ಪ್ರಶ್ನಾ ರೇಖಾಚೌಕ
◼ ಬಹಳ ಸಮಯದಿಂದ ಅಕ್ರಿಯ ಪ್ರಚಾರಕನಾಗಿರುವ ಒಬ್ಬ ವ್ಯಕ್ತಿಯನ್ನು ಪುನಃ ಸುವಾರ್ತೆಯ ಒಬ್ಬ ಸಕ್ರಿಯ ಪ್ರಚಾರಕನಾಗಿ ಅರ್ಹಗೊಳಿಸಲು ಯಾವ ರೀತಿಯಲ್ಲಿ ಸಹಾಯಮಾಡಸಾಧ್ಯವಿದೆ?
ಅಕ್ರಿಯ ಪ್ರಚಾರಕನೊಬ್ಬನು ತಾನು ಯೆಹೋವನಿಗೆ ಸೇವೆಸಲ್ಲಿಸಲು ಇಷ್ಟಪಡುತ್ತೇನೆ ಎಂಬುದಕ್ಕೆ ಹೃತ್ಪೂರ್ವಕವಾದ ಪುರಾವೆಯನ್ನು ನೀಡುವಾಗ, ಅದು ನಿಜವಾಗಿಯೂ ಸಂತೋಷದ ಸುದ್ದಿಯಾಗಿರುತ್ತದೆ. (ಲೂಕ 15:4-6) ಆ ವ್ಯಕ್ತಿಯು ತನ್ನ ವೈಯಕ್ತಿಕ ಅಧ್ಯಯನ, ಕೂಟದ ಹಾಜರಿ ಹಾಗೂ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಂತಹ ವಿಷಯಗಳನ್ನು, ವಿರೋಧ ಇಲ್ಲವೆ ಜೀವನದ ಒತ್ತಡಗಳು ಅದುಮಿಬಿಡುವಂತೆ ಬಿಟ್ಟಿರಬಹುದು. ಆತ್ಮಿಕ ಪ್ರಗತಿಯನ್ನು ಮಾಡುವಂತಹ ರೀತಿಯಲ್ಲಿ ಅವನಿಗೆ ವೈಯಕ್ತಿಕ ನೆರವನ್ನು ಹೇಗೆ ನೀಡಸಾಧ್ಯವಿದೆ?
ಅವನ ಮೇಲೆ ನಮಗೆ ನಿಜವಾಗಿಯೂ ಕ್ರೈಸ್ತ ಪ್ರೀತಿಯಿದೆ ಎಂಬ ಪುನರಾಶ್ವಾಸನೆಯನ್ನು ನೀಡಲು ನಾವು ಮುಂದಾಗಬೇಕು. ಅವನಿಗೆ ಎಷ್ಟರ ಮಟ್ಟಿಗೆ ಆತ್ಮಿಕ ಅಗತ್ಯಗಳಿವೆ ಎಂಬುದನ್ನು ಒಡನೇ ಹಿರಿಯರು ನೋಡುವರು. (ಯಾಕೋ. 5:14, 15) ಅವನು ಅಕ್ರಿಯ ಪ್ರಚಾರಕನಾಗಿ ಸ್ವಲ್ಪವೇ ಸಮಯವಾಗಿರುವುದಾದರೆ, ಒಬ್ಬ ಅನುಭವೀ ಪ್ರಚಾರಕನು ನೆರವನ್ನು ನೀಡುವುದು ತಾನೇ ಪುನಃ ಕ್ಷೇತ್ರ ಸೇವೆಯಲ್ಲಿ ಅವನನ್ನು ಒಳಗೂಡುವಂತೆ ಮಾಡುವುದು. ಆದರೆ, ಅಕ್ರಿಯ ವ್ಯಕ್ತಿಯು ಸಭೆಯೊಂದಿಗೆ ಬಹಳ ಸಮಯದಿಂದ ಸಹವಾಸವನ್ನು ಇಟ್ಟುಕೊಂಡಿಲ್ಲದಿರುವಲ್ಲಿ, ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿರಬಹುದು. ನಂಬಿಕೆ ಹಾಗೂ ಗಣ್ಯತೆಯನ್ನು ಪುನಃ ಬಲಪಡಿಸಲು, ತಕ್ಕ ಸಾಹಿತ್ಯವನ್ನು ಉಪಯೋಗಿಸಿ ವೈಯಕ್ತಿಕ ಬೈಬಲ್ ಅಧ್ಯಯನವನ್ನು ಮಾಡುವುದು ಒಳ್ಳೆಯದಾಗಿರಬಹುದು. ವಿಷಯವು ಹಾಗಿರುವಲ್ಲಿ, ಒಬ್ಬ ಅರ್ಹ ಪ್ರಚಾರಕನು ಅವನೊಂದಿಗೆ ಅಭ್ಯಾಸಮಾಡುವಂತೆ ಸೇವಾ ಮೇಲ್ವಿಚಾರಕನು ಏರ್ಪಾಡನ್ನು ಮಾಡುವನು. (ಇಬ್ರಿ. 5:12-14; ನವೆಂಬರ್ 1998ರ ನಮ್ಮ ರಾಜ್ಯದ ಸೇವೆಯ ಪ್ರಶ್ನಾ ರೇಖಾಚೌಕವನ್ನು ನೋಡಿರಿ.) ಅಂತಹ ಸಹಾಯವು ಯಾರಿಗೋ ಒಬ್ಬರಿಗೆ ಬೇಕಾಗಿದೆ ಎಂಬುದು ನಿಮಗೆ ತಿಳಿದುಬರುವಲ್ಲಿ, ನಿಮ್ಮ ಸಭೆಯಲ್ಲಿರುವ ಸೇವಾ ಮೇಲ್ವಿಚಾರಕರೊಂದಿಗೆ ಅದರ ಬಗ್ಗೆ ಮಾತಾಡಿರಿ.
