ಐಹಿಕ ಶಿಕ್ಷಣ ಮತ್ತು ನಿಮ್ಮ ಆತ್ಮಿಕ ಧ್ಯೇಯಗಳು
1 ಚಿಕ್ಕಪ್ರಾಯದಲ್ಲೇ ನೀವು ಉತ್ತಮವಾದ ಅತ್ಯಾವಶ್ಯಕ ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ, ಚೆನ್ನಾಗಿ ಓದಿಬರೆಯಲು ಮತ್ತು ಭೂಗೋಲ, ಇತಿಹಾಸ, ಗಣಿತ ಹಾಗೂ ವಿಜ್ಞಾನದ ವಿಷಯಗಳ ಕುರಿತು ಸಾಮಾನ್ಯ ತಿಳಿವಳಿಕೆಯನ್ನು ಪಡೆದುಕೊಳ್ಳಲು ಬೇಕಾಗಿರುವ ಶೈಕ್ಷಣಿಕ ಕೌಶಲ್ಯಗಳನ್ನು ಒದಗಿಸಸಾಧ್ಯವಿದೆ. ಈ ಸಮಯದಲ್ಲಿ, ನೀವು ಸ್ಪಷ್ಟವಾಗಿ ಆಲೋಚಿಸುವುದು, ವಾಸ್ತವಾಂಶಗಳನ್ನು ವಿಶ್ಲೇಷಿಸುವುದು, ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಪರಿಣಾಮಕಾರಿ ವಿಚಾರಗಳನ್ನು ವಿಕಸಿಸುವುದು ಹೇಗೆ ಎಂಬುದನ್ನು ಕಲಿತುಕೊಳ್ಳಬಹುದು. ಈ ರೀತಿಯ ಶಾಲಾಶಿಕ್ಷಣವು ನಿಮ್ಮ ಜೀವನದಾದ್ಯಂತ ಪ್ರಯೋಜನವನ್ನು ತರುವುದು. ಐಹಿಕ ಶಿಕ್ಷಣವು ನಿಮ್ಮ ಜೀವಿತದಲ್ಲಿ ಆತ್ಮಿಕ ಧ್ಯೇಯಗಳಿಗೆ ಹೇಗೆ ಸಂಬಂಧಿಸಸಾಧ್ಯವಿದೆ ಮತ್ತು ನೀವು “ಸುಜ್ಞಾನವನ್ನೂ ಬುದ್ಧಿಯನ್ನೂ” ಪಡೆದುಕೊಳ್ಳುವಂತೆ ಹೇಗೆ ಸಹಾಯಮಾಡಬಲ್ಲದು?—ಜ್ಞಾನೋ. 3:21, 22.
2 ದೇವರ ಸೇವೆಯಲ್ಲಿ ಉಪಯುಕ್ತರಾಗಿರಿ: ನೀವು ಶಾಲೆಯಲ್ಲಿರುವಾಗ, ತರಗತಿಯಲ್ಲಿ ಗಮನವಿಟ್ಟು ಕೇಳಿಸಿಕೊಳ್ಳಿರಿ ಮತ್ತು ನಿಮಗೆ ಕೊಡಲ್ಪಡುವ ಹೋಮ್ವರ್ಕನ್ನು ಸರಿಯಾಗಿ ಮಾಡಿರಿ. ಚೆನ್ನಾಗಿ ಓದುವ ಮತ್ತು ಅಧ್ಯಯನಮಾಡುವ ಅಭ್ಯಾಸಗಳನ್ನು ನೀವು ಬೆಳೆಸಿಕೊಂಡರೆ, ನೀವು ದೇವರ ವಾಕ್ಯವನ್ನು ಹೆಚ್ಚು ಸುಲಭವಾಗಿ ಪರೀಕ್ಷಿಸಸಾಧ್ಯವಿದೆ ಮತ್ತು ನಿಮ್ಮನ್ನು ಆತ್ಮಿಕವಾಗಿ ಬಲವಾಗಿರಿಸಿಕೊಳ್ಳಸಾಧ್ಯವಿದೆ. (ಅ.ಕೃ. 17:11) ವಿಸ್ತೃತ ಜ್ಞಾನವನ್ನು ಪಡೆದುಕೊಳ್ಳುವುದು, ಶುಶ್ರೂಷೆಯಲ್ಲಿ ನೀವು ಭೇಟಿಯಾಗುವ ವಿವಿಧ ಹಿನ್ನೆಲೆಗಳ, ಅಭಿರುಚಿಗಳುಳ್ಳ ಮತ್ತು ನಂಬಿಕೆಗಳುಳ್ಳ ಜನರೊಂದಿಗೆ ಸಂಬಂಧವನ್ನು ಸ್ಥಾಪಿಸಲು ಸಹಾಯಮಾಡುವುದು. ದೇವರ ಸಂಸ್ಥೆಯಲ್ಲಿ ನೀವು ಕ್ರೈಸ್ತ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಾ ಮುಂದುವರಿಯುವಾಗ, ಶಾಲೆಯಲ್ಲಿ ನೀವು ಪಡೆದುಕೊಳ್ಳುವ ಶಿಕ್ಷಣವು ತುಂಬ ಉಪಯುಕ್ತವಾಗಿರುವುದು.—2 ತಿಮೊಥೆಯ 2:21; 4:11ನ್ನು ಹೋಲಿಸಿರಿ.
