ಬೈಬಲ್—ನಿಷ್ಕೃಷ್ಟ ಇತಿಹಾಸ, ಭರವಸಾರ್ಹ ಪ್ರವಾದನೆ ಎಂಬ ವಿಡಿಯೋದಿಂದ ಕಲಿಯುವುದು
ಈ ವಿಡಿಯೋವನ್ನು ನೋಡಿದ ಮೇಲೆ, ಈ ಕೆಳಗಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಬಲ್ಲಿರೋ?
(1) ಬೈಬಲಿನ ಭರವಸಾರ್ಹ ಮಾಹಿತಿಯ ಮೂಲನು ಯಾರು? (ದಾನಿ. 2:28) (2) ಪುರಾತನ ಐಗುಪ್ತದ ಬಗ್ಗೆ ಬೈಬಲು ಹೇಗೆ ನಿಷ್ಕೃಷ್ಟವಾಗಿ ವರ್ಣನೆಯನ್ನು ನೀಡುತ್ತದೆ ಮತ್ತು ಯೆಶಾಯ 19:3, 4ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯು ಹೇಗೆ ಸತ್ಯವಾಗಿ ಪರಿಣಮಿಸಿತು? (3) ಪ್ರಾಕ್ತನಶಾಸ್ತ್ರವು ಬೈಬಲು ತಿಳಿಸಿರುವ ಅಶ್ಶೂರ, ಅದರ ರಾಜರು ಹಾಗೂ ಅದರ ಅಂತ್ಯದ ಚಿತ್ರಣವನ್ನು ಯಾವ ರೀತಿಯಲ್ಲಿ ದೃಢೀಕರಿಸುತ್ತದೆ? (ನೆಹ. 3:1, 7, 13) (4) ಬಾಬೆಲಿಗೆ ಸಂಬಂಧಪಟ್ಟಿರುವ ಯಾವ ಪ್ರವಾದನೆಗಳು ವಿಶ್ವಾಸಾರ್ಹವಾಗಿ ರುಜುವಾಗಿದೆ? (5) ಮೇದ್ಯಯ ಪಾರಸೀಯವು ದೇವಜನರ ಮೇಲೆ ಯಾವ ಪರಿಣಾಮವನ್ನು ಬೀರಿತು? (6) ದಾನಿಯೇಲ 8:5, 8 ಹೇಗೆ ನೆರವೇರಿತು ಮತ್ತು ಇದು ಎಷ್ಟು ಕಾಲಗಳ ಮುಂಚೆ ತಿಳಿಸಲ್ಪಟ್ಟಿತು? (7) ಯೇಸು ನಿಜ ಮೆಸ್ಸೀಯನಾಗಿ ರುಜುವಾದದ್ದು ಹೇಗೆ? (8) ಯಾವ ಆಧುನಿಕ ರಾಜಕೀಯ ಶಕ್ತಿಗಳು, ಪ್ರಕಟನೆ 13:11 ಮತ್ತು 17:11ರಲ್ಲಿ ಕಂಡುಬರುವ ಪ್ರವಾದನೆಗಳನ್ನು ನೆರವೇರಿಸುತ್ತವೆ? (9) ವಿಡಿಯೋದಲ್ಲಿ ನೋಡಲ್ಪಟ್ಟ ಯಾವ ದೃಶ್ಯಗಳು ಪ್ರಸಂಗಿ 8:9ರ ಸತ್ಯತೆಗಳನ್ನು ರುಜುಪಡಿಸುತ್ತವೆ? (10) ಈ ಪ್ರಸ್ತುತಪಡಿಸುವಿಕೆಯು ಭವಿಷ್ಯತ್ತಿಗಾಗಿ ಬೈಬಲಿನ ವಾಗ್ದಾನಗಳಲ್ಲಿ ನಿಮಗಿರುವ ನಂಬಿಕೆಯನ್ನು ಯಾವ ರೀತಿಯಲ್ಲಿ ಬಲಪಡಿಸಿದೆ? (11) ಬೈಬಲು ದೈವಿಕ ಮೂಲದ್ದಾಗಿದೆ ಎಂಬುದನ್ನು ಇತರರಿಗೆ ಮನಗಾಣಿಸಲು ಈ ಸಾಧನವನ್ನು ನೀವು ಹೇಗೆ ಉಪಯೋಗಿಸಬಲ್ಲಿರಿ?