುರ್ಬಲಗೊಳಿಸಸಾಧ್ಯವಿದೆ. ಆದರೆ ಮಕ್ಕಳು ಗಟ್ಟಿಯಾಗಿ ಅದನ್ನು ಅಭ್ಯಾಸಿಸುವಾಗ, ಹೆತ್ತವರು ತಮ್ಮ ಎಳೆಯ ಮಕ್ಕಳಿಗೆ ಸಹಾಯವನ್ನು ನೀಡಸಾಧ್ಯವಿದೆ ಮತ್ತು ಅದನ್ನು ಕೇಳಿಸಿಕೊಳ್ಳಸಾಧ್ಯವಿದೆ.—ಎಫೆ. 6:4.
4 ಹಾಜರಾಗಲು ಏರ್ಪಾಡನ್ನು ಮಾಡಿರಿ: ಕೂಟಕ್ಕೆ ಸರಿಯಾದ ಸಮಯಕ್ಕೆ ಹೋಗಲಿಕ್ಕಾಗಿ, ಉಡುಪನ್ನು ಧರಿಸಿ, ಸಿದ್ಧರಾಗಿರುವಂತೆ ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ಕಲಿಸಸಾಧ್ಯವಿದೆ. ಕೂಟಗಳಿಗೆ ತಡವಾಗಿ ಹೋಗುವುದನ್ನು ತಡೆಯಲು, ಕುಟುಂಬ ಸದಸ್ಯರು ಮನೆಯ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಸಹಕಾರವನ್ನು ನೀಡಬೇಕು.—ಕುಟುಂಬ ಸಂತೋಷ ಪುಸ್ತಕದ, 112ನೇ ಪುಟವನ್ನು ಮತ್ತು ಯುವ ಜನರ ಪ್ರಶ್ನೆಗಳು ಪುಸ್ತಕದ, 316-17ನೇ ಪುಟಗಳಲ್ಲಿರುವ ಸಲಹೆಗಳನ್ನು ನೋಡಿರಿ.
5 “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದು ಹೇಳಿದ ಯೆಹೋಶುವನ ಮಾತುಗಳ ಕುರಿತು ಹೆತ್ತವರು ಮತ್ತು ಮಕ್ಕಳು ಚಿಂತನೆ ಮಾಡಸಾಧ್ಯವಿದೆ. ಅನಂತರ ಸಭಾ ಕೂಟಗಳಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವುದಕ್ಕಾಗಿ ಸಹಕಾರವನ್ನು ನೀಡಲು ದೃಢನಿಶ್ಚಯಮಾಡಿಕೊಳ್ಳಿರಿ.—ಯೆಹೋ. 24:15.