3 ನಿಮ್ಮ ಕಾಲುಗಳ ಮೇಲೆ ನಿಂತುಕೊಳ್ಳಲು ಕಲಿತುಕೊಳ್ಳಿರಿ: ನೀವು ಪರಿಶ್ರಮಪಡುವುದಾದರೆ, ಪದವಿಯನ್ನು ಪಡೆದ ಅನಂತರ ಜೀವನೋದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಸಹ ನೀವು ಕಲಿತುಕೊಳ್ಳಸಾಧ್ಯವಿದೆ. (1 ತಿಮೊಥೆಯ 5:8ನ್ನು ಹೋಲಿಸಿರಿ.) ಸಬ್ಜೆಕ್ಟ್ಗಳನ್ನು ಜಾಗರೂಕವಾಗಿ ಆರಿಸಿರಿ. ಸೀಮಿತ ಉದ್ಯೋಗ ಅವಕಾಶಗಳಿರುವ ಕ್ಷೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲಿಗೆ, ಯಾವುದೇ ಸ್ಥಳದಲ್ಲಿ ಒಂದು ತಕ್ಕ ಕೆಲಸವನ್ನು ಕಂಡುಕೊಳ್ಳಲು ನಿಮಗೆ ಸಹಾಯಮಾಡುವಂತಹ ವೃತ್ತಿ ಅಥವಾ ಕೌಶಲ್ಯವನ್ನು ಕಲಿತುಕೊಳ್ಳಿರಿ. (ಜ್ಞಾನೋ. 22:29) ಅಗತ್ಯವು ಹೆಚ್ಚಾಗಿರುವ ಸ್ಥಳದಲ್ಲಿ ಸೇವೆಯನ್ನು ಸಲ್ಲಿಸಲು ನೀವು ನಿರ್ಧರಿಸುವುದಾದರೆ, ಇಂತಹ ತರಬೇತಿಯಿಂದಾಗಿ ನೀವು ನಿಮ್ಮ ಕಾಲಿನ ಮೇಲೆ ನಿಂತುಕೊಳ್ಳಲು ಸಾಧ್ಯವಾಗುವುದು.—ಅ. ಕೃತ್ಯಗಳು 18:1-4ನ್ನು ಹೋಲಿಸಿರಿ.
4 ಶಾಲೆಯಲ್ಲಿರುವಾಗಲೇ ಒಳ್ಳೆಯ ಮೂಲಭೂತ ಶಿಕ್ಷಣವನ್ನು ಪಡೆದುಕೊಳ್ಳುವುದು ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲು ಸಹಾಯಮಾಡಬಲ್ಲದು. ಯೆಹೋವನಿಗೆ ಸೇವೆ ಸಲ್ಲಿಸುತ್ತಾ ಮುಂದೆ ಸಾಗಿದಂತೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಲು ಬೇಕಾದ ಕೌಶಲ್ಯಗಳನ್ನು ಪಡೆದುಕೊಳ್ಳಲು ಕಠಿನವಾಗಿ ಪರಿಶ್ರಮಿಸಿರಿ. ಹೀಗೆ, ನಿಮ್ಮ ಶಾಲಾ ಶಿಕ್ಷಣವು ನಿಮ್ಮ ಆತ್ಮಿಕ ಧ್ಯೇಯಗಳನ್ನು ತಲಪಲು ಸಹಾಯಮಾಡುವುದು.