ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 1 ಪು. 14-15
  • ಭವಿಷ್ಯದ ಬಗ್ಗೆ ಸತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭವಿಷ್ಯದ ಬಗ್ಗೆ ಸತ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಳ್ಳೇ ಆಡಳಿತ
  • ಒಳ್ಳೇ ಆರೋಗ್ಯ
  • ಸಂಪೂರ್ಣ ಶಾಂತಿ
  • ಭೂಮಿ ತುಂಬ ಒಳ್ಳೇ ಜನರೇ ಇರುತ್ತಾರೆ
  • ಇಡೀ ಭೂಮಿ ಸುಂದರ ತೋಟ ಆಗುತ್ತೆ
  • ನಿರೀಕ್ಷೆ
    ಎಚ್ಚರ!—2018
  • ದೇವರು ಕಷ್ಟಸಂಕಟಕ್ಕೆ ಕೊಟ್ಟಿರುವ ಸಮಯವು ಇನ್ನೇನು ಕೊನೆಗೊಳ್ಳಲಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 1 ಪು. 14-15
ಜನರು ಪರದೈಸಲ್ಲಿ ಆನಂದಿಸುತ್ತಿದ್ದಾರೆ

ಭವಿಷ್ಯದ ಬಗ್ಗೆ ಸತ್ಯ

ಭವಿಷ್ಯದಲ್ಲಿ ಏನಾಗುತ್ತೆ ಅಂತ ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಉತ್ತರ ಬೈಬಲ್‌ನಲ್ಲಿದೆ.

ಯೇಸು ಭವಿಷ್ಯದ ಬಗ್ಗೆ ಮಾತಾಡುತ್ತಾ, “ದೇವರ ರಾಜ್ಯವು ಹತ್ತಿರದಲ್ಲಿದೆ” ಅಂತ ಹೇಳಿದನು. (ಲೂಕ 21:31) ಆ ಸಮಯದಲ್ಲಿ ದೊಡ್ಡ-ದೊಡ್ಡ ಯುದ್ಧಗಳು, ಭೂಕಂಪಗಳು, ಆಹಾರದ ಕೊರತೆ, ಅಂಟುರೋಗಗಳು ಜಾಸ್ತಿ ಆಗುತ್ತೆ ಅಂತ ತಿಳಿಸಿದನು. (ಲೂಕ 21:10-17) ಇಂದು, ಇದನ್ನೆಲ್ಲಾ ನಾವು ಕಣ್ಣಾರೆ ನೋಡುವಾಗ ದೇವರ ರಾಜ್ಯ ಹತ್ತಿರದಲ್ಲಿದೆ ಅಂತ ಗೊತ್ತಾಗುತ್ತೆ.

ಮಾನವ ಆಳ್ವಿಕೆಯ ಈ “ಕಡೇ ದಿವಸಗಳಲ್ಲಿ” ಎಂಥ ಜನ ಇರುತ್ತಾರೆ ಅಂತ ಕೂಡ ಬೈಬಲ್‌ ಹೇಳುತ್ತೆ. ಉದಾಹರಣೆಗೆ, ಕಡೇ ದಿವಸಗಳಲ್ಲಿ ಸ್ವಾರ್ಥ ತುಂಬಿರುವ, ಹಣಪ್ರೇಮ ಇರುವ, ಚಾಡಿಹೇಳುವ ಜನರೇ ಜಾಸ್ತಿ ಇರುತ್ತಾರೆ ಅಂತ 2 ತಿಮೊಥೆಯ 3:1-5 ರಲ್ಲಿ ನಾವು ಓದಬಹುದು. ಈಗಿನ ಜನರ ಹಾವ-ಭಾವ ನೋಡಿದ್ರೆ, ಬೈಬಲಿನ ಈ ಮಾತು ಸತ್ಯ ಅನ್ನೋದರಲ್ಲಿ ಎರಡು ಮಾತಿಲ್ಲ.

