ನೀವು ಹೇಗೆ ಕಿವಿಗೊಡುತ್ತೀರಿ ಎಂಬುದರ ಕಡೆಗೆ ಗಮನಹರಿಸಿರಿ
ಸಭಾ ಕೂಟಗಳಿಗೆ, ಸಮ್ಮೇಳನಗಳಿಗೆ ಮತ್ತು ಅಧಿವೇಶನಗಳಿಗೆ ಹಾಜರಾಗುವಾಗ, ಗಮನಕೊಟ್ಟು ಕೇಳಿಸಿಕೊಳ್ಳುವುದು ತುಂಬಾ ಪ್ರಾಮುಖ್ಯವಾಗಿದೆ. (ಲೂಕ 8:18) ಹಾಗಾದರೆ, ಕಿವಿಗೊಡುವ ನಿಮ್ಮ ಸಾಮರ್ಥ್ಯವನ್ನು ನೀವು ಹೇಗೆ ಉತ್ತಮಗೊಳಿಸಬಲ್ಲಿರಿ?
◼ ಕೂಟಗಳಿಗೆ ಮುಂಚೆ ಭರ್ಜರಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಿರಿ.
◼ ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡದಂತೆ ನೋಡಿಕೊಳ್ಳಿರಿ.
◼ ಮುಖ್ಯ ವಿಷಯಗಳ ಸಂಕ್ಷಿಪ್ತ ಟಿಪ್ಪಣಿಯನ್ನು ಬರೆದುಕೊಳ್ಳಿರಿ.
◼ ಓದಲ್ಪಡುವ ವಚನಗಳನ್ನು ತೆರೆದುನೋಡಿರಿ.
◼ ಅವಕಾಶವಿರುವಾಗಲ್ಲೆಲ್ಲಾ ಭಾಗವಹಿಸಿರಿ.
◼ ಸಾದರಪಡಿಸಲಾಗುವ ವಿಷಯದ ಕುರಿತು ಪರ್ಯಾಲೋಚಿಸಿರಿ.
◼ ನೀವು ಕೇಳಿಸಿಕೊಳ್ಳುವ ವಿಷಯವನ್ನು ಕಾರ್ಯರೂಪಕ್ಕೆ ಹಾಕಸಾಧ್ಯವಿರುವ ಮಾರ್ಗಗಳ ಕುರಿತು ಯೋಚಿಸಿರಿ.
◼ ಅನಂತರ, ನೀವು ಕಲಿತಿರುವ ವಿಷಯವನ್ನು ಇತರರೊಂದಿಗೆ ಚರ್ಚಿಸಿರಿ.
ದೇವಪ್ರಭುತ್ವ ಶುಶ್ರೂಷಾ ಶಾಲೆ—ಮಾರ್ಗದರ್ಶಕ ಪುಸ್ತಕ (ಇಂಗ್ಲಿಷ್), ಅಧ್ಯಾಯ 5ನ್ನು ನೋಡಿರಿ.