ಶಾಲೆಯಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಿರಿ
1 ಅನೇಕ ಯುವ ಜನರು ಶಾಲೆಯಲ್ಲಿ ಒಂದು ಹೊಸ ತರಗತಿಯಲ್ಲಿ ನೆಲೆಸುವುದು ವರ್ಷದ ಈ ಸಮಯದಲ್ಲಿಯೇ. ಒಂದು ಹೊಸ ಶಾಲಾವಧಿಯನ್ನು ಆರಂಭಿಸುವುದರೊಂದಿಗೆ ಸಂಬಂಧಿಸಿದಂತೆ ಕೆಲವು ಪಂಥಾಹ್ವಾನಗಳು ಹಾಗೂ ಚಿಂತೆಗಳು ಇರಬಹುದಾದರೂ, ತಮ್ಮ ಶಿಕ್ಷಣದಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ತಮ್ಮನ್ನು ಪ್ರಯೋಗಿಸಿಕೊಳ್ಳುವ ಯುವ ಜನರಿಂದ ಸಂಪಾದಿಸಿಕೊಳ್ಳಲ್ಪಡುವ ಅನೇಕ ಲಾಭಗಳೂ ಇವೆ.
2 ಒಂದು ಒಳ್ಳೆಯ ಮೂಲಭೂತ ಶಿಕ್ಷಣವು, ಒಬ್ಬನ ಆತ್ಮಿಕ ಪ್ರಗತಿಗೆ ನೆರವನ್ನೀಯಬಲ್ಲದು. ತನ್ನ ಯುವ ಪ್ರಾಯದಲ್ಲಿ ವ್ಯಕ್ತಿಯೊಬ್ಬನು ಏನು ಮಾಡುತ್ತಾನೋ ಅದು, ಒಬ್ಬ ವಯಸ್ಕನೋಪಾದಿ ಅವನು ಸಾಧಿಸಸಾಧ್ಯವಿರುವ ಕೆಲಸದ ಮೇಲೆ ಬಲವಾದ ಪ್ರಭಾವವನ್ನು ಹೊಂದಿದೆ. ಶಾಲಾಶಿಕ್ಷಣದ ವಿಷಯದಲ್ಲಿಯೂ, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯು”ವನು. (ಗಲಾ. 6:7) ತಮ್ಮ ಶಾಲಾ ಪಾಠಗಳನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುವ ಯುವ ಜನರು, ಯೆಹೋವನಿಗೆ ತಮ್ಮನ್ನು ಹೆಚ್ಚು ಪ್ರಯೋಜನಾರ್ಹರನ್ನಾಗಿ ಮಾಡುವ ಕೌಶಲಗಳನ್ನು ಸಂಪಾದಿಸಿಕೊಳ್ಳಬಲ್ಲರು.
3 ಒಬ್ಬನು ಶಾಲಾ ಕೋರ್ಸುಗಳ ವಿಷಯದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಬೇಕಾಗಿರುವಲ್ಲಿ, ಜಾಗರೂಕವಾದ ಮುಂದಾಲೋಚನೆಯ ಅಗತ್ಯವಿದೆ. ಜೀವಿತದಲ್ಲಿ ಆತ್ಮಿಕ ಗುರಿಗಳನ್ನು ತಲಪಲಿಕ್ಕಾಗಿ ಅತ್ಯಂತ ಪ್ರಾಯೋಗಿಕವಾಗಿರುವ ತರಬೇತಿಯನ್ನು ಒದಗಿಸುವ ಕೋರ್ಸುಗಳನ್ನು ಆರಿಸಿಕೊಳ್ಳಲು ಹೆತ್ತವರು ತಮ್ಮ ಮಕ್ಕಳಿಗೆ ಸಹಾಯ ಮಾಡಬೇಕು. ತಮ್ಮ ಕೌಶಲಗಳನ್ನು ವಿಕಸಿಸಿಕೊಳ್ಳುವ ಮೂಲಕ ಯುವ ಜನರು, ಪಯನೀಯರ್ ಕೆಲಸದಲ್ಲಿ ತಮ್ಮನ್ನು ಬೆಂಬಲಿಸಿಕೊಳ್ಳಲು ಶಕ್ತರಾಗಿರುವುದರ ಪ್ರಯೋಜನವನ್ನು ಪಡೆದುಕೊಳ್ಳುವರು. ಅವರ ಮೂಲಭೂತ ಶಿಕ್ಷಣವು, ಅವರು ಎಲ್ಲಿಯೇ ಸೇವೆಮಾಡುತ್ತಿರಲಿ, ಯೆಹೋವನನ್ನು ಸ್ತುತಿಸುವಂತೆ ಅವರಿಗೆ ಸಹಾಯ ಮಾಡಬೇಕು.
4 ಯುವ ಜನರೇ, ನಿಮ್ಮ ಶಾಲಾ ವರ್ಷಗಳಿಂದ ಅತ್ಯುತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಹಾಗೆ ಮಾಡುವಾಗ, ಒಂದು ಲೌಕಿಕ ಜೀವನೋಪಾಯವನ್ನು ಬೆನ್ನಟ್ಟುವುದಕ್ಕೆ ಬದಲಾಗಿ, ಪವಿತ್ರ ಸೇವೆಯಲ್ಲಿ ಸಂಪೂರ್ಣ ಜೀವಿತವನ್ನು ಜೀವಿಸುವುದರ ಮೇಲೆ ಕೇಂದ್ರೀಕರಿಸಿರಿ. ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ನಿಮ್ಮ ಜೀವಿತವನ್ನು ಉಪಯೋಗಿಸಿಕೊಳ್ಳಲು ಶ್ರಮಿಸಿರಿ. ಹೀಗೆ, ಯೆಹೋವನ ಸ್ತುತಿಗಾಗಿ ನೀವು ನಿಮ್ಮ ಮಾರ್ಗವನ್ನು ಯಶಸ್ವಿಕರವಾದದ್ದಾಗಿ ಮಾಡಿಕೊಳ್ಳುವಿರಿ.—ಕೀರ್ತ. 1:3.