ಇದೆಲ್ಲಾ ಏನು ತೋರಿಸಿಕೊಡುತ್ತೆ? ಸಮಸ್ಯೆಗಳಿಂದ ತುಂಬಿರುವ ನಮ್ಮ ಈ ಜೀವನವನ್ನು ಬದಲಾಯಿಸುವ ದೇವರ ಸರ್ಕಾರ ತುಂಬ ಹತ್ರ ಇದೆ ಅನ್ನೋದನ್ನು ತೋರಿಸಿಕೊಡುತ್ತೆ. (ಲೂಕ 21:36) ಈ ಭೂಮಿಗೂ ನಮ್ಮೆಲ್ಲರಿಗೂ ಒಳ್ಳೇದನ್ನು ಮಾಡ್ತೀನಿ ಅಂತ ದೇವರು ಮಾತು ಕೊಟ್ಟಿರೋದನ್ನು ನಾವು ಬೈಬಲ್‌ನಲ್ಲಿ ಓದಬಹುದು. ಅದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

ಒಳ್ಳೇ ಆಡಳಿತ

“ಸಕಲಜನಾಂಗಕುಲಭಾಷೆಗಳವರು ಅವನನ್ನು (ಯೇಸುವನ್ನು) ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.”—ದಾನಿಯೇಲ 7:14.

ಇದರ ಅರ್ಥ: ದೇವರ ಸರ್ಕಾರದಲ್ಲಿ ಯೇಸು ರಾಜನಾಗಿ ಆಳುತ್ತಾನೆ. ಆ ಸರ್ಕಾರ ಭೂಮಿಯನ್ನು ಆಳುವಾಗ ನಾವೆಲ್ಲರೂ ಖುಷಿಯಾಗಿರಬಹುದು.

ಒಳ್ಳೇ ಆರೋಗ್ಯ

ಒಂದು ಚಿಕ್ಕ ಹುಡುಗಿ ಅವಳ ವೀಲ್‌ಚೇರಿಂದ ಇಳಿದು ನಡೆಯುತ್ತಿದ್ದಾಳೆ

“ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

ಇದರ ಅರ್ಥ: ಅಲ್ಲಿ ಯಾರೂ ನಮಗೆ ಹುಷಾರಿಲ್ಲ ಅಂತ ಹೇಳುವುದಿಲ್ಲ. ಅಲ್ಲಿ ಯಾವುದೇ ರೀತಿಯ ಅಂಗವಿಕಲತೆ ಇರುವುದಿಲ್ಲ. ಅಷ್ಟೇ ಅಲ್ಲ, ಸಾವು ಸಹ ಇರಲ್ಲ.

ಸಂಪೂರ್ಣ ಶಾಂತಿ

ಬಂದೂಕಿನ ಚೂರುಗಳು

‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’—ಕೀರ್ತನೆ 46:9.

ಇದರ ಅರ್ಥ: ಯುದ್ಧಗಳೇ ಇರಲ್ಲ ಅಂದಮೇಲೆ, ಯುದ್ಧದಿಂದ ಆಗೋ ಸಾವು-ನೋವುಗಳ ಭಯನೂ ಇರಲ್ಲ.

ಭೂಮಿ ತುಂಬ ಒಳ್ಳೇ ಜನರೇ ಇರುತ್ತಾರೆ

“ದುಷ್ಟನು ಕಾಣಿಸದೆ ಹೋಗುವನು . . . ದೀನರು ದೇಶವನ್ನು ಅನುಭವಿಸುವರು.”—ಕೀರ್ತನೆ 37:10, 11.

ಇದರ ಅರ್ಥ: ಈ ಭೂಮೀಲಿ ಕೆಟ್ಟವರೇ ಇರಲ್ಲ. ದೇವರ ಮಾತನ್ನು ಕೇಳೋರು ಮಾತ್ರ ಇರ್ತಾರೆ.

ಇಡೀ ಭೂಮಿ ಸುಂದರ ತೋಟ ಆಗುತ್ತೆ

“ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.”—ಯೆಶಾಯ 65:21.

ಇದರ ಅರ್ಥ: ದೇವರ ಇಷ್ಟದಂತೆ ಈ ಭೂಮಿ ಆಗುತ್ತೆ ಅಂದರೆ, ದೇವರು ಇಡೀ ಭೂಮಿಯನ್ನು ಒಂದು ಸುಂದರ ತೋಟದಂತೆ ಮಾಡುತ್ತಾನೆ.—ಮತ್ತಾಯ 6:10.

ಜನರು ಪರದೈಸಲ್ಲಿ ಆನಂದಿಸುತ್ತಿದ್ದಾರೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