ಪ್ರಶ್ನಾ ರೇಖಾಚೌಕ
◼ ಹೊಸಬರು ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಿಂತ ಮುಂಚೆ ಅವರೊಟ್ಟಿಗೆ ಯಾವ ಪ್ರಕಾಶನಗಳನ್ನು ಅಭ್ಯಾಸಿಸಬೇಕು?
ವ್ಯಕ್ತಿಯೊಬ್ಬನು ತನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ, ಅವನು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. (ಯೋಹಾ. 17:3) ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಮತ್ತು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಅಭ್ಯಾಸಿಸುವ ಮೂಲಕ ಅವನು ಬೇಕಾಗಿರುವ ಮಾಹಿತಿಯನ್ನು ಪಡೆದುಕೊಳ್ಳುವನು. ಹೆಚ್ಚಿನ ಸಂದರ್ಭಗಳಲ್ಲಿ ಮೊದಲು ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಿಸಲಾಗುವುದು. ಆದರೆ, ಅಭ್ಯಾಸವನ್ನು ಜ್ಞಾನ ಪುಸ್ತಕದಿಂದ ಪ್ರಾರಂಭಿಸಿರುವುದಾದರೆ, ಈ ಪುಸ್ತಕವನ್ನು ಅಭ್ಯಾಸಮಾಡಿದ ಅನಂತರ ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಿಸಬೇಕು. ಇದು ಏಕೆ ಜರೂರಿಯಾಗಿದೆ?
ಏಕೆಂದರೆ, ಅಪೇಕ್ಷಿಸು ಬ್ರೋಷರ್ ಬೈಬಲಿನ ಮೂಲಭೂತ ಬೋಧನೆಗಳ ಸಾರಾಂಶವನ್ನು ಕೊಡುತ್ತದೆ. ಇದನ್ನು ಮೊದಲು ಅಭ್ಯಾಸಿಸುವುದಾದರೆ, ಯೆಹೋವನನ್ನು ಪ್ರಸನ್ನಗೊಳಿಸಲಿಕ್ಕಾಗಿ ಬೇಕಾಗಿರುವ ಆವಶ್ಯಕತೆಗಳ ಬಗ್ಗೆ ಇದು ವಿದ್ಯಾರ್ಥಿಗೆ ಮೂಲಭೂತ ತಿಳಿವಳಿಕೆಯನ್ನು ನೀಡುವುದು. ಅದನ್ನು ಕೊನೆಯಲ್ಲಿ ಅಭ್ಯಾಸಿಸುವಲ್ಲಿ, ಅದು ಜ್ಞಾನ ಪುಸ್ತಕದಲ್ಲಿ ಚರ್ಚಿಸಲ್ಪಟ್ಟ ವಿಷಯಗಳ ಒಂದು ಉತ್ತಮ ಪುನರ್ವಿಮರ್ಶೆಯಾಗಿರುವುದು. ಏನೇ ಆಗಲಿ, ಬೆಂಬಲಿಸುವ ಶಾಸ್ತ್ರವಚನಗಳನ್ನು ತೆರೆದುನೋಡಿ, ಅದರ ಕುರಿತಾಗಿ ಮನನ ಮಾಡುವಂತೆ ವಿದ್ಯಾರ್ಥಿಯನ್ನು ಉತ್ತೇಜಿಸಿರಿ. ಚಿತ್ರಗಳನ್ನು ಎತ್ತಿತೋರಿಸಿರಿ, ಏಕೆಂದರೆ ಅವು ಪರಿಣಾಮಕಾರಿಯಾದ ಬೋಧನಾ ಸಹಾಯಕಗಳಾಗಿವೆ.—ಜನವರಿ 15, 1997ರ ಕಾವಲಿನಬುರುಜು, ಪುಟಗಳು 16-17ನ್ನು ನೋಡಿರಿ.
ಈ ಎರಡು ಸಾಹಿತ್ಯಗಳನ್ನು ಬೈಬಲ್ ವಿದ್ಯಾರ್ಥಿಯು ಅಭ್ಯಾಸಮಾಡಿದ ಅನಂತರ, ದೀಕ್ಷಾಸ್ನಾನಕ್ಕೆ ಮುಂಚೆ ಹಿರಿಯರು ಪುನರ್ವಿಮರ್ಶಿಸುವ ಎಲ್ಲ ಪ್ರಶ್ನೆಗಳಿಗೆ ಅವನು ಉತ್ತರಿಸಶಕ್ತನಾಗಬಹುದು. ಆಗ, ಅಭ್ಯಾಸ ನಿರ್ವಾಹಕನು ಅವನ ಪ್ರಗತಿಯಲ್ಲಿ ಆಸಕ್ತಿ ತೋರಿಸುವುದನ್ನು ಮುಂದುವರಿಸಬೇಕಾದರೂ, ಇನ್ನಿತರ ಸಾಹಿತ್ಯದಿಂದ ಅಭ್ಯಾಸಮಾಡುವುದು ಅಗತ್ಯವಿಲ್ಲದಿರಬಹುದು.—ಜನವರಿ 15, 1996ರ, ಕಾವಲಿನಬುರುಜು, ಪುಟಗಳು 14, 17ನ್ನು ನೋಡಿರಿ.