ಶುಶ್ರೂಷಾ ಸೇವಕರು ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಾರೆ
1 “ಅವರು ಆಸಕ್ತಿಯ ರಾಜ್ಯ ಸೇವೆಯ ಮೂಲಕ ಮತ್ತು ಇತರರು ನಂಬಿಕೆಯಲ್ಲಿ ಸ್ಥಿರರಾಗಿರುವಂತೆ ಸಹಾಯ ಮಾಡಿರುವುದರ ಮೂಲಕ ನಂಬಿಕೆಯನ್ನು ತೋರಿಸಿ ಕೊಟ್ಟು ತಾವು ನಿಜವಾಗಿಯೂ ಸಮರ್ಪಿತ ಪುರುಷರೆಂದು ಪ್ರದರ್ಶಿಸಿದ್ದಾರೆ.” ಶುಶ್ರೂಷಾ ಸೇವಕರ ಕುರಿತಾಗಿ ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕವು, 57ನೇ ಪುಟದಲ್ಲಿ ಹೀಗೆ ಹೇಳುತ್ತದೆ. ನಮ್ಮ ಶುಶ್ರೂಷಾ ಸೇವಕರ ಆತ್ಮಿಕ ಮಾದರಿಯು ನಿಜವಾಗಿಯೂ ಅನುಕರಣಯೋಗ್ಯವಾಗಿದೆ. ಅವರೊಂದಿಗೆ ಮತ್ತು ಹಿರಿಯರೊಂದಿಗೆ ಕೆಲಸಮಾಡುವುದು, “ದೇಹವೆಲ್ಲಾ . . . ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದು”ವಂತೆ ಮಾಡುತ್ತದೆ.—ಎಫೆ. 4:16.
2 ಶುಶ್ರೂಷಾ ಸೇವಕರು ಸಭೆಯಲ್ಲಿ ಒಂದು ಮುಖ್ಯ ಕಾರ್ಯವನ್ನು ನಿರ್ವಹಿಸುತ್ತಾರೆ. ಅವರು ಸಲ್ಲಿಸುವ ಎಲ್ಲ ಅಮೂಲ್ಯ ಸೇವೆಗಳ ಕುರಿತು ಸ್ವಲ್ಪ ಯೋಚಿಸಿರಿ! ಅವರು ಅಕೌಂಟ್ಸ್, ಸಾಹಿತ್ಯ, ಪತ್ರಿಕೆಗಳು, ಚಂದಾಗಳು ಮತ್ತು ಟೆರಿಟೊರಿಗಳನ್ನು ನೋಡಿಕೊಳ್ಳುತ್ತಾರೆ; ಅವರು ಅಟೆಂಡೆಂಟರಾಗಿ ಕೆಲಸಮಾಡುತ್ತಾರೆ; ಧ್ವನಿವರ್ಧಕಗಳನ್ನು ಮತ್ತು ರಾಜ್ಯ ಸಭಾಗೃಹವನ್ನು ನೋಡಿಕೊಳ್ಳುತ್ತಾರೆ. ಅವರು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಮತ್ತು ಸೇವಾ ಕೂಟದಲ್ಲಿ ಭಾಗವಹಿಸುತ್ತಾರೆ. ಅವರಲ್ಲಿ ಕೆಲವರು ಸಾರ್ವಜನಿಕ ಭಾಷಣಗಳನ್ನು ಕೊಡಬಹುದು ಅಥವಾ ಕೆಲವೊಂದು ಸಭಾ ಕೂಟಗಳನ್ನು ಸಹ ನಡೆಸಬಹುದು. ಶಾರೀರಿಕ ಅಂಗಗಳೋಪಾದಿ ಶುಶ್ರೂಷಾ ಸೇವಕರು ನಮಗೆ ಅಗತ್ಯವಿರುವ ಸೇವೆಗಳನ್ನು ಮಾಡುತ್ತಾರೆ.—1 ಕೊರಿಂ. 12:12-26.
3 ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಒಂದು ಸೇವಕ ಮಂಡಲಿಯ ಭಾಗವಾಗಿ, ಶುಶ್ರೂಷಾ ಸೇವಕರು ಹಿರಿಯರೊಂದಿಗೆ ಹೊಂದಾಣಿಕೆಯಿಂದ ಸಹಕಾರವನ್ನು ನೀಡುವುದು, ಇತರರು ಸಹ ತದ್ರೀತಿಯಲ್ಲಿ ನಡೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. (ಕೊಲೊ. 2:19) ಪ್ರತಿ ವಾರವೂ ತಮ್ಮ ಜವಾಬ್ದಾರಿಗಳನ್ನು ಕ್ರಮವಾಗಿ ನೆರವೇರಿಸುತ್ತಾ, ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತಾ, ಅವರು ಆತ್ಮಿಕವಾಗಿ ಪ್ರಗತಿಹೊಂದುತ್ತಿರುವ ಸಭೆಗೆ ನೆರವನ್ನು ನೀಡುತ್ತಾರೆ.
4 ಶ್ರಮಜೀವಿಗಳಾದ ಶುಶ್ರೂಷಾ ಸೇವಕರಿಗಾಗಿ ನಾವು ಗಣ್ಯತೆಯನ್ನು ಹೇಗೆ ತೋರಿಸಬಲ್ಲೆವು? ಅವರ ನೇಮಿತ ಕರ್ತವ್ಯಗಳನ್ನು ನಾವು ಚೆನ್ನಾಗಿ ತಿಳಿದುಕೊಂಡಿರಬೇಕು ಮತ್ತು ನಮ್ಮ ಸಹಾಯದ ಅಗತ್ಯವಿರುವಾಗ ನಾವು ಸಹಕರಿಸಲು ಸಿದ್ಧರಾಗಿರಬೇಕು. ಅವರ ಸೇವೆಯನ್ನು ನಾವು ಗಣ್ಯಮಾಡುತ್ತೇವೆ ಎಂಬುದನ್ನು ನಮ್ಮ ನಡೆನುಡಿಯಿಂದ ಅವರಿಗೆ ತೋರಿಸಬಲ್ಲೆವು. (ಜ್ಞಾನೋ. 15:23) ನಮ್ಮ ಪರವಾಗಿ ಶ್ರಮಿಸುವವರು, ಗೌರವಾರ್ಹರಾಗಿದ್ದಾರೆ.—1 ಥೆಸ. 5:12, 13.
5 ಶುಶ್ರೂಷಾ ಸೇವಕರ ಪಾತ್ರ ಮತ್ತು ಅರ್ಹತೆಗಳನ್ನು ದೇವರ ವಾಕ್ಯವು ಸ್ಪಷ್ಟೀಕರಿಸುತ್ತದೆ. (1 ತಿಮೊ. 3:8-10, 12, 13) ಅವರ ಅಮೂಲ್ಯವಾದ ಪವಿತ್ರ ಸೇವೆಯು, ಸಭೆಯ ಕಾರ್ಯಾಚರಣೆಗೆ ತುಂಬ ಆವಶ್ಯಕವಾದದ್ದಾಗಿದೆ. ಅಂಥ ಪುರುಷರು ನಮಗೆ ಅವಿರತವಾಗಿ ಪ್ರೋತ್ಸಾಹವನ್ನು ಕೊಡುತ್ತಾ ಇರುತ್ತಾರೆ, ಏಕೆಂದರೆ ಅವರಿಗೆ “ಕರ್ತನ ಕೆಲಸದಲ್ಲಿ ಯಾವಾಗಲೂ ಮಾಡಲು ಹೇರಳವಾಗಿರುತ್ತದೆ.”—1 ಕೊರಿಂ. 15:58, NW.