ಬಹಳ ಸಮಯದಿಂದ ಅಕ್ರಿಯನಾಗಿರುವ ಒಬ್ಬ ವ್ಯಕ್ತಿಯನ್ನು ಶುಶ್ರೂಷೆಯಲ್ಲಿ ಪುನಃ ಭಾಗವಹಿಸುವಂತೆ ಕರೆಕೊಡುವ ಮುಂಚೆ, ಅವನು ಒಬ್ಬ ರಾಜ್ಯ ಪ್ರಚಾರಕನೋಪಾದಿ ಕೆಲಸಮಾಡಲು ಅರ್ಹನೋ ಇಲ್ಲವೋ ಎಂಬುದನ್ನು ನೋಡಲು ಇಬ್ಬರು ಹಿರಿಯರು ಅವನನ್ನು ಭೇಟಿಮಾಡುವುದು ಒಳ್ಳೆಯದಾಗಿರುವುದು. ಸುವಾರ್ತೆಯ ಪ್ರಚಾರಕರೋಪಾದಿ ಅರ್ಹರಾಗಲು ಇಷ್ಟಪಡುವ ಹೊಸಬರೊಂದಿಗೆ ಹೇಗೆ ಭೇಟಿಯಾಗುತ್ತಾರೋ ಅದೇ ವಿಧದಲ್ಲಿ ಹಿರಿಯರು ಇವನನ್ನು ಭೇಟಿಯಾಗುವರು. (ವಾಚ್‌ಟವರ್, ನವೆಂಬರ್ 15, 1988, ಪುಟ 17ನ್ನು ನೋಡಿರಿ.) ಅಕ್ರಿಯ ವ್ಯಕ್ತಿಗೆ ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಶ್ರದ್ಧಾಪೂರ್ವಕವಾದ ಇಚ್ಛೆಯಿರಬೇಕು. ನಮ್ಮ ಶುಶ್ರೂಷೆ ಪುಸ್ತಕದಲ್ಲಿ 98-9 ಪುಟಗಳಲ್ಲಿ ತಿಳಿಸಲ್ಪಟ್ಟಿರುವ ಮೂಲಭೂತ ಆವಶ್ಯಕತೆಗಳನ್ನು ಅವನು ಪೂರೈಸಬೇಕು ಹಾಗೂ ಕ್ರಮವಾಗಿ ಸಭಾ ಕೂಟಗಳಿಗೆ ಹಾಜರಾಗಬೇಕು.
ಒಂದು ಒಳ್ಳೆಯ ಆತ್ಮಿಕ ನಿಯತಕ್ರಮವು, ಪುನಃ ಹಿಂದಿರುಗಿ ಬರುವ ವ್ಯಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲ, ಯೆಹೋವನೊಂದಿಗೆ ಅವನಿಗಿರುವ ಅತ್ಯಮೂಲ್ಯ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯಮಾಡುವುದು. ಅಷ್ಟುಮಾತ್ರವಲ್ಲದೆ, ನಿತ್ಯ ಜೀವದ ಹಾದಿಯಲ್ಲೇ ನಡೆಯುವಂತೆ ಮಾಡುವುದು. (ಮತ್ತಾ. 7:14; ಇಬ್ರಿ. 10:23-25) ‘ಪೂರ್ಣಾಸಕ್ತಿಯುಳ್ಳವನಾಗಿ’ ಪ್ರಯತ್ನವನ್ನು ಮಾಡುವಾಗ ಹಾಗೂ ಶಾಶ್ವತವಾದಂತಹ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುವಾಗ, ಅದು ಅವನನ್ನು ಪುನಃ ‘ಆಲಸ್ಯಗಾರ [“ಅಕ್ರಿಯ,” NW]ನೂ ನಿಷ್ಫಲನೂ’ ಆಗುವುದರಿಂದ ತಡೆಗಟ್ಟುವುದು.—2 ಪೇತ್ರ 1:5-